Connect with us

Mandya

ಶ್ರೀರಂಗಪಟ್ಟಣ: ಡೆಂಗ್ಯೂ, ಚಿಕನ್ ಗುನ್ಯ ನಿಯಂತ್ರಣಕ್ಕೆ ಸಹಕರಿಸಿ

Published

on

ಶ್ರೀರಂಗಪಟ್ಟಣ: ಡೆಂಗ್ಯೂ ಹಾಗೂ ಚಿಕೂನ್ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ.ನಿಂತ ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ ಆದ್ದರಿಂದ ಸೊಳ್ಳೆ ಕಡಿತದಿಂದ ಜಾಗೃತರಾಗಿರಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್ ಹೇಳಿದರು.

ತಾಲೂಕಿನ ಮೇಳಾಪುರ ಗ್ರಾಮದ ಸೊಸೈಟಿ ಆವರಣದಲ್ಲಿ ಮಹದೇವಪುರ ಆಯುಷ್ಮಾನ್ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಉಪ ಕೇಂದ್ರ ಮಟ್ಟದ ಡೆಂಗ್ಯೂ ವಿರೋಧ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ಖಾಯಿಲೆಗೆ ಮುಂಜಾಗ್ರತೆಯೆ ಔಷಧಿಯಾಗಿದ್ದು ಹಠಾತ್ತನೆ ಬರುವ ಅಧಿಕ ಜ್ವರ,ತೀವ್ರ ತಲೆನೋವು,ಕಣ್ಣುಗಳ ಹಿಂಬಾದಲ್ಲಿ ತೀವ್ರತರ ನೋವು,ವಾಕರಿಕೆ ಮತ್ತು ವಾಂತಿ ರೊಗದ ಲಕ್ಷಣಗಳಾಗಿವೆ.

ರೋಗದ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಿ. ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಒಡೆದ ಟೈರಗಳು, ತೆಂಗಿನ ಚಿಪ್ಪುಗಳು, ಸಿಮೆಂಟ್ ತೊಟ್ಟುಗಳು,ತೆರೆದ ಪ್ಲಾಸ್ಟಿಕ್ ವಸ್ತುಗಳು, ನೀರಿನ ಸಂಗ್ರಹಣ ತೊಟ್ಟಿ, ಹೂವಿನ ಕುಂಡಗಳು, ಏರಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ ಇಂಥವುಗಳನ್ನು ವಾರಕ್ಕೊಂದು ಬಾರಿ ಲಕ್ಷವಹಿಸಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಬೇಕು.  ಸೊಳ್ಳೆಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ ಒಟ್ಟಾರೆ ನೀರು ನಿಲ್ಲದಂತೆ ಸಹಕರಿಸಿ,ಸೊಳ್ಳೆ ಉತ್ಪತ್ತಿ ತಡೆಗಟ್ಟಿ ಎಂದರು.

ನಂತರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಮಾತನಾಡಿ, ಡೆಂಗ್ಯೂ ಸೋಲಿಸಲು ಪ್ರಮುಖ ಹೆಜ್ಜೆಗಳಾದ ಪರಿಶೀಲಿಸಿ. ಸ್ವಚ್ಛಗೊಳಿಸಿ,ಮುಚ್ಚಿಡಿ ಎಂಬ ಘೋಷವಾಕ್ಯದ ಮಹತ್ವ ತಿಳಿಸುತ್ತಾ ಲಾರ್ವಗಳ ಪ್ರಾತ್ಯಕ್ಷಿಕೆಯೊಂದಿಗೆ ಸೊಳ್ಳೆಗಳ ಬೆಳವಣಿಗೆ ಹಂತಗಳ ಕುರಿತು ಭಿತ್ತಿ ಪತ್ರಗಳೊಂದಿಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ತಿಲಕ ಕುಮಾರ, ಮುಖಂಡರಾದ ಮುರಳಿಧರ್, ಮಹೇಶ್,ವೆಂಕಟೇಶ್,ಮಧು,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತ ರಾಮು,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ತಸ್ಮೀಯ ಬಾನು, ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎನ್ ಕೃಷ್ಣೇಗೌಡ,ಸಮುದಾಯ ಆರೋಗ್ಯ ಅಧಿಕಾರಿ ಮೌಲ್ಯ,ಅಂಗನವಾಡಿ ಕಾರ್ಯಕರ್ತೆ ದುಂಡಮ್ಮ,ಆಶಾ, ಮನೋಜ,ಪೂಜಾ ಹಾಗೂ ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಹಾಗೂ ಸಾರ್ವಜನಿಕರು ಹಾಜರಿದ್ದರು.

