Chikmagalur
ಅನ್ನಪೂರ್ಣೇಶ್ವರೀ ಅಮ್ಮನವರಿಗೆ ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ
ಕಳಸ: ತಾಲೂಕಿನ ಪುರಾತನ ದೇವಾಲಯವಾದ ಹೊರನಾಡಿನ ಅದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿಯ ಅಂಗವಾಗಿ ಇಂದು ಜಗನ್ಮಾತೆಗೆ ಗಜಾರೂಢಾ ಬ್ರಹ್ಮಚಾರಿಣೀ
ಅಲಂಕಾರಯುಕ್ತ ಪೂಜೆ ನೆರವೇರಿಸಲಾಯಿತು.

ನವರಾತ್ರಿ ದ್ವಿತೀಯ ದಿನದ ಪೂಜಾ ಕಾರ್ಯಕ್ರಮದ ಅಂಗವಾಗಿ ಇಂದು ಅಮ್ಮನವರಿಗೆ ಬೆಳಿಗ್ಗೆ 06-30ರಿಂದ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀ ದೇವಿಭಾಗವತಪಾರಾಯಣ, ಕುಂಕುಮಾರ್ಚನೆ ಮತ್ತುಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ಹಾಗೂಪೂರ್ಣಾಹುತಿ ಪೂಜಾ ಕಾರ್ಯಕ್ರಮಗಳು ನೆರವೇರಿತು.
ಬೆಳಿಗ್ಗೆ 11 ರಿಂದ 1ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಿದ್ವಾನ್ ಜಿ.ಎಂ.ಸುನೀಲ್ ಕುಮಾರ್ ಮತ್ತು ತಂಡದವರು, ಶಿವಮೊಗ್ಗ, ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮವು ನೆರವೇರಲಿದೆ.
ಸಂಜೆ 06-30 ರಿಂದ ರಾತ್ರಿ 09-00 ಗಂಟೆಯವರೆಗೆ ವಿದುಷಿ ಸ್ಮಿತಾ ಮಾಧವಾಸ್, ವರ್ಣ ಆರ್ಟ್ಸ್ ಹೈದರಾಬಾದ್ ಇವರಿಂದ ಶಾಸ್ತ್ರೀಯ ಸಂಗೀತ ಮತ್ತು ಭರತ ನಾಟ್ಯ ಕಾರ್ಯಕ್ರಮಗಳು ನಡೆಯಲಿದೆ.
ವರದಿ: ಪ್ರೀತಮ್ ಹೆಬ್ಬಾರ್
Chikmagalur
ಚಿಕ್ಕಮಗಳೂರಿನಲ್ಲಿ ಅ. 15ರಿಂದ ಶಾಲಾ ಪ್ರತಿಭಾ ಪರೀಕ್ಷೆಗಳು
ಚಿಕ್ಕಮಗಳೂರು : ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 2026–27ನೇ ಸಾಲಿನ ಶಾಲಾ ಪ್ರತಿಭಾ ಪರೀಕ್ಷೆಗಳನ್ನು ಅಕ್ಟೋಬರ್ 15 ಮತ್ತು 16ರಂದು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಬಾಲಪ್ರತಿಭೆ, ಕಿಶೋರಪ್ರತಿಭೆ ಹಾಗೂ ಯುವಪ್ರತಿಭೆ ವಿಭಾಗಗಳ ಅಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಬಾಲಪ್ರತಿಭೆ ವಿಭಾಗದಲ್ಲಿ 8ರಿಂದ 14 ವರ್ಷ ವಯೋಮಾನದವರು ಹಾಗೂ ಕಿಶೋರಪ್ರತಿಭೆ ವಿಭಾಗದಲ್ಲಿ 14ರಿಂದ 18 ವರ್ಷ ವಯೋಮಾನದವರು ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಿಗದಿತ ನಿಯಮಗಳನ್ನು ಪಾಲಿಸಬೇಕು. ವಿವಿಧ ಕಲಾ ಪ್ರಕಾರಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಕಲಾಸಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಅಕ್ಟೋಬರ್ 15ರಂದು ಚಿಕ್ಕಮಗಳೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಅಕ್ಟೋಬರ್ 16ರಂದು ಯುವಪ್ರತಿಭೆ ವಿಭಾಗದ ಪರೀಕ್ಷೆಗಳನ್ನೂ ಆಯೋಜಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯ ಪ್ರಕಾರ ಕೆಲವು ವಿಭಾಗಗಳ ಪರೀಕ್ಷೆಗಳು ಬೆಳಿಗ್ಗೆ ಹಾಗೂ ಇನ್ನು ಕೆಲವು ಮಧ್ಯಾಹ್ನ ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ವಿಭಾಗಕ್ಕೆ ನಿಗದಿಪಡಿಸಿರುವ ದಿನಾಂಕ ಮತ್ತು ಸಮಯವನ್ನು ಗಮನಿಸಿ ಪರೀಕ್ಷೆಗೆ ಹಾಜರಾಗಬೇಕು.
ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಕಚೇರಿಯನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಹೊರತಂದು ಅವರಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಪರೀಕ್ಷೆಗಳು ಮಹತ್ವ ಪಡೆದಿವೆ.
Chikmagalur
ಶೃಂಗೇರಿಯಲ್ಲಿ ವೈದ್ಯಕೀಯ ಕ್ರಾಂತಿ: ಅತ್ಯಾಧುನಿಕ ಕ್ಯಾಥ್ ಲ್ಯಾಬ್- ಎಮ್‌ಆರ್ ಐ ಘಟಕ ಉದ್ಘಾಟನೆ
ಶೃಂಗೇರಿ : ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಹಾಗೂ ಎಮ್‌ಆರ್‍ಐ ಸೆಂಟರ್ ಗಳನ್ನು ಅಕ್ಟೋಬರ್ 11, ಭಾನುವಾರ ಉದ್ಘಾಟಿಸಲಾಯಿತು.

ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಶ್ರೀಗಳು ‘ ಶ್ರೀ ಭಾರತೀತೀರ್ಥ ಸೆಂಟರ್ ಫಾರ್ ಕಾರ್ಡಿಯಾಕ್ ಮತ್ತು ನ್ಯೂರೋ ಸೈನ್ಸ್ ಹಾಗೂ ಶ್ರೀ ವಿದ್ಯಾರಣ್ಯ ಸೆಂಟರ್ ಫಾರ್ ರೇಡಿಯೋಲಾಜಿ ಮತ್ತು ಇಮೇಜಿಂಗ್’ ಘಟಕವನ್ನು ಉದ್ಘಾಟಿಸಿ, ಆಸ್ಪತ್ರೆಯ ವೈದ್ಯಕೀಯ ಸೇವೆ ಮತ್ತು ಸೌಲಭ್ಯಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರಂಗೇರಿ ಮಠದ ಸಿಇಒ ಮತ್ತು ಆಡಳಿತಾಧಿಕಾರಿಗಳಾದ ಶ್ರೀ ಪಿ.ಎ.ಮುರಳಿ ,‘ ಶೃಂಗೇರಿ ಸಂಸ್ಥಾನವು ಮೊದಲಿನಿಂದಲೂ ನಮ್ಮ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇದೇ ಉದ್ದೇಶದಿಂದ ಮಲೆನಾಡಿಗರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಈಗ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ ಹಾಗೂ ಎಮ್‌ಆರ್‍ಐ ಸೌಲಭ್ಯಗಳನ್ನು ಆರಂಭಿಸಲಾಗಿದೆ.
ಫಿಲಿಫ್ಸ್ ಸಂಸ್ಥೆಯ 7C20 3.0 ಉಪಕರಣ ಆಫ್ಟಿಕ್ ಫೈಬರ್ ಸಂಪರ್ಕ ಹೊಂದಿದೆ. ಈ ಮೂಲಕ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಉಪಕರಣ ಹೊಂದಿರುವ ಕರ್ನಾಟಕದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸೇರುತ್ತದೆ. ಇದು ಕಾರ್ಡಿಯೋ ಜೊತೆಗೆ ನ್ಯೂರೊ ಹಾಗೂ ವ್ಯಾಸ್ಕ್ಯುಲರ್ ಸಂಬಂಧಿತ ಚಿಕಿತ್ಸೆ ತಂತ್ರಜ್ಞಾನವನ್ನು ಹೊಂದಿದೆ. ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುತ್ತಿರುವುದು ನಮಗೆ ಸಂತಸದ ವಿಷಯ’ ಎಂದು ಹೇಳಿದರು.
ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡೆಪ್ಯೂಟಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಲಕ್ಷ್ಮೀ ರಾಘವ ಮಾತನಾಡಿ, ‘ ನಮ್ಮಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ, ಇನ್ನು ಮುಂದೆ ಅತ್ಯಾಧುನಿಕ ಸೌಲಭ್ಯಗಳೂ ಲಭ್ಯವಿರಲಿವೆ. ಆರೋಗ್ಯ ಸಮಸ್ಯೆಯ ತುರ್ತು ಸಂದರ್ಭಗಳಲ್ಲಿ ಜನರು ಯಾವ ಊರಿಗೆ ಹೋಗಬೇಕು ಎಂಬ ಚಿಂತೆಯಲ್ಲಿ ಸಮಯ ವ್ಯರ್ಥ ಮಾಡದೇ ತಕ್ಷಣ ನಿಮ್ಮ ಶೃಂಗೇರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯಬಹುದು. ನಮ್ಮಲ್ಲಿ ಸೇರ್ಪಡೆಗೊಂಡಿರುವ ಕ್ಯಾಥ್ ಲ್ಯಾಬ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಹೃದಯಾಘಾತ, ಹೃದಯದಲ್ಲಿ ರಂದ್ರ ಸೇರಿ ಅನೇಕ ಹೃದ್ರೋಗ ಸಮಸ್ಯೆಗಳಿಗೆ ನಿಖರ ಚಿಕಿತ್ಸೆಯನ್ನು ನೀಡಲು ಸಶಕ್ತವಾಗಿದೆ.
ಭಾರತದಲ್ಲಿ ಕೆಲವೇ ಕೆಲವು ಆಸ್ಪತ್ರೆಗಳು ಈ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಹೊಂದಿದ್ದು ಅದರಲ್ಲಿ ಶೃಂಗೇರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಒಂದು. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಶಿವಮೊಗ್ಗ, ಮಂಗಳೂರು ಅಥವಾ ಬೆಂಗಳೂರಿಗೆ ಪ್ರಯಾಣಿಸುವ ಬದಲು ನಮ್ಮ ಊರಿನಲ್ಲೇ ಇರುವ ಈ ಆಧುನಿಕ ಚಿಕಿತ್ಸಾ ಸೇವೆಯನ್ನು ಪಡೆದುಕೊಳ್ಳಬಹುದು. ಜೊತೆಗೆ , ಸೀಮನ್ಸ್ ಮ್ಯಾಗ್ನೆಟಾಮ್ ಫ್ಲೋ ಪ್ಲಸ್ 1.5T ಮಾದರಿಯ ಎಮ್‌ಆರ್‍ಐ ಉಪಕರಣ ಜನ ಸೇವೆಗೆ ಸಿದ್ಧವಾಗಿದೆ.
ಈಗಾಗಲೇ ನಮ್ಮ ಹಲವು ವೈದ್ಯಕೀಯ ಕ್ಯಾಂಪ್‌ಗಳು ಗ್ರಾಮ ಮಟ್ಟದಲ್ಲಿ ಯಶಸ್ವಿಗೊಂಡಿದ್ದು, ಉತ್ತಮ ಜನ ಬೆಂಬಲವನ್ನು ಪಡೆದಿದೆ. ಈಗ ಆಧುನಿಕ ಚಿಕಿತ್ಸಾ ಪದ್ದತಿಯೂ ನಮ್ಮ ಕೈಜೋಡಿಸಿದ್ದುಈ ಸೇವೆಯ ಪ್ರಯೋಜನೆ ಪಡೆದುಕೊಳ್ಳಬೇಕು. ಕ್ಯಾಥ್ ಲ್ಯಾಬ್ ಸೇವೆಯು ಡಿಸೆಂಬರ್ 1 ರಿಂದ ಸಾರ್ವಜನಿಕರಿಗೆ ಲಭ್ಯವಿದ್ದು ಎಮ್‌ಆರ್‍ಐ ಸೆಂಟರ್ ಸೇವೆ ಆರಂಭವಾಗಿದೆ.
