Hassan
ಎಲೈಟ್ ಶಾಲೆಯಲ್ಲಿ ಶಿಕ್ಷಕರ ದಿನದ ಅದ್ದೂರಿ ಆಚರಣೆ
 
																								
												
												
											ಹಾಸನ : ದಿನಾಂಕ 08-09-2025ರ ಸೋಮವಾರದಂದು ಹಾಸನದ ಹೇಮಾವತಿ ನಗರದಲ್ಲಿರುವ ಹೆಸರಾಂತ ಎಲೈಟ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಸಂಗೀತ ಶಿಕ್ಷಕಿಯಾದ ಶ್ರೀಮತಿ ಸುಕನ್ಯ ರವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ನಂತರ ಶಾಲಾ ಖಜಾಂಚಿಗಳಾದ ಶ್ರೀಮತಿ ಸಪ್ನ ಕಿರಣ್‌ರವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಕ ವೃತ್ತಿಯು ನೊಬೆಲ್ ವೃತ್ತಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಬಾಳಿನ ಬೆಳಕನ್ನು ಬೆಳಗುವ ದೈವಸ್ವರೂಪಿಗಳು. ಯಾವುದೇ ಬೇಧಭಾವವಿಲ್ಲದೆ ಎಲ್ಲರಿಗೂ ಕರುಣೆ, ಪ್ರೀತಿ, ಮಮತೆ ವಾತ್ಸಲ್ಯಗಳನ್ನು ತೋರಿಸುತ್ತಾ ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಜ್ಞಾನದೆಡೆಗೆ ನಡೆಸುವ ನಾವಿಕನಿದ್ದಂತೆ.

ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ಧಿಯನ್ನು ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಿ ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುತ್ತಾರೆ. ಆದ್ದರಿಂದ ಶಿಕ್ಷಕರನ್ನು ನಾವು ಎಂದಿಗೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಶಾಲಾ ಶಿಕ್ಷಕರಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಿಂದಿ ಭಾಷಾ ಶಿಕ್ಷಕರುಗಳಾದ ಶ್ರೀ ಪಾಂಡು ಎ. ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ತಿಮ್ಮಶೆಟ್ಟಿ ಯವರಿಗೆ ಸಕಲ ಗೌರವಗಳೊಂದಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಯಾದ ಚಿ. ಲಿಖಿತ್ ಹೆಚ್.ಯು. ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಅವರು ಬಡಕುಟುಂಬದಲ್ಲಿ ಜನಿಸಿ ವಿದ್ಯಾವಂತರಾಗಿ, ಮೇರು ಶಿಕ್ಷಕರಾಗಿ, ತತ್ವಜ್ಞಾನಿಯಾಗಿ, ಭಾರತದ ೨ನೇ ರಾಷ್ಟçಪತಿಗಳಾಗಿದ್ದರು. ಇವರು ಬರೆದಿರುವ ಪುಸ್ತಕಗಳಲ್ಲಿರುವ ತತ್ವಗಳನ್ನು ಮತ್ತು ಅವರ ಆದರ್ಶ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗೋಣ ಎಂದು ತನ್ನ ಅನಿಸಿಕೆಗಳನ್ನು ಹಂಚಿಕೊAಡನು. ಹಾಗೆಯೇ ಮತ್ತೋರ್ವ ಶಾಲಾ ವಿದ್ಯಾರ್ಥಿನಿಯಾದ ಮೋನಿಷಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ.

