Connect with us

Mysore

ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ಮಾರಾಟ ವ್ಯವಸ್ಥೆಗೆ ಜಾಗ ತೋರಿಸಲು ಒತ್ತಾಯ

Published

on

ಟಿ ನರಸೀಪುರ:-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಪದಾಧಿಕಾರಿಗಳ ಜೊತೆ ಕಬ್ಬು ಬೆಳೆಗಾರರ ಸಂಘ ಪುರಸಭೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಫುಟ್ಪಾತ್ ವ್ಯಾಪಾರಿಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕುರಿತು ಚರ್ಚೆ ಮಾಡಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರಸ್ತೆ ಬದಿ ವ್ಯಾಪಾರಗಳು ಪ್ರಸ್ತುತ ದಿನಗಳಲ್ಲಿ ಜೀವನ ಮಾಡುವುದು ಕಷ್ಟಕರವಾಗಿದೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಾಗ ಕೊಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಬಡವರ ವ್ಯಾಪಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಎದುರು ಖಾಸಗಿ ನಿವೇಶನದಲ್ಲಿ ಕೆಲವರಿಗೆ ಹಾಗೂ ಲಿಂಕ್ ರಸ್ತೆಯ ಮಧ್ಯಭಾಗದಲ್ಲಿರುವ ಪಿಟೀಲು ಚೌಡಯ್ಯ ಭವನದ ಜಾಗದಲ್ಲಿ ಕೆಲವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ.

3ಒಂದು ತಿಂಗಳ ಒಳಗೆ ಅವರಿಗೆ ವ್ಯವಸ್ಥಿತ ರೀತಿಯಲ್ಲಿ 150 ಜನರಿಗೆ ಪಿಟೀಲು ಚೌಡಯ್ಯ ನಿವೇಶನದ ಎದುರು ಮಾರುಕಟ್ಟೆ ನಿರ್ಮಿಸಿ ಪ್ರತಿಯೊಬ್ಬರಿಗೂ ಶಾಶ್ವತ ಪರಿಹಾರವಾಗಿ ಮಾರುಕಟ್ಟೆ ನೀಡುವ ಭರವಸೆ ನೀಡಿದರಲ್ಲದೆ. ಶಾಶ್ವತ ಮಾರುಕಟ್ಟೆಯ ಸ್ಥಳವನ್ನು ತೋರಿಸಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ. 15 ದಿನದಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ಸ್ಥಳ ನೀಡುವ ಭರವಸೆ ನೀಡಿದರು. ಸದ್ಯಕ್ಕೆ ಮುಖ್ಯ ರಸ್ತೆಯ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪಿಟೀಲು ಚೌಡಯ್ಯ ಕೆರೆಯ ಅಂಗಳದಲ್ಲಿ ಸಣ್ಣ ಗಾಡಿಗಳ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಲಾಗಿದೆ ಎಂದರು.

ನಂತರ ಕುರುಬೂರು ಶಾಂತಕುಮಾರ್ ಮಾತನಾಡಿ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕಾರಣ ಹೆಚ್ಚು ಸಮಸ್ಯೆಯಾಗುತ್ತಿತ್ತು ಈಗ ಒಳ್ಳೆಯ ಕಾರ್ಯ ಮಾಡಿದ್ದಾರೆ ಬಡವರು ವ್ಯಾಪಾರ ಮಾಡಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ಯಾರು ಆತಂಕ ಪಡಬಾರದು ಎಂದು ವ್ಯಾಪಾರಸ್ಥರಿಗೆ ತಿಳಿದರು ಅದಕ್ಕೆ ಎಲ್ಲರೂ ಕೂಡ ಸಮ್ಮತಿ ಸೂಚಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಕಿರಗಸೂರ್ ಶಂಕರ್, ಹತ್ತಳ್ಳಿ ದೇವರಾಜ್,ಕೆ ಜಿ ಗುರುಸ್ವಾಮಿ,ವಾಚ್ ಕುಮಾರ, ಲಿಂಗಯ್ಯ,ಸಿದ್ದೇಶ್,ಪ್ರಸಾದ್ ನಾಯಕ್, ಪ್ರದೀಪ್, ರಸ್ತೆ ಬದಿ ವ್ಯಾಪಾರಸ್ಥರು ಇದ್ದರು.

Continue Reading

Mysore

ಕೆ.ಆರ್.ನಗರ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಸಿಇ ಉಮೇಶ್ ಅವಿರೋಧ ಆಯ್ಕೆ

Published

on

ಕೆ.ಆರ್‌. ನಗರ:  ಕೃಷ್ಣರಾಜನಗರ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಸಿ ಇ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಕೆ ಆರ್ ನಗರ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ತಾಲೂಕಿನ ಸಿಇ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಹಿಂದೆ ಅಧ್ಯಕ್ಷರಾಗಿದ್ದ ಡಾಕ್ಟರ್ ನಟರಾಜ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿಇ ಉಮೇಶ್ ರವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾ ಅಧಿಕಾರಿಗಳಾಗಿದ್ದ ಶಿವಕುಮಾರ್ ಸಹಾಯಕ ಚುನಾವಣೆ ಅಧಿಕಾರಿ ಕೆ ಸಿ ಮಧು ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು‌.

Continue Reading

Mysore

ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ ಕಲ್ಪಿಸಲು ತೀವ್ರ ಒತ್ತಾಯ

Published

on

ಟಿ ನರಸೀಪುರ:-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಪದಾಧಿಕಾರಿಗಳ ಜೊತೆ ಕಬ್ಬು ಬೆಳೆಗಾರರ ಸಂಘ ಪುರಸಭೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಫುಟ್ಪಾತ್ ವ್ಯಾಪಾರಿಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕುರಿತು ಚರ್ಚೆ ಮಾಡಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರಸ್ತೆ ಬದಿ ವ್ಯಾಪಾರಗಳು ಪ್ರಸ್ತುತ ದಿನಗಳಲ್ಲಿ ಜೀವನ ಮಾಡುವುದು ಕಷ್ಟಕರವಾಗಿದೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಾಗ ಕೊಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಬಡವರ ವ್ಯಾಪಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಎದುರು ಖಾಸಗಿ ನಿವೇಶನದಲ್ಲಿ ಕೆಲವರಿಗೆ ಹಾಗೂ ಲಿಂಕ್ ರಸ್ತೆಯ ಮಧ್ಯಭಾಗದಲ್ಲಿರುವ ಪಿಟೀಲು ಚೌಡಯ್ಯ ಭವನದ ಜಾಗದಲ್ಲಿ ಕೆಲವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಒಂದು ತಿಂಗಳ ಒಳಗೆ ಅವರಿಗೆ ವ್ಯವಸ್ಥಿತ ರೀತಿಯಲ್ಲಿ 150 ಜನರಿಗೆ ಪಿಟೀಲು ಚೌಡಯ್ಯ ನಿವೇಶನದ ಎದುರು ಮಾರುಕಟ್ಟೆ ನಿರ್ಮಿಸಿ ಪ್ರತಿಯೊಬ್ಬರಿಗೂ ಶಾಶ್ವತ ಪರಿಹಾರವಾಗಿ ಮಾರುಕಟ್ಟೆ ನೀಡುವ ಭರವಸೆ ನೀಡಿದರಲ್ಲದೆ. ಶಾಶ್ವತ ಮಾರುಕಟ್ಟೆಯ ಸ್ಥಳವನ್ನು ತೋರಿಸಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ. 15 ದಿನದಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ಸ್ಥಳ ನೀಡುವ ಭರವಸೆ ನೀಡಿದರು. ಸದ್ಯಕ್ಕೆ ಮುಖ್ಯ ರಸ್ತೆಯ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪಿಟೀಲು ಚೌಡಯ್ಯ ಕೆರೆಯ ಅಂಗಳದಲ್ಲಿ ಸಣ್ಣ ಗಾಡಿಗಳ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಲಾಗಿದೆ ಎಂದರು.

ನಂತರ ಕುರುಬೂರು ಶಾಂತಕುಮಾರ್ ಮಾತನಾಡಿ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕಾರಣ ಹೆಚ್ಚು ಸಮಸ್ಯೆಯಾಗುತ್ತಿತ್ತು ಈಗ ಒಳ್ಳೆಯ ಕಾರ್ಯ ಮಾಡಿದ್ದಾರೆ ಬಡವರು ವ್ಯಾಪಾರ ಮಾಡಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ಯಾರು ಆತಂಕ ಪಡಬಾರದು ಎಂದು ವ್ಯಾಪಾರಸ್ಥರಿಗೆ ತಿಳಿದರು ಅದಕ್ಕೆ ಎಲ್ಲರೂ ಕೂಡ ಸಮ್ಮತಿ ಸೂಚಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಕಿರಗಸೂರ್ ಶಂಕರ್, ಹತ್ತಳ್ಳಿ ದೇವರಾಜ್,ಕೆ ಜಿ ಗುರುಸ್ವಾಮಿ,ವಾಚ್ ಕುಮಾರ, ಲಿಂಗಯ್ಯ,ಸಿದ್ದೇಶ್,ಪ್ರಸಾದ್ ನಾಯಕ್, ಪ್ರದೀಪ್, ರಸ್ತೆ ಬದಿ ವ್ಯಾಪಾರಸ್ಥರು ಇದ್ದರು.

Continue Reading

Mysore

ಶಿಸ್ತುಬದ್ಧ ಪರಿಶ್ರಮವೇ ಯಶಸ್ಸಿನ ಗುಟ್ಟು: ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು:  ಪದವಿಪೂರ್ವ ಶಿಕ್ಷಣದ ಎರಡು ವರ್ಷಗಳು ವಿದ್ಯಾರ್ಥಿಗಳ ಬದುಕಿನ ನಿರ್ಣಾಯಕ ಘಟ್ಟ. ಈ ಅವಧಿಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ, ಶಿಸ್ತುಬದ್ಧ ಜೀವನ ನಡೆಸಿ ಗುರಿಯತ್ತ ಏಕಾಗ್ರತೆಯಿಂದ ಸಾಗಿದರೆ ಯಶಸ್ಸು ಸಾಧಿಸುವುದು ಖಚಿತ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಇಂದು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ, ಕ್ರೀಡಾ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಳಿಕ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದ ಅವರು, ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವ, ಶಿಸ್ತು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನೂ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಂಜನಗೂಡು ತಾಲೂಕಿನಲ್ಲಿ ಕೈಗಾರಿಕೆಗಳು ಹಾಗೂ ವಿವಿಧ ಸಂಸ್ಥೆಗಳ ಹೂಡಿಕೆ ಹೆಚ್ಚುತ್ತಿದ್ದು, ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಸರ್ಕಾರಿ ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಸಲಹೆ ನೀಡಿದರು.

ದಿವಂಗತ ಧ್ರುವನಾರಾಯಣ್ ಎಜುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುವಂತೆ ಅವರು ಕರೆ ನೀಡಿದರು.

ನಮ್ಮ ತಂದೆ ದಿ, ಧ್ರುವನಾರಾಯಣ್ ಅವರ ಜನ್ಮದಿನದ ಅಂಗವಾಗಿ ಇದೇ ತಿಂಗಳ 31ರಂದು ಹುಲ್ಲಹಳ್ಳಿಯಲ್ಲಿ ಉದ್ಯೋಗ ಮೇಳ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

 

ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕುರಹಟ್ಟಿ ಮಹೇಶ್, ಮುಖ್ಯ ಭಾಷಣಕಾರರಾದ ಪ್ರೊಫೆಸರ್ ಸುತ್ತೂರು ಮಾಲಿನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗಮ್ಮ, ಇವರುಗಳು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕುರಹಟ್ಟಿ ಮಹೇಶ್, ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವೇಗೌಡ, ಮಾಜಿ ಪುರಸಭೆ ಅಧ್ಯಕ್ಷ ಸಿ.ಎಂ. ಶಂಕರ್, ಮೈಸೂರು ಶಿಕ್ಷಣ ಇಲಾಖೆಉಪನಿರ್ದೇಶಕರಾದ ನಾಗಮ್ಮ , ಪ್ರಾಂಶುಪಾಲರಾದ ಚಂದ್ರಶೇಖರ , ಮುಖ್ಯ ಭಾಷಣಕಾರರಾದ ಸುತ್ತೂರು ಮಾಲಿನಿ, ನಗರಸಭೆ ಸದಸ್ಯರುಗಳಾದ ಎಸ್. ಗಂಗಾಧರ್, ಸಿದ್ಫಿಕ್ , ಗಾಯತ್ರಿ ಮೋಹನ್ , ವಕೀಲರು ಎಸ್.ಪಿ.ಮಹೇಶ್, ಸೌಭಾಗ್ಯ , ಗೋವಿಂದ ರಾಜ್ , ಚಂದನ್ , ವಿಜಯ್ ಕುಮಾರ್ , ಮಹೇಶ್, ಆದರ್ಶ್, ಸೇರಿದಂತೆ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Continue Reading

Trending

error: Content is protected !!