Special
ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋದರೆ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು ಎಂದು ಸರ್ಕಾರದ ಸುಗ್ರೀವಾಜ್ಞೆ
 
																								
												
												
											ಯಾವುದೇ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ರೀತಿಯ ಮುಂಗಡ ಹಣ ಕೆಳದೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ಸರ್ಕಾರವು ಸುಗ್ರೀವಾಜ್ಞೆ ನೀಡಿದೆ. ಅದೇ ರೀತಿ ಇದನ್ನು ತಪ್ಪಿದಲ್ಲಿ ರೂ. 1 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲಾಗುವುದೆಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಕೇವಲ ರಸ್ತೆ ಅಪಘಾತ ಅಲ್ಲದೆ ಸುಟ್ಟ ಗಾಯ, ಹಲ್ಲೆಯಿಂದಾಗಿ ಗಾಯ, ವಿಷಪ್ರಾಶನ ಸೇರಿದಂತೆ ಇತ್ಯಾದಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದವರಿಗೆ ತುರ್ತು ಚಿಕಿತ್ಸೆ ನೀಡಬೇಕು.
ಅಪಘಾತಕ್ಕೊಳಗಾದ ಅಥವಾ ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸಲು ಸಂಬಂಧಿಸಿದ ತುರ್ತು ಚಿಕಿತ್ಸೆಯನ್ನು ಆಸ್ಪತ್ರೆಯು ತಕ್ಷಣದ ವೈದ್ಯಕೀಯ ತಪಾಸಣೆ ಸೇವೆ ಮತ್ತು ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ಅಗತ್ಯವೆಂದು ಪರಿಗಣಿಸಿ ಒದಗಿಸಿಕೊಡುವುದು ಕಡ್ಡಾಯ.

ಒಂದು ವೇಳೆ ಅಗತ್ಯವಿರುವ ಸೌಲಭ್ಯಗಳು ಕೊರತೆಯಿದ್ದಲ್ಲಿ, ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡುವುದಕ್ಕಿಂತ ಮೊದಲು ಕನಿಷ್ಠ ಪಕ್ಷ ಪ್ರಥಮ ಚಿಕಿತ್ಸೆ ನೀಡಬೇಕು ಹಾಗೂ ವೈದ್ಯಕೀಯ ವಿವರಗಳೊಂದಿಗೆ ಸ್ಥಳಾಂತರಿಸಬೇಕಾಗಿ ಎಂದು ಆರೋಗ್ಯ ಇಲಾಖೆಯು ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ.
ಅಪಘಾತದಲ್ಲಿ ದಿನಾಂಕದಿಂದ 7 ದಿನಗಳವರೆಗೆ ₹1.50 ಲಕ್ಷ ಮೌಲ್ಯದ ಯಾವುದೇ ಗೊತ್ತು ಪಡಿಸಿದ ಆಸ್ಪತ್ರೆಯಲ್ಲಿ ನಗದು ಚಿಕಿತ್ಸೆಗೆ ಅರ್ಹರು:
ಹೌದು, ಯಾವುದೇ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರೆ, ಅಂತವರಿಗೆ ಯಾವುದೇ ಗೊತ್ತು ಪಡಿಸಿದ ಆಸ್ಪತ್ರೆಯಲ್ಲಿ ಅಪಘಾತ ದಿನಾಂಕದಿಂದ 7 ದಿನಗಳವರೆಗೆ ₹1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಅಗತ್ಯವಿರುವ ಹಣವನ್ನು ಮೋಟಾರು ವಾಹನ ಅಪಘಾತ ನಿಧಿಯಿಂದ ಮರುಪಾವತಿ ಮಾಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.
Special
ಮಕ್ಕಳ ಸಾಹಿತ್ಯ ರಚನೆ ಉತ್ತೇಜಿಸಲು 10 ಸಾವಿರ ರೂ. ಸಹಾಯಧನ : ಬೇಗ ಅರ್ಜಿ ಸಲ್ಲಿಸಿ
 
														ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯ ರಚನೆಯನ್ನು ಉತ್ತೇಜಿಸುವ ಸಲುವಾಗಿ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಸಾಹಿತ್ಯ ಅಷ್ಟೇ ಅಲ್ಲದೆ ಉದಯೋನ್ಮುಖ ಬರಹಗಾರರಿಂದ, ಕಥೆ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನ, ಕವಿತೆ ಹಾಗೂ ಕಾದಂಬರಿ ಬರೆಯುವಂತ ಸಾಹಿತಿಗಳಿಂದಲೂ ಕೂಡ ಮೂಲ ಬರಹಗಳನ್ನು ಆಹ್ವಾನಿಸಿದೆ.
ಇಂತಹ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವಂತಹ ಸಾಹಿತಿಗಳು ಒಂದು ಮಾದರಿ ಮತ್ತು ಇತರೆ ವಿವರಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾಗುವಂತಹ ಸಾಹಿತಿಗಳಿಗೆ ಗರಿಷ್ಟ ಹತ್ತು ಸಾವಿರ ರೂಪಾಯಿಯವರೆಗ ಫೆಲೋಷಿಪ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಮಾಹಿತಿ :
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಗೂಗಲ್ ಫಾರ್ಮ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
ಗೂಗಲ್ ಫಾರಂ ಲಿಂಕ್ – https://forms.gle/zdy9nKeboxB2kuAm7
ಅರ್ಜಿ ಸಲ್ಲಿಸುವವರು ನವೆಂಬರ್ 30ನೇ ತಾರೀಖಿನ ಒಳಗಾಗಿ ಸಲ್ಲಿಸಬೇಕು.
Special
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಕ್ಷಣಗಣನೆ ಆರಂಭ
 
