Special
ನರೇಗಾ ಯೋಜನೆಯ ಅಡಿಯಲ್ಲಿ ರೈತರಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕೆ 57,000ರೂ. ಸಹಾಯಧನ

ನರೇಗಾ ಯೋಜನೆಯ ಅಡಿಯಲ್ಲಿ ರೈತರಿಗೆ ಹಸು ಅಥವಾ ಎಮ್ಮೆ ಶೆಡ್ ನಿರ್ಮಾಣ ಮಾಡಿಕೊಳ್ಳಲು 57,000ರೂ. ವರೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರೈತರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಲಭ್ಯವಿದ್ದು, ಈ ಯೋಜನೆಯು ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶವಾಗಿದೆ. ಈ ಲೇಖನದ ಅಡಿಯಲ್ಲಿ ಜಾನುವಾರುಗಳಿಗೆ ಶೆಡ್ / ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಇರುವ ಯೋಜನೆಯ ಬಗ್ಗೆ ತಿಳಿಸಲಾಗಿದೆ.
57,000ರೂ. ಸಹಾಯಧನ :
ಈ ಮೊದಲು ಶೆಡ್ ಅಥವಾ ಕೊಟ್ಟಿಗೆ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 19,500ರೂ. ಹಾಗೂ SC, ST ವರ್ಗದವರಿಗೆ 43,000ರೂ. ನೀಡಲಾಗುತ್ತಿತ್ತು. ಆದರೆ ಇದೀಗ ಎಲ್ಲಾ ವರ್ಗದವರಿಗೂ ಕೂಡ 57,000ರೂ. ನೀಡಲಾಗುತ್ತಿದೆ.
57,000ರೂ. ದಲ್ಲಿ 10,556ರೂ. ಮೊತ್ತವನ್ನು ದಿನ ಕೂಲಿಯಾಗಿ ಹಾಗೂ ಉಳಿದ 46,644ರೂ. ವನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ಒಂದು ಕುಟುಂಬವು ವರ್ಷಕ್ಕೆ 5ಲಕ್ಷ ರೂ. ವರೆಗೆ ಸಹಾಯ ಪಡೆಯಬಹುದು. ಹೌದು, ನರೇಗಾ ಯೋಜನೆಯ ಮೂಲಕ ತಮ್ಮ ಹೊಲಗಳ ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು ಹಾಗೂ ಅರಣ್ಯ ಬೆಳೆಗಳು ಸೇರಿದಂತೆ ಇತ್ಯಾದಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳವು ವರ್ಷಕ್ಕೆ 5 ಲಕ್ಷ ರೂ. ವರೆಗೆ ಸಹಾಯಧನ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಜಾಬ್ ಕಾರ್ಡ್ ಅಥವಾ ನರೇಗಾ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ವೈದ್ಯರ ದೃಡೀಕರಣ ಪತ್ರದೊಂದಿಗೆ ಇತರೆ ಅಗತ್ಯ ದಾಖಲಾತಿಗಳನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
Special
ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ..

Anganawadi Recruitment 2025 : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು ಸೇರಿ ಒಟ್ಟು 250ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಹುದ್ದೆಗಳ ವಿವರ :
ಒಟ್ಟು 277 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
• ಅಂಗನವಾಡಿ ಕಾರ್ಯಕರ್ತೆ – 56 ಹುದ್ದೆಗಳು
• ಅಂಗನವಾಡಿ ಸಹಾಯಕಿ – 221 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ :
• ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
• ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ ಅರ್ಹತೆ ನೋಡುವುದಾದರೆ ಅಭ್ಯರ್ಥಿಗಳು 19 ವರ್ಷದಿಂದ ಗರಿಷ್ಠ 35 ವರ್ಷದ ಒಳಗಿರಬೇಕು.
