Connect with us

Mysore

ರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ

Published

on

ಮೈಸೂರು: ರಾಜಕೀಯ ಪಕ್ಷಗಳು ಚುನಾವಣೆಗೆ ಮಾತ್ರ ಸೀಮಿತವಲ್ಲ. ಅವು ಜನಕಲ್ಯಾಣದ ಪರ್ಯಾಯ ಶಕ್ತಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅಭಿಪ್ರಾಯಪಟ್ಟರು.
ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೀನುಗಾರರ ವಿಭಾಗದ ವತಿಯಿಂದ ಕಾರ್ಯಕಾರಣಿ ಹಾಗೂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೈಸೂರು ಜಿಲ್ಲಾದ್ಯಂತ ಸುಮಾರು 10.000 ಮೀನುಗಾರರಿದ್ದಾರೆ. ಆದರೆ ಸ್ವಾತಂತ್ರ‍್ಯ ಪೂರ್ವ ಹಾಗೂ ಸ್ವಾತಂತ್ರ‍್ಯದ ನಂತರದಲ್ಲಿ ಮೀನುಗಾರರ ಕುಟುಂಬಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುಸ್ಥಿತಿಯಲ್ಲಿದ್ದಾರೆ. ಆಡಳಿತ ಪಕ್ಷದ ರಾಜಕೀಯ ಪಕ್ಷಗಳು ಸರ್ಕಾರದೊಂದಿಗೆ ಪೂರಕವಾಗಿ ಬದ್ಧತೆ ತೋರಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಗಟ್ಟಿಯಾಗುತ್ತವೆ ಎಂದರು.


ಮೊದಲನೇದಾಗಿ ಮೀನುಗಾರರು ಸರ್ಕಾರದ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದರು. ಕಳೆದ ತಿಂಗಳು ಮೀನುಗಾರರ ಕೆಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೀನುಗಾರರ ಕಚೇರಿಗೆ ಭೇಟಿಕೊಟ್ಟು ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಹಾಗೂ ಸವಲತ್ತಿನ ಬಗ್ಗೆ ಒಂದು ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು ಎಂದು ಸಭೆಗೆ ತಿಳಿಸಿದರು.
ಮೀನುಗಾರರು ತಮ್ಮ ವೃತ್ತಿಯ ಸಮಯದಲ್ಲಿ ಅಥಾಚಾರ್ಯವಾಗಿ ನಿಧನರಾದರೆ ಅಂತಹವರಿಗೆ 5 ಲಕ್ಷದವರೆಗೆ ವಿಮೆ ನೀಡಬೇಕೆಂದು ಸರ್ಕಾರಕ್ಕೆ ಹಾಕ್ಕೋತಾಯ ಮಾಡಿ ಮೀನುಗಾರರಿಗೆ ಮನೆಯನ್ನು ಕಟ್ಟಿಸಿಕೊಡಲು ಸಲಹೆಗಳನ್ನು ನೀಡಲಾಯಿತು.
ಜಿಲ್ಲಾ ಮೀನುಗಾರ ಘಟಕದ ಅಧ್ಯಕ್ಷ ಎಸ್.ಸಿದ್ದಯ್ಯ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ 250 ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ ಮಾಡಿ ಪ್ರಮಾಣ ವಚನವನ್ನು ಬೋಧಿಸಲಾಯಿತು.


ಮುಖಂಡರಾದ ಹಡತಲೆ ಮಂಜುನಾಥ್, ಶಿವಪ್ರಸಾದ್ ಎಂ., ಎನ್.ಆರ್. ಎಂ.ಮAಜು, ಸಾ.ಮ.ಯೋಗೇಶ್, ರಾಹುಲ್ ಕುಂಬರಹಳ್ಳಿ ಹಾಗೂ ಎಂಟು ವಿಧಾನಸಭಾ ಕ್ಷೇತ್ರದ ಮೀನುಗಾರರ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Continue Reading

Mysore

ಮಾಲ್ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾ*ವು

Published

on

ಮೈಸೂರು: ನಗರ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ನಲ್ಲಿ ಕಟ್ಟಡದಲ್ಲಿ ಕೆಲಸದ ಮಾಡುತ್ತಿದ್ದ ಕಾರ್ಮಿಕ ಕಟ್ಟಡದಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ನಡೆದಿದೆ.

