Connect with us

Mandya

ಔಷಧ ವ್ಯಾಪಾರಿಗಳ ಸೇವೆ ಅಪಾರ : ಶಾಸಕ ರಮೇಶ್ ಬಂಡಿಸಿದ್ದೇಗೌಡ

Published

on

ಶ್ರೀರಂಗಪಟ್ಟಣ : ಔಷಧಿ ವ್ಯಾಪಾರಿಗಳ ಸೇವೆ ಅಪಾರವಾಗಿದ್ದು, ದಿನದಲ್ಲಿ ಹೆಚ್ಚು ಸಮಯ ಅಂಗಡಿ ತೆರೆದು ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ಗಂಜಾಂನ ಖಾಸಗಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಔಷಧಿ ವ್ಯಾಪಾರಿಗಳು ಹಾಗೂ ವಿತರಕರ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಸರ್ಕಾರಿ ರಜೆ ಇದ್ದರೂ, ಪ್ರತಿಭಟನೆ, ಬಂದ್ ನಡೆದರೂ ಔಷಧಿ ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳನ್ನು ತೆರೆದು ಎಂದಿನಂತೆ ಔಷಧಿಗಳನ್ನು ನೀಡುತ್ತಿರುತ್ತಾರೆ. ತಾವು ನೀಡುವ ಗುಷಮಟ್ಟದ ಹಾಗೂ ತ್ವರಿತ ಪ್ರಭಾವ ಬೀರು ಔಷಧಿಗಳು ಒಬ್ಬರ ಜೀವ ಉಳಿಸಲು ಸಹಕಾರಿಯಾಗಲಿದೆ. ಹಾಗೆಯೇ ನೂತನ ಸಂಘದ ಪದಾಧಿಕಾರಿಗಳು ಗುಣಮಟ್ಟದ ಔಷಧ ವಿತರಣೆಯ ಜೊತೆಗೆ ಸಂಘದ ಏಳ್ಗೆಗೆ ಶ್ರಮಿಸಿ ಸಾರ್ವಜನಿಕರಿಗೆ ಮತ್ತಷ್ಡು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದರು.

ಮಂಡ್ಯ ಜಿಲ್ಲಾ ಔಷಧಿ ವ್ಯಾರಿಗಳು ಹಾಗೂ ವಿತರಕರ ಸಂಘದ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ, ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಶುಭಕೋರಿದರು. ಸಾರ್ವಜನಿಕ ಜೀವನದಲ್ಲಿ ಔಷಧಿ ವಿತರಣೆಯ ನಮ್ಮ ಕೆಲಸವು ಅತ್ಯುತ್ತಮ ಹಾಗೂ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಗುಣಮಟ್ಟದ ಔಷಧಿಗಳನ್ನು ವಿತರಿಸುವಂತೆ ಸಲಹೆ ನೀಡಿದರು. ಜೊತೆಗೆ ಕಡ್ಡಾಯವಾಗಿ ಅವಧಿ ಮೀರದ ಔಷಧಿಗಳನ್ನು ಪರಿಶೀಲಿಸಿ ಬಳಿಕವಷ್ಟೇ ಸಾರ್ವಜನಿಕರಿಗೆ ವಿತರಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಕಾವೇರಿ ಮೆಡಿಕಲ್ಸ್ ನ ಎಂ.ನಂದೀಶ್ ಹಾಗೂ ಅರಕೆರೆ ಶ್ರಕಂಠೇಶ್ವರ ಮೆಡಿಕಲ್ಸ್ ನ ಜೆ.ಎಂ.ಸತೀಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಹಾಯಕ ಔಷಧ ನಿಯಂತ್ರಕರಾದ ಮೊಹಮ್ಮದ್ ಜೌಹಾರ್ ಖಾಲದ್ , ಎಂ.ಡಿ.ಸಿ.ಡಿ.ಓ ಗೌರವ ಸಲಹೆಗಾರ ಕೆ.ಪ್ರಭಾಕರನ್, ಸಂಘದ ಕಾರ್ಯಕಾರಿ ಸಮಿತಿಯ ಪ್ರದೀಪ್ ಕುಮಾರ್, ಝಿಜಿವುಲ್ಲಾ, ಡಾ.ಮುನೀರ್ ಅಹಮ್ಮದ್, ವಿನೋದ್ ಕುಮಾರ್, ಸುದರ್ಶನ್, ಕಬೀರ್, ರಮೇಶ್, ಭಾನುಪ್ರಕಾಶ್, ಅಕ್ಷತಾ, ತೇಜು, ಕಾರ್ತಿಕ್, ರಾಕೇಶ್, ಚಂದ್ರಕಲಾ, ವಸೀಂ ಖಾನ್, ಚಂದ್ರಶೇಖರ್, ನಯನ, ನಾರಾಯಣಚಾರಿ, ಶಿವಕುಮಾರ್, ವೆಂಕಟೇಶ್, ನವೀನ್ ಕುಮಾರ್ ಉಪಸ್ಥಿತರಿದ್ದರು.

