Hassan
ಅರಸೀಕೆರೆಯಲ್ಲಿ ರೈಲಿಗೆ ತಲೆಕೊಟ್ಟು ಯುವಕ ಆತ್ಮಹ*ತ್ಯೆ; ಗುರುತು ಪತ್ತೆಗೆ ಪೊಲೀಸರ ಮನವಿ
ಅರಸೀಕೆರೆ: ಹಾಸನ ಜಿಲ್ಲೆಯ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಮೃತ ಯುವಕ ಶಿವಮೊಗ್ಗದಿಂದ ಬೆಂಗಳೂರಿನ ಯಶವಂತಪುರಕ್ಕೆ ಪ್ರಯಾಣಿಸಲು ರೈಲು ಟಿಕೆಟ್ ಪಡೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಅರಸೀಕೆರೆ ರೈಲ್ವೆ ನಿಲ್ದಾಣದ ಬಳಿ ಆತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತನ ಬಗ್ಗೆ ಮಾಹಿತಿ ತಿಳಿದಿರುವವರು ಅಥವಾ ಕುಟುಂಬಸ್ಥರು ತಕ್ಷಣ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಆತ್ಮಹತ್ಯೆಗೆ ಕಾರಣವೇನು ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.
Hassan
ಎತ್ತಿನಗಾಡಿಯಲ್ಲಿ ದೇವರ ಒಡವೆ ವಸ್ತ್ರ ಮೆರವಣಿಗೆ: ಮಲೆಕಲ್ಲು ತಿರುಪತಿ ಜಾತ್ರೆಗೆ ಸಂಪ್ರದಾಯದ ಚಾಲನೆ
ಅರಸೀಕೆರೆ: ತಾಲೂಕಿನ ಇತಿಹಾಸ ಇನ್ನಲೆ ಹೊಂದಿರುವ ಮಾಲೆ ಕಲ್ಲು ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಜಾತ್ರಾ ಮಹೋತ್ಸವ ಜರಿಗಿದ್ದು ಮಲೆಕಲ್ಲು ತಿರುಪತಿ ಗ್ರಾಮಸ್ಥರು ಸಂಪ್ರದಾಯ ಸಮೇತ ತಾಲೂಕು ಕಚೇರಿಗೆ ಆಗಮಿಸಿ ದೇವರ ಒಡವೆ ವಸ್ತ್ರ ತೆಗೆದುಕೊಂಡು ಹೋಗಲು ಎತ್ತಿನ ಗಾಡಿ ಮೂಲಕ ಆಗಮಿಸಿದರು.

ನಂತರ ಸಂಪ್ರದಾಯ ಸಮೇತ ಎತ್ತಿನಗಾಡಿಯಲ್ಲಿ ದೇವರ ಒಡವೆ ವಸ್ತ್ರ ಇಟ್ಟು ತಾಲೂಕು ಕಚೇರಿ ಮುಂಭಾಗ ದೇವರ ಒಡವೆಗೆ ಪೂಜೆ ಸಲ್ಲಿಸಿದರು, ನಿರ್ವಿಘ್ನವಾಗಿ ಜಾತ್ರಾ ಮಹೋತ್ಸವ ನಡೆಯಲಿ ಎಂದು ಗ್ರೇಡ್-2 ತಹಶೀಲ್ದಾರ್ ಪಾಲಾಕ್ಷ ಪೂಜೆ ಸಲ್ಲಿಸಿ ಮಾತನಾಡಿದರು. ನಂತರ ಪೊಲೀಸ್ ಸರ್ಪಗಾವಳಿನಲ್ಲಿ ಎತ್ತಿನಗಾಡಿ ಮೂಲಕ ರಸ್ತೆ ಮಾರ್ಗವಾಗಿ ತಿರುಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುವುದು.
ಈ ಸಂದರ್ಭದಲ್ಲಿ ಹಾಜರಿದ್ದ ಶಿರಸ್ತೆದಾರ್ ಶಿವಶಂಕರ್,ಚೇತನ್ ಸಿಬ್ಬಂದಿಗಳು ಹಾಜರಿದ್ದರು.