Continue Reading

Mandya

ಎಚ್.ಕೆ.ವೀರಣ್ಣ ವಿವಿಧ ಕ್ಷೇತ್ರದಲ್ಲಿ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ ಮಹಾನ್‌ ವ್ಯಕ್ತಿ: ಸಿದ್ಧಲಿಂಗ ಮಹಾಸ್ವಾಮೀಜಿ

Published

on

ಮದ್ದೂರು:  ಎಚ್.ಕೆ.ವೀರಣ್ಣಗೌಡರವರು ಶಿಕ್ಷಕರಾಗಿ ಪತ್ರಕರ್ತರಾಗಿ, ಶಾಸಕರಾಗಿ, ಸಚಿವರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಶಿಕ್ಷಣ ಪ್ರೇಮಿಯಾಗಿ ವಿವಿಧ ಕ್ಷೇತ್ರದಲ್ಲಿ ತಮ್ಮದೆಯಾದ ಹಲವಾರು ಕೊಡುಗೆಗಳನ್ನು ಸಮಾಜಕ್ಕೆ ನೀಡಿದ ಮಹಾನ್ ವ್ಯಕ್ತಿ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಅಂಗಸಂಸ್ಥೆ ಎಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಮತ್ತು ಸಂಸ್ಥೆಯ ಕಾರ್ಯದಶರ್ಿ ಸಿ.ಅಪೂರ್ವಚಂದ್ರ ಷಷ್ಠಿಪೂತರ್ಿ ಕಾರ್ಯಕ್ರಮದ ವೇಳೆ ದಿವ್ಯ ಸಾನಿದ್ಯ ನೀಡಿ ಆಶೀರ್ವಚನ ನೀಡಿದರು.

ಎಚ್.ಕೆ.ವೀರಣ್ಣಗೌಡರ ಸಹವರ್ತಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಅವರ ಪುತ್ರ ಸಿ.ಅಪೂರ್ವಚಂದ್ರ ಇಬ್ಬರು ಸೇರಿಕೊಂಡು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡುತ್ತಿರುವುದು ಮೆಚ್ಚುಗೆಯ ವಿಷಯ ಎಂದರು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಬ್ರಿಟಿಷರ ವಿರುದ್ಧ ಆರಂಭದಲ್ಲೇ ದನಿಯೆತ್ತಿದ ಮದ್ದೂರು ಪಟ್ಟಣದ ಶಿವಪುರ ಐತಿಹಾಸಿಕ ಸ್ಥಳವಾಗಿದ್ದು ಇದಕ್ಕೆ ಅಣಿಗೊಳಿಸಿದ ಅಂದಿನ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ಧಲಿಂಗಯ್ಯ, ಎಚ್.ಕೆ.ವೀರಣ್ಣಗೌಡ ಇನ್ನಿತರ ಸ್ವಾತಂತ್ರ್ಯ ಪ್ರೇಮಿಗಳ ಮನೋಸ್ಥೈರ್ಯ ಮೆಚ್ಚತಕ್ಕದೆಂದರು.

ಅಕ್ಷರ, ಆರೋಗ್ಯ, ಅನ್ನದಾಸೋಹದ ಕ್ರಾಂತಿಗೆ ದಕ್ಷಿಣ ಭಾರತದಲ್ಲೇ ಆದಿಚುಂಚನಗಿರಿ ಮಹಾಸಂಸ್ಥಾನಮಠ, ಸಿದ್ಧಗಂಗಾಮಠ ಮತ್ತು ಸುತ್ತೂರು ಶ್ರೀಕ್ಷೇತ್ರಗಳು ಮುಂಚೂಣಿಯಲ್ಲಿದ್ದು ರಾಜ್ಯ ಸಕರ್ಾರದ ಬಿಸಿಯೂಟ ಕಾರ್ಯಕ್ಕೆ ಶ್ರೀಮಠಗಳೇ ಪ್ರೇರಣೆಯೆಂದು ಬಣ್ಣಿಸಿದರು.

