Connect with us

Hassan

ತೆಂಗು ಮತ್ತು ರಾಗಿ ಬೆಳೆ ಸಮಗ್ರ ವಿಚಾರ ಸಂಕಿರಣ

Published

on

ಚನ್ನರಾಯಪಟ್ಟಣ :  ಚೌಡೇನಹಳ್ಳಿ ಗ್ರಾಮದಲ್ಲಿ ಕೃಷಿ ವಿದ್ಯಾರ್ಥಿಗಳು ಹಾಗೂ ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಸೇರಿ ರೈತರಿಗೆ ತೆಂಗು ಮತ್ತು ರಾಗಿ ಬೆಳೆಗಳ ವೈಜ್ಞಾನಿಕ ಕೃಷಿ ಪದ್ಧತಿಗಳು, ಸುಧಾರಿತ ತಾಂತ್ರಿಕತೆ ಹಾಗೂ ಬೆಳೆ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ತೆಂಗು ಮತ್ತು ರಾಗಿ ಬೆಳೆ ಸಮಗ್ರ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಬಿ. ಎಸ್. ಬಸವರಾಜು, dean (ಕೃಷಿ) ಕೃಷಿಮಹಾವಿದ್ಯಾಲಯಹಾಸನ, ಡಾ. ಎ. ನಟರಾಜ ಪ್ರಾಧ್ಯಾಪಕರು (ತೋಟಗಾರಿಕೆ ವಿಭಾಗ) ಡಾ. ಭೈರಪ್ಪ ಪ್ರಾಧ್ಯಾಪಕರು (ಬೇಸಾಯ ಶಾಸ್ತ್ರ ವಿಭಾಗ) ಡಾ. ಮಂಜುನಾಥ್ ಸಹ ಪ್ರಾಧ್ಯಾಪಕರು (ಸಸ್ಯ ರೋಗ ಶಾಸ್ತ್ರ ವಿಭಾಗ) ಡಾ. ಸೌಮ್ಯ ಸಹ ಪ್ರಾಧ್ಯಾಪಕರು ( ಸಸ್ಯಕೀಟ ಶಾಸ್ತ್ರವಿಭಾಗ) ಆಗಮಿಸಿ ತೆಂಗು ಮತ್ತು ರಾಗಿ ಬೆಳೆಗಳ ಸುಧಾರಿತ ತಳಿಗಳ ಆಯ್ಕೆ, ಭೂಮಿ ಸಿದ್ಧತೆ, ಸಮತೋಲಿತ ಪೋಷಕಾಂಶ ನಿರ್ವಹಣೆ, ನೀರಾವರಿ, ಕಳೆ ನಿಯಂತ್ರಣ, ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು.


ತೆಂಗು ಬೆಳೆಯಲ್ಲಿ ಸಸಿಗಳ ಆಯ್ಕೆ, ಸೂಕ್ತ ಅಂತರ, ಸಾವಯವ ಗೊಬ್ಬರಗಳ ಬಳಕೆ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಕಪ್ಪು ತಲೆ ಹುಳು, ಕೆಂಪು ಮೂತಿ ಹುಳು, ಬಿಳಿ ನೊಣ ಹಾಗೂ ಮುಂತಾದ ಪ್ರಮುಖ ಕೀಟಗಳ ನಿರ್ವಹಣೆಯ ಬಗ್ಗೆ ತಿಳಿಸಲಾಯಿತು. ತೆಂಗಿನ ತೋಟದಲ್ಲಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಪದಾರ್ಥಗಳ ಬಳಕೆ ಹಾಗೂ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ನೀಡುವ ಅಗತ್ಯವನ್ನು ಒತ್ತಿ ಹೇಳಲಾಯಿತು. ರಾಗಿ ಬೆಳೆಗೆ ಸಂಬಂಧಿಸಿದಂತೆ ಉತ್ತಮ ಗುಣಮಟ್ಟದ ಬೀಜದ ಆಯ್ಕೆ, ಬೀಜೋಪಚಾರ, ಸೂಕ್ತ ಬಿತ್ತನೆ ಸಮಯ, ಸಾಲು ಬಿತ್ತನೆ, ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ನೀರಿನ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ರಾಗಿಯಲ್ಲಿ ಕಂಡುಬರುವ ಬೆಂಕಿ ರೋಗ ಮತ್ತು ಕೊಳೆ ರೋಗ ಸೇರಿದಂತೆ ಪ್ರಮುಖ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆಯ ಕುರಿತು ತಜ್ಞರು ರೈತರಿಗೆ ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ರೈತರು ತಮ್ಮ ಕೃಷಿ ಸಮಸ್ಯೆಗಳನ್ನು ತಜ್ಞರೊಂದಿಗೆ ಚರ್ಚಿಸಿ ಪರಿಹಾರೋಪಾಯಗಳನ್ನು ಪಡೆದುಕೊಂಡರು. ತೆಂಗು ಮತ್ತು ರಾಗಿ ಬೆಳೆಗಳಲ್ಲಿ ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ರೈತರ ಆದಾಯವನ್ನು ಹೆಚ್ಚಿಸಲು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಊರಿನ ಎಲ್ಲಾ ಗ್ರಾಮಸ್ಥರು ಸೇರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದರು.
ವಿಚಾರ ಸಂಕಿರಣವು ರೈತರಿಗೆ ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಪ್ರಾಯೋಗಿಕ ಹಾಗೂ ವೈಜ್ಞಾನಿಕ ಜ್ಞಾನವನ್ನು ಒದಗಿಸುವ ಮೂಲಕ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಯಿತು.