Continue Reading

Mandya

ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು : ಡಾ. ಕುಮಾರ

Published

on

ಮಂಡ್ಯ : ಬದುಕಿರುವ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ಅಗತ್ಯವಾದ ದಾಖಲೆಯಾಗಿದೆ ಮತ್ತು ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತ ದಾಖಲೆಯಾಗಿದ್ದು, ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನನ ಮತ್ತು ಮರಣಗಳ ನೋಂದಣಿಯನ್ನು ನಿಗದಿತ 21 ದಿನಗಳ ಒಳಗೆ ಕಡ್ಡಾಯವಾಗಿ ಮಾಡಬೇಕು. ವಿಳಂಬ ನೋಂದಣಿಯನ್ನು ತಡೆಯಲು ಮತ್ತು ಸಕಾಲದಲ್ಲಿ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಜನನ ಮತ್ತು ಮರಣ ನೋಂದಣಿ ಕಾರ್ಯ ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಸರಿಯಾಗಿ ನಿರ್ವಹಿಸಬೇಕು. ನೋಂದಣಿ ವೇಳೆ ಸೂಕ್ತ ಪರಿಶೀಲನೆ ಕೈಗೊಂಡು ಅದರ ವರದಿ ಸಲ್ಲಿಸಬೇಕು. ವಿಳಂಬ ನೋಂದಣಿ ಘಟನೆ ತಡೆಬೇಕು. ಯಾವುದೇ ದಾಖಲಾತಿ ಬಾಕಿ ಉಳಿಯದಂತೆ ಶೇ.100 ರಷ್ಟು ನೋಂದಣಿ ಮಾಡುವಂತೆ ಕ್ರಮವಹಿಸಬೇಕು.

ಜನನ-ಮರಣ ನೋಂದಣಿ ದಾಖಲಾತಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗೆ ಅವಕಾಶವಿಲ್ಲ. ಸಮರ್ಪವಾಗಿ ಕಾರ್ಯನಿರ್ವಹಣೆ ಮಾಡಲು ಹಾಗೂ ನಿಗದಿಯ ಅವಧಿಯಲ್ಲಿ ನೊಂದಣಿ ಮಾಡಲು ಅಗತ್ಯ ಕ್ರಮವಹಿಸಬೇಕು.

ಗ್ರಾಮ ಮಟ್ಟದಲ್ಲಿ ಜನನ ಮತ್ತು ಮರಣ ನೋಂದಣಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಅವರು ತಿಳಿಸಿದರು. ನೋಂದಣಿಯಲ್ಲಿ ನಿರ್ಲಕ್ಷ್ಯ ತೋರುವ ಸಂಬಂಧಿತ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಜಗತ್ತಿನಲ್ಲಿ ನೊಂದವರ ಕಣ್ಣೀರೊರಿಸುವ ಬಹು ದೊಡ್ಡ ಕೈ ಲಯನ್ಸ್ ದಾಗಿದೆ – ಡಾ. ಎನ್ ಕೃಷ್ಣೇಗೌಡ