ಇಂದಿನ ಕಾರ್ಯಕ್ರಮ ಗುರು ಮತ್ತು ಜಂಗಮರ ಸಮಾಗಮ ಕಾರ್ಯಕ್ರಮವಾಗಿದ್ದು ಷಷ್ಠಿಪೂತರ್ಿ ನೆಪದಲ್ಲಿ 20ಕ್ಕೂ ಹೆಚ್ಚು ಗುರುಗಳನ್ನು ಮೂರು ದಾರ್ಶನಿಕರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸುವ ಅನುಕರಣೀಯ ಕಾರ್ಯಕ್ಕೆ ಸಿ.ಅಪೂರ್ವಚಂದ್ರ ಮುನ್ನುಡಿ ಬರೆದಿದ್ದಾರೆಂದು ಶ್ಲಾಘಿಸಿದರು.

ಸಿ.ಇ.ಟಿ ಪ್ರಾಯೋಜಿತ ಪುಸ್ತಕ ಬಿಡುಗಡೆಗೊಳಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯೂ ಎಚ್.ಕೆ.ವೀರಣ್ಣಗೌಡ ಹಾಗೂ ಕೆ.ಟಿ.ಚಂದು ಅವರೊಡಗೂಡಿ ಚುಂಚನಗಿರಿ ಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.

ಹಿಂದೆ ಆದರ್ಶ ಶಿಕ್ಷಕರ ಪಡೆಯೇ ಇತ್ತೆಂದ ಅವರು ಸರ್ವಪಲ್ಲಿ ರಾಧಾಕೃಷ್ಣನ್ ರವರು ಕೆಲವು ವಿಶ್ವವಿದ್ಯಾನಿಲಯಗಳ ಸ್ಥಾಪನೆಯೊಟ್ಟಿಗೆ ರಷ್ಯಾ ದೇಶದ ಭಾರತ ರಾಯಭಾರಿಯಾಗಿ ಎರಡು ದೇಶಗಳ ಇಂದಿನ ಉತ್ತಮ ಬಾಂಧವ್ಯಕ್ಕೆ ಅಂದೇ ಮುನ್ನುಡಿ ಬರೆದ್ದರೆಂದು ಪ್ರಶಂಸಿದರು.

ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಗುರಿ ಉತ್ತಮ ವಿದ್ಯಾಥರ್ಿಗಳನ್ನು ರೂಪಿಸುವತ್ತ ಇದ್ದಲ್ಲಿ ಚನ್ನೇಗೌಡ ವಿದ್ಯಾಸಂಸ್ಥೆಯಂತೆ ಸುಸಂಸ್ಕೃತ ಸಮಾಜ, ರಾಜಕಾರಣಿಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಶೈಕ್ಷಣಿಕ ಮಟ್ಟ ಗುಣವರ್ಧನೆಯ ಗುರಿ ಈಡೇರುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ರಾಣಿಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್.ಕೆ.ಕೋಳಿವಾಡ ಮಾತನಾಡಿ ಕೌಸಲ್ಯಗಳಿಲ್ಲದ ಶಿಕ್ಷಣ ನಿರುದ್ಯೋಗಕ್ಕೆ ಹೆಚ್ಚು ಕಾರಣವೆಂದು ಅಗತ್ಯ ಕೌಸಲ್ಯ ಸಿಕ್ಕಲ್ಲಿ ಪ್ರತಿಯೊಬ್ಬರೂ ತಮ್ಮದೇ ಉದ್ಯೋಗಕ್ಕೆ ಹೊಂದಿಕೊಳ್ಳಲು ಸಾಧ್ಯವೆಂದು ತಾವು ಕೈಗೊಂಡಿರುವ ಮೋಡ ಬಿತ್ತನೆ ಕುರಿತಾದ ವಿಮಾನ ಚಾಲಕರ ಮಾಸಿಕ ವೇತನ 6 ಲಕ್ಷವಿದ್ದು ಯಾವುದೇ ಪದವಿ ಪಡೆಯದ ವಿಮಾನ ಚಾಲಕರು ಕೌಸಲ್ಯತೆ ಹೊಂದಿ ಅಧಿಕ ಸಂಬಳ ಪಡೆಯುವ ಉದಾಹರಣೆ ನೀಡಿವೆ.

