Mysore
ನಾರಾಯಣ ಗುರು ಏಕಮೇವ ಸಿದ್ದಾಂತ ಶ್ಲಾಘನೀಯ: ತಹಸೀಲ್ದಾರ್ ಟಿ. ಜಿ. ಸುರೇಶ್ ಆಚಾರ್
 
																								
												
												
											ತಿ.ನರಸೀಪುರ: ಸಮಾಜದಲ್ಲಿದ್ದ ಶ್ರೇಣಿಕೃತ ಜಾತಿ ವ್ಯವಸ್ಥೆ ಮತ್ತು ಮೌಢ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿನಾರಾಯಣ ಗುರು ಅವರು ಎಲ್ಲ ಜಾತಿ, ಧರ್ಮದ ಸಾರವನ್ನು ಕ್ರೋಡೀಕರಸಿ ಪ್ರತಿಪಾದಿಸಿದ ಏಕಮೇವ ಸಿದ್ದಾಂತ ಅತ್ಯಂತ ಶ್ಲಾಘನೀಯ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಮತ್ತು ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ಶ್ರೀ ನಾರಾಯಣ ಗುರು ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ 19ನೇ ಶತಮಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಆಧ್ಯಾತ್ಮಿಕವಾಗಿ ಹಲವು ಬದಲಾವಣೆಗಳು ಘಟಿಸಿದವು. ಈ ಕಾಲಘಟ್ಟದಲ್ಲಿ ಹಲವು ಸಮಾಜ ಸುಧಾರಕರು ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಜಾತಿ ತಾರತಮ್ಯವನ್ನು ಹೊಗಲಾಡಿಸಲು ಶ್ರಮಿಸಿದರು. ಈ ಪೈಕಿ ನಾರಾಯಣ ಗುರುಗಳು ಒಬ್ಬರು ಎಂದು ಹೇಳಿದರು.
ನಮ್ಮ ದೇಶದಲ್ಲಿ ಬಹು ಧರ್ಮ,ಹಲವು ಜಾತಿ, ವೈವಿಧ್ಯಮಯ ಸಂಸ್ಕೃತಿ ಮತ್ತು ಆಚಾರ-ವಿಚಾರವನ್ನು ಹೊಂದಿದೆ. ಪುರಾಣಗಳ ಪ್ರಕಾರ 330 ಕೋಟಿ ದೇವರುಗಳು ಇವೆ ಎಂದು ಹೇಳಲಾಗಿದೆ. 19ನೇ ಶತಮಾನದಲ್ಲಿ ನಾರಾಯಣ ಗುರು ಎಲ್ಲ ಧರ್ಮ, ಜಾತಿಗಳ ಮತ್ತು ದೈವಗಳ ಸಾರವನ್ನು ಕ್ರೋಢಿಕರಿಸಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಏಕಮೇವ ಸಿದ್ದಾಂತವನ್ನು ಪ್ರತಿಪಾದಿಸಿದರು ಎಂದರು.
ಪಿಆರ್‌ಎಂ ಕಾಲೇಜಿನ ಪ್ರಾಂಶುಪಾಲ ಡಾ.ವೀರಭದ್ರಸ್ವಾಮಿ ಮಾತನಾಡಿ, ಮಹಾನ್ ವ್ಯಕ್ತಿಗಳು ಒಂದೇ ಜಾತಿ, ಧರ್ಮ, ವರ್ಗಕ್ಕೆ ಮೀಸಲಾಗಿಲ್ಲ. ಆದರೆ, ಆಯಾ ವರ್ಗದ ಜನರು ಮಹನೀಯರ ಆದರ್ಶಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಮಹನೀಯ ಆದರ್ಶಗಳನ್ನು ಸಂಕುಚಿತ ಗೊಳಿಸಲಾಗುತ್ತಿದೆ. ನಾರಾಯಣ ಗುರು ಅವರು ಒಂದೇ ಧರ್ಮ, ಜಾತಿ ಮತ್ತು ದೇವರು ಎಂದು ಏಕಮೇವ ಸಿದ್ದಾoತವನ್ನು ಜಗತ್ತಿಗೆ ಪ್ರತಿಪಾದಿಸಿದರು. ಇದರಿಂದ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದರು ಎಂದು ಹೇಳಿದರು.