ಘಟನೆಯಲ್ಲಿ ಟೆಕ್ನೀಷಿಯನ್ ಸುನೀಲ್‌(27) ಸ್ಥಳದಲ್ಲೇ ಮೃತಪಟ್ಟಿದ್ದರೆ, ಈತನ ರಕ್ಷಣೆಗೆ ಮುಂದಾದ ಚಂದ್ರು ಸಹ ಕೆಳಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಜಯಲಕ್ಷ್ಮಿಪುರಂ ನಲ್ಲಿರುವ ಬಿ.ಎಂ. ಹ್ಯಾಬಿಟೇಟ್‌ ಮಾಲ್‌ ಕಟ್ಟಡದ ನಾಲ್ಕನೇ ಹಂತಸ್ತಿನಲ್ಲಿ ಬೋರ್ಡ್ ತೆರವು ಮಾಡುವ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುನೀಲ್‌, ಕಟ್ಟಡದ ಮೇಲೆ ಅಳವಡಿಸಿದ್ದ ಪಿಒಪಿ ಮೇಲೆ ಕಾಲಿಟ್ಟ ಪರಿಣಾಮ ಪಿಒಪಿ ಕುಸಿದಿದೆ. ಈ ವೇಳೆ ಸುನೀಲ್, ರಾಡ್‌ನ ಸಹಾಯದಿಂದ ನೇತಾಡುತ್ತಿದ್ದು, ಸುನೀಲ್ ರಕ್ಷಣೆಗೆ ಮುಂದಾದ ಚಂದ್ರು ಕೂಡ ಪಿಒಪಿ ಮೇಲೆ ಕಾಲಿಟ್ಟಿದ್ದರಿಂದ ನಿಯಂತ್ರಣ ಕಳೆದುಕೊಂಡು ಇಬ್ಬರು ಕೆಳಗೆ ಬಿದ್ದಿದ್ದಾರೆ.

ಘಟನೆಯಲ್ಲಿ ಸುನೀಲ್‌ ಸ್ಥಳದಲ್ಲೇ ಮೃತಪಟ್ಟರೆ, ಚಂದ್ರು ಗಂಭೀರವಾಗಿ  ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ, ಮುಂದಿನ‌ ಕ್ರಮಕೈಗೊಂಡಿದ್ದಾರೆ.

Continue Reading

Mysore

ಮದ್ದೂರಿನ ಗಲಭೆ: ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎನ್ .ಚಲುವರಾಯಸ್ವಾಮಿ

Published

on

ಮಂಡ್ಯ : ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಮದ್ದೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಮದ್ದೂರಿನ ಘಟನಾ ಸ್ಥಳಕ್ಕೆ ತೆರಳಿ ಬಳಿಕ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಗಲಭೆ ನಡೆದ ತಕ್ಷಣ ಅಧಿಕಾರಿಗಳು 21 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ತನಿಖೆಯನ್ನು ಉನ್ನತ ಮಟ್ಟದಲ್ಲಿ ಎಲ್ಲಾ ರೀತಿಯಲ್ಲೂ ಪೊಲೀಸ್ ಇಲಾಖೆಯಿಂದ ವಿಚಾರಣೆ ನಡೆಸಲು ಐ.ಜಿ ಹಾಗೂ 8 ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಪೂರ್ಣ ವರದಿ ಸಿದ್ಧ ಪಡಿಸಿ ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮದ್ದೂರು ಗಣಪತಿ ವಿಸರ್ಜನೆ ವೇಳೆ‌ ಉಂಟಾಗಿರುವ ಗಲಭೆ ರಾಜಕೀಯ ಉದ್ದೇಶವಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು. ಯಾರನ್ನು ಓಲೈಕೆ ಮಾಡುವ ಪ್ರಶ್ನೆ ಇಲ್ಲಾ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.