ವಿಧಾನ ಪರಿಷತ್ ಸದಸ್ಯ, ಸಂಸ್ಥೆಯ ಹಿರಿಯ ವಿದ್ಯಾಥರ್ಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ಗೂಳಿಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಐದು ವರ್ಷದಿಂದೇಚೆಗೆ 72 ಸಾವಿರ ಮಂದಿ ಪಿ.ಯು.ಸಿ ಪರೀಕ್ಷೆ ಬರೆದಿದ್ದು ಈ ಪೈಕಿ 18 ಸಾವಿರ ಮಂದಿ ಫೇಲಾಗುವ ಮೂಲಕ ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಅನುತ್ತೀರ್ಣದ ಬಗ್ಗೆ ಅರಿಯಬೇಕೆಂದರು.

ಜಿಲ್ಲೆಯಲ್ಲಿ 2201 ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಠಿಯಿಂದ ಖಾಲಿಯಿರುವ 4500 ಶಿಕ್ಷಕ ಹುದ್ದೆಗಳನ್ನು ಭತರ್ಿ ಮಾಡಲು ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಪತ್ರ ಬರೆಯುವ ಕುರಿತು ವಿವರಿಸಿದರು.

ಅಭಿನಂದನೆ: ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹದಿನೆಂಟಕ್ಕೂ ಶಿಕ್ಷಕರನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಿದ ಗಣ್ಯರು ಫಲತಾಂಬೂಲ ನೀಡಿ ಹರಿಸಿದರು.

ಷಷ್ಠಿಪೂರ್ತಿ ಅಂಗವಾಗಿ ಸಂಸ್ಥೆಯ ಕಾರ್ಯದಶರ್ಿ ಸಿ.ಅಪೂರ್ವಚಂದ್ರ ಅವರನ್ನು ವೇದಿಕೆಯಲ್ಲಿದ್ದ ಶ್ರೀಗಳು ಆಶೀರ್ವದಿಸಿ ಹರಸಿದರು.
ಶಾಸಕ ದರ್ಶನ್ಪುಟ್ಟಣ್ಣಯ್ಯ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕಉಮಾರ್, ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ಅಧ್ಯಕ್ಷ ಸ್ವರೂಪ್ಚಂದ್, ಖಜಾಂಚಿ ಶಿವರಾಮು, ನಿದರ್ೇಶಕರಾದ ಎಂ.ಎ.ರಾಮಲಿಂಗಯ್ಯ, ಮುತ್ತರಾಜು, ಕನರ್ಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ಗೌಡ, ಪ್ರಾಂಶುಪಾಲರುಗಳಾದ ಯು.ಎಸ್.ಶಿವಕುಮಾರ್, ಡಾ.ಎಸ್.ಪಿ.ಕಿರಣ್, ಎಸ್.ಸುರೇಂದ್ರ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಮಹೇಶ್, ವರದರಾಜು, ಕಸಾಪ ತಾಲೂಕು ಅಧ್ಯಕ್ಷ ಸುನೀಕುಮಾರ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ನಿಕಟಪೂರ್ವ ಪ್ರಾಂಶುಪಾಲ ಪ್ರಕಾಶ್ ಇದ್ದರು.

Continue Reading

Mandya

ಯಾಂತ್ರೀಕೃತ ವಿಧಾನದ ಮೂಲಕ ಭತ್ತ ನಾಟಿ ಮಾಡಿದ ಜಿ.ಪಂ. ಸಿಇಓ ಕೆ.ಆರ್.ನಂದಿನಿ

Published

on

ಮಂಡ್ಯ : ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಮಂಡ್ಯ ಜಿ.ಪಂ. ಸಿಇಓ ಕೆ.ಆರ್. ನಂದಿನಿ ಅವರು ಸ್ವತಃ ಭತ್ತ ನಾಟಿ ಮಾಡಿದರು.

