Chikmagalur
ಸರ್ಕಲ್ ನ ಅಗಲಿಕರಣಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡ ಶಂಕುಸ್ಥಾಪನೆ
ಜಯಪುರ : ಸಾರ್ವಜನಿಕರ ಬಹುದಿನಗಳ ಬೇಡಿಕೆ ನಗರದಲ್ಲಿರುವ ಮುಖ್ಯ ಸರ್ಕಲ್ ನ ಅಗಲಿಕರಣಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರಾದ ಟಿ ಡಿ ರಾಜೇಗೌಡ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ಎಂ ಸತೀಶ್, ಮೇಗುಂದ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜಾಳ್ಮರ, ಇಸ್ಮಾಯಿಲ್, ರವಿಚಂದ್ರ, ಫಣಿರಾಜ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.
Chikmagalur
ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ 35 ಲಕ್ಷ ನಿವ್ವಳ ಲಾಭ
ಆಲ್ದೂರು: ಇಲ್ಲಿನ ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಪ್ರಭಾರ ಕಾರ್ಯನಿರ್ವಾಹಕರಾದ ಅನ್ನಪೂರ್ಣ ಎಂಎಂ ವಾರ್ಷಿಕ ವರದಿ ಮಂಡಿಸಿ ವಾರ್ಷಿಕ ವಹಿವಾಟು ಲಾಭಾಂಶ ಆಪತ್ತಿನ ನಿಧಿ ಶೇರು ಬಂಡವಾಳ ಇತರೆ ನಿಧಿಗಳು ಸದಸ್ಯರಿಂದ ಪಡೆದಿರುವ ಠೇವಣಿ ಸಾಲ ವಿತರಣೆ ಮುಂತಾದ ವಿವರಗಳು ಮಾಹಿತಿಯನ್ನು ಸಭೆಯಲ್ಲಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಹೆಚ್ ಬಿ ವೆಂಕಟೇಶಗೌಡ, ತಾನು ಇದೆ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು ಸಂಘವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದು, ನಾನು ಸಿಇಒ ಹುದ್ದೆಯಲ್ಲಿದ್ದಾಗ ಒಂದು ಹಂತದಲ್ಲಿ 86 ಲಕ್ಷ ನಷ್ಟದಲ್ಲಿತ್ತು.

ಸಂಘದ ಪ್ರತಿಯೊಬ್ಬ ನಿರ್ದೇಶಕರು ಪದಾಧಿಕಾರಿಗಳು ಸಿಬ್ಬಂದಿಗಳ ಸಹಕಾರ ಪರಿಶ್ರಮದಿಂದ ಪ್ರಸ್ತುತ ಸಂಘವು 3502685 ರೂ ನಿವ್ವಳ ಲಾಭದಲ್ಲಿದ್ದು,ಸಭೆಯಲ್ಲಿ ಶೇಕಡ 10ರಷ್ಟು ಡಿವಿಡೆಂಟನ್ನು ಷೇರುದಾರರಿಗೆ ಒದಗಿಸಲಾಗುವುದು ಎಂದು ತಿಳಿಸಿದರು. ಸಂಘದ ಅಭಿವೃದ್ಧಿಗೆ ಸರ್ವರು ಸಹಮತ ಮತ್ತು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಪಾಧ್ಯಕ್ಷರಾದ ಡಿಎಂ ವಿನೋದ, ನಿರ್ದೇಶಕರುಗಳಾದ ಎಚ್ಎಸ್. ಕವೀಶ್,ಎಡಿ. ಕೌಶಿಕ್,ಎಚ್ ಆರ್ ಸಂದೇಶ್,ಡಿ ಆರ್ ದಿಲೀಪ್ ಕುಮಾರ್,ಡಿ ಚಂಪಾ,ಹೆಚ್ ಪಿ, ನಾರಾಯಣ ಗೌಡ ಹೂವಪ್ಪ ಶೆಟ್ಟಿ, ದೇವರಾಜ್, ಚನ್ನಪ್ಪ, ಬಿ ಎಂ ಸುದರ್ಶನ್, ಮೇಲ್ವಿಚಾರಕ ಕೆಆರ್ ರಘು, ಸಿಬ್ಬಂದಿಗಳು ಸದಸ್ಯರು ಶೇರುದಾರರು ಭಾಗವಹಿಸಿದ್ದರು.