Published

on

ಮಂಡ್ಯ : ಜಗತ್ತಿನಲ್ಲಿ ನೊಂದವರ ಕಣ್ಣೀರೊರಿಸುವ ಬಹು ದೊಡ್ಡ ಕೈ ಲಯನ್ಸ್ ದಾಗಿದೆ ಎಂದು ಲಯನ್ ಡಾ. ಎನ್ ಕೃಷ್ಣೇಗೌಡ ಅಭಿಪ್ರಾಯ ವ್ತಕ್ತಪಡಿಸಿದರು. ನಗರದ ಹೊಳಲು ಸರ್ಕಲ್ ನಲ್ಲಿರುವ ಎಂಬಿಆರ್‌ಎಫ್ ಸಭಾಂಗಣದಲ್ಲಿ ಸೌಹಾರ್ದ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪಿ ಲಂಕೇಶ್ ಅಧಿಕಾರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ತಮ್ಮ ವೃತ್ತಿ ಬದುಕಿನಲ್ಲಿ ತಮ್ಮದೇ ಆದ ಗೆರೆಯನ್ನು ಎಳೆದುಕೊಂಡು ಸೀಮಿತ ಪರಿಮಿತಿಯಲ್ಲಿ ಬದುಕುತ್ತಿರುತ್ತಾನೆ. ನನ್ನ ಕುಟುಂಬ ನನ್ನ ಬಂಧು ನನ್ನ ಬಳಗ ಎಂಬ ಸ್ವಾರ್ಥಕ್ಕೆ ಸಿಕ್ಕಿಹಾಕಿಕೊಂಡಿರುತ್ತಾನೆ.

ತಾನು ಎಷ್ಟೇ ದುಡಿದರು ತನ್ನ ಸಂಸಾರಕ್ಕಾಗಿ ಎಲ್ಲವನ್ನು ಮೀಸಲಿಟ್ಟಿರುತ್ತಾ ಸಮಾಜದ ಕಡೆಗೆ ತಿರುಗಿಯೂ ನೋಡದವರು ಹಲವಾರು ಇರುತ್ತಾರೆ. ಇಂಥವರ ಮಧ್ಯೆ ಲಯನ್ಸ್ ಗಳು ಮಾತ್ರ ಸಮಾಜದ ಕಣ್ಣು ಒರೆಸುವ ಕೈಯಾಗುತ್ತಾರೆ. ನಮ್ಮಂತೆಯೇ ಇಲ್ಲದವರು ಬದುಕಬೇಕೆಂದು ಕನಸು ಕಾಣುತ್ತಾರೆ. ಅದಕ್ಕಾಗಿ ಪ್ರಪಂಚದಲ್ಲಿ ಕೋಟ್ಯಾಂತರ ಜನರಿಗೆ ಕಣ್ಣು ನೀಡುತ್ತಾ, ಹಸಿವು ನೀಗಿಸುತ್ತಾ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದವರಿಗೆ ಸಹಾಯ ಹಸ್ತ ಚಾಚುತ್ತ, ಪರಿಸರಕ್ಕೆ ಗಿಡ ಮರಗಳನ್ನು ನೆಟ್ಟು ಹಸಿರನ್ನು ಹೊದಿಸುತ್ತಾ, ಬಡ ವಿದ್ಯಾರ್ಥಿಗಳಿಗೆ, ಯುವಕರಿಗೆ, ನಿರುದ್ಯೋಗಿಗಳಿಗೆ, ಅಸಹಾಯಕರಿಗೆ ಸಹಾಯಮಾಡುತ್ತಾ ಬರುತ್ತಿದ್ದಾರೆ. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಲಯನ್ ಬಂಧುಗಳು ಶ್ಲಾಘನೆಗೆ ಅರ್ಹರು ಎಂದು ಬಣ್ಣಿಸಿದರು.

