Chikmagalur
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ
ಜಯಪುರ : ಹಿಂದೂ ಸಂಸ್ಕೃತಿಯ ಪವಿತ್ರ ಹಬ್ಬಗಳಲ್ಲೊಂದಾದ ಶರನ್ನವರಾತ್ರಿ ಮಹೋತ್ಸವವು ದೇಶಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಕೊಪ್ಪ ತಾಲ್ಲೂಕು ಶ್ರೀಕ್ಷೇತ್ರ ಜಯಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಕೂಳೂರು ಗುರುಮೂರ್ತಿಯವರು ತಿಳಿಸಿದರು.

ಶರನ್ನವರಾತ್ರಿ ಆರಂಭ ದಿನವಾದ ಭಾನುವಾರ ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಕಲ್ಪೋಕ್ತ ಪೂಜೆ, ಅರ್ಚನೆ, ಚಂಡಿಕಾ ಪಾರಾಯಣ, ಸಂಜೆ ಅಷ್ಟಾವಧಾನ ಸೇವೆ ನಡೆಯಿತು.
ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.
Chikmagalur
ಚಿಕ್ಕಮಗಳೂರಿನಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆಯ ಕೊರತೆ ಹಾಗೂ ಬರದ ಪರಿಸ್ಥಿತಿಯ ಪರಿಣಾಮ ತರಕಾರಿ ಬೆಲೆಗಳ ಮೇಲೆ ಬೀಳುತ್ತಿದ್ದು, ಚಿಕ್ಕಮಗಳೂರು ನಗರದ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಪಿತೃಪಕ್ಷದ ಹಿನ್ನೆಲೆಯಲ್ಲಿ ನಿನ್ನೆ ಕಟ್ಟಿಗೆ 30 ರೂಪಾಯಿವರೆಗೆ ತಲುಪಿದ್ದ ಸೊಪ್ಪಿನ ಬೆಲೆ ಇಂದು 20ರಿಂದ 25 ರೂ ಗೆ ಇಳಿಮುಖವಾಗಿದೆ.

ಸಾಮಾನ್ಯ ದಿನಗಳಲ್ಲಿ 8ರಿಂದ 10 ರೂಪಾಯಿಗೆ ದೊರೆಯುತ್ತಿದ್ದ ಸೊಪ್ಪು ಇದೀಗ ದಿಢೀರ್ ಬೆಲೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಬರಸಿಡಿಲು ಬಡಿದಂತಾಗಿದೆ. ಪಿತೃಪಕ್ಷದ ಸಂದರ್ಭದಲ್ಲಿ ಸೊಪ್ಪಿನ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಯಾದ್ಯಂತ ಬರದ ಪರಿಸ್ಥಿತಿಯಿಂದಾಗಿ ಬೆಳೆಗಳ ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಗ್ರಾಹಕರು ಖರೀದಿಸುವ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದರೆ, ವ್ಯಾಪಾರಿಗಳು ಕೂಡ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೊಪ್ಪಿನ ಪೂರೈಕೆ ಹೇಗಿರಲಿದೆ ಎಂಬುದರ ಮೇಲೆ ಬೆಲೆ ನಿರ್ಧಾರವಾಗಲಿದೆ.