ಅವರಿಲ್ಲದೆ ವಿದ್ಯಾರ್ಥಿಗಳ ಬದುಕು ಶೂನ್ಯ. ನಮ್ಮ ಗುರಿಗಳಿಗೆ ಸ್ಪೂರ್ತಿಯನ್ನು ತುಂಬುವುದರ ಜೊತೆಗೆ ಉತ್ತಮ ನಡೆ-ನುಡಿ, ಶಿಸ್ತುಗಳನ್ನು ಕಲಿಸುತ್ತಾರೆ. ಅಲ್ಲದೆ ನಮಗಾಗಿ ಅವರ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಅವರನ್ನು ನಾವು ಎಂದಿಗೂ ಮರೆಯಬಾರದೆಂದು ತನ್ನ ಅನಿಸಿಕೆಗಳನ್ನು ವ್ಯಕ್ತ ಪಡಿಸಿದಳು.
ಇದೇ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ಶ್ರೀಯುತ ನಾಗರಾಜ್‌ರವರು ಎಲ್ಲಾ ಶಿಕ್ಷಕರಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ಸಂಜನ ಎಮ್. ನಿರ್ವಹಿಸಿದರು. ಕು. ಅನಘ ಸ್ವಾಗತ ಮಾಡಿದಳು. ಕು. ಇಂಚರ ವಂದನಾರ್ಪಣೆ ಮಾಡಿದಳು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಬೋಧಕ/ಬೋಧಕೇತರ ಸಿಬ್ಬಂಧಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Hassan
ಶ್ರವಣಬೆಳಗೊಳದಲ್ಲಿ ದಶಲಕ್ಷಣ ಮಹಾಪರ್ವ ಅನಂತನೋಂಪಿ ಅಂಗವಾಗಿ ಸ್ವರ್ಣ ರಥದಲ್ಲಿ ಬೃಹತ್ ಮೆರವಣಿಗೆ
 
														ವರದಿ: ನಾಗೇಂದ್ರ ರಾಯ, ಶ್ರವಣಬೆಳಗೊಳ
ಶ್ರವಣಬೆಳಗೊಳ: ದಶಲಕ್ಷಣ ಮಹಾಪರ್ವದ ಅನಂತನೋಂಪಿ ಹಾಗೂ ಕ್ಷಮಾವಾಣಿ ಪ್ರಯುಕ್ತ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಸೋಮವಾರ ಬೃಹತ್ ಮೆರವಣಿಗೆ ನೆರವೇರಿತು. ಶ್ರೀ ದಿಗಂಬಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು.

ಸ್ವರ್ಣ ರಥದಲ್ಲಿ 14 ನೇ ತೀರ್ಥಂಕರರಾದ ಶ್ರೀ ಅನಂತನಾಥಸ್ವಾಮಿ, ಯಕ್ಷ-ಯಕ್ಷಿ, ಶ್ರೀ ಬ್ರಹ್ಮದೇವರನ್ನು ಪ್ರತಿಷ್ಠಾಪಿಸಿ ಹಾಗೂ ಜಿನವಾಣಿ ಶಾಸ್ತ್ರಗಳನ್ನು ರಜತ ಪಲ್ಲಕ್ಕಿಯಲ್ಲಿ ಅಲಂಕರಿಸಿ ಪೂರ್ಣಕುಂಭ, ಮಂಗಳ ವಾದ್ಯ, ಚಂಡೆವಾದ್ಯಗಳೊಂದಿಗೆ ಶ್ರೀಮಠದಿಂದ ಪ್ರಾರಂಭಗೊಂಡು ಭಂಡಾರಿ ಬಸದಿ ಪ್ರದಕ್ಷಿಣೆಯೊಂದಿಗೆ ಶ್ರೀಮಠದ ಬೀದಿ, ಮೈಸೂರು ರಸ್ತೆ, ವಿದ್ಯಾನಂದ ನಿಲಯ ಮಾರ್ಗವಾಗಿ ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ ರಸ್ತೆ, ಬೆಂಗಳೂರು ರಸ್ತೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆರವೇರಿತು.
ಮಂಗಳ ಕಲಶ, ಧರ್ಮದ್ವಜ ಹಿಡಿದ ವಿದ್ಯಾರ್ಥಿಗಳು ಹಾಗೂ ನೂರಾರು ಶ್ರಾವಕ – ಶ್ರಾವಕಿಯರು ಜಯಕಾರದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Hassan
ಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ
 