Continue Reading

Hassan

ಕ್ಯೂ. ಆರ್. ಕೋಡ್ ಬಳಕೆ: ವಿದ್ಯಾರ್ಥಿಗಳಿಗೆ ಸುಲಭವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುವ ಸೌಲಭ್ಯ

Published

on

ಹಾಸನ: ಕ್ಯೂ. ಆರ್. ಕೋಡ್ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಕಾಲೇಜಿನಲ್ಲಿ ಆರಂಭಿಸಲಾಗಿದೆ ಎಂದು ಆರ್.ಸಿ. ರಸ್ತೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಹೇಳಿದರು.


ನಗರದ ಆರ್.ಸಿ. ರಸ್ತೆ, ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕ್ಯೂ.ಆರ್. ಬಳಸಿ ಪ್ರಶ್ನೆ ಪತ್ರಿಕೆ ಪಡೆದುಕೊಳ್ಳಿ ಎಂಬ ಹೆಸರಿನ ನೂತನ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಬಹುತೇಕ ಸೌಲಭ್ಯಗಳು ಇಂದು ಡಿಜಿಟಲ್ ಆಗಿ ಮದಲಾಗುತ್ತಿದ್ದು, ನಮ್ಮ‌ ಕೈ ಬೆರಳಿನಲ್ಲಿ ವಿಶ್ವದ ಅನೇಕ ವಿಚಾರಗಳನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಮಾಹಿತಿ ಪಡೆದುಕೊಳ್ಳಲು ಇಂದು ಅನೇಕ ಮಾರ್ಗಗಳು ಇವೆ, ಶೈಕ್ಷಣಿಕ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಸುಲಭವಾಗಿ ಅವರುಗಳಿಗೆ ಮಾಹಿತಿ ಒದಗಿಸುವ ಕೆಲಸವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಬಹಳ ವರ್ಷಗಳಿಂದ ದಾಖಲೆ ರೂಪದಲ್ಲಿ ಇದ್ದ ಪ್ರಶ್ನೆ ಪತ್ರಿಕೆಗಳನ್ನು ಡಿಜಿಟಲ್ ರೂಪಕ್ಕೆ ರೂಪಾಂತರಿಸಿ ಇದೀಗ ಕೇವಲ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡುವ ಸೌಲಭ್ಯ ಪಡೆದುಕೊಳ್ಳಬಹುದು. ಪರೀಕ್ಷೆ ಬರೆಯುವ ವೇಳೆ ಹಳೆಯ ಪ್ರಶ್ನೆ ವಿದ್ಯಾರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ‌. ಹಾಗಾಗಿ ನಮ್ಮ ಕಾಲೇಜಿನ ಎಲ್ಲಾ ಬಿ.ಬಿ.ಎ., ಬಿ.ಕಾಂ., ಬಿ.ಸಿ.ಎ ಹಾಗೂ ಬಿ.ಎ. ವಿಭಾಗದ ಪ್ರಶ್ನೆ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಕ್ಯೂ.ಆರ್‌. ಕೋಡ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಇರುವ ಸೌಲಭ್ಯ ಬಳಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದರು.

ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಗ್ರಂಥಪಾಲಕ ಡಾ. ಮರಿರಾಜ ವಾಸುದೇವ್ ಸೇಡಂ ಮಾತನಾಡಿ, ಆಧುನಿಕ ಕಾಲ ಘಟಕ್ಕೆ ತಕ್ಕಂತೆ ಹಾಗೆಯೇ ಇಂದಿನ ಯುವ ವಿದ್ಯಾರ್ಥಿಗಳಿಗೆ ಓದಿಗೆ ಸಹಕಾರಿ ಮಾಡುವ ಸಲುವಾಗಿ ಪುಸ್ತಕ ರೂಪದಲ್ಲಿ ಇರುವ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತರಲಾಗುತ್ತಿದೆ. ಕಾಲೇಜಿನ ಗ್ರಂಥಾಲಯವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಅಧ್ಯಾಪಕರಾದ ಜಿ.ಆರ್. ಮೋಹನ್ ಕುಮಾರ್, ನಂದನ್ ಪಿ. ಸುರೇಶ್ ಕುಮಾರ್, ಡಾ.ಕಾಂತೇಶ್, ಉಪನ್ಯಾಸಕರಾದ ಲೋಕೇಶ್ ಹಾಗೂ ದಿಲೀಪ್ ಕುಮಾರ್ ಎಚ್.ಕೆ. ಹಾಜರಿದ್ದರು.

Continue Reading

Hassan

ವರ್ಡ್ ರೆಕಾರ್ಡ್ ಸೇರಿದ ಹಾಸನದ ಹಲಸು

Published

on

ಹಾಸನ: ಸಕಲೇಶಪುರ ತಾಲೋಕು ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ ಗ್ರಾಮದಲ್ಲಿ ಯುವರೈತ ಪ್ರತಾಪ್ ಕುಮಾರ್ ಎಚ್ ಬಿ ಬೆಳೆದ ಹಲಸು ಹಣ್ಣಿಗೆ ಪ್ರತಿಷ್ಠೆತ ವರ್ಡ್ ರೆಕಾರ್ಡ್ ಬುಕ್ ಸೇರಿದೆ.

ಸಕಲೇಶಪುರ ತಾಲೋಕಿಗೆ ಹೆಮ್ಮೆಯ ಸಂಗತಿಯಾಗಿದೆ.

Continue Reading

Hassan

ದಾರಿ ದೀಪದ ಕಂಬದಲ್ಲಿ ಸ್ವಿಚ್ ಬಾಕ್ಸ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ: ವಿದ್ಯುತ್ ಅವಘಡಕ್ಕೆ ಅಮಾಯಕ ಹಸು ಬಲಿ

Published

on

ಅರಸೀಕೆರೆ: ನಗರದ ಮಾರುತಿ ನಗರದಲ್ಲಿ ಸ್ವಿಚ್ ಬಾಕ್ಸ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ವಿದ್ಯುತ್ ಸೋರಿಕೆಯಾಗಿ ಅಮಾಯಕ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.


ಸ್ವಿಚ್ ಬಾಕ್ಸ್ ಅಳವಡಿಕೆ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಹೊಣೆ ಯಾರು? ಸೆಸ್ಕಾಂ ಇಲಾಖೆಯೋ ಅಥವಾ ನಗರಸಭೆಯೋ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಯಾರು ಹೊಣೆ?

ಪ್ರಸ್ತುತ ಮಳೆ ಬರುವ ಪರಿಸ್ಥಿತಿಯಲ್ಲಿ ವಿದ್ಯುತ್ ಸೋರಿಕೆಯಿಂದ ಹಸು ಸಾವನ್ನಪ್ಪಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದೇ ಸ್ಥಳದಲ್ಲಿ ಮಕ್ಕಳು, ವೃದ್ಧರು ಅಥವಾ ಸಾರ್ವಜನಿಕರು ಸಂಚರಿಸುವಾಗ ಇಂತಹ ಅವಘಡ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಹೊರುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ನಗರದ ವಿವಿಧೆಡೆ ಅಳವಡಿಸಲಾಗಿರುವ ವಿದ್ಯುತ್ ಸ್ವಿಚ್ ಬಾಕ್ಸ್‌ಗಳು ಹಾಗೂ ವಿದ್ಯುತ್ ಕಂಬಗಳ ಸುರಕ್ಷತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ಮಳೆ ನೀರು ವಿದ್ಯುತ್ ಸಂಪರ್ಕಗಳೊಂದಿಗೆ ಸಂಪರ್ಕಕ್ಕೆ ಬಂದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.

ತಕ್ಷಣ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಘಟನೆಯ ಕುರಿತು ಸೆಸ್ಕಾಂ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ವಿದ್ಯುತ್ ಸೋರಿಕೆಗೆ ನಿಖರ ಕಾರಣ ಪತ್ತೆಹಚ್ಚಬೇಕು. ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಲ್ಲದೆ, ನಗರದಾದ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಸ್ವಿಚ್ ಬಾಕ್ಸ್‌ಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಸಂಪರ್ಕಗಳನ್ನು ಪರಿಶೀಲಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅಮಾಯಕ ಹಸುವಿನ ಸಾವಿನ ಬಳಿಕವಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತವೆಯೇ ಅಥವಾ ಮತ್ತೊಂದು ಅವಘಡ ಸಂಭವಿಸುವವರೆಗೂ ಕಾಯುತ್ತವೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Continue Reading

Trending

error: Content is protected !!