ನೇಮಕಾತಿಯ ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ – 02ನೇ ಸೆಪ್ಟೆಂಬರ್ 2025
• ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ 10ನೇ ಅಕ್ಟೋಬರ್ 2025
ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದ ಲಿಂಕ್ – https://karnemakaone.kar.nic.in/abcd/ApplicationForm_JA_org.aspx
Special
KMF ನಲ್ಲಿ ಹಲವು ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಸಲು ಇನ್ನೂ ಕೆಲವೇ ದಿನಗಳು ಬಾಕಿ

KMF SHIMUL Recruitment 2025 : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
ಈ ಒಂದು ನೇಮಕಾತಿಯಲ್ಲಿ ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯ ಹುದ್ದೆಗಳ ವಿವರ :
ಒಟ್ಟು ವಿವಿಧ 27 ಖಾಲಿ ಇರುವ ಹುದ್ದೆಗಳನ್ನು ಪ್ರಸ್ತುತ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ಹುದ್ದೆಗಳ ವಿವರ ಈ ಕೆಳಗಿನಂತಿದೆ.
• ಸಹಾಯಕ ವ್ಯವಸ್ಥಾಪಕರು – 03 ಹುದ್ದೆಗಳು
• ವಿಸ್ತರಣಾಧಿಕಾರಿ ಗ್ರೇಡ್ 3 – 05 ಹುದ್ದೆಗಳು
• ಕೆಮಿಸ್ಟ್ ಗ್ರೇಡ್ 2 ( ಕೆಮಿಸ್ಟ್ರಿ ವಿಭಾಗ )- 04 ಹುದ್ದೆಗಳು
• ಕೆಮಿಸ್ಟ್ ಗ್ರೇಡ್ 2 ( ಮೈಕ್ರೋ ಬಯೋಲಜಿ ವಿಭಾಗ )- 02 ಹುದ್ದೆಗಳು
• ಜೂನಿಯರ್ ಸಿಸ್ಟಮ್ ಆಪರೇಟರ್ – 03 ಹುದ್ದೆಗಳು
• ಜೂನಿಯರ್ ಟೆಕ್ನೀಷಿಯನ್ (ಎಲೆಕ್ಟ್ರಿಕಲ್) – 05 ಹುದ್ದೆಗಳು
• ಜೂನಿಯರ್ ಟೆಕ್ನೀಷಿಯನ್ (ರಿಫ್ರೆಜರೇಟರ್) – 05 ಹುದ್ದೆಗಳು
• ಬಾಯ್ಲರ್ ಅಟೆಂಡೆಂಟ್ – 03 ಹುದ್ದೆಗಳು
ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಸಿಗುವ ವೇತನ ಶ್ರೇಣಿ – ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 34,100ರೂ. ಯಿಂದ 1,55,200ರೂ. ವರೆಗೆ ಸಿಗಲಿದೆ.
ಶೈಕ್ಷಣಿಕ ಅರ್ಹತೆ – ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮಾ ಅಥವಾ ಪದವಿ ಮುಗಿಸಿರಬೇಕು.
ವಯೋಮಿತಿ – 18 ರಿಂದ 40 ವರ್ಷದ ಒಳಗಿರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಜಿ ಶುಲ್ಕ :
• ಪ್ರವರ್ಗ-1, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ ರೂ. 500
• ಉಳಿದ ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ. 1,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 29, 2025
ಅರ್ಜಿ ಸಲ್ಲಿಸಲು ಹಾಗೂ ಇತರೆ ಮಾಹಿತಿಗಾಗಿ ಅಧಿಕೃತ ಜಲತನದ ಲಿಂಕ್ – https://virtualofficeerp.com/shimul_2025/instruction
Special
ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಕೌ – ಮ್ಯಾಟ್ ಖರೀದಿಸಲು ಸಬ್ಸಿಡಿ : ಅರ್ಜಿ ಸಲ್ಲಿಸುವುದು ಹೇಗೆ?