ಮಂಡ್ಯ ಜಿಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ. ಕಾವೇರಿ ಹೋರಾಟಕ್ಕೆ ಹೆಸರುವಾಸಿಯಾಗಿದೆ. ಸರಿಯಲ್ಲ. ಧರ್ಮದ ಹೆಸರಿನಲ್ಲಿ ನಮ್ಮ ಸರ್ಕಾರ ರಾಜಕೀಯ ಮಾಡುವುದಿಲ್ಲ ಧಾರ್ಮಿಕ ಸಂಘಟನೆಗಳು ಯಾವುದೇ ರಾಜಕೀಯ ಪ್ರಚೋದನೆಗೆ ಒಳಗಾಗಬಾರದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ.ಜಿಲ್ಲಾಧಿಕಾರಿ ಡಾ. ಕುಮಾರ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ನಂದಿನಿವಕೆ.ಆರ್ ಉಪಸ್ಥಿತರಿದ್ದರು.

Continue Reading

Mysore

ಮೈಸೂರು: ಚಾಮುಂಡಿ ಚಲೋ, ಕೋಮು ಗಲಭೆ ಸೃಷ್ಟಿಸದಿರಿ ಜಾಥಾಗಳಿಗೆ ಅನುಮತಿ ನಿರಾಕರಣೆ

Published

on

ಮೈಸೂರು: ದಸರಾ ಮಹೋತ್ಸವ ಉದ್ಘಾಟನ್ನು ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ವಿಚಾರವಾಗಿ ಎರಡು ಸಂಘಟನೆಗಳು ಹಮ್ಮಿಕೊಂಡಿದ್ದ ಕಾಲ್ನಡಿಗೆಗಳಿಗೆ ಮೈಸೂರು ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿತ್ತು. ಮುಷ್ತಾಕ್ ಅವರನ್ನು ಬೆಂಬಲಿಸಿ ದಲಿತ ಮಹಾಸಭಾ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿತ್ತು. ಮಂಗಳವಾರ ಬೆಳಗ್ಗೆ ಎರಡು ಸಂಘಟನೆಗಳು ಹಮ್ಮಿಕೊಂಡಿರುವ ಚಲೋ ಮೆರವಣಿಗೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.

ದಸರಾ ಮಹೋತ್ಸವ ವೇಳೆಯಲ್ಲಿ ಈ ಎರಡು ಪರ- ವಿರೋಧ ಮೆರವಣಿಗೆಯಿಂದ ಕಾನೂನು- ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬುದನ್ನು ಮನಗಂಡು ಅನುಮತಿ ನಿರಾಕರಣೆ ಮಾಡಲಾಗಿದೆ. ಹಿಂದೂ ಜಾಗರಣ ವೇದಿಕೆಯು ಸೆ. 9 ರಂದು ಬೆಳಗ್ಗೆ 7.30 ಕ್ಕೆ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿತ್ತು. ಅದೇ ಸ್ಥಳದಲ್ಲಿ ಬೆ.7.30ಗಂಟೆಗೆ ದಲಿತ ಮಹಾ ಸಭಾ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ನಡೆಸಲು ನಿರ್ಧರಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಎರಡು ಸಂಘಟನೆಗಳು ಮಂಗಳವಾರ ಬೆಳಗ್ಗೆ ಚಾಮುಂಡಿ ಬೆಟ್ಟ ಚಲೋ ನಡೆಸಲು ಅನುಮತಿ ಕೇಳಿದ್ದು, ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದರು.

Continue Reading

Trending

error: Content is protected !!