Connect with us

Chikmagalur

ಭವಿಷ್ಯ ನಿಧಿ, ಪಿಂಚಣಿ ಮೊತ್ತ, ಮಾಸಿಕ ಪಿಂಚಣಿಯನ್ನು ಬಡ್ಡಿ ಸಹಿತ ಪಾವತಿಸಬೇಕು: ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ

Published

on

ಚಿಕ್ಕಮಗಳೂರು: ಭವಿಷ್ಯ ನಿಧಿ, ಪಿಂಚಣಿ ಮೊತ್ತ ಹಾಗೂ ಮಾಸಿಕ ಪಿಂಚಣಿಯನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರು, ಸಹಾಯಕ ಭವಿಷ್ಯ ನಿಧಿ ಆಯುಕ್ತರ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ತೀರ್ಪು ನೀಡಿದ್ದು, ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಿದೆ.

ಸಾರಿಗೆ ಸಂಸ್ಥೆಯ ನಿವೃತ್ತ ಕಂಡಕ್ಟರ್, ನಗರದ ಗಾಂಧಿನಗರದ ನಿವಾಸಿ ನಾಗರತ್ನ ಬಾಯಿ ಅವರಿಗೆ ರೂ.75 ಸಾವಿರ ಭವಿಷ್ಯ ನಿಧಿ ಮೊತ್ತ, ಪಿಂಚಣಿ ಮೊತ್ತ ಹಾಗೂ ಮಾಸಿಕ ಪಿಂಚಣಿಯನ್ನು ನೀಡದೆ ಸೇವಾ ನ್ಯೂನತೆ ಎಸಗಿರುವ ಬಗ್ಗೆ 2024ರ ಡಿಸೆಂಬರ್.19 ರಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿತ್ತು.

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಭವಿಷ್ಯ ನಿಧಿ ಸಹಾಯಕ ಆಯುಕ್ತರು ನೀಡಬೇಕಾಗಿದ್ದ 75 ಸಾವಿರ ರೂ.ಗಳನ್ನು 2024ರ ಮೇ.7 ರಿಂದ ಅನ್ವಯವಾಗುವಂತೆ ಶೇ.10ರ ಬಡ್ಡಿ ಸಹಿತ ನಾಗರತ್ನ ಬಾಯಿ ಅವರಿಗೆ ಪಾವತಿಸುವಂತೆ ಹಾಗೂ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕರು 2025ರ ಸೆಪ್ಟಂಬರ್.10 ರಿಂದ ಈ ವರ್ಷದ ಸೆಪ್ಟಂಬರ್‌ವರೆಗೆ ಪಿಂಚಣಿ ಮೊತ್ತವನ್ನು ನೀಡುವಂತೆ ಮತ್ತು ಇದೇ ಅಕ್ಟೋಬರ್‌ನಿಂದ ಮಾಸಿಕ ಪಿಂಚಣಿಯನ್ನು ನೀಡುವಂತೆ ತೀರ್ಪಿತ್ತಿದೆಯಲ್ಲದೆ, ರೂ. 40 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ರೂ. 10 ಸಾವಿರ ನೀಡುವಂತೆ ಆದೇಶ ನೀಡಿದೆ.

ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ ಪ್ರೇಮಾ ಮತ್ತು ಮಂಜುನಾಥ ಎಂ.ಬಮ್ಮನಕಟ್ಟಿ ಇವರನ್ನು ಒಳಗೊಂಡ ಆಯೋಗವು ಈ ತೀರ್ಪು ನೀಡಿ ಸೇವಾ ನ್ಯೂನತೆಯನ್ನು ಎತ್ತಿ ಹಿಡಿದಿದೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಮಂಜುಳಾ ಕರ್ಲೇಕರ್ ಅವರು ವಾದ ಮಂಡಿಸಿದ್ದರು.

Continue Reading

Chikmagalur

ಚಿಕ್ಕಮಗಳೂರು: ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆ ಕಾರ್ಯ

Published

on

ಚಿಕ್ಕಮಗಳೂರು: ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, ಹುಂಡಿಯಲ್ಲಿ ಹಣದ ಜೊತೆಗೆ ತರಹೇವಾರಿ ಬೇಡಿಕೆಗಳ ಪತ್ರಗಳು ಪತ್ತೆಯಾಗಿವೆ.