ಇದೇ ವೇಳೆ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಿದರು.
ಸಂದರ್ಭದಲ್ಲಿ ತಾಪಂ ಇಒ ಪಿ.ಎಸ್.ಅನಂತರಾಜು, ಬಿಸಿಎಂ ಇಲಾಖೆ ರಾಜಣ್ಣ, ಕೃಷಿ ಇಲಾಖೆ ಎಡಿ ಸುಹಾಸಿನಿ, ರೇಷ್ಮೆ ಇಲಾಖೆ ಕೆಂಪರಾಜು, ಬಿಆರ್ ಸಿ ನಾಗೇಶ್, ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಕಿರಗಸೂರು ಶಂಕರ್,ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್,ಸಿದ್ದರಾಜು,ಗುರು, ಗೋವಿಂದರಾಜು,ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ,ಬಾಬು ಜಗಜೀವನ್ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ವಾಸು, ಸೋಸಲೆ ನಂಜುಂಡಯ್ಯ, ಡಾ.ಮನ್ಸೂರ್ ಅಲಿ, ಕಾರ್ಮಿಕ ಸಂಘಟನೆಯ ಪುಟ್ಟಮಲ್ಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಹದೇವಮ್ಮ, ಅಕ್ಬರ್ ಪಾಷಾ, ಬನ್ನೂರು ರಂಗಸ್ವಾಮಿ, ಜಗದೀಶ್, ರಾಮಣ್ಣ, ಅಪ್ಪಣ್ಣ, ನಾಗರಾಜು, ಜಯರಾಮ್, ಅನಂತ, ಪುರಸಭೆ ಸದಸ್ಯ, ನಾಗರಾಜು,ಪ್ರಸಾದ್ ನಾಯಕ,ಪ್ರಜ್ವಲ್ ಕೃಷ್ಣಪ್ಪ ಇತರರು ಹಾಜರಿದ್ದರು.
Mysore
ಕರ್ನಾಟಕ ರತ್ನ ಘೋಷಣೆ: ಮೈಸೂರಿನ ವಿಷ್ಣು ಸ್ಮಾರಕದಲ್ಲಿ ಸಂಭ್ರಮ
 
														ಮೈಸೂರು: ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಉದ್ಬೂರ್ ಗೇಟ್ ನಲ್ಲಿರುವ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕ ದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರ ನೀಡಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ವಾಗತಿಸಿದರು ನಂತರ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮ್ ಪ್ರಸಾದ್,
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಹಾಗೂ ಬಹುಭಾಷಾ ತಾರೆ ಪದ್ಮಶ್ರೀ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟವಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಇಬ್ಬರೂ ಮಹಾನ್ ಕಲಾವಿದರ ಅಪಾರ ಅಭಿಮಾನಿಗಳ ಬಹು ದಿನಗಳ ನಿರೀಕ್ಷೆ ಸಾಕಾರಗೊಂಡಂತಾಗಿದೆ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತ ಗೊಳಿಸಲು ಕಲಾ ಸೇವೆಗೈದ ಈ ಇಬ್ಬರೂ ಶ್ರೇಷ್ಠ ವ್ಯಕ್ತಿತ್ವಗಳಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂ ಗದ ಬೆಳವಣಿಗೆಗೂ ಪ್ರೇರಣೆ ನೀಡಿದಂತಾಗಿದೆ ಎಂದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಮಾತನಾಡಿ, ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವು ಸರ್ಕಾರ ವಿಧಾನಸೌಧ ಮುಂಭಾಗ ಅಥವಾ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯ ಮಾಡಿದರು.
ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೊಳ ಜಗದೀಶ್, ಎಸ್ ಎನ್ ರಾಜೇಶ್, ರವಿಚಂದ್ರ, ಅಕ್ಬರ್, ರೇಖಾ ಶ್ರೀನಿವಾಸ್, ಕಾವ್ಯಾ, ಪವಿತ್ರಾ, ಶ್ರುತಿ, ಮಾಲಿನಿ ಮಲ್ಲೇಶ್, ಜಯಶ್ರೀ ಶಿವರಾಮ್ ಮುಂತಾದವರಿದ್ದರು.
Cinema
ಅರಣ್ಯ ಇಲಾಖೆ ಪರಿಹಾರಕ್ಕಾಗಿ ಗಂಡನನ್ನೇ ಕೊಂ*ದ ಹೆಂಡತಿ
 