ಮಲೆಕಲ್ಲು ತಿರುಪತಿ ಗ್ರಾಮಸ್ಥರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರೀಶ್, ಲೋಕಣ್ಣ, ಬೊಮ್ಮೇನಹಳ್ಳಿ ಪರಮಶಿವಯ್ಯ ಪ್ರಧಾನ ಅರ್ಚಕಗಳಾದ ರಾಮ್ ಪ್ರಸಾದ್ ವರದರಾಜು ಇತರೆ ಅರ್ಚಕರುಗಳಾದ ಗಿರಿ ಕೇಸರಿ, ಶ್ರೀನಿವಾಸ್ ಊರಿನವರು ಪ್ರಮುಖ ಮುಖಂಡರು ಹಾಜರಿದ್ದರು.
Hassan
ನೀಟ್–ಜೆಇಇ ಫಲಿತಾಂಶದಲ್ಲಿ ಹೊಸ ಇತಿಹಾಸ ಬರೆದ ಪಾಠಶಾಲಾ ನೀಟ್ ಅಕಾಡೆಮಿ
ಹಾಸನ : ಪಾಠಶಾಲಾ ನೀಟ್ ಅಕಾಡೆಮಿ ಸಂಸ್ಥೆಯು 2021ರ ಫೆಬ್ರವರಿ ತಿಂಗಳಿನಲ್ಲಿ ಕೆಆರ್ ಪುರಂನ ಸ್ಮಾರ್ಟ್ ಆರ್ಕೇಡ್ ಕಟ್ಟಡದಲ್ಲಿ ಪ್ರಾರಂಭವಾಯಿತು ನಂತರ ಸತತ ನಾಲ್ಕು ವರ್ಷಗಳ ಕಾಲ ಅಲ್ಲಿ ಕಾರ್ಯನಿರ್ವಹಿಸಿ ತನ್ನ ಎರಡನೇ ಅಂಗ ಸಂಸ್ಥೆಯನ್ನು ಕುವೆಂಪು ನಗರದ ಕೆಎನ್‌ಟಿ ಟವರ್ ಎಂಬ ಕಟ್ಟಡದಲ್ಲಿ 2024 ರ ಡಿಸೆಂಬರ್ ತಿಂಗಳಿನಲ್ಲಿ ಸ್ಥಾಪನೆಯಾಯಿತು. ಹಾಸನ ಜಿಲ್ಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಎನ್‌ಇಇಟಿ ಹಾಗೂ ಜೆಇಇ ಪರೀಕ್ಷೆಗಳಿಗೆ ಅತ್ಯಂತ ನುರಿತ ಶಿಕ್ಷಕರಿಂದ ವಿದ್ಯಾಭ್ಯಾಸ ಒದಗಿಸುವುದು ತನ್ಮೂಲಕ ಜಿಲ್ಲೆಯ ಸ್ಥಳೀಯ ವಿದ್ಯಾರ್ಥಿಗಳು ಬೆಂಗಳೂರು, ಮಂಗಳೂರು ನಗರಗಳಿಗೆ ವ್ಯಾಸಂಗಕ್ಕೆ ಹೋಗುವ ಅವಶ್ಯಕತೆಯನ್ನು ಇಲ್ಲವಾಗಿಸುವುದು ಸಂಸ್ಥೆಯ ಪ್ರಾರಂಭದ ಉದ್ದೇಶವಾಗಿತ್ತು.

ಹಾಸನದ ಜನತೆಗೆ ನಮ್ಮ ಸಂಸ್ಥೆ ಮೇಲೆ ಪ್ರಾಥಮಿಕ ದಿನಗಳಲ್ಲಿ ವಿಶ್ವಾಸದ ಕೊರತೆ ಇದ್ದರೂ ಸಹ ನಮ್ಮ ಬಿಡದ ಹಠದಿಂದ ನಮಗೆ ಒಂದು ಲಾಂಗ್‌ಟರ್ಮ್ ನೀಟ್ ಬ್ಯಾಚ್‌ನಷ್ಟು ಪ್ರವೇಶಾತಿ ಪಡೆಯಲು ದಾರಿ ಮಾಡಿಕೊಟ್ಟಿತು,2022ನೇ ನೀಟ್ ಪರೀಕ್ಷೆಯಲ್ಲಿ ಪ್ರವೇಶಾತಿ ಪಡೆದಿದ್ದ ಕೇವಲ 24 ವಿದ್ಯಾರ್ಥಿಗಳಲ್ಲಿ ಒಂಭತ್ತು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟ್ ಸಿಕ್ಕಿದ್ದು, ಆಶೀಶ್ ಎಂಬ ವಿದ್ಯಾರ್ಥಿ 636 ಅಂಕಗಳೊಂದಿಗೆ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಂಮಿದ್ದರು. ಪಟ್ಟು ಬಿಡದ ಶ್ರಮದೊಂದಿಗೆ ತರಗತಿ ಸಮಯವನ್ನು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ, ವಾರದ ಪ್ರತಿದಿನವನ್ನು ಮೀಸಲಿಡಲು ನಿರ್ಧರಿಸಿದ ನಮಗೆ ಹಾಸನದ ಜನತೆ ಕಾಲಕ್ರಮೇಣ ಹೆಚ್ಚಿನ ಮಕ್ಕಳನ್ನು ನೀಡತೊಡಗಿತು. 2023ರ ಬ್ಯಾಚಿನಲ್ಲಿ ಸುಹಾನಿ ಎಂಬ ವಿದ್ಯಾರ್ಥಿನಿ 646 ಅಂಕಗಳಿಸಿ ಮೈಸೂರಿನ ಎಂಎಂಸಿ ಕಾಲೇಜಿಗೆ ಪ್ರವೇಶ ಪಡೆದ ಹಾಸನ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ಆಗಿದ್ದರು.