ಜಿಲ್ಲಾ ಪಂಚಾಯತ್, ಮಂಡ್ಯ ಮತ್ತು ಕೃಷಿ ಇಲಾಖೆ ಮಂಡ್ಯ ವತಿಯಿಂದ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಏರ್ಪಡಿಸಲಾಗಿದ್ದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ಅವರು ಯಾಂತ್ರೀಕೃತ ವಿಧಾನದ ಮೂಲಕ ಮಹಿಳೆಯರು ಕೂಡ ಭತ್ತ ನಾಟಿ ಮಾಡಬಹುದು ಎಂಬ ವಿಶ್ವಾಸ ತುಂಬಲು ಸ್ವತಃ ಅವರೇ ನಾಟಿ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.

ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ, ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮಹಿಳೆಯರು ಕೂಡ ಯಂತ್ರದ ಮೂಲಕ ಭತ್ತ ನಾಟಿ ಮಾಡಬಹುದು ಹಾಗೂ ಯಂತ್ರವನ್ನು ನಿರ್ವಹಣೆ ಮಾಡಬಹುದು ಎಂದು ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ದೊರೆಯುತ್ತಿಲ್ಲ, ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದಾಗಿದೆ ಹಾಗೂ ಕಡಿಮೆ ಸಮಯದಲ್ಲಿ ನಾಟಿ ಮಾಡಬಹುದಾಗಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.

ಕೃಷಿ ಇಲಾಖೆಯ ಸಮನ್ವಯದೊಂದಿಗೆ, ಮಂಡ್ಯ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯೂ ನೊಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ಒಂದು ದಿನದ ತರಬೇತಿಯನ್ನು ಏರ್ಪಡಿಸಲಾಗಿತ್ತು.

ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲು ಹಿತ ದರು ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.

ಈ ಸಂದರ್ಭದಲ್ಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಹರ್ಷ ಸೇರಿದಂತೆ ಇತರರು ಹಾಜರಿದ್ದರು.

Continue Reading

Mandya

ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ನೈತಿಕವಾಗಿ ಬದುಕುವ ಪಾಠ ಕಲಿಸಿ: ಎನ್. ಚಲುವರಾಯಸ್ವಾಮಿ

Published

on

ಮಂಡ್ಯ : ಶಿಕ್ಷಕರು ಶೈಕ್ಷಣಿಕವಾಗಿ ಪಾಠ ಮಾಡುವುದು ಸಾಮಾನ್ಯ ಆದರೆ ವಿದ್ಯಾರ್ಥಿಗಳಿಗೆ ಇಂದಿನ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು ಹಾಗೂ ಸದಾ ನೈತಿಕತೆಗೆ ಆದ್ಯತೆ ನೀಡಿ ಜೀವನ ನಡೆಸಬೇಕು ಎಂಬ ಪಾಠ ಹೇಳಿಕೊಡಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿ ದಿನ ಅರ್ಧಗಂಟೆ ಜೀವನದ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು,ಸವಾಲು ಎದುರಿಸಲು ಬೇಕಿರುವ ದೈರ್ಯ, ದೃಢತೆ, ನಾಯಕತ್ವ ಗುಣಗಳನ್ನು ಬೆಳಸಿ ಅವರನ್ನು ದೇಶದ ಸತ್ಪ್ರಜೆಗಳಾಗಿ ಸಜ್ಜುಗೊಳಿಸಬೇಕು ಎಂದರು.

ಮಕ್ಕಳಿಗೆ ತಂದೆ, ತಾಯಿಯ ನಂತರ ಅವರ ತಪ್ಪುಗಳನ್ನು ತಿದ್ದಿ, ತಿಳಿ ಹೇಳುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳು ಮಾಡುವ ಸಾಧನೆಯ ಹಿಂದೆ ಗುರುಗಳ ಪರಿಶ್ರಮವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿದ ನಂತರ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗಿಗಳಾಗಬಹುದು‌ ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವುದರ ಜೊತೆಗೆ ಅವರಿಗೆ ಸಂಸ್ಕಾರ ನೀಡಿ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ್ ಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಸರ್ಕಾರಿ ಶಾಲೆಯಿಲ್ಲವಾದರೆ ಅನೇಕ ಸರ್ಕಾರಿ ಶಿಕ್ಷಕರಿಗೆ ಉದ್ಯೋಗವಿರುವುದಿಲ್ಲ ದಯಮಾಡಿ ಶಿಕ್ಷಕ ವೃಂದದವರು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ನಿಭಾಯಿಸಿ, ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಗಮನವಹಿಸಿ ಎಂದರು.