														ಹಾಸನ : ಕಾವ್ಯ ಸಮಾಜದ ಎಲ್ಲಾ ಸ್ಥರದ ಅದರಲ್ಲೂ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕೆಂದರೆ ಕವಿಗೂ ಆ ಸಾಮಾಜಿಕ ಬದ್ಧತೆ, ಹೃದಯ ವೈಶಾಲ್ಯತೆ ಅತ್ಯಗತ್ಯ. ಇತಿಹಾಸವನ್ನು ಅರಿಯದವ ಇತಿಹಾಸವನ್ನು ಹೇಗೆ ಸೃಷ್ಠಿಸಲಾರನೋ ಹಾಗೆಯೇ ಕಾವ್ಯೇತಿಹಾಸದ ಪರಿವಿಲ್ಲದವ ಸೃಜನಾತ್ಮಕ ಕಾವ್ಯ ಸೃಷ್ಠಿಸಲಾರ. ಪ್ರತಿಯೊಬ್ಬ ಕವಿಗೂ ನಮ್ಮ ಪರಂಪರೆಯ ಅರಿವಿರಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಗರದ ಆಚಾರ್ಯ ವಾಣಿಜ್ಯ ಪಿ.ಯು.ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವ್ಯವೆಂಬುದು ಪರಂಪರೆಗಳನ್ನು ಬೆಸೆಯುವ ಕೊಂಡಿ. ಕವಿಗಳು ಪರಂಪರೆಯ ಇತಿಹಾಸಕಾರರು. ಕಾವ್ಯವೆಂಬುದು ಕೇವಲ ಕಲ್ಪನಾತೀತವಾಗದೆ ವಾಸ್ತವ ಬದುಕಿನ ಮೇಲೆ ಬೆಳಕು ಚೆಲ್ಲಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಠಿಕೋನಗಳನ್ನು ಒಳಗೊಂಡಿದ್ದರೆ ಮಾತ್ರ ಅಂತಹ ಕಾವ್ಯ ಕಾಲಗರ್ಭದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಬರೆದದ್ದೆಲ್ಲಾ ಕಾವ್ಯವಾಗುವುದಿಲ್ಲ ಎಂದರು.