ನಂತರದ ದಿನಮಾನದಲ್ಲಿ ಇತಿಹಾಸ ರಚಿಸಿದ ನಮ್ಮ ನೀಟ್ ಕೇಂದ್ರದಲ್ಲಿ 2024ರಲ್ಲಿ ಸುಹಾಸ್ ಎಂಬ ವಿದ್ಯಾರ್ಥಿ ಐತಿಹಾಸಿಕ 705 ಅಂಕ ಪಡೆದು ಎಐಆರ್-1052 ಪಡೆದು AIIMs ಗೆ ಪ್ರವೇಶಾತಿ ಪಡೆದು ಇಡೀ ಜಿಲ್ಲೆಯ ನೀಟ್ ಪರೀಕ್ಷೆಯ ಫಲಿತಾಂಶದ ಹೊಸ ಮೈಲುಗಲ್ಲು ಸೃಷ್ಟಿಸಿದರು ಅಲ್ಲದೆ ರೀತನ್ ಎಂಬ ವಿದ್ಯಾರ್ಥಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರು. ಕೈಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

ಪ್ರಸಕ್ತ ಸಾಲಿನಲ್ಲಿ 600 ಅಂಕಗಳಿಗಿಂತ ಹೆಚ್ಚಿನ ಅಂಕ ಪಡೆದ ಎರಡು ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳನ್ನು ನೀಡಿದ ಹಾಸನದ ಏಕೈಕ ವಿಶ್ವಾಸ ಸಂಸ್ಥೆ ಪಾಠಶಾಲಾ ಆಗಿದೆ. 2026ರಲ್ಲಿ ಕ್ರಮವಾಗಿ ಒಂದರಿಂದ ಐದು ವಿದ್ಯಾರ್ಥಿಗಳು 2026 ರ ಜೆಇಇ ಮೇನ್ಸ್ – 2 ರ ಟಾಪರ್ ಆಗಿದ್ದು ಇದರ ಹೆಗ್ಗಳಿಕೆಯಾಗಿದೆ ಈ ವರ್ಷ ಅಭಿಜ್ಞಾ 605 ಹಾಗೂ ಚಿನ್ಮಯಿ 600 ಅಂಕ ಗಳಿಸಿ ನೀಟ್‌ನಲ್ಲಿ ಜಿಲ್ಲಾ ಟಾಪರ್ಸ್ ಆಗಿದ್ದಾರೆ. ನಮ್ಮಲ್ಲಿ ಮಕ್ಕಳಿಗೆ ಎಸಿ ಕ್ಲಾಸ್‌ರೂಮ್ಸ್, ಡಿಜಿಟಲ್ ಬೋರ್ಡ್ ನಂತಹ ಹೈಟೆಕ್ ಕ್ಲಾಸ್ ರೂಮ್‌ಗಳು ಇರುವ ಹಾಸನದ ಏಕೈಕ ಸಂಸ್ಥೆ ಪಾಠಶಾಲೆಯಾಗಿದ್ದು, ಒಟ್ಟಾರೆ ಇಲ್ಲಿಯವರೆಗೆ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್, 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎಎಂಎಸ್, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಡಿಎಸ್, ಅಲ್ಲದೆ ಸಾಕಷ್ಟು ಉಚಿತ ಇಂಜಿನಿಯರಿಂಗ್ ಸೀಟ್ ಕೊಡಿಸಿದ ಹಾಸನದ ಮಣ್ಣಿನ ಮಕ್ಕಳ ಸಂಸ್ಥೆಯಾಗಿದೆ.