														
ಮೈಸೂರು: ಹಣದ ಆಸೆಗೆ ಕೈ ಹಿಡಿದ ಪತಿಯನ್ನೇ ಕೊಲೆಗೈದು ಹುಲಿ ದಾಳಿ ಎಂದು ಬಿಂಬಿಸಲು ಹೋಗಿದ್ದ ಹೆಂಡತಿಯ ಸುಳ್ಳಿನ ಕಟ್ಟುಕತೆಯನ್ನು ಭೇದಿಸುವಲ್ಲಿ ಹುಣಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಚಿಕ್ಕಹೆಜ್ಜೂರು ಗ್ರಾಮದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕಡಂಪುರ ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾದವರು. ಈತನ ಪತ್ನಿ ಸಲ್ಲಾಪುರಿ (40) ತನ್ನ ಕೈಹಿಡಿದ ಪತಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾಳೆ.

ಹಲವು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಶಿಕ್ಷಣಕ್ಕಾಗಿ ಬಿಡದಿಯಲ್ಲಿರುವ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು.
ಕಳೆದ ಆರು ತಿಂಗಳ ಹಿಂದಷ್ಟೆ ಬೆಂಗಳೂರಿನ ರವಿಕುಮಾರ್ ಮತ್ತು ಅರುಣ್‌ಕುಮಾರ್ ಅವರ ಒಡೆತನದ
ಚಿಕ್ಕಹೆಜ್ಜೂರಿನಲ್ಲಿರುವ 4.10 ಎಕರೆ ಅಡಿಕೆ ತೋಟವನ್ನು ನಿರ್ವಹಿಸುವ ಕೆಲಸವನ್ನು ನಿರ್ವಹಿಸಲು
ಮಾಸಿಕ 18 ಸಾವಿರ ರೂ. ವೇತನವನ್ನು ಈ ದಂಪತಿಗಳಿಗೆ ನಿಗದಿಪಡಿಸಿ ತೋಟದೊಳಗಿರುವ ಮನೆಯನ್ನು ವಾಸಕ್ಕೆ ನೀಡಿದ್ದರು.
ಕಾಡಂಚಿನ ಗ್ರಾಮಗಳಲ್ಲಿ ಆಗಿದ್ದಾಂಗೆ ಜನ ಜಾನುವಾರುಗಳ ಮೇಲೆ ಹುಲಿ, ಚಿರತೆಗಳ ದಾಳಿ ಆಗುತ್ತಿರುವ ಬಗ್ಗೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಸರ್ಕಾರ ನೀಡುವ ಪರಿಹಾರದ ಬಗ್ಗೆ ಅಕ್ಕ ಪಕ್ಕದವರು ಕೆಲಸಕ್ಕೆ ಬರುತ್ತಿದ್ದವರಿಂದ ಮಾಹಿತಿ ಪಡೆದಿದ್ದ ಸಲ್ಲಾಪುರಿ ಹಣದ ದುರಾಸೆ ಬಿದ್ದು, ಸೆ.8ರಂದು ರಾತ್ರಿ ತನ್ನ ಗಂಡ ವೆಂಕಟಸ್ವಾಮಿಗೆ ವಿಷ ಬೆರೆಸಿದ ಆಹಾರ ನೀಡಿ ಸಾಯಿಸಿದ್ದಾಳೆ.

ವಿಷ ಆಹಾರ ಸೇವಿಸಿದ ವೆಂಕಟಸ್ವಾಮಿ ಸತ್ತ ನಂತರ ಅವನ ದೇಹವನ್ನು ಮನೆಯಿಂದ ಹೊರಗೆ ಎಳೆದೊಯ್ದು ಮನೆಯ ಪಕ್ಕದಲ್ಲಿದ್ದ ಸಗಣಿ ಗುಂಡಿಯನ್ನು ಐದು ಅಡಿ ಆಳ ಅಗೆದು, ಶವವನ್ನು ಹೂತು ಹಾಕಿ ಸಗಣಿ, ಎಲೆಗಳು, ಜೋಳದ ಹುಲ್ಲು ಮತ್ತಿತರ ತ್ಯಾಜ್ಯಗಳಿಂದ ಮುಚ್ಚಿಹಾಕಿದ್ದಾಳೆ. ನಂತರ ಸೆ.9ರ ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ
ಹುಲಿಯೊಂದು ತನ್ನ ಗಂಡ ವೆಂಕಟಸ್ವಾಮಿಯನ್ನು ಕೊಂದು ಅವನ ದೇಹವನ್ನು ಜೋಳದ ಹೊಲದ ಮೂಲಕ ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿದೆ ಎಂದು ಕಥೆ ಕಟ್ಟಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ

ತೋಟದಲ್ಲಿ ಅಳವಡಿಸಲಾದ ಸಿ.ಸಿ.ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅಪರಾಧದ ಸಮಯದಲ್ಲಿ ಸಲ್ಲಾಪುರಿಯ ಚಲನವಲನಗಳನ್ನು ಗಮನಿಸಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಆಕೆಯ ಹೇಳಿಕೆ ಮತ್ತು ದೃಢವಾದ ಪುರಾವೆಗಳನ್ನು ಸಂಗ್ರಹಿಸಿ ತನಿಖೆ ತೀವ್ರಗೊಳಿಸಿದ ಪರಿಣಾಮ ಹಣದ ದುರಾಸೆಗೆ ಬಿದ್ದು ಪತಿಯನ್ನೆ ಕೊಲೆಗೈದು ಶವವನ್ನು ತಿಪ್ಪೆ ಗುಂಡಿಯಲ್ಲಿ ಹೂತಕ್ಕಿರುವುದಾಗಿ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾಳೆ.
ಶವ ಪರೀಕ್ಷೆಗಾಗಿ ಶವವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರು ಎಎಸ್ಪಿ ಮಲ್ಲಿಕ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Mysore
ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ: ಮೈಸೂರಿನಲ್ಲಿ ಸಂಭ್ರಮ
 
														ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಅಗ್ರಹಾರ ವೃತ್ತದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮ ಆಚರಿಸಲಾಯಿತು.
ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ಕರ್ಣನಿಗೆ ಕೊನೆಗೂ ಕಾಲ ಕೂಡಿಬಂತು. 15 ವರ್ಷದ ಅಭಿಮಾನಿಗಳ ಕನಸು ಈಗ ನನಸಾಗಿದೆ. ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು. ಈ ಬಾರಿ ವಿಷ್ಣು ವರ್ಧನ್ ಅವರ 75 ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಹಬ್ಬದಂತೆ ಆಚರಿಸುತ್ತೇವೆ. ಅಭಿನವ ಸರಸ್ವತಿ ಬಿ.ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ನೀಡಿರುವುದು ಸ್ವಾಗತಿಸುತ್ತೇವೆ ಎಂದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ.ರಾಘವೇಂದ್ರ, ಬಸವರಾಜ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರವಿಚಂದ್ರ, ಎಸ್.ಎನ್.ರಾಜೇಶ್, ಟಿ.ಎಸ್.ಅರುಣ್, ರವಿನಂದನ್, ಮಹಾನ್ ಶ್ರೇಯಸ್, ಲಕ್ಷ್ಮಣ್, ಚಿನ್ನ ಬೆಳ್ಳಿ ಸಿದ್ದಪ್ಪ, ಸಂತೋಷ್, ರವೀಂದ್ರ ಕುಮಾರ್, ಅಭಿ, ಹರೀಶ್ ನಾಯ್ಡು, ರಾಕೇಶ್ ಭಟ್ ಮುಂತಾದವರಿದ್ದರು.
- 
																	   Hassan6 hours ago Hassan6 hours agoರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ 
- 
																	   Chamarajanagar21 hours ago Chamarajanagar21 hours agoಚಾಮರಾಜನಗರ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಮುಂದುವರೆಸಲು ಸಂಸದ ಸುನೀಲ್ ಬೋಸ್ ಮಾಡಿದ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ 
- 
																	   Mandya5 hours ago Mandya5 hours agoಶ್ರೀರಂಗಪಟ್ಟಣ ದಸರಾ ಲೋಗೋ ಬಿಡುಗಡೆ 
- 
																	   Manglore24 hours ago Manglore24 hours agoವಿದ್ಯಾಭಾರತಿ ರಾಜ್ಯ ಮತ್ತು ಪ್ರಾಂತಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ 
- 
																	   Manglore2 hours ago Manglore2 hours agoಜಿಲ್ಲಾಮಟ್ಟದ ಖೋ-ಖೋ ಪಂದ್ಯಾವಳಿ: ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ 
- 
																	   Hassan6 hours ago Hassan6 hours agoತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ 
- 
																	   Hassan2 hours ago Hassan2 hours agoಹಾಸನ: ಸಾಹಸಸಿಂಹ ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳ ಸಂಭ್ರಮ 
- 
																	   Hassan5 hours ago Hassan5 hours agoಮದ್ದೂರು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್ 

 
											 
											 
											 
											 
											