ಗದ್ಯಕ್ಕೂ-ಪದ್ಯಕ್ಕೂ ವ್ಯಾತ್ಯಾಸವಿದೆ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ ತನ್ನದೇಯಾದ ಗುಣಲಕ್ಷಣಗಳಿವೆ. ಕವಿಗೆ ಅಧ್ಯಯನ ಮತ್ತು ಅಧ್ಯಾಪನ ಅತ್ಯಗತ್ಯ. ಕಾವ್ಯ ವಿಶ್ವಮೌಲ್ಯವನ್ನು ಪಡೆಯಬೇಕಾದರೆ ಕವಿಯ ಮನೋವಾಂಛಲ್ಯ ಜಾತಿ-ಧರ್ಮದೆಲ್ಲೆಗಳ ಗಡಿ ಮೀರಬೇಕು. ಮೊಬೈಲ್ಲನೇ ಪ್ರಪಂಚವಾಗಿಸಿಕೊಂಡಿರುವ ಇಂದಿನ ಯುವಪೀಳಿಗೆಗೆ ಸಾಹಿತ್ಯದ ಹುಚ್ಚನ್ನು ಹಿಡಿಸಬೇಕಿದೆ. ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ ಮೌಲ್ಯಗಳನ್ನು ಅವರಲ್ಲಿ ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಗೆಳೆಯ ಬಾನಂ ಲೋಕೇಶ್ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದ್ದಾರೆ. ಕಾಲೇಜು ಹಂತದ ಮಕ್ಕಳಿಗೆ ಸಾಹಿತ್ಯದ ಜಾಗೃತಿ ಮೂಡಿಸುವುದರ ಮೂಲಕ ಸಂಸ್ಕಾರಯುತ ವ್ಯಕ್ತಿತ್ವದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಪನಹಳ್ಳಿ ಹೆಚ್.ಪಿ.ಎಸ್ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಆಚಾರ್ಯ ವಾಣಿಜ್ಯ ಕಾಲೇಜಿನ ಸಂಸ್ಥಾಪಕಿ ಶ್ವೇತಾ ಹರೀಶ್ ಮಾತನಾಡುತ್ತಾ ಶಾಲಾ-ಕಾಲೇಜುಗಳಲ್ಲಿ ಚುಟುಕು ಸಾಹಿತ್ಯ ಕಾರ್ಯಕ್ರಮವನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಏಕೆಂದರೆ ಯುವ ಸಾಹಿತಿಗಳು ನಿರ್ಮಾಣವಾಗುವುದು ಶಾಲಾ-ಕಾಲೇಜುಗಳಲ್ಲಿ.ಹೊಸ ಹೊಸ ಪ್ರತಿಭೆಗಳನ್ನು ಹೊರತೆಗೆಯುವಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಮುನ್ನುಡಿ ಹಾಡಿರುವುದು ಮುಂದಿನ ದಿನಗಳಲ್ಲಿ ಸಾಹಿತ್ಯದ ಅಭ್ಯುದಯವಾಗುವುದರಲ್ಲಿ ಅನುಮಾನವಿಲ್ಲ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ. ನಂ. ಲೋಕೇಶ್ ಮಾತನಾಡುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕುವುದು ಸಾಹಿತ್ಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಪರಿಷತ್ತುಗಳ ಕರ್ತವ್ಯವಾಗಿದೆ. ಹಾಗಾಗಿ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹಳೆ ಬೇರು ಹೊಸ ಚಿಗುರು ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕವಿಗೋಷ್ಠಿಯಲ್ಲಿ ಪರಿಣಿತ ಕವಿಗಳು ಹಾಗೂ ಉದಯೋನ್ಮುಖ ಕವಿಗಳು ಚುಟುಕು ವಾಚನವನ್ನು ಮಾಡಿದ್ದಾರೆ. ಇಲ್ಲಿ ಉದಯೋನ್ಮುಖ ಕವಿಗಳು ಪರಿಣಿತ ಕವಿಗಳಿಂದ ಕಲಿಯಬೇಕಾದಂತಹ ಅಂಶಗಳನ್ನು ಕಲಿಯಲು ಒಂದು ವೇದಿಕೆ ನಿರ್ಮಾಣವಾದಂತಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ರಚನಾ ಕಮ್ಮಟಗಳನ್ನು ಆಯೋಜಿಸುವುದರೊಂದಿಗೆ ಉತ್ತಮ ಸಾಹಿತ್ಯ ನಿರ್ಮಾಣ ಮಾಡುವ ಸಾಹಿತಿಗಳನ್ನು ಹುಟ್ಟು ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಕ್ರಮವಹಿಸಿ ಒಂದೊಂದು ತಾಲೂಕಿನಲ್ಲಿಯೂ ಹತ್ತತ್ತು ಕವಿಗಳನ್ನು ಸೃಷ್ಟಿಸುವಲ್ಲಿ ಯಶ ಕಂಡರೆ ಸುಮಾರು ಒಂದು ನೂರು ನವ ಕವಿಗಳು ಸೃಷ್ಟಿಯಾಗುತ್ತಾರೆ. ಈ ಉದಯೋನ್ಮುಖ ಕವಿಗಳಿಗೆ ಜಿಲ್ಲಾಮಟ್ಟದಲ್ಲಿ ಒಂದು ವೇದಿಕೆಯನ್ನು ನಿರ್ಮಿಸಿಕೊಡುವ ಕಾರ್ಯವನ್ನು ಚುಟುಕು ಸಾಹಿತ್ಯ ಪರಿಷತ್ ಮಾಡುತ್ತದೆ ಎಂದು ತಿಳಿಸಿದರು.
ಹಾಸನ ತಾಲ್ಲೂಕು ಚು.ಸಾ.ಪ. ಅಧ್ಯಕ್ಷ ಸೋಮನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಚುಟುಕು ಬಾಳಿನ ಲಾಲಿತ್ಯ, ಚುಟುಕು ಸಾಹಿತ್ಯದ ಮೂಲಕ ಸಾಹಿತ್ಯ ಕ್ಷೆತ್ರದ ಅರಮನೆಗೆ ಯುವ ಕವಿಗಳು ಪ್ರವೇಶಕ್ಕೆ ಅವಕಾಶವಿದೆ. ಚುಟುಕು ಸಾಹಿತ್ಯ ಸಿಂಚನದ ಮೂಲಕ ಯುವ ಜನರಲ್ಲಿ ಸಾಹಿತ್ಯ ಆಸಕ್ತಿ ಹಾಗೂ ಆಕರ್ಷಣೆ ಉಂಟು ಮಾಡುವ ಬಾ ನಂ ಜೀ ಯವರ ಕನಸು ಮತ್ತು ಆಶಯಕ್ಕೆ ನಾವೇಲ್ಲ ಕಟಿಬದ್ದರಾಗಿದ್ದೆವೆ ಎಂದರು.