Chikmagalur
ಕಣ್ಣುಗಳು ಮನುಷ್ಯನ ಜೀವನದ ಅತ್ಯಮೂಲ್ಯ ಅಂಗ : ನಾರಾಯಣಸ್ವಾಮಿ
ಚಿಕ್ಕಮಗಳೂರು: ನಗರದ ಹೌಸಿಂಗ್‌ಬೋರ್ಡ್ ಬಡಾವಣೆಯ ಸರ್ಕಾರಿ ಬಾಲಮಂದಿರದಲ್ಲಿ ಲಯನ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ದೃಷ್ಟಿ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ಧ ಸೈಟ್ ಫಸ್ಟ್ ದೃಷ್ಟಿ ಆರೈಕೆ ಶಿಬಿರವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ನಾರಾಯಣಸ್ವಾಮಿ ಉದ್ಘಾಟಿಸಿ, ಕಣ್ಣುಗಳು ಮನುಷ್ಯನದ ಜೀವನದ ಅತ್ಯಮೂಲ್ಯ ಅಂಗ. ಕಣ್ಣಿನ ಬಗ್ಗೆ ಆಲ ಸ್ಯ ಮಾಡದೇ ದೃಷ್ಟಿದೋಷ ಕಂಡುಬAದಲ್ಲಿ ಶೀಘ್ರವೇ ತಜ್ಞ ವೈದ್ಯರ ಬಳಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳ ಬೇಕು ಎಂದು ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರೆ ಪರದೆಗಳ ಬಳಕೆಯಿಂದ ಕಣ್ಣಿನ ಶಕ್ತಿ ಕುಂದುತ್ತಿದೆ. ಅಲ್ಲದೇ ವಿಪರೀತ ಮೊಬೈಲ್ ಬಳಕೆಯಿಂದ ಮಕ್ಕಳಲ್ಲೇ ಕಣ್ಣಿನ ಸಮಸ್ಯೆ ಬಾಧಿಸುತ್ತಿದೆ. ಹೀಗಾಗಿ ಕಿರಿಯರು-ಹಿರಿಯರಿಗೆ ಕಣ್ಣೀನ ಆರೈಕೆ ಶಿಬಿರ ಹಮ್ಮಿಕೊಂಡು ಲಯನ್ಸ್ ಕ್ಲಬ್ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ದೃಷ್ಟಿ ಮೊದಲು ಎಂಬ ಘೋಷವಾಕ್ಯದೊಂದಿಗೆ ಲಯನ್ಸ್ ಸಂಸ್ಥೆ ತಿಂಗಳುಪೂರ್ತಿ ಕಣ್ಣಿನ ಬಗ್ಗೆ ವಿಶೇ ಷ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದೆ. ಈ ಅಂಗವಾಗಿ ಸರ್ಕಾರಿ ಬಾಲ ಮಂದಿರದಲ್ಲಿ ಮಕ್ಕಳಿಗೆ ದೃಷ್ಟಿ ಪರೀಕ್ಷೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಲಯನ್ಸ್ ವಲಯಾಧ್ಯಕ್ಷ ಜಿ.ರಮೇಶ್ ಮಾತನಾಡಿ ಇಂದಿನ ಕಾಲಮಾನದ ಮಕ್ಕಳು, ಯುವಕ-ಯು ವತಿಯರು ಕಣ್ಣೀನ ಕಾಳಜಿ ವಹಿಸಬೇಕು. ಅತಿಹೆಚ್ಚು ಸಾಮಾಜಿಕ ಜಾಲತಾಣ ವೀಕ್ಷಿಸುವುದರಿಂದ ಕಣ್ಣಿನ ಜೀವಸತ್ವ ಕ್ಷಿಣಿಸಲಿದ್ದು, ಹೀಗಾಗಿ ಕಣ್ಣಿನ ಸಮಸ್ಯೆಗೆ ಮುನ್ನವೇ ಗಮನಹರಿಸಬೇಕು ಎಂದರು. ಕಣ್ಣಿನ ಆರೈಕೆ ಸಂಯೋಜಕ ಬಿ.ಎಲ್.ರಂಗನಾಥ್ ಮಾತನಾಡಿ ಕಣ್ಣೀನ ಸೋಂಕು, ದೃಷ್ಟಿ ದೋಷ, ಕಣ್ಣೀನ ಪೊರೆ, ವಿಟಮಿನ್ ಕೊರತೆ, ಅನುವಂಶಿಕ ನ್ಯೂನ್ಯತೆಗಳು ರೋಗ ಲಕ್ಷಣಗಳಾಗಿದ್ದು ಸಕಾಲಕ್ಕೆ ಚಿಕಿತ್ಸೆ, ದೃಷ್ಟಿದೋಷಕ್ಕೆ ಸೂಕ್ತ ಕನ್ನಡಕ ಬಳಕೆ, ಪೌಷ್ಟಿಕಾಂಶ ಆಹಾರ ಸೇವೆ, ಪಟಾಕಿಯಿಂದ ಎಚ್ಚರಿಕೆ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಎಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆ ಉಪಾಧ್ಯಕ್ಷೆ ಕವಿತಾ ಜಿ.ರಮೇಶ್, ಕೋಶಾಧಿಕಾರಿ ಅಣ್ಣಾವೇಲು, ಮೇಲ್ವಿಚಾರಕ ಮೊಹಮ್ಮದ್ ರಫೀಖ್, ಸದಸ್ಯರಾದ ಬಾಲಕೃಷ್ಣ, ನಜ್ಮಾಆಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ್ ಭಜಂತ್ರಿ, ಬಾಲಮಂ ದಿರದ ಮೇಲ್ವಿಚಾರಕಿ ಭಾಗ್ಯಮ್ಮ ಮುಂತಾದವರಿದ್ದರು.