Subsidy Schemes for Farmers : ರೈತರಿಗೆ ಹೈನುಗಾರಿಕೆ ಮಾಡಲು ಸಹಾಯವಾಗುವಂತೆ ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ನೆಲಹಾಸು (Rubber Cow Mat) ಖರೀದಿಸಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಿದೆ.
2025-26ನೇ ಸಾಲಿಗೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ರಾಜ್ಯದಂತ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಅರ್ಹ ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಕೌ ಮ್ಯಾಟ್ ಖರೀದಿಸಲು ಸಹಾಯವಾಗುವಂತೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಿದೆ.
ಸಹಾಯಧನದ ವಿವರ :
• 2HP ಎಲೆಕ್ಟ್ರಿಕ್ ಮೇವು ಕತ್ತರಿಸುವ ಯಂತ್ರ ಖರೀದಿಸಲು ಘಟಕದ ವೆಚ್ಚ 34,000ರೂ. ಇದ್ದು, ಇದರ ಶೇಕಡಾ 50% ಹಣವನ್ನು ಅಂದರೆ 17,000ರೂ. ಹಣವನ್ನು ಸರ್ಕಾರ ಸಹಾಯಧನದ ರೂಪದಲ್ಲಿ ನೀಡುವುದು ಹಾಗೂ ಉಳಿದ 17,000ರೂ. ಮೊತ್ತವನ್ನು ಅರ್ಜಿದಾರರು ಪಾವತಿಸಬೇಕು.
• ರಬ್ಬರ್ ಕೌ – ಮ್ಯಾಟ್ ಖರೀದಿಸಲು ರೈತರು 2,850ರೂ. ಮಾತ್ರ ಪಾವತಿಸಿ, ಉಳಿದ ಹಣವನ್ನು ಸರ್ಕಾರ ಭರಿಸುವುದು.
ಯಾವ ರೈತರು ಅರ್ಜಿ ಸಲ್ಲಿಸಬಹುದು?
ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಿಮ್ಮ ತಾಲೂಕಿನ ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು 30 ಸೆಪ್ಟೆಂಬರ್ 2025 ಕೊನೆಯ ದಿನಾಂಕವಾಗಿದೆ.
-
Special13 hours ago
ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ..
-
Mysore22 hours ago
ವಾಸುದೇವಾಚಾರ್ಯ ಸ್ಮರಣಾರ್ಥ ಸರ್ಕಾರಿ ಕಾರ್ಯಕ್ರಮ: ಶಾಸಕ ಶ್ರೀವತ್ಸ ಮನವಿಗೆ ಸಿಎಂ ಸ್ಪಂದನೆ
-
Hassan18 hours ago
ತಾಜಾ ಎಣ್ಣೆ, ಆರೋಗ್ಯಕರ ಕುಟುಂಬ
-
Chikmagalur21 hours ago
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು : ಸಚಿವ ಸಂತೋಷ್ ಲಾಡ್
-
Kodagu16 hours ago
ಬಾಳೆಯಡ ಕಿಶನ್ ಪೂವಯ್ಯ ರಚಿತ ’ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ’ ಬಿಡುಗಡೆ
-
Hassan22 hours ago
ಹಾಸನದ ೧೫ ಕರ್ನಾಟಕ ಬೆಟಾಲಿಯನ್ ನಲ್ಲಿ ಎನ್ಸಿಸಿ ಕಾರ್ಯಗಾರ
-
Mandya16 hours ago
ಮದ್ದೂರು ನಗರವನ್ನು 100 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿ ಪಡಿಸಲಾಗುವುದು: ಕೆ.ಎಂ.ಉದಯ್
-
Chikmagalur17 hours ago
ಶರನ್ನವರಾತ್ರಿ ಉತ್ಸವ: ನೋಡುಗರ ಕಣ್ಮನ ಸೆಳೆಯುತ್ತಿರುವ ದಸರಾ ಗೊಂಬೆ ಪ್ರದರ್ಶನ