ಹಾಸನ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ. ಉಡುವರೇ ಮಾತನಾಡಿ ಮನುಷ್ಯನ ಜೀವನದ ಹುಟ್ಟಿನಿಂದ ಹಿಡಿದು ಸಾಯುವ ತನಕ ಸಮಾಜದೊಳಗಿನ ಮಹಾಭಾರತ ಎಂಬ ಯುದ್ಧಗಳು ಸದಾ ನಡೆಯುತ್ತಲೇ ಇರುತ್ತವೆ ಇಲ್ಲಿ ಮಹಾಭಾರತವನ್ನು ಚುಟುಕಾಗಿ ವಿಶ್ಲೇಷಣೆ ಮಾಡಿ ಪಂಚಪಾಂಡವರನ್ನ ಪಂಚೇಂದ್ರಿಯಗಳಿಗೆ ಹೋಲಿಸಿ ಪಂಚೇಂದ್ರಿಯಗಳನ್ನು ನಿಗ್ರಹಿಸುವ ಮನಸ್ಸಿಗೆ ದ್ರೌಪದಿಯನ್ನು ಹೋಲಿಸಿ ಮನಸನ್ನು ನಿಗ್ರಹಿಸುವ ಜ್ಞಾನವನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಹೋಲಿಸಿ ಮಹಾಭಾರತದ ಕಥೆಯನ್ನು ಚುಟುಕಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
ವೇದಿಕೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಳಲಿ ಹರೀಶಕುಮಾರ್, ಕಾಲೇಜು ಪ್ರಾಂಶುಪಾಲ, ಡಾ. ಆದರ್ಶ್ ಎಚ್.ಆರ್., ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ಮಲ್ಲೇಶ್ ಜಿ. ಸೇರಿದಂತೆ ಹಲವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಜಿ.ಆರ್. ಅರಸ್, ಚು.ಸಾ.ಪ. ಮೈಸೂರು ಜಿಲ್ಲಾಧ್ಯಕ್ಷೆ ರತ್ನ ಹಾಲಪ್ಪಗೌಡ, ತುಮಕೂರು ಸಪ್ತಗಿರಿ ಕಾಲೇಜಿನ ಸಹಪ್ರಾದ್ಯಾಪಕಿ ಸೌಮ್ಯಶ್ರೀ, ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಬೆಸ್ಟ್ ಕಾಲೇಜಿನ ಸಂಸ್ಥಾಪಕ ಈಶ್ವರ್ ಎಚ್.ವೈ, ಅಧ್ಯಯನ ಪಿಯು ಕಾಲೇಜಿನ ಕಾರ್ಯದರ್ಶಿ ಡಾ. ಚೇತನ್ ಕುಮಾರ್ ಎಚ್.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಚುಟುಕು ಕವಿಗಳು
ಕವಿಗೋಷ್ಠಿಯಲ್ಲಿ ಚಂದ್ರಶೇಖರ ಅರಕಲಗೂಡು, ಕು.ಶಾಲಿನಿ, ಕವಿತಾ ಗೋಪಾಲ್, ಪ್ರಜ್ವಲ್ ಗೌಡ, ಮಮತ ಮಲ್ಲೇಶ್, ನವೀನ್ ಎಂ, ಸುಧಾ ವಿಶ್ವನಾಥ್, ಲಲಿತ ಎಸ್, ಹೇಮಶ್ರೀ, ಪ್ರಜ್ವಲ್ ಸಕಲೇಶಪುರ, ಭೂಮಿಕಾ, ಸಾವಿತ್ರಮ್ಮ ಓಂಕಾರ್, ಬೋರೇಗೌಡ ಅರಸೀಕೆರೆ, ಕಾರ್ತಿಕ್, ವೀಣಾ ಚನ್ನರಾಯಪಟ್ಟಣ, ಗಿರೀಶ್ ಎಚ್.ಆರ್, ನಿಸರ್ಗ, ನರಸಿಂಹ, ಯಶೋಧ, ಚಂದ್ರಕಿರಣ್ ಗುಜ್ಜರ್, ಎಲ್.ಹೇಮಲತಾ, ಪ್ರಿಯಾಂಕ, ಸಾನಿಕಾ, ಪೂರ್ಣಿಮಾ, ಕಾವ್ಯಶ್ರೀ, ಗಿರಿಜಾ ನಿರ್ವಾಣಿ, ನಂಜುಂಡಯ್ಯ, ಪುಷ್ಪಾಂಜಲಿ ಸೇರಿದಂತೆ ಹಲವರು ವಾಚಿಸಿದರು.
Hassan
ಮಹಿಳಾ ದೌರ್ಜನ್ಯ ವಿರೋಧಿಸಿ ಹಾಸನದಲ್ಲಿ ‘ಅರಿವಿನ ಪಯಣ’ ಕಾರ್ಯಕ್ರಮ: ಜಾಗೃತಿ ಮೂಡಿಸಿದ ತಜ್ಞರು, ಸಾಹಿತಿಗಳು
 