ಅದೇ ರೀತಿ ಲಯನ್ ಚಂದ್ರಲಿಂಗು ರವರು ತಮ್ಮ ನೇತೃತ್ವದಲ್ಲಿ ಹಲವು ಸ್ನೇಹಿತರನ್ನು ಒಡಗೂಡಿ ಕಟ್ಟಿದ ಈ ಸಂಸ್ಥೆ ಹತ್ತು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.ನೂತನ ಅಧ್ಯಕ್ಷ ಲಯನ್ ಪಿ.ಲಂಕೇಶ್ ರವರು ಅಧಿಕಾರ ವಹಿಸಿಕೊಂಡು ಮಾತನಾಡಿ, ಈ ವರ್ಷ ನಮ್ಮ ಸಂಸ್ಥೆ ಸಮಾಜದ ನೊಂದವರ ಸೇವೆ ಮಾಡುವ ಬಹುದೊಡ್ಡ ಕನಸನ್ನು ಹೊತ್ತಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಕೋರಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಲಯನ್ ಎಂ. ಸಿದ್ದೇಗೌಡ ಪ್ರತಿಜ್ಞಾವಿಧಿ ಭೂಧಿಸಿದರು, ಲಯನ್ ಜಯಕುಮಾರ್, ಆನಂದ್, ಹನುಮಂತಯ್ಯ, ಸುನಿಲ್ ಕುಮಾರ್, ಪ್ರಾಂತೀಯ ಅಧ್ಯಕ್ಷ ಚಂದ್ರಲಿಂಗು, ವಲಯ ಅಧ್ಯಕ್ಷ ಚಂದ್ರಹಾಸ ಮತ್ತಿತರರು ಭಾಗವಹಿಸಿದ್ದರು.

Continue Reading

Mandya

ಮಂಡ್ಯದಲ್ಲಿ ಚೆನ್ನಮ್ಮ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Published

on

ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ದಿ.ಚೆನ್ನಮ್ಮ ಅವರ ನಿಧನಕ್ಕೆ ಮಂಡ್ಯ ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ನಗರದ ಜೆ.ಸಿ. ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.ಜೆಡಿಎಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ದಿ. ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಣ್ಣೀರಿನ ವಿದಾಯ ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆ ಇಡೀ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ಅಪಾರ ನಷ್ಟ ಉಂಟುಮಾಡಿದೆ. ಇಡೀ ಜೆಡಿಎಸ್ ಕುಟುಂಬ ಹಾಗೂ ಅಭಿಮಾನಿ ವರ್ಗ ಇಂದು ತೀವ್ರ ದುಃಖದಲ್ಲಿ ಮುಳುಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ಕಠಿಣ ಸಮಯದಲ್ಲಿ ಅವರ ಕುಟುಂಬಸ್ಥರಿಗೆ ಮತ್ತು ಭಾವುಕರಾಗಿರುವ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಮುಖಂಡ ಬಿ.ಆರ್. ಸುರೇಶ್ ಮಾತನಾಡಿ, ಚೆನ್ನಮ್ಮನವರು ವಯೋಸಹಜ ಕಾಯಿಲೆಯಿಂದ ನಿಧನರಾಗಿರುವುದು ನಮಗೆ ತೀವ್ರ ಆಘಾತ ತಂದಿದೆ. ದೇವೇಗೌಡ ಅಪ್ಪಾಜಿ ಹಾಗೂ ಕುಮಾರಣ್ಣ ಅವರ ಇಡೀ ಅಭಿಮಾನಿ ಬಳಗ ಇಂದು ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುತ್ತಿದೆ. ಅಭಿಮಾನಿಗಳು ಶಾಂತಿಯುತವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ನಾಗೇಶ್, ಮಂಜುನಾಥ್, ರಾಮಲಿಂಗಯ್ಯ, ಜೆಡಿಎಸ್ ಮುಖಂಡರಾದ ಪುಟ್ಟಸ್ವಾಮಿ, ಇಂದ್ರೇಶ್, ಫಯಾಜ್, ಧಡ್ಕನ್, ವಿಜಯ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು, ಮೌನಾಚರಣೆಯ ಮೂಲಕ ಅಗಲಿದ ಜೀವಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

Continue Reading

Trending

error: Content is protected !!