Chikmagalur
ಕೊಟ್ಟಿಗೆಹಾರ ಶ್ರೀ ಸೀತಾರಾಮ ದೇವಸ್ಥಾನದ 64ನೇ ಶರಣವರಾತ್ರಿ ಉತ್ಸವ
ಕೊಟ್ಟಿಗೆಹಾರ: ಕೊಟ್ಟಿಗೆಹಾರದ ಶ್ರೀ ಸೀತಾರಾಮ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ 64ನೇ ವರ್ಷದ ಸಾರ್ವಜನಿಕ ಶರಣವರಾತ್ರಿ ಉತ್ಸವ ಅ.11ರ ಭಾನುವಾರದಿಂದ ಆರಂಭಗೊಂಡಿದ್ದು, ಅ.20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಉತ್ಸವದ ಅಂಗವಾಗಿ ಪ್ರತಿದಿನ ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಅ.20ರಂದು ಮಂಗಳವಾರ ಸಂಜೆ 6ರಿಂದ ರಾತ್ರಿ 10ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ನಗರ ಭಜನೆಯೊಂದಿಗೆ ಶ್ರೀ ಸೋಮೇಶ್ವರ ದೇವರ ದರ್ಶನ ಪಡೆದು, ಅತ್ತಿಗೆರೆ ನಂತರ ಕೊಟ್ಟಿಗೆಹಾರದ ನಗರದ ರಾಜಬೀದಿಯಲ್ಲಿ ಮೆರವಣಿಗೆ ಸಾಗಲಿದೆ. ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರಿನ ಶ್ರೀ ಪಂಚದುರ್ಗಾ ಪರಮೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದ್ದು, ನಿಶಾನಿ ಮೇಳದೊಂದಿಗೆ ಮೆರವಣಿಗೆ ಶ್ರೀ ಸೀತಾರಾಮ ದೇವಸ್ಥಾನ ತಲುಪಲಿದೆ.
ನಂತರ ದೇವಸ್ಥಾನದಲ್ಲಿ ಭಜನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಉತ್ಸವದಲ್ಲಿ ಕೊಟ್ಟಿಗೆಹಾರ, ತರುವೆ, ಅತ್ತಿಗೆರೆ, ದೇವನಗುಲ್, ಬಿನ್ನಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೀತಾರಾಮ ದೇವಸ್ಥಾನ ಸಮಿತಿ ಅಧ್ಯಕ್ಷರು, ಸರ್ವಸದಸ್ಯರು,
-
National23 hours agoಎಸ್ಐಆರ್ ಪರಿಷ್ಕರಣೆ ಬೆಂಬಲಿಸಿ 124 ಮಾಜಿ ಅಧಿಕಾರಿಗಳ ಬಹಿರಂಗ ಪತ್ರ
-
Chikmagalur3 hours agoನೀರಿಲ್ಲದೆ ಬಾಡಿದ ಬಟಾಣಿ ಬೆಳೆ: ಬಂಡವಾಳವಾದರೂ ಸಿಗಲಿ ಎಂಬ ನಿರೀಕ್ಷೆಯಲ್ಲಿ ರೈತರು
-
Hassan22 hours agoಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾ*ವು
-
Kodagu6 hours agoಮಾಲ್ದಾರೆಯಲ್ಲಿ ನಾಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ ವಿವಿಧ ಕಾಯಿಲೆಗಳ ತಪಾಸಣೆ, ವೈದ್ಯರಿಂದ ಸೂಕ್ತ ಸಲಹೆ
-
Kodagu22 hours agoನಾಲ್ಕೇರಿ ಬೊಮ್ಮಾಡು ಹಾಡಿಯಲ್ಲಿ 10 ಲಕ್ಷ ವೆಚ್ಚದ ನೂತನ ಅಂಗನವಾಡಿ ಕೇಂದ್ರ ಲೋಕಾರ್ಪಣೆ ಮಾಡಿದ ಶಾಸಕ ಎ.ಎಸ್.ಪೊನ್ನಣ್ಣ
-
Mandya1 hour agoಮಂಡ್ಯದಲ್ಲಿ ಅಂಬರೀಷ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿ: ಬೇಲೂರು ಸೋಮಶೇಖರ್ ಆಗ್ರಹ
-
State11 hours agoಮಂಗಳೂರು ಏರ್ಪೋರ್ಟ್ನಿಂದ 5 ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ! ಚಳಿಗಾಲದ ವೇಳಾಪಟ್ಟಿಯಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಳ
-
Hassan25 minutes agoಗೊಂಬೆಗಳ ಪ್ರದರ್ಶನದಿಂದ ಭಾವನಾತ್ಮಕ ಬೆಸುಗೆ: ಶಕುಂತಳ ಆನಂದ