ಕೆಲವು ಪತ್ರಗಳು ರಾಜಕೀಯ ಬೇಡಿಕೆಗಳನ್ನು ಒಳಗೊಂಡಿದ್ದರೆ, ಇನ್ನು ಕೆಲವು ಧರ್ಮಸ್ಥಳದ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯದ ನಿರೀಕ್ಷೆಯನ್ನು ವ್ಯಕ್ತಪಡಿಸಿವೆ.

ಕಳೆದ ಶನಿವಾರ ಅದ್ದೂರಿಯಾಗಿ ವಿಸರ್ಜನಾ ಮಹೋತ್ಸವ ನಡೆದಿದ್ದ ಹಿಂದೂ ಮಹಾಸಭಾ ಗಣಪತಿ ಹುಂಡಿಯಲ್ಲಿ ಇಂದು ಎಣಿಕೆ ಕಾರ್ಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಪತ್ತೆಯಾದ ನಾಲ್ಕು ಪತ್ರಗಳು ಎಲ್ಲರ ಗಮನ ಸೆಳೆದವು.

ಭಕ್ತರು ಗಣಪತಿಗೆ ಬೇಡಿಕೊಂಡ ಪತ್ರಗಳಲ್ಲೇನಿದೆ?

‘ಮುಂದಿನ ಸಲ ಸಿ.ಟಿ. ರವಿ ಅಣ್ಣ ಸಿಎಂ ಆಗಬೇಕು,

ಗಣಪ ಕೃಪೆ ಸಿಗಲಿ

* ಅದಿತ್ಯನಾಥ ಯೋಗಿ ಮುಂದಿನ ಪ್ರಧಾನಿಯಾಗಬೇಕು, ಗಣೇಶ ಕಾಪಾಡಪ್ಪ

* ಬುರುಡೆ ಗ್ಯಾಂಗ್ ಕಥೆ ಬುರುಡೆಯಾಗಲಿ, ಧರ್ಮ ಸದಾ ಬೆಳಗುತಿರಲಿ, ಸತ್ಯಕ್ಕೆ ಜಯವಾಗಲಿ

* ಸೌಜನ್ಯಾಗೆ ನ್ಯಾಯ ಸಿಗಲಿ, ಧರ್ಮಸ್ಥಳ ಟಾರ್ಗೆಟ್ ಆಗದಿರಲಿ

ಒಂದೇ ಹುಂಡಿಯಲ್ಲಿ ಇಂತಹ ವಿಭಿನ್ನ ಮತ್ತು ಸಂಕೀರ್ಣ ವಿಷಯಗಳ ಕುರಿತ ಬೇಡಿಕೆಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಇದನ್ನು ಯಾರೋ ಯೋಜನೆ ಮಾಡಿಕೊಂಡು ಚೀಟಿ ಬರೆದು ಹಾಕಿರಬಹುದು ಎಂದೂ ಹೇಳಲಾಗುತ್ತಿದೆ.

ಪ್ರಮುಖವಾಗಿ, ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವ ಸೌಜನ್ಯಾ ಪ್ರಕರಣದ ಬಗ್ಗೆ ಭಕ್ತರು ಗಣಪತಿಯಲ್ಲಿ ನ್ಯಾಯ ಕೇಳಿರುವುದು ಸಾರ್ವಜನಿಕವಾಗಿ ಈ ಪ್ರಕರಣಕ್ಕಿರುವ ಮಹತ್ವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ಸರಿಸುಮಾರು 60,000 ರೂ. ಹಣ ಸಂಗ್ರಹವಾಗಿದೆ ಎಂದು ಹಿಂದೂ ಮಹಾಸಭಾ ಪದಾಧಿಕಾರಿಗಳು ತಿಳಿಸಿದ್ದಾರೆ. ರಾಜಕೀಯ ಹಾಗೂ ಸೂಕ್ಷ್ಮ ವಿಷಯಗಳ ಕುರಿತು ಪತ್ರಗಳು ಪತ್ತೆಯಾಗಿರುವುದು ಇದೀಗ ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಮವಾಗಿದೆ.

Continue Reading

Chikmagalur

ಜಿಲ್ಲಾ ಬಿಜೆಪಿ ಸೇವಾ ಪ್ರಾಕ್ಷಿಕ ಅಭಿಯಾನ ಯಶಸ್ವಿ

Published

on

ಚಿಕ್ಕಮಗಳೂರು :  ಜಿಲ್ಲಾ ಬಿಜೆಪಿಯ ಸೇವಾ ಪ್ರಾಕ್ಷಿಕ ಅಭಿಯಾನ ಮತ್ತು ಕಾರ್ಯಾಗಾರ ಚಿಕ್ಕಮಗಳೂರಿನ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯ ಕಚೇರಿಯಲ್ಲಿ ಗುರುವಾರ ನಡೆಯಿತು.

ಭಾರತ ಮಾತೆ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಡಾ. ಸಿ.ಟಿ. ರವಿ ಮಾತನಾಡಿ, ಸೇವೆ ಮಾಡುವ ಉದ್ದೇಶವೇ ಸೇವಾ ಪ್ರಾಕ್ಷಿಕ ಅಭಿಯಾನ. ವಿಶ್ವದ ನಾಲ್ಕನೇ ಶಕ್ತಿಯಾಗಿದ್ದೇವೆ. ಪರವಾಲಂಬಿಯಾಗಿಸುವ ಮೂಲಕ ದೇಶಕ್ಕೆ ಪೆಟ್ಟು ಕೊಡುವ ಯತ್ನ ನಡೆಯುತ್ತಿದೆ. ಅದನ್ನು ಜಾಗೃಯಿಂದ ಎದುರಿಸಬೇಕು.

ಸ್ವದೇಶಿ ವಸ್ತುಗಳಿಗೆ ಒತ್ತು, ಸ್ವಚ್ಛತಾ ಆಂದೋಲನದಲ್ಲಿ ಸಮಾಜವನ್ನು ತೊಡಗಿಸಬೇಕು. ನರೇಂದ್ರ ಮೋದಿಯವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು.

ಕಾಂಗ್ರೆಸ್ ಗ್ಯಾರಂಟಿಗಳು ಜೀವನ ಪಂಕ್ಚರ್ ಮಾಡಿವೇ. ಜೊತೆಗೆ ಬ್ರಹ್ಮಾಂಡ ಸಾಲವನ್ನು ರಾಜ್ಯ ಸರ್ಕಾರ ಮಾಡಿರುವುದನ್ನು ಜನರಿಗೆ ತಿಳಿಸಬೇಕು. ಕೇಂದ್ರ ಸರ್ಕಾರದ ತೆರಿಗೆ ಕಡಿತಾದಿಂದಾಗಿರುವ ಲಾಭಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಕಾರ್ಯಕ್ರಮಗಳು, ನೀತಿಗಳನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸಗಳನ್ನು ಪಕ್ಷದ ಪ್ರತಿಯೊಬ್ಬರೂ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ಬಿ. ರಾಜಪ್ಪ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟಿಯಾನ್, ಮುಖಂಡ ವೇನಿಲ್ಲಾ ಭಾಸ್ಕರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್, ರಾಜೇಶ್ವರಿ ಉಪಸ್ಥಿತರಿದ್ದರು.

Continue Reading

Chikmagalur

ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇ*ಣು ಬಿಗಿದುಕೊಂಡು ಆತ್ಮಹ*ತ್ಯೆ

Published

on

ಕೊಪ್ಪ: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ನಿಲುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದ ಕೋಡ್ತಾಳ್‌ ನಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸುಶಾಂತ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಕೊಪ್ಪದ ಜಿಜೆಸಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಸುಶಾಂತ್‌ ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನೂ ಈ ಸಂಬಂಧ ಹರಿಹರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

Trending

error: Content is protected !!