														KSP PC Recruitment 2025 : ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ, ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿದ್ದು ಇದರ ಮಾಹಿತಿ ಇಲ್ಲಿದೆ.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಂಬಂಧ ನಡೆಯುತ್ತಿರುವಂತಹ ನಿರ್ಬಂಧನೆಯಿಂದಾಗಿ ನೇಮಕಾತಿ ತಡವಾಗಿದ್ದು, ಶೀಘ್ರದಲ್ಲಿಯೇ ಸಾವಿರಾರು ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಕರ್ನಾಟಕ ಪೊಲೀಸ್ ಇಲಾಖೆಯು ತಿಳಿಸಿದೆ.
ಕೆಲವೇ ದಿನಗಳಲ್ಲಿ 2,000ಕ್ಕೂ ಅಧಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಪೊಲೀಸ್ ಇಲಾಖೆಯು ಅಧಿಸೂಚನೆ ಹೊರಡಿಸಲಿದೆ.

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಅರ್ಹತೆ ಮತ್ತು ವಿವಿಧ ಮಾಹಿತಿ :
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇವಲ ದ್ವಿತೀಯ ಪಿಯುಸಿ ಪಾಸ್ ಆಗಿದ್ದರೆ ಸಾಕು. ವಯೋಮಿತಿ ಅರ್ಹತೆ 18 ರಿಂದ 25 ವರ್ಷ ಇರಬೇಕು.
ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯಲಿದೆ?
ನೇಮಕಾತಿಯ ಅಧಿಸೂಚನೆ ಹೊರಡಿಸಿದ ನಂತರ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳಿಗೆ, ದೈಹಿಕ ಸಾಮರ್ಥ್ಯ ಹಾಗೂ ಮೆಡಿಕಲ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಈ ನೇಮಕಾತಿಗೆ ಸಂಬಂಧಿಸಿದಂತೆ ಮುಂದಿನ ಅಪ್ಡೇಟ್‌ಗಳಿಗಾಗಿ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
Special
ಕರ್ನಾಟಕ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ : ಕರ್ನಾಟಕ ಸರ್ಕಾರದಿಂದ ಅರ್ಜಿ ಆಹ್ವಾನ
 
														Karnataka Mahtama Gandhi Seva Prashasti : ತಮ್ಮ ಜೀವನದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವಂತಹ ಅರ್ಹ ಸಾಧಕರನ್ನು ಮತ್ತು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಗೆ ಅರ್ಜಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳನ್ನು ನೋಡುವುದಾದರೆ, ಸಾರ್ವಜನಿಕರಿಗೆ 60 ವರ್ಷ ತುಂಬಿರಬೇಕು ಹಾಗೂ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವುದಾದರೆ 25 ವರ್ಷಗಳು ತುಂಬಿರಬೇಕು.
ಸಾರ್ವಜನಿಕ ಜೀವನದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳಾದ, ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿ ವಸ್ತು ಬಳಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಾರ, ಈ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ನಾಮನಿರ್ದೇಶನ ಕೂಡ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ಮಾಹಿತಿ :
ಅರ್ಜಿ ಸಲ್ಲಿಸುವವರು ಸೆಪ್ಟೆಂಬರ್ 19, 2025 ಸಾಯಂಕಾಲ 5:30ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ಇ-ಮೇಲ್ ಗೆ ಅರ್ಜಿ ಸಲ್ಲಿಸಬೇಕು.
ವಿಳಾಸ : ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು-560 001 ಅಥವಾ
ಇ-ಮೇಲ್ : [email protected]
- 
																	   Chikmagalur9 hours ago Chikmagalur9 hours agoಚಾರ್ಮಾಡಿಯಲ್ಲಿ ಸರಣಿ ಅಪಘಾತ 
- 
																	   Hassan2 hours ago Hassan2 hours agoಸಕಲೇಶಪುರ: ಹುರುಡಿ ಶಾಲೆಯಲ್ಲಿ ಸಂಭ್ರಮದ ಶಿಕ್ಷಕರ ದಿನಾಚರಣೆ 
- 
																	   Chamarajanagar12 hours ago Chamarajanagar12 hours agoಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರು ಸಾ*ವು 
- 
																	   Kodagu3 hours ago Kodagu3 hours agoವಿರಾಜಪೇಟೆ| DJ ನಿಯಮ ಉಲ್ಲಂಘನೆ : FIR ದಾಖಲು 
- 
																	   National22 minutes ago National22 minutes ago5 ವರ್ಷದಲ್ಲಿ BCCI ಬ್ಯಾಂಕ್ ಬ್ಯಾಲೆನ್ಸ್ 20 ಸಾವಿರ ಕೋಟಿ ರೂ.ಗೂ ಹೆಚ್ಚಳ 
- 
																	   Hassan23 hours ago Hassan23 hours agoಸ್ಕಾಲರ್ಸ್ ಇಂಟರ್ನ್ಯಾಷನಲ್ ವಿದ್ಯಾರ್ಥಿಗಳಿಂದ ಗುರುಗಳಿಗೆ ಹೃದಯಸ್ಪರ್ಶಿ ನಮನ 
- 
																	   Hassan12 hours ago Hassan12 hours agoಗಂಧದ ಕೋಠಿ ಕಾಲೇಜು ಪಕ್ಕ ಅಪರಿಚಿತ ವ್ಯಕ್ತಿ ಶ*ವ ಪತ್ತೆ 
- 
																	   Mysore2 hours ago Mysore2 hours agoಮೈಸೂರು: ಗಾಂಜಾ ಶೀನಪ್ಪ ಬಂಧನ: 14 ಕೆ.ಜಿ.ಗಾಂಜಾ ವಶ 

 
											 
											 
											 
											