														ಹಾಸನ: ಮಹಿಳೆಯರ ಮೇಲಿನ ಹಿಂಸೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಳ್ಳಸಾಗಣೆ ಹಾಗೂ ಬಾಲ್ಯವಿವಾಹ ಇನ್ನೂ ಸಮಾಜದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಶಿಕ್ಷಣ, ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಜಾರಿಯ ಮೂಲಕವೇ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಜ್ಞರು, ಸಾಹಿತಿಗಳು ಹಾಗೂ ಸಮಾಜ ಸೇವಕರು ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಸೋಮವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅರಿವಿನ ಪಯಣ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ತಾರಾನಾಥ್ ಟಿ.ಸಿ. ಮತ್ತು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಶ್ರೀಮತಿ ಸಬಿಹಾ ಭೂಮಿ ಗೌಡ ಅವರು ನೆರವೇರಿಸಿ ಮಾತನಾಡಿ, ಮಹಿಳೆಯರ ಬಾಳಿನ ನಿಜವಾದ ಶಕ್ತಿ ಶಿಕ್ಷಣದಲ್ಲಿದೆ. ಹೆಣ್ಣು ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಒದಗಿಸಿದಾಗ ಮಾತ್ರ ಕುಟುಂಬದಲ್ಲೂ, ಸಮಾಜದಲ್ಲೂ ಸಮಾನತೆ ಸಾಧ್ಯ. ಮಹಿಳೆಯರ ಸ್ಥಾನವನ್ನು ಗುರುತಿಸದೆ ಸಮಾಜದ ಪ್ರಗತಿ ಅಸಾಧ್ಯ ಎಂದು ಹೇಳಿದರು.