Chikmagalur
4 ವರ್ಷಗಳಿಂದ ನಿರಂತರ ಪಾದಯಾತ್ರೆ; ಬಾಲಕೃಷ್ಣನೊಂದಿಗೆ ಪುಣ್ಯಕ್ಷೇತ್ರಗಳತ್ತ ಗೀತಾ ಮಾತಾಜಿಯ ಭಕ್ತಿ ಪಯಣ
ಕೊಟ್ಟಿಗೆಹಾರ : ಬಾಲಕೃಷ್ಣನೊಂದಿಗೆ 4 ವರ್ಷಗಳಿಂದ ನಿರಂತರ ಪಾದಯಾತ್ರೆ: ನೆಲಮಂಗಲದ ಗೀತಾ ಮಾತಾಜಿಯ ಅಪರೂಪದ ಭಕ್ತಿ ಪಯಣಕ್ಕೆ ಜನರ ಮೆಚ್ಚುಗೆ ನೆಲಮಂಗಲ ಮೂಲದ ಗೀತಾ ಮಾತಾಜಿ ಅವರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದ ಅವರು, ಈ ವರ್ಷವೂ ತಮ್ಮ ಭಕ್ತಿಯ ಪಯಣವನ್ನು ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನದತ್ತ ಮುಂದುವರಿಸಿದ್ದಾರೆ.

ಈ ಬಾರಿಯ ಪಾದಯಾತ್ರೆಯಲ್ಲಿ ಗೀತಾ ಮಾತಾಜಿ ಅವರೊಂದಿಗೆ ಕಂಗೊಳಿಸುತ್ತಿರುವ ಬಾಲಕೃಷ್ಣನ ರೂಪ ಭಕ್ತರ ವಿಶೇಷ ಗಮನ ಸೆಳೆಯುತ್ತಿದೆ. ಕಿರೀಟ, ಆಭರಣಗಳು, ಆಕರ್ಷಕ ಹೂವಿನ ಹಾರಗಳು ಹಾಗೂ ಸಾಂಪ್ರದಾಯಿಕ ವಸ್ತ್ರಗಳಿಂದ ಕಂಗೊಳಿಸುವ ಪುಟ್ಟ ಬಾಲಕೃಷ್ಣನನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಿರುವುದು ದಾರಿಯುದ್ದಕ್ಕೂ ಜನರ ಕಣ್ಮನ ಸೆಳೆಯುತ್ತಿದೆ. “ಹೆಜ್ಜೆ ಹೆಜ್ಜೆಯಲ್ಲೂ ಭಕ್ತಿ, ಜೊತೆಯಲ್ಲಿ ಬಾಲಕೃಷ್ಣ” ಎಂಬಂತೆ ಸಾಗುತ್ತಿರುವ ಇವರ ಧಾರ್ಮಿಕ ಶ್ರದ್ಧೆ ಹಾಗೂ ಅಚಲ ನಂಬಿಕೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೊಟ್ಟಿಗೆಹಾರ. ಚಾರ್ಮಾಡಿ ಘಾಟ್ ಮೂಲಕ ಹಾದುಹೋದ ಇವರಿಗೆ ಸ್ಥಳೀಯ ಜನತೆ ಅಪಾರ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.
Chikmagalur
ನಕಲಿ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ನಂಬಿಸಿ ಚಿನ್ನದ ಅಂಗಡಿಗೆ ವಂ*ಚನೆ ಪ್ರಕರಣ ದಾಖಲು
ಚಿಕ್ಕಮಗಳೂರು: ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬರು ಚಿನ್ನದ ಅಂಗಡಿಯಿಂದ ₹1.82 ಲಕ್ಷ ಮೌಲ್ಯದ ಚಿನ್ನದ ಸರ ಪಡೆದು ವಂಚಿಸಿರುವ ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೆ.28ರಂದು ಬೆಳಗ್ಗೆ 10.45ರ ಸುಮಾರಿಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಹರಹಂ ಜುವೆಲರ್ಸ್‌ಗೆ ಮಹಿಳೆಯೊಬ್ಬರು ಆಗಮಿಸಿ, ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಸಮವಸ್ತ್ರ ಧರಿಸಿರುವ ತಮ್ಮ ಫೋಟೋವನ್ನು ಮೊಬೈಲ್‌ನಲ್ಲಿ ತೋರಿಸಿದ್ದಾರೆ.