ಶಿಕ್ಷಕರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿನ ಗುರುಭವನ ಅಭಿವೃದ್ಧಿ ಪಡಿಸಲು ಶಿಕ್ಷಣ ಸಚಿವರ ಸಹಕಾರದೊಂದಿಗೆ 50 ಲಕ್ಷವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಶೀಘ್ರದಲ್ಲೇ ಜಿಲ್ಲೆಯಲ್ಲಿನ ಗುರು ಭವನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಶಾಸಕ ಕೆ. ವಿವೇಕಾನಂದ ಅವರು ಮಾತನಾಡಿ , ಅತಿಥಿ ಶಿಕ್ಷರಿಗೆ ಸರ್ಕಾರಿ ಹುದ್ದೆ ನೀಡುವಲ್ಲಿ ಸರ್ಕಾರ ಗಮನ ಹರಿಸಬೇಕು ಹಾಗೂ ಇತರೆ ಸರ್ಕಾರಿ ನೌಕರರ ರೀತಿ ಪ್ರತಿ ಐದು ವರ್ಷಕ್ಕೊಮ್ಮೆ ಶಿಕ್ಷಕರಿಗೂ ಕಡ್ಡಾಯವಾಗಿ ಬಡ್ತಿ ನೀಡಿ, ಸಂಬಳ ಹೆಚ್ಚಿಸಬೇಕು ಎಂದರು.

ಶಿಕ್ಷಕರಿಂದ ದೇಶ, ರಾಜ್ಯ ಬೆಳಗುತ್ತದೆ. ಮಕ್ಕಳಿಗೆ ತಂದೆ, ತಾಯಿಯ ನಂತರ ದೇವರ ರೂಪದಲ್ಲಿ ಕಾಣುವವರು ಶಿಕ್ಷಕರು. ಶಿಕ್ಷಕರಿಗೆ ಅನ್ಯಾಯವಾದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ ದಯಮಾಡಿ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ಶಿಕ್ಷಕರು ಲೋಕದ ಕಣ್ಣುಗಳಿದ್ದ ಆಗೆ ಅವರಿಂದ ವಿದ್ಯಾರ್ಥಿಗಳ ಬದುಕು, ಭವಿಷ್ಯ ಬೆಳಗುತ್ತದೆ. ಶಿಕ್ಷಕರ ಮಾರ್ಗದರ್ಶನವಿಲ್ಲದ ಮಕ್ಕಳ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂಕಗಳಿಸಲು, ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಹಾಗೂ ಪ್ರಥಮ ಸ್ಥಾನ ಗಳಿಸುವುದರ ಬಗ್ಗೆ ಹೇಗೆ ತರಬೇತಿ ನಿಡುತ್ತಿರೋ, ಹಾಗೆಯೇ ಬದುಕಿನ ಏಳು – ಬೀಳುಗಳನ್ನ ದಾಟಿ ಭವಿಷ್ಯ ರೂಪಿಸಲು ಅಗತ್ಯವಾದ ಜೀವನ ಮೌಲ್ಯಗಳನ್ನು ಸಹ ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಬೇಕು ಎಂದು ಹೇಳಿದರು.

ಶಿಕ್ಷಣ ಕ್ಷೇತ್ರ ಶ್ರೇಷ್ಠವಾದ ಕ್ಷೇತ್ರವಾಗಿದ್ದು, ಶಿಕ್ಷಕರ ವೃತ್ತಿ ಬಹಳ ಜವಾಬ್ದರಿಯುತವಾದ ವೃತ್ತಿ, ಪ್ರತಿಯೊಬ್ಬ ಶಿಕ್ಷಕರು ನೈತಿಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಉದ್ಧಾರಕ್ಕಾಗಿ ಶ್ರಮಿಸಿ ಮತ್ತು ಸಮಾಜಕ್ಕೆ ಮಾದರಿಯಾಗಿ ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು ಮತ್ತು ನವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಎಂ. ವಿ ಪ್ರಕಾಶ್, ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ಚಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವಾಸುಕಿ ಪ್ರಸನ್ನ ಹಾಗೂ ಜಿಲ್ಲಾ ಪ್ರಾಥಮಿಕ ಸರ್ಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಎಚ್. ಡಿ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Trending

error: Content is protected !!