Connect with us

Kodagu

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ

Published

on

ಮಡಿಕೇರಿ :  ಯುವ ಸಮೂಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಬೇಕು : ಆನಂದ ಕರಂದ್ಲಾಜೆ ಕರೆ. ಯುವ ಸಮೂಹ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಮತ್ತು ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಕರೆ ನೀಡಿದ್ದಾರೆ. ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆದ ೨೦೨೬ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರೆಭಾಷೆ ಸಮುದಾಯದ ಯುವ ಸಮೂಹಕ್ಕೆ ವಿದ್ಯೆ ಮತ್ತು ಸಂಸ್ಕೃತಿ ಎರಡೂ ಅತಿ ಮುಖ್ಯವಾಗಿದೆ. ವಿದ್ಯೆ ಎಂದರೆ ಕೇವಲ ಪದವಿ ಪಡೆದರೆ ಸಾಲದು ಐಎಎಸ್, ಐಪಿಎಸ್ ಗಳಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಕೊಡಗು ಗೌಡ ವಿದ್ಯಾ ಸಂಘ ಗಮನ ಹರಿಸಬೇಕು. ವಿದ್ಯಾ ಸಂಘವು ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯಾಗಿದೆ. ವಿದ್ಯಾಸಂಘ ನೀಡುವ ಪ್ರತಿಭಾ ಪುರಸ್ಕಾರದಿಂದ ಅನೇಕ ವಿದ್ಯಾರ್ಥಿಗಳು ಪ್ರೇರಣೆ ಪಡೆದು ಯಶಸ್ಸು ಸಾಧಿಸಿದ್ದಾರೆ ಎಂದರು.

ಅರೆಭಾಷೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ಉನ್ನತ ಮಟ್ಟದ ಸರಕಾರಿ ಹುದ್ದೆಗಳನ್ನು ಅಲಂಕರಿಸುವಲ್ಲಿ ಇನ್ನ? ಪ್ರಗತಿ ಸಾಧಿಸಬೇಕಿದೆ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದುವ ಗುರಿ ಇಟ್ಟುಕೊಂಡು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವ ಜನಾಂಗ ಸಂಸ್ಕೃತಿಯ ರಾಯಭಾರಿಗಳಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ತಾವು ಕಲಿಯುವ ಶಾಲಾ-ಕಾಲೇಜುಗಳ ಸಭೆ-ಸಮಾರಂಭಗಳಲ್ಲಿ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ-ತೊಡುಗೆ ಹಾಗೂ ಆಚಾರ-ವಿಚಾರಗಳನ್ನು ಪರಿಚಯಿಸಬೇಕು. ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಆನಂದ ಕರಂದ್ಲಾಜೆ ಕರೆ ನೀಡಿದರು.
ಕೊಡಗು ಗೌಡ ವಿದ್ಯಾ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲಿ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ತೋರುತ್ತಿರುವ ಆಸಕ್ತಿಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿದ್ಯಾನಿಧಿ ದಾನಿಗಳು ಹಾಗೂ ಉದ್ಯಮಿ ಮುಕ್ಕಾಟಿ ಎ.ಮನೋಜ್ ಕುಮಾರ್ ಅವರು, ಗೌಡ ವಿದ್ಯಾಸಂಘವು ಹಲವು ಏಳುಬೀಳುಗಳನ್ನು ಎದುರಿಸಿ ಇಂದು ಉತ್ತಮ ಮಟ್ಟಕ್ಕೆ ಬೆಳೆದು ಬಂದಿದೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಮುದಾಯದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಉತ್ಸಾಹದಿಂದ ಗುರುತಿಸಿಕೊಳ್ಳುವಂತಾಗಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಅರಿಯಲು ಪೋ?ಕರು ಮಾರ್ಗದರ್ಶನ ನೀಡಬೇಕು. ಅದೇ ಸಮಯದಲ್ಲಿ ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದುವರಿಯಲು ಅವಕಾಶ ಕಲ್ಪಿಸಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅರೆಭಾಷೆ ವಿದ್ಯಾರ್ಥಿಗಳು ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಹೆಚ್ಚು ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಪ್ರೋತ್ಸಾಹ ನೀಡುವ ಹಾಗೂ ಅವರಲ್ಲಿ ಸಾಧನೆಯ ಉತ್ಸಾಹ ತುಂಬುವ ಉದ್ದೇಶದಿಂದ ಪ್ರತಿ ವ?ದಂತೆ ಈ ವ?ವೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮುದಾಯದ ಪ್ರತಿಭಾವಂತರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸುವ ಉದ್ದೇಶದಿಂದ ಬಹಳ ಹಿಂದಿನಿಂದಲೂ ಈ ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮಕ್ಕೆ ಹಲವು ದಾನಿಗಳು ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮುದಾಯದ ಬಂಧುಗಳ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದರು.