ನವರಾತ್ರಿ ವಿಶೇಷವಾಗಿ ಅಕ್ಟೋಬರ್ 12 ರಿಂದ 22ರವರೆಗೆ ಅರ್ಹ ಫಲಾನುಭವಿಗಳಿಗೆ ಉಚಿತ ಎಂಆರ್‌ಐ ಸೇವೆ ನೀಡಲಾಗುವುದು. ಈ ಕುರಿತು ಆಸ್ಪತ್ರೆಯ ಸಲಹಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಶೃಂಗೇರಿ ಮಠದ ಶಿಷ್ಯ ವೃಂದ ಉಪಸ್ಥಿತರಿದ್ದರು.
Chikmagalur
ತುಂಗಾ ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾ*ವು
ಚಿಕ್ಕಮಗಳೂರು: ಪೋಷಕರೊಂದಿಗೆ ನವರಾತ್ರಿ ಪೂಜೆಗೆ ಶೃಂಗೇರಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಪಾರ್ಕಿಂಗ್ ಲಾಟ್ ಸಮೀಪ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ಮೂಲದ ರಾಘವೇಂದ್ರ ಪೂಜಾರಿ (20) ಮೃತ ದುರ್ದೈವಿ. ಇವರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಪೋಷಕರೊಂದಿಗೆ ಶೃಂಗೇರಿಗೆ ನವರಾತ್ರಿ ಪೂಜೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನದಿಗೆ ಮತ್ತೆ ಇಳಿದ ಯುವಕ ನೀರುಪಾಲು
ತುಂಗಾ ನದಿಯಿಂದ ವಾಪಸ್ ಬರುತ್ತಿದ್ದ ಯುವಕ ಮತ್ತೆ ನದಿಯತ್ತ ತೆರಳಿದ್ದು, ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ನದಿಯಲ್ಲಿದ್ದ ಮಹಿಳೆಯೊಬ್ಬರು ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಆದರೆ, ರಕ್ಷಿಸುವಷ್ಟರಲ್ಲಿ ಯುವಕ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯ ಆಳದಲ್ಲಿ ಮೃತದೇಹ ಪತ್ತೆಹಚ್ಚಲು ಮಲ್ಪೆ ಈಶ್ವರ್ ಅವರ ತಂಡವೂ ಸ್ಥಳಕ್ಕೆ ಆಗಮಿಸಿದೆ.
ಅಪಾಯಕಾರಿ ಸ್ಥಳಕ್ಕೆ ತಡೆಬೇಲಿ ಅಳವಡಿಸಲು ಆಗ್ರಹ
ಶೃಂಗೇರಿಯ ತುಂಗಾ ನದಿಯ ಇದೇ ಪ್ರದೇಶದ ಬಳಿ ಈ ಹಿಂದೆಯೂ ಹಲವರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅಪಾಯಕಾರಿ ಸ್ಥಳದಲ್ಲಿ ಎಚ್ಚರಿಕೆ ನಾಮಫಲಕ ಅಳವಡಿಸುವುದರ ಜೊತೆಗೆ ಸೂಕ್ತ ತಡೆಬೇಲಿ ನಿರ್ಮಿಸಬೇಕು ಎಂದು ಸ್ಥಳೀಯರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
-
State22 hours agoಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆಗೆ ಮತ್ತೆ ಒಂದು ತಿಂಗಳ ಗಡುವು ವಿಸ್ತರಣೆ
-
State7 hours agoಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನ!!
-
Chikmagalur23 hours agoತರೀಕೆರೆಯಲ್ಲಿ 20 ಕ್ವಿಂಟಾಲ್ ಹಸಿ ಅಡಿಕೆ ಕಳವು
-
Hassan20 hours ago21,000 ಮೀಟರ್ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಸೃಜನ್ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ
-
Chikmagalur23 hours agoನೀರಿಲ್ಲದೆ ಬಾಡಿದ ಬಟಾಣಿ ಬೆಳೆ: ಬಂಡವಾಳವಾದರೂ ಸಿಗಲಿ ಎಂಬ ನಿರೀಕ್ಷೆಯಲ್ಲಿ ರೈತರು
-
Mandya20 hours agoಅ.15 ರಿಂದ 18 ರ ವರೆಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವ
-
Chikmagalur21 hours agoಚಿಕ್ಕಮಗಳೂರಿನಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆ
-
Hassan6 hours agoಅರಸೀಕೆರೆಯಲ್ಲಿ ಹಾಡಹಗಲೇ ಕ*ಳ್ಳತನ: ₹4 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ, ಹಣ ದೋ*ಚಿದ ಕಳ್ಳರು!
