Connect with us

Hassan

ವರ್ಡ್ ರೆಕಾರ್ಡ್ ಸೇರಿದ ಹಾಸನದ ಹಲಸು

Published

on

ಹಾಸನ: ಸಕಲೇಶಪುರ ತಾಲೋಕು ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ ಗ್ರಾಮದಲ್ಲಿ ಯುವರೈತ ಪ್ರತಾಪ್ ಕುಮಾರ್ ಎಚ್ ಬಿ ಬೆಳೆದ ಹಲಸು ಹಣ್ಣಿಗೆ ಪ್ರತಿಷ್ಠೆತ ವರ್ಡ್ ರೆಕಾರ್ಡ್ ಬುಕ್ ಸೇರಿದೆ.

ಸಕಲೇಶಪುರ ತಾಲೋಕಿಗೆ ಹೆಮ್ಮೆಯ ಸಂಗತಿಯಾಗಿದೆ.

Continue Reading

Hassan

ದಾರಿ ದೀಪದ ಕಂಬದಲ್ಲಿ ಸ್ವಿಚ್ ಬಾಕ್ಸ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ: ವಿದ್ಯುತ್ ಅವಘಡಕ್ಕೆ ಅಮಾಯಕ ಹಸು ಬಲಿ

Published

on

ಅರಸೀಕೆರೆ: ನಗರದ ಮಾರುತಿ ನಗರದಲ್ಲಿ ಸ್ವಿಚ್ ಬಾಕ್ಸ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ವಿದ್ಯುತ್ ಸೋರಿಕೆಯಾಗಿ ಅಮಾಯಕ ಹಸುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.


ಸ್ವಿಚ್ ಬಾಕ್ಸ್ ಅಳವಡಿಕೆ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಹೊಣೆ ಯಾರು? ಸೆಸ್ಕಾಂ ಇಲಾಖೆಯೋ ಅಥವಾ ನಗರಸಭೆಯೋ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಯಾರು ಹೊಣೆ?

ಪ್ರಸ್ತುತ ಮಳೆ ಬರುವ ಪರಿಸ್ಥಿತಿಯಲ್ಲಿ ವಿದ್ಯುತ್ ಸೋರಿಕೆಯಿಂದ ಹಸು ಸಾವನ್ನಪ್ಪಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಇದೇ ಸ್ಥಳದಲ್ಲಿ ಮಕ್ಕಳು, ವೃದ್ಧರು ಅಥವಾ ಸಾರ್ವಜನಿಕರು ಸಂಚರಿಸುವಾಗ ಇಂತಹ ಅವಘಡ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಹೊರುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ನಗರದ ವಿವಿಧೆಡೆ ಅಳವಡಿಸಲಾಗಿರುವ ವಿದ್ಯುತ್ ಸ್ವಿಚ್ ಬಾಕ್ಸ್‌ಗಳು ಹಾಗೂ ವಿದ್ಯುತ್ ಕಂಬಗಳ ಸುರಕ್ಷತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ಮಳೆ ನೀರು ವಿದ್ಯುತ್ ಸಂಪರ್ಕಗಳೊಂದಿಗೆ ಸಂಪರ್ಕಕ್ಕೆ ಬಂದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.

ತಕ್ಷಣ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಘಟನೆಯ ಕುರಿತು ಸೆಸ್ಕಾಂ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ವಿದ್ಯುತ್ ಸೋರಿಕೆಗೆ ನಿಖರ ಕಾರಣ ಪತ್ತೆಹಚ್ಚಬೇಕು. ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಲ್ಲದೆ, ನಗರದಾದ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಸ್ವಿಚ್ ಬಾಕ್ಸ್‌ಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಸಂಪರ್ಕಗಳನ್ನು ಪರಿಶೀಲಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅಮಾಯಕ ಹಸುವಿನ ಸಾವಿನ ಬಳಿಕವಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳುತ್ತವೆಯೇ ಅಥವಾ ಮತ್ತೊಂದು ಅವಘಡ ಸಂಭವಿಸುವವರೆಗೂ ಕಾಯುತ್ತವೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Continue Reading

Hassan

ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿ ಖದೀಮ ಪರಾರಿ

Published

on

ಆಲೂರು : ಮನೆಯಂಗಳದಲ್ಲಿ ಮುಂಜಾನೆ ಕಸಗುಡಿಸುತ್ತಿದ್ದ ಮಹಿಳೆಯ ಬಳಿ ಬಂದ ಅಪರಿಚಿ ತನೊಬ್ಬ ಕೊರಳಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕೆ.ಹೊಸ ಕೋಟೆಯಲ್ಲಿ ನಡೆದಿದೆ.


ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹೊಸಕೋಟೆ ಗ್ರಾಮದ ನಿವಾಸಿ ಜಗದಾಂಬ ಅವರು ಇದೇ ತಿಂಗಳ ಸೆ.27ರ ಮುಂಜಾನೆ ಮನೆ ಮುಂದೆ ಕಸ ಗುಡಿಸುತ್ತಿದಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದಿದ್ದಾರೆ. ಒಬ್ಬ ವ್ಯಕ್ತಿ ವಿಳಾಸ ಕೇಳುವ ನೆಪದಲ್ಲಿ ಜಗದಾಂಬ ರವರನ್ನು ಮಾತನಾಡಿಸುತ್ತಿದ್ದಾಗ ಬೈಕ್ ಹಿಂದೆ ಕುಳಿತಿದ್ದವ ಕೆಳಗಿಳಿದು ಬಂದು ಮಹಿಳೆಯ ಬಳಿ ಬಂದು ಕೊರಳಿಗೆ ಕೈ ಹಾಕಿ ಸರ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಮಾಂಗಲ್ಯ ಸರವನ್ನ ಕಿತ್ತುಕೊಳ್ಳುವ ರಭಸದಲ್ಲಿ ಕಿರಿಗೇಡಿಗಳು ಜಗದಾಂಬರವರನ್ನು ದೂರ ತಳ್ಳಿದ್ದಾರೆ ಸಂದರ್ಭದಲ್ಲಿ ತಲೆಗೆ ಮತ್ತು ಕೈ ಕಾಲಿಗೆ ಪೆಟ್ಟು ಬಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಆಲೂರು ಪೊಲೀಸರು ತನಿಖೆ ಮುಂದುವರಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Continue Reading

Hassan

ದಶಕಗಳ ಬೇಡಿಕೆಯಾಗಿದ್ದ ಚಿಕ್ಕಕಣಗಾಲು–ಹೊಸಳ್ಳಿ ನಡುವಿನ ಬಸ್ ಸಂಚಾರಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ

Published

on

ಆಲೂರು: ದಶಕಗಳ ಬೇಡಿಕೆಯಾಗಿದ್ದ ಚಿಕ್ಕಕಣಗಾಲು–ಹೊಸಳ್ಳಿ ನಡುವಿನ ಬಸ್ ಸಂಚಾರಕ್ಕೆ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಚಿಕ್ಕಕಣಗಾಲು ಗ್ರಾಮದಲ್ಲಿ ಚಾಲನೆ ನೀಡಿದರು.


ಈ ವೇಳೆ ಮಾತನಾಡಿದ ಶಾಸಕರು, ಈ ಮಾರ್ಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಚಿಕ್ಕಕಣಗಾಲ್, ಜನ್ನಾಪುರ, ಜೆ.ತಿಮ್ಮನಹಳ್ಳಿ, ಚಿ.ಹೊಸಳ್ಳಿ ಮತ್ತು ಟಿ. ಗುಡ್ಡೇನಹಳ್ಳಿ ಹಾಗೂ ಕುಪ್ಪೆ ಹೊಸಳ್ಳಿ ಭಾಗದ ಜನರು ಆಲೂರು ಹಾಸನ ನಗರಕ್ಕೆ ಬರಲು ಖಾಸಗಿ ವಾಹನಗಳನ್ನು ಅವಲಂಬಿಸಬೇಕಿತ್ತು. ಅನಿವಾರ್ಯವಾಗಿ ಮೈಲುಗಟ್ಟಲೆ ನಡಿಗೆಯಬೇಕಿತ್ತು. ವಿಶೇಷವಾಗಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಶಾಲಾ–ಕಾಲೇಜು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದರು. ಇದೀಗ ಸಾರಿಗೆ ಇಲಾಖೆಯ ಸಹಕಾರದಿಂದಾಗಿ ನೂತನ ಬಸ್ ಸಂಚಾರ ಆರಂಭವಾಗಿದ್ದು, ನೂರಾರು ವಿದ್ಯಾರ್ಥಿಗಳು ಹಾಗೂ ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ ಮೂಡಿದೆ ಎಂದ ಅವರು. ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಸುಗಮ ಪ್ರಯಾಣದ ವ್ಯವಸ್ಥೆ ಕಲ್ಪಿಸುವುದು ನಮ್ಮ ಮೊದಲ ಗುರಿ. ಈ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಹೊಸ ಸೇವೆಯ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಲೂರು ಬಸ್ ನಿಲ್ದಾಣ ಸಂಚಾರಿ ನಿಂಯಂತ್ರಕ ಯು.ಬಿ ಸಿದ್ದಯ್ಯ, ಮದ ಹಿರಿಯ ಮುಖಂಡ ಪರಮೇಶ್ವರಪ್ಪ, ಮಹೇಶ್ವರಯ್ಯ, ಚಂದ್ರಶೇಕ್ಕಕಣಗಾಲು ಹಾಲಿನ ಡೈರಿ ಅಧ್ಯಕ್ಷ ತೀರ್ಥ ಕುಮಾರ್, ಉಪಾಧ್ಯಕ್ಷ ಗುರು, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹರೀಶ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಚಿ.ಹೊಸಹಳ್ಳಿ ಗ್ರಾಮದ ಮುಖಂಡ ಬಸವರಾಜ್, ಗ್ರಾಮಸ್ಥರಾದ ಮಂಜು, ಪ್ರಭು, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ರಘು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೋಹನ್ ಕುಮಾರ್ ಸೇರಿದಂತೆ ಸಹ ಶಿಕ್ಷಕರು ವಿದ್ಯಾರ್ಥಿಗಳು ಶಾಲಾ ಕಾಲೇಜು ಮಕ್ಕಳು ಹಾಜರಿದ್ದರು.

ವರದಿ ಸತೀಶ್ ಚಿಕ್ಕಕಣಗಾಲು

Continue Reading

Trending

error: Content is protected !!