Hassan
ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಪಿಎಸ್ಐ ಧನರಾಜ್

ಹಾಸನ : ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಬಳಿ ಬೀಕರದುರಂತ ಪ್ರಕರಣ
ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಪಿಎಸ್ಐ ಧನರಾಜ್
ಟ್ರಕ್ ಬೈಕ್ ಗೆ ಡಿಕ್ಕಿಯಾಗೊ ಮೊದಲು ರಸ್ತೆಯಲ್ಲಿ ನಡೆದು ಹೋಗಿರೊ ಪಿಎಸ್ಐ ಧನರಾಜ್
ಕೇವಲ ಎರಡು ಸೆಕೆಂಡ್ ಅಂತರದಲ್ಲಿ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿಯಾದ ಟ್ರಕ್
ಭೀಕರ ದುರಂತದಲ್ಲಿ ಜಸ್ಟ್ ಮಿಸ್ ಆದ ಗೊರೂರು ಠಾಣೆಯ ಪಿಎಸ್ ಐ ಧನರಾಜ್
ಗಣೇಶೋತ್ಸವ ಹಿನ್ನೆಲೆಯಲ್ಲಿ ಭದ್ರತೆ ಗಾಗಿ ಕರ್ತವ್ಯದಲ್ಲಿದ್ದ ಧನರಾಜ್
ಒಂದು ಮಾರ್ಗದಲ್ಲಿ ಮೆರವಣಿಗೆ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಮಾರ್ಗದಲ್ಲಿ ವಾಹನ ತೆರಳಲು ಅವಕಾಶ ಮಾಡಿಕೊಟ್ಟಿದ್ದ ಪೊಲೀಸರು
ವಾಹನಗಳನ್ನ ಮುಂದೆ ಕಳಿಸಿ ಜಸ್ಟ್ ಮುಂದೆ ಹೋದ ಧನರಾಜ್
ಕ್ಷಣಮಾತ್ರದಲ್ಲಿ ಬೈಕ್ ಗೆ ಡಿಕ್ಕಿಯಾಗಿ ಜನರ ಮೇಲೆಹರಿದ ಟ್ರಕ್
Hassan
ಮೊಸಳೆ ಹೊಸಹಳ್ಳಿ ದುರಂತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಹಾಸನ: ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದಿದ್ದಾರೆ.
Hassan
ಮೊಸಳೆ ಹೊಸಳ್ಳಿ ಬಳಿ ಘೋರ ದುರಂತ ಪ್ರಕರಣ: ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ

ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಘೋರ ದುರಂತ ಪ್ರಕರಣ ಸಂಬಂಧಿಸಿದಂತೆ ಸ್ಥಳದಲ್ಲೇ ಬಿಗುವಿನ ವಾತಾವರಣ
ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಭಾಯಿಸಲು ಪೊಲೀಸರ ಹರ ಸಾಹಸ ಮಾಡುತ್ತಿದ್ದಾರೆ.
ಶಾಸನದಿಂದ ಹೊಳೆನರಸೀಪುರ ದ ಕಡೆಗೆ ಹೋಗುತ್ತಿದ್ದ ಕಂಟೇನರ್ ವಾಹನ ಚಾಲಕ ಭುವನೇಶ್‌ಗೂ ಗಂಭೀರ ಗಾಯವಾಗಿದೆ.
ಹೊಳೆನರಸೀಪುರ ತಾಲ್ಕನ ಕಟ್ಟೆಬೆಳಗುಲಿಯ ಚಾಲಕ ಭುವನೇಶ್, ಗಾಯಾಳು ಭುವನೇಶ್ ಗೆ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಹಾಸನ ತಾಲೂಕಿನ ಮೊಸಳೆಹೊಸಳ್ಲಿ ಬಳಿ ಘೋರ ದುರಂತ ಪ್ರಕರಣ , ಮೆರವಣಿಗೆ ಯಲ್ಲಿ ಬಾಗಿಯಾಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿ ಗಳ ದುರಂತ ಸಾವನ್ನಪ್ಪಿದ್ದಾರೆ.
ಮೊಸಳೆ ಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳ ಧಾರುಣ ಸಾವನ್ನಪ್ಪಿದ್ದಾರೆ.
Hassan
ಹಾಸನ | ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭಾರಿ ಅವಘಡ: ಏಳು ಮಂದಿ ಸಾ*ವು

ಹಾಸನ : ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭಾರಿ ಅವಘಡ ಸಂಭವಿಸಿದ್ದು, ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಸನ ತಾಲೂಕಿನ, ಮೊಸಳೆಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಈ ದುರಂತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಘಟನಾ ಸ್ಥಳಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
Hassan23 hours ago
ರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ
-
Hassan12 hours ago
ಹಾಸನ | ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭಾರಿ ಅವಘಡ: ಏಳು ಮಂದಿ ಸಾ*ವು
-
Hassan15 hours ago
ಸೆ. 14ಕ್ಕೆ ಶ್ರೀ ಕಾಳಿಕಾಂಬ ವಿವಿಧೋದ್ದೇಶ ಸಹಕಾರ ಸಂಘ (ನಿ) 18ನೇ ವಾರ್ಷಿಕ ಮಹಾಸಭೆ
-
Mandya21 hours ago
ಶ್ರೀರಂಗಪಟ್ಟಣ ದಸರಾ ಲೋಗೋ ಬಿಡುಗಡೆ
-
Chikmagalur14 hours ago
ಸೇವಾ ನ್ಯೂನತೆ| ಎಸ್ಬಿಐ-ವಿಮಾ ಕಂಪನಿ ವಿರುದ್ಧ ಆದೇಶ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು
-
Hassan14 hours ago
ಸಂಸದ ಶ್ರೇಯಸ್ ಪಟೇಲ್, ಜಿ.ಪಂ. ಸಿಇಒಗೆ ನಿಂದನೆ: ಶಿಕ್ಷಕಿ ಅಮಾನತ್ತು
-
Manglore19 hours ago
ಜಿಲ್ಲಾಮಟ್ಟದ ಖೋ-ಖೋ ಪಂದ್ಯಾವಳಿ: ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
-
Manglore16 hours ago
ಅಂಬಿಕಾ ಸಿಬಿಎಸ್ಇ ವಿದ್ಯಾರ್ಥಿಗಳು ರಾಜ್ಯಮಟ್ಟದಿಂದ ಝೋನಲ್ ಹಂತಕ್ಕೆ ಆಯ್ಕೆ ವಿಜ್ಞಾನ, ಗಣಿತ ಮಾದರಿ ಸ್ಪರ್ಧೆಯಲ್ಲಿ ಸಾತ್ವಿಕ್, ಮಂದಿರಾ ಕಜೆ ಪ್ರಥಮ