೧೯೦೮ರಲ್ಲಿ ಸ್ಥಾಪನೆಯಾದ ಕೊಡಗು ಗೌಡ ವಿದ್ಯಾ ಸಂಘವು ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರೊಂದಿಗೆ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯಲು ಉದಾರ ಮನಸ್ಸಿನ ದಾನಿಗಳ ಕೊಡುಗೆ ಪ್ರಮುಖವಾಗಿದೆ. ಪ್ರಸ್ತುತ ಕೊಡಗು ಗೌಡ ವಿದ್ಯಾ ಸಂಘದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈಗಾಗಲೇ ರೂ.೪ ಕೋಟಿ ಖರ್ಚು ಮಾಡಲಾಗಿದೆ. ಮತ್ತಷ್ಟು ಹಣದ ಅಗತ್ಯವಿದ್ದು, ಸಮಾಜದ ಬಂಧುಗಳು ಆರ್ಥಿಕ ಸಹಕಾರ ನೀಡಬೇಕು ಎಂದು ನವೀನ್ ಕುಶಾಲಪ್ಪ ಮನವಿ ಮಾಡಿದರು.
ವಿದ್ಯಾನಿಧಿಯ ದಾನಿಗಳಾದ ನಿಕಟಪೂರ್ವ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಪ್ರಾಂಶುಪಾಲರಾದ ತೆಕ್ಕಡೆ ಗುಲಾಬಿ ಜನಾರ್ಧನ ಹಾಗೂ ಚೇರಂಬಾಣೆ ಬಿ.ಬಾಡಗದ ಕಾಫಿ ಬೆಳೆಗಾರ ತೊತ್ತಿಯನ ಕೀರ್ತಿಕುಮಾರಿ ಮೋಹನ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕೊಕ್ಕಲೆ ವಿ.ಸುಮಂತ್, ನಡುವಟ್ಟಿರ ಎಂ.ಬಿಪಿನ್ ಅಚ್ಚಪ್ಪ, ಕೆ.ಬಿ.ರೀಮಾ ಜಯಪ್ರಕಾಶ್, ಅಡಿಕೇರಿ ಎಸ್.ದಾಮಿನಿ, ಮೊಟ್ಟೆರ ಜೆ.ಯಾಶಿಕಾ ಹಾಗೂ ಸಿರಕಜೆ ಎಸ್.ಮೌಲ್ಯ ಶ್ರೀಧರ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೩೮, ಪಿಯುಸಿಯಲ್ಲಿ ೪೨, ಪದವಿ ೧೧ ಹಾಗೂ ಸಿಇಟಿಯ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.

Continue Reading

Kodagu

ಕಾಳಿಮಾಡ ಕುಟುಂಬದಿಂದ ಪ್ರಥಮ “ಕೊಡವ ಮಂಗಲ ಸಮ್ಮಂಧ ಅಡಕುವ ನಮ್ಮೆ

Published

on

ಶ್ರೀಮಂಗಲ : ಕಾಳಿಮಾಡ ಕುಟುಂಬದಿಂದ ಕೊಡವ ಕೌಟುಂಬಿಕ ಪ್ರಥಮ “ಮಂಗಲ ಸಮ್ಮಂಧ ಆಡಕುವ ನಮ್ಮೆ ” ಗೆ ವಿಜೃಂಭಣೆಯ ಚಾಲನೆ ದೊರೆಯಿತು. ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದಿಂದ ಪೊನ್ನoಪೇಟೆ ಕೊಡವ ಸಮಾಜದ ವರೆಗೆ ಕಾಳಿಮಾಡ ಕುಟುಂಬದಿಂದ ಸಾಂಪ್ರದಾಯಿಕ ಉಡುಪಿನಲ್ಲಿ ಸಾಂಸ್ಕೃತಿಕ ಮೆರವಣಿಗೆ ಆಕರ್ಷಕವಾಗಿತ್ತು. ಮೆರವಣಿಗೆಯನ್ನು ಕಾಳಿಮಾಡ ಕುಟುಂಬದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಕೋವಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು.

ಪೈಪೋಟಿಯನ್ನು ಕೊಡವ ಜಾನಪದ ತಜ್ಞ ಬಾಚಣಿಯಂಡ ಅಪ್ಪಣ್ಣ ಅವರು ಉದ್ಘಾಟನೆ ಮಾಡಿ ಮಾತನಾಡಿ, ಹೊಸ ವಿಷಯದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಕೊಡವ ಪದ್ಧತಿ ಹಾಗೂ ಪರಂಪರೆ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ, ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ನಮ್ಮ ಮಕ್ಕಳಿಗೆ ಇಂತಹ ಪದ್ದತಿಯ ಮಹತ್ವದ ಬಗ್ಗೆ ತಿಳಿಸಿ ಕೊಟ್ಟಾಗ ಮಾತ್ರ ಅದನ್ನು ಅವರು ಕಲಿಯುತ್ತಾರೆ. ಭಾಷೆ ಹಾಗೂ ಸಂಸ್ಕೃತಿಯನ್ನು ನಾಶ ಮಾಡಿದರೆ ಆ ಜನಾಂಗವೇ ನಾಶವಾಗುತ್ತದೆ. ಹಳೆಯ ಪದ್ಧತಿ ಪರಂಪರೆ ಕ್ಷೀಣವಾಗುತ್ತಿರುವುದನ್ನು ಅರಿತು ಕೊಡವ ಜನಾಂಗದ ಮದುವೆಯಲ್ಲಿ ಜಾನಪದ ