Connect with us

Mysore

ಮೈಸೂರು ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡಲು ಬೃಹತ್ ಪ್ಲಾನ್: ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

Published

on

ಮೈಸೂರು:ಮಾದಕ ವ್ಯಸನದ ಪಿಡುಗಿನಿಂದ ಯುವ ಪೀಳಿಗೆಯನ್ನು ರಕ್ಷಿಸಲು ಹಾಗೂ ಮೈಸೂರು ಜಿಲ್ಲೆಯನ್ನು ಸಂಪೂರ್ಣ ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮಗಳಿಗೆ ಮುಂದಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಬೃಹತ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ತಾಲೂಕಿನಲ್ಲೂ ‘ಬೇಡ ಬ್ರೋ’ ಕ್ಯಾಂಪೇನ್!

ನಗರ ಪೊಲೀಸರ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆಯು ‘ಬೇಡ ಬ್ರೋ’ ಎಂಬ ವಿನೂತನ ಮಾದಕ ದ್ರವ್ಯ ವಿರೋಧಿ ಅಭಿಯಾನವನ್ನು ನಡೆಸುತ್ತಿದೆ. ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ, ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲೂ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಡ್ರಗ್ಸ್‌ನ ಭೀಕರ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

6 ತಿಂಗಳಲ್ಲಿ 166 NDPS ಪ್ರಕರಣ ದಾಖಲು!

ಮಾದಕ ದ್ರವ್ಯ ಮಾರಾಟಗಾರರು ಮತ್ತು ದಂಧೆಕೋರರ ವಿರುದ್ಧ ಪೊಲೀಸರು ಕಾನೂನು ಸಮರ ಸಾರಿದ್ದಾರೆ. ವರ್ಷದ ಮೊದಲ 6 ತಿಂಗಳ ಅವಧಿಯಲ್ಲೇ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ, ಎನ್‌ಡಿಪಿಎಸ್ (NDPS – ಮಾದಕ ದ್ರವ್ಯ ಕಾಯ್ದೆ) ಅಡಿಯಲ್ಲಿ ಬರೋಬ್ಬರಿ 166 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಮೂಲಕ ಡ್ರಗ್ಸ್ ಜಾಲಕ್ಕೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

‘ಸನ್ಮಿತ್ರ’ ಯೋಜನೆಯಡಿ ವ್ಯಸನಿಗಳ ಮೇಲೆ ನಿಗಾ

ಮಾದಕ ವ್ಯಸನಕ್ಕೆ ತುತ್ತಾಗಿ ಅದರಿಂದ ಹೊರಬರಲು ಯತ್ನಿಸುತ್ತಿರುವ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಗಮನಿಸಲು ಇಲಾಖೆಯು ವಿಶೇಷ ಕ್ರಮ ಕೈಗೊಂಡಿದೆ. ‘ಸನ್ಮಿತ್ರ’ ಕಾರ್ಯಕ್ರಮದ ಅಡಿಯಲ್ಲಿ ಡ್ರಗ್ಸ್ ವ್ಯಸನಿಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದ್ದು, ಅವರಿಗೆ ಅಗತ್ಯ ಕೌನ್ಸೆಲಿಂಗ್ ಹಾಗೂ ಸುಧಾರಣೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ.

“ಮೈಸೂರು ಜಿಲ್ಲೆಯನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸುವುದು ನಮ್ಮ ಇಲಾಖೆಯ ದೃಢ ಸಂಕಲ್ಪವಾಗಿದೆ. ಕೇವಲ ಪೊಲೀಸರಿಂದ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ; ಸಾರ್ವಜನಿಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿ ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು.”

ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಮೈಸೂರು.

Mysore

ಕೆ.ಆರ್.ನಗರ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಸಿಇ ಉಮೇಶ್ ಅವಿರೋಧ ಆಯ್ಕೆ

Published

on

ಕೆ.ಆರ್‌. ನಗರ:  ಕೃಷ್ಣರಾಜನಗರ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಸಿ ಇ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಕೆ ಆರ್ ನಗರ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ತಾಲೂಕಿನ ಸಿಇ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಹಿಂದೆ ಅಧ್ಯಕ್ಷರಾಗಿದ್ದ ಡಾಕ್ಟರ್ ನಟರಾಜ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿಇ ಉಮೇಶ್ ರವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾ ಅಧಿಕಾರಿಗಳಾಗಿದ್ದ ಶಿವಕುಮಾರ್ ಸಹಾಯಕ ಚುನಾವಣೆ ಅಧಿಕಾರಿ ಕೆ ಸಿ ಮಧು ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು‌.

Continue Reading

Mysore

ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ ಕಲ್ಪಿಸಲು ತೀವ್ರ ಒತ್ತಾಯ

Published

on

ಟಿ ನರಸೀಪುರ:-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಪದಾಧಿಕಾರಿಗಳ ಜೊತೆ ಕಬ್ಬು ಬೆಳೆಗಾರರ ಸಂಘ ಪುರಸಭೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಫುಟ್ಪಾತ್ ವ್ಯಾಪಾರಿಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕುರಿತು ಚರ್ಚೆ ಮಾಡಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರಸ್ತೆ ಬದಿ ವ್ಯಾಪಾರಗಳು ಪ್ರಸ್ತುತ ದಿನಗಳಲ್ಲಿ ಜೀವನ ಮಾಡುವುದು ಕಷ್ಟಕರವಾಗಿದೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಾಗ ಕೊಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಬಡವರ ವ್ಯಾಪಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಎದುರು ಖಾಸಗಿ ನಿವೇಶನದಲ್ಲಿ ಕೆಲವರಿಗೆ ಹಾಗೂ ಲಿಂಕ್ ರಸ್ತೆಯ ಮಧ್ಯಭಾಗದಲ್ಲಿರುವ ಪಿಟೀಲು ಚೌಡಯ್ಯ ಭವನದ ಜಾಗದಲ್ಲಿ ಕೆಲವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಒಂದು ತಿಂಗಳ ಒಳಗೆ ಅವರಿಗೆ ವ್ಯವಸ್ಥಿತ ರೀತಿಯಲ್ಲಿ 150 ಜನರಿಗೆ ಪಿಟೀಲು ಚೌಡಯ್ಯ ನಿವೇಶನದ ಎದುರು ಮಾರುಕಟ್ಟೆ ನಿರ್ಮಿಸಿ ಪ್ರತಿಯೊಬ್ಬರಿಗೂ ಶಾಶ್ವತ ಪರಿಹಾರವಾಗಿ ಮಾರುಕಟ್ಟೆ ನೀಡುವ ಭರವಸೆ ನೀಡಿದರಲ್ಲದೆ. ಶಾಶ್ವತ ಮಾರುಕಟ್ಟೆಯ ಸ್ಥಳವನ್ನು ತೋರಿಸಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ. 15 ದಿನದಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ಸ್ಥಳ ನೀಡುವ ಭರವಸೆ ನೀಡಿದರು. ಸದ್ಯಕ್ಕೆ ಮುಖ್ಯ ರಸ್ತೆಯ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪಿಟೀಲು ಚೌಡಯ್ಯ ಕೆರೆಯ ಅಂಗಳದಲ್ಲಿ ಸಣ್ಣ ಗಾಡಿಗಳ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಲಾಗಿದೆ ಎಂದರು.

ನಂತರ ಕುರುಬೂರು ಶಾಂತಕುಮಾರ್ ಮಾತನಾಡಿ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕಾರಣ ಹೆಚ್ಚು ಸಮಸ್ಯೆಯಾಗುತ್ತಿತ್ತು ಈಗ ಒಳ್ಳೆಯ ಕಾರ್ಯ ಮಾಡಿದ್ದಾರೆ ಬಡವರು ವ್ಯಾಪಾರ ಮಾಡಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ಯಾರು ಆತಂಕ ಪಡಬಾರದು ಎಂದು ವ್ಯಾಪಾರಸ್ಥರಿಗೆ ತಿಳಿದರು ಅದಕ್ಕೆ ಎಲ್ಲರೂ ಕೂಡ ಸಮ್ಮತಿ ಸೂಚಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಕಿರಗಸೂರ್ ಶಂಕರ್, ಹತ್ತಳ್ಳಿ ದೇವರಾಜ್,ಕೆ ಜಿ ಗುರುಸ್ವಾಮಿ,ವಾಚ್ ಕುಮಾರ, ಲಿಂಗಯ್ಯ,ಸಿದ್ದೇಶ್,ಪ್ರಸಾದ್ ನಾಯಕ್, ಪ್ರದೀಪ್, ರಸ್ತೆ ಬದಿ ವ್ಯಾಪಾರಸ್ಥರು ಇದ್ದರು.

Continue Reading

Mysore

ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ಮಾರಾಟ ವ್ಯವಸ್ಥೆಗೆ ಜಾಗ ತೋರಿಸಲು ಒತ್ತಾಯ

Published

on

ಟಿ ನರಸೀಪುರ:-ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಪದಾಧಿಕಾರಿಗಳ ಜೊತೆ ಕಬ್ಬು ಬೆಳೆಗಾರರ ಸಂಘ ಪುರಸಭೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಫುಟ್ಪಾತ್ ವ್ಯಾಪಾರಿಗಳ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕುರಿತು ಚರ್ಚೆ ಮಾಡಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ರಸ್ತೆ ಬದಿ ವ್ಯಾಪಾರಗಳು ಪ್ರಸ್ತುತ ದಿನಗಳಲ್ಲಿ ಜೀವನ ಮಾಡುವುದು ಕಷ್ಟಕರವಾಗಿದೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜಾಗ ಕೊಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ಬಡವರ ವ್ಯಾಪಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನ ಎದುರು ಖಾಸಗಿ ನಿವೇಶನದಲ್ಲಿ ಕೆಲವರಿಗೆ ಹಾಗೂ ಲಿಂಕ್ ರಸ್ತೆಯ ಮಧ್ಯಭಾಗದಲ್ಲಿರುವ ಪಿಟೀಲು ಚೌಡಯ್ಯ ಭವನದ ಜಾಗದಲ್ಲಿ ಕೆಲವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ.

3ಒಂದು ತಿಂಗಳ ಒಳಗೆ ಅವರಿಗೆ ವ್ಯವಸ್ಥಿತ ರೀತಿಯಲ್ಲಿ 150 ಜನರಿಗೆ ಪಿಟೀಲು ಚೌಡಯ್ಯ ನಿವೇಶನದ ಎದುರು ಮಾರುಕಟ್ಟೆ ನಿರ್ಮಿಸಿ ಪ್ರತಿಯೊಬ್ಬರಿಗೂ ಶಾಶ್ವತ ಪರಿಹಾರವಾಗಿ ಮಾರುಕಟ್ಟೆ ನೀಡುವ ಭರವಸೆ ನೀಡಿದರಲ್ಲದೆ. ಶಾಶ್ವತ ಮಾರುಕಟ್ಟೆಯ ಸ್ಥಳವನ್ನು ತೋರಿಸಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ. 15 ದಿನದಲ್ಲಿ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ಸ್ಥಳ ನೀಡುವ ಭರವಸೆ ನೀಡಿದರು. ಸದ್ಯಕ್ಕೆ ಮುಖ್ಯ ರಸ್ತೆಯ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪಿಟೀಲು ಚೌಡಯ್ಯ ಕೆರೆಯ ಅಂಗಳದಲ್ಲಿ ಸಣ್ಣ ಗಾಡಿಗಳ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಲಾಗಿದೆ ಎಂದರು.

ನಂತರ ಕುರುಬೂರು ಶಾಂತಕುಮಾರ್ ಮಾತನಾಡಿ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕಾರಣ ಹೆಚ್ಚು ಸಮಸ್ಯೆಯಾಗುತ್ತಿತ್ತು ಈಗ ಒಳ್ಳೆಯ ಕಾರ್ಯ ಮಾಡಿದ್ದಾರೆ ಬಡವರು ವ್ಯಾಪಾರ ಮಾಡಲು ಉತ್ತಮ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ಯಾರು ಆತಂಕ ಪಡಬಾರದು ಎಂದು ವ್ಯಾಪಾರಸ್ಥರಿಗೆ ತಿಳಿದರು ಅದಕ್ಕೆ ಎಲ್ಲರೂ ಕೂಡ ಸಮ್ಮತಿ ಸೂಚಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಕಿರಗಸೂರ್ ಶಂಕರ್, ಹತ್ತಳ್ಳಿ ದೇವರಾಜ್,ಕೆ ಜಿ ಗುರುಸ್ವಾಮಿ,ವಾಚ್ ಕುಮಾರ, ಲಿಂಗಯ್ಯ,ಸಿದ್ದೇಶ್,ಪ್ರಸಾದ್ ನಾಯಕ್, ಪ್ರದೀಪ್, ರಸ್ತೆ ಬದಿ ವ್ಯಾಪಾರಸ್ಥರು ಇದ್ದರು.

Continue Reading

Trending

error: Content is protected !!