ನೂರಾರು ಬ್ರಾಂಚ್‌ಗಳುಳ್ಳ, ಆರ್ಥಿಕ ಬಲ ಉಳ್ಳ ಸಂಸ್ಥೆಗಳು ಮಾಡದ ಸಾಧನೆಯನ್ನು ಮಾಡಿ ನಮ್ಮೂರಿನ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತಮ್ಮಿಷ್ಟದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ 400ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಶುಲ್ಕದಲ್ಲಿ ಶೇಕಡ 30ರಷ್ಟು ರಿಯಾಯಿತಿ ನೀಡುವ ಯೋಜನೆ ಈ ವರ್ಷದಿಂದ ಪ್ರಾರಂಭವಾಗಲಿದೆ.
ವಿದ್ಯಾರ್ಥಿಗಳಲ್ಲಿ ಶಿಸ್ತು, ಕ್ರಮಬದ್ಧ ಶಿಕ್ಷಣ ವ್ಯವಸ್ಥೆಯನ್ನು ಒದಗಿಸಿ ಹಾಸನದ ಮಕ್ಕಳು ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ಪಡೆಯಲು ನಾವು ಉತ್ತಮ ತರಬೇತಿ ನೀಡಲು ಸಿದ್ದರಿದ್ದು ಹಾಸನ ಜಿಲ್ಲೆಯ ನಾಗರಿಕರು ನಮ್ಮೊಂದಿಗೆ ಕೈಜೋಡಿಸಲು ಕೇಳಿಕೊಳ್ಳುತ್ತೇವೆ.
Hassan
ಚೆನ್ನಮ್ಮಗೆ ಅಂತಿಮ ನಮನ ಸಲ್ಲಿಸಿದ ಅಪ್ಪಚ್ಚು ರಂಜನ್: ದೇವೇಗೌಡರಿಗೆ ಸಾಂತ್ವನ
ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿವಂಗತ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಅಂತಿಮ ನಮನ ಸಲ್ಲಿಸಿದರು.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ನಡೆದ ಅಂತಿಮ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಕುಟುಂಬದ ದುಃಖದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ವಿವಿಧ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಚೆನ್ನಮ್ಮ ಅವರಿಗೆ ಭಾವಪೂರ್ಣ ವಿದಾಯ ಸಲ್ಲಿಸಿದರು.
-
State5 hours agoಚೆನ್ನಮ್ಮ ಅಂತ್ಯಕ್ರಿಯೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪ್ರಜ್ವಲ್ ರೇವಣ್ಣಗೆ ಅನುಮತಿ
-
Hassan19 hours agoಚೆನ್ನಮ್ಮ ಅಂತ್ಯಕ್ರಿಯೆ: ಹಾಸನದಲ್ಲಿ 5 ತಾತ್ಕಾಲಿಕ ಹೆಲಿಪ್ಯಾಡ್ಗಳ ನಿರ್ಮಾಣ
-
Chamarajanagar24 hours agoಅಕ್ರಮ ಮದ್ಯ ಸಾಗಾಟ: ಬೈಕ್, ಮಾಲು ಸಮೇತ ಆರೋಪಿ ಬಂಧನ
-
National4 hours agoಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ
-
Chikmagalur18 hours agoಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ₹14.67 ಲಕ್ಷ ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
-
Kodagu17 hours ago“ಭಾಗಮಂಡಲ ಕಾಮಗಾರಿಗೆ ₹3 ಕೋಟಿ: ಪೊನ್ನಣ್ಣ ಕೋರಿಕೆಗೆ ಅನುದಾನ”
-
Kodagu22 hours agoಭಾಗಮಂಡಲ ಮೇಲ್ಸೇತುವೆ ಮತ್ತು ಸುತ್ತಲಿನ ಅಭಿವೃದ್ಧಿಗೆ 3 ಕೋಟಿ ಅನುದಾನ
-
Hassan5 hours agoಚೆನ್ನಮ್ಮ ಅಂತಿಮ ದರ್ಶನಕ್ಕೆ ಪ್ರಜ್ವಲ್ ಬರಲ್ಲ:
