Connect with us

Hassan

ಹಾಸನ: ಸರ್ಕಾರಿ ನೌಕರರ ಕಾಲವಲ್ಲ, ಉದ್ಯಮದಾರರ ಕಾಲ

Published

on

ಹಾಸನ: “ಪ್ರಸ್ತುತದಲ್ಲಿ ಇದು ಸರಕಾರಿ ನೌಕರರ ಕಾಲವಲ್ಲ. ಸ್ವಂತ ಉದ್ಯೋಗ ಆರಂಭಿಸಲು ಮುಂದಾಗುವವರಿಗೆ ಇದು ಸೂಕ್ತ ಕಾಲವಾಗಿದೆ. ಸರ್ಕಾರ ನೀಡುತ್ತಿರುವ ಯೋಜನೆಗಳ ಸದುಪಯೋಗ ಪಡೆದು ರೈತರು ಹಾಗೂ ಯುವಕರು ಕಿರು ಉದ್ಯಮಗಳತ್ತ ಹೆಜ್ಜೆಯಿಡಬೇಕು” ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೆಪೆಕ್ ಲಿಮಿಟೆಡ್ ಇವರ ಜಂಟಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರಿ ನೌಕರರ ಕಾಲ ಇದಲ್ಲ. ಏನಿದ್ದರೂ ಉದ್ಯಮಿದಾರರ ಕಾಲ, ಫಲಾನುಭವಿಗಳಿಗೆ ಇದರ ಸದುಪಯೋಗ ಪಡೆದು ಕೊಳ್ಳುಬೇಕು. ಈ ಸ್ಕಿಂ ನಲ್ಲಿ ಲೋನ್ ಪಡೆಯಬೇಕೆಂದು ಹೇಳಿದಾಗ ಅವರಿಗೆ ಸಹಾಯ ಮಾಡಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸ ಇಲಾಖೆಯವರು ಮಾಡಬೇಕು. ದೊಡ್ಡ ದೊಡ್ಡ ಉದ್ಯಮ ಬೇರೆ, ಲೋಕಲ್ ಉದ್ಯಮಿಗೆ ಹೆಚ್ಚಿನ ಪವರ್ ಇರುತ್ತದೆ ಎಂದರು.

ಸ್ತ್ರೀ ಶಕ್ತಿ ಗುಂಪುಗಳು ಇನ್ನು ವಯಕ್ತಿಕ ಅನೇಕ ಸಂಸ್ಥೆಗಳು ಚನ್ನಾಗಿ ವ್ಯಾಪಾರ, ವ್ಯವಹಾರ ಮಾಡುತ್ತಾರೆ. ವ್ಯವಸ್ಥಿತವಾಗಿ ಸರಕಾರದ ಸಾಲ ತೆಗೆದುಕೊಂಡು ಶಿಸ್ತು ಬದ್ಧವಾಗಿ ಮಾಡಿದರೇ ಅದರಲ್ಲಿ ಯಶಸ್ವು ಕಾಣಬಹುದು ಎಂದರು. ರೈತರಿಗೆ ಬರೀ ಕೃಷಿಯಲ್ಲೇ ತೃಪ್ತಿ ಸಾಧಿಸುವುದು ಕಷ್ಟ. ಮಾರುಕಟ್ಟೆಯಲ್ಲಿ ಒಳ್ಳೆಯ ಧರ ಸಿಗದಿರುವುದು, ಬೆಳೆ ರೋಗಗಳಿಗೆ ತುತ್ತಾಗುವುದು ಮುಂತಾದ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳು ರೈತರಿಗೆ ಬಲ ತುಂಬುತ್ತವೆ ಎಂದು ಹೇಳಿದರು.

ದೊಡ್ಡ ಉದ್ಯಮಗಳಿಗಿಂತ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಶಕ್ತಿ ಇದೆ. ಸ್ವಸಹಾಯ ಗುಂಪುಗಳು ಹಾಗೂ ವೈಯಕ್ತಿಕ ಸಂಸ್ಥೆಗಳು ಸರ್ಕಾರದ ಸಾಲವನ್ನು ಶಿಸ್ತಿನಿಂದ ಪಡೆದು ವ್ಯವಹಾರ ಮಾಡಿದರೆ ಖಂಡಿತ ಯಶಸ್ಸು ಸಾಧಿಸಬಹುದು ಎಂದು ಅವರು ತಿಳಿಸಿದರು.

Continue Reading

Hassan

ವಿವಿಧ ಸಮಸ್ಯೆಗಳ ಬಗ್ಗೆ ದೂರು: ಭುವನಹಳ್ಳಿ ಗೆ ಶಾಸಕ ಸ್ವರೂಪ್ ಭೇಟಿ, ಪರಿಶೀಲನೆ

Published

on

ಹಾಸನ: ಭುವನಹಳ್ಳಿ ಗ್ರಾಮದಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಇಂದು ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದಲ್ಲಿ ಪ್ರಮುಖವಾಗಿ ಸ್ಮಶಾನ ಜಾಗಕ್ಕೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ. ಹೊಸದಾಗಿ ಜಾಗ ಗುರುತು ಮಾಡಿ ಸ್ಮಶಾನಕ್ಕೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.

ಬಳಿಕ ಸುರಕ್ಷತಾ ಹಿತ ದೃಷ್ಟಿಯಿಂದ ಭುವನಹಳ್ಳಿ ಕೆರೆ ಬದಿಗೆ ಇದಕ್ಕೂ ತಡೆಗೋಡೆ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡು ಆದಷ್ಟು ಬೇಗ ಕಾಮಗಾರಿ ಮುಗಿಸಿ ಕೊಡಲಾಗುವುದು ಎಂದು ಸೂಚನೆ ನೀಡಿದರು.

Continue Reading

Hassan

ಓಪನ್ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್‌

Published

on

ಹಾಸನ: ಇತ್ತಿಚೇಗೆ ಅರಕಲಗೂಡಿನಲ್ಲಿ ನಡೆದಂತಹ ಓಪನ್ ಕರಾಟೆ ಚಾಂಪಿಯನ್‌ ಶಿಪ್‌ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ 50 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಕುಮಠೆ ಮತ್ತು ಕಥಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ 100 ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದು ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ .

ಕರಾಟೆ ತರಬೇತುದಾರರಾದ ನಟರಾಜ್ ಮತ್ತು ಸೂರ್ಯ ರವರ ಪರಿಶ್ರಮ ಹಾಗೂ ಮಕ್ಕಳ ಈ ಸಾಧನೆಯನ್ನು ಶಾಲೆಯ ಕಾರ್ಯದರ್ಶಿ ಸುನಿಲ್ , ಪ್ರಾಂಶುಪಾಲರಾದ ಹೇಮಲಕ್ಷ್ಮಿಯವರು ಹಾಗೂ ಶಿಕ್ಷಕವೃಂದದವರು ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .

Continue Reading

Hassan

ರೈಲ್ವೆ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆ: ಶಾಸಕ ಹೆಚ್.ಪಿ. ಸ್ವರೂಪ್ ತುರ್ತು ಪರಿಶೀಲನೆ, ಸೂಚನೆ

Published

on

ಹಾಸನ: ರೈಲ್ವೆ ಇಲಾಖೆಯ ರಾಜಘಟ್ಟ ಸಮೀಪದ ಲೋಡಿಂಗ್ ಲಾರಿಗಳಿಗೆ ಶೀಟ್ ಅಳವಡಿಸುವ ಕಾಮಗಾರಿಯಿಂದ ಸ್ಥಳೀಯರಿಗೆ ಅಪಾರ ತೊಂದರೆ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಂಗಳವಾರದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು.

ಸ್ಥಳೀಯರ ಪ್ರಕಾರ, ರೈಲ್ವೆ ಕಾಮಗಾರಿಯಿಂದ ಸುತ್ತಮುತ್ತಲಿನ ಎಂಟು ಹಳ್ಳಿಗಳ ಜನತೆಗೆ ತೊಂದರೆ ಉಂಟಾಗಿದೆ. ಕೈಗಾರಿಕಾ ಪ್ರದೇಶಕ್ಕೆ ತೆರಳುವ ಕಾರ್ಮಿಕರು, ನಗರ ಪ್ರದೇಶ ಮತ್ತು ಬೈಪಾಸ್ ರಸ್ತೆಯಿಂದ ಸಂಚಾರ ನಡೆಸುವ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳದಲ್ಲಿಯೇ ಜನರ ಅಹವಾಲುಗಳನ್ನು ಆಲಿಸಿದ ಶಾಸಕ ಸ್ವರೂಪ್, ತಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಪರವಾಗಿ ಕಟುವಾಗಿ ಮಾತಾಡಿ, ಕಾಮಗಾರಿ ತಕ್ಷಣ ನಿಲ್ಲಿಸಬೇಕು ಎಂದು ಸೂಚಿಸಿದರು.

ಇದಲ್ಲದೆ, “ಈ ಸಮಸ್ಯೆಯನ್ನು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ನಿಯೋಗದ ಮೂಲಕ ಮನವಿ ಸಲ್ಲಿಸಲಾಗುವುದು. ಅದುವರೆಗೆ ಯಾವುದೇ ರೀತಿಯ ಕಾಮಗಾರಿ ಮುಂದುವರಿಯಬಾರದು” ಎಂದು ಶಾಸಕರು ಸ್ಪಷ್ಟ ಸೂಚನೆ ನೀಡಿದರು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದಂತಹ ಶ್ರೀ ವಿ.ಸೋಮಣ್ಣ ಅವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಅಲ್ಲಿಯ ವರೆಗೆ ಯಾವುದೇ ಕಾಮಗಾರಿ ಮಾಡಕೂಡದು ಎಂದು ಸೂಚಿಸಿದರು.

Continue Reading

Trending

error: Content is protected !!