ನಂತರ 42 ಗ್ರಾಂ ಚಿನ್ನದ ಆಭರಣಗಳನ್ನು ಖರೀದಿಸಲು ಮುಂದಾದ ಮಹಿಳೆ, ₹6.21 ಲಕ್ಷ ಮೊತ್ತದ ಯುಕೋ ಬ್ಯಾಂಕ್ ಚೆಕ್ ನೀಡಿದ್ದಾರೆ. ಚೆಕ್ ಮೂಲಕ ಹಣ ಪಾವತಿಸುವುದರಿಂದ ಆಭರಣ ನೀಡಲು ಸಾಧ್ಯವಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಈ ವೇಳೆ, ಮೊದಲು ಒಂದು ಚಿನ್ನದ ಸರ ನೀಡುವಂತೆ ಹಾಗೂ ಉಳಿದ ಆಭರಣಗಳನ್ನು ಚೆಕ್ ಹಣ ಖಾತೆಗೆ ಜಮೆಯಾದ ಬಳಿಕ ನೀಡುವಂತೆ ಮಹಿಳೆ ಮನವಿ ಮಾಡಿದ್ದಾರೆ. ತಾನು ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿದ್ದರಿಂದ ನಂಬಿದ ಅಂಗಡಿ ಮಾಲೀಕರು ₹1.82 ಲಕ್ಷ ಮೌಲ್ಯದ 12.5 ಗ್ರಾಂ ತೂಕದ ಚಿನ್ನದ ಸರವನ್ನು ನೀಡಿದ್ದಾರೆ.
ಬಳಿಕ ಮಹಿಳೆ ನೀಡಿದ್ದ ಚೆಕ್‌ನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಮಹಿಳೆಯ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಕುರಿತು ವಿಚಾರಿಸಿದಾಗ, ಮಹಿಳೆಯ ವಿರುದ್ಧ ಈಗಾಗಲೇ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವುದು ಹಾಗೂ ಆಕೆ ನಕಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ಹಲವರಿಗೆ ವಂಚಿಸಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಹರಹಂ ಜುವೆಲರ್ಸ್‌ನ ಹಂಸರಾಜ್ ಜೈನ್ ಅವರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
-
State20 hours agoರಾಜ್ಯದ 17 ಜಿಲ್ಲೆಗಳಲ್ಲಿ ಮಳೆ ಅಲರ್ಟ್: ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಸಾಧ್ಯತೆ
-
State22 hours agoಅರ್ಧ ಹೆಲ್ಮೆಟ್ಗೆ ಸರ್ಕಾರದಿಂದ ಬ್ರೇಕ್!
-
Hassan23 hours agoಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿ ಖದೀಮ ಪರಾರಿ
-
Hassan21 hours agoವರ್ಡ್ ರೆಕಾರ್ಡ್ ಸೇರಿದ ಹಾಸನದ ಹಲಸು
-
State10 hours agoಜವಳಿ ಕ್ಷೇತ್ರಕ್ಕೆ ಹೊಸ ಚೈತನ್ಯ: ₹4,000 ಕೋಟಿ ವೆಚ್ಚದ ಜವಳಿ ಮತ್ತು ಉಡುಪು ನೀತಿ 4.0!!
-
Chikmagalur7 hours agoಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ 35 ಲಕ್ಷ ನಿವ್ವಳ ಲಾಭ
-
Chamarajanagar21 hours agoಆನೆಗೆ ಲಾರಿ ಗುದ್ದಿಸಲು ಯತ್ನ: ಚಾಲಕನಿಗೆ 5 ಸಾವಿರ ರೂ. ದಂಡ
-
State23 hours agoಬರಪೀಡಿತ ರೈತರಿಗೆ ₹25 ಸಾವಿರ ಪರಿಹಾರ ನೀಡಿ: ಸರ್ಕಾರಕ್ಕೆ ಆರ್. ಅಶೋಕ್ ಒತ್ತಾಯ