ಸಮಾಜ ಸೇವಕಿ ರೂಪ ಹಾಸನ್ ಅವರು ಮಾತನಾಡಿ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಮಾತನಾಡಿ, ಪ್ರತಿ ವರ್ಷ ಸಾವಿರಾರು ಮಕ್ಕಳು ಲೈಂಗಿಕ ಹಿಂಸೆ, ಕಳ್ಳಸಾಗಣೆ ಮತ್ತು ಬಾಲ್ಯವಿವಾಹದ ಬಲಿಯಾಗುತ್ತಿದ್ದಾರೆ. ಪೋಕ್ಸೋ ಕಾಯ್ದೆ ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಕಾನೂನು ಮಾತ್ರ ಸಾಕಾಗದು, ಪೋಷಕರು, ಶಾಲೆಗಳು ಹಾಗೂ ಸಮಾಜವೇ ಜಾಗೃತಿಯೊಂದಿಗೆ ಮುಂದೆ ಬರಬೇಕು ಎಂದರು.
ಹಿರಿಯ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಮಾತನಾಡಿ, “ಹೆಣ್ಣು ಮಕ್ಕಳಿಗೆ ಸಮಾಜವೇ ನಿರ್ಭಂಧ ಹೇರಿದೆ. ಓದು, ಉದ್ಯೋಗ, ವಿವಾಹ, ಎಲ್ಲದರಲ್ಲೂ ನಿರ್ಧಾರವನ್ನು ಇತರರು ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳನ್ನು ಸ್ವತಂತ್ರ ನಿರ್ಧಾರಕ್ಕೆ ಪ್ರೇರೇಪಿಸಿದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಕವಿತಾ ಕೆ.ಜಿ. ಅವರು ವಹಿಸಿಕೊಂಡರು. ಈ ಮೂಲಕ ಹಾಸನದಲ್ಲಿ ನಡೆದ ‘ಅರಿವಿನ ಪಯಣ’ ಕಾರ್ಯಕ್ರಮವು ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿ ಚಳವಳಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
ಇದೇ ವೇಳೆ ಗೀತಾ ವಿ., ವಾಣಿ ಪೆರಿಯೋಡಿ, ರೇಖಾಂಬ, ವೆಂಕಟೇಶ್ ಮೂರ್ತಿ, ರತ್ನ, ಸುನಂದ, ಮಲ್ಲಿಕಾಂಬ ಸೇರಿದಂತೆ ಹಲವಾರು ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- 
																	   Mysore15 hours ago Mysore15 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore43 minutes ago Mysore43 minutes agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mysore19 hours ago Mysore19 hours agoಬಾನು ಮುಷ್ತಾಕ್ ಕ್ಷಮೆ ಕೇಳಿದರೆ ಪಿಐಎಲ್ ವಾಪಸ್: ಪ್ರತಾಪ್ ಸಿಂಹ 
- 
																	   Kodagu22 hours ago Kodagu22 hours agoಸೋಮವಾರಪೇಟೆ: ತಾಲೂಕು ಆಸ್ಪತ್ರೆಯ ನರ್ಸ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ 
- 
																	   Mandya15 hours ago Mandya15 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Hassan24 hours ago Hassan24 hours agoಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಮ್ಮ ದೇವಿಯ ಅದ್ದೂರಿ ವಿಸರ್ಜನೆ 
- 
																	   Kodagu16 hours ago Kodagu16 hours agoಸೆ.11 ಕ್ಕೆ “ವಿಷಪೂರಿತ ಹಾವುಗಳು : ಗುರುತಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ 
- 
																	   Hassan18 hours ago Hassan18 hours agoಹೊಳೆನರಸೀಪುರದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ, ಸುಳ್ಳು ದಾಖಲೆ, ಸುಳ್ಳು ಸಾಕ್ಷಿ : ನಟರಾಜು ಆರೋಪ 

 
											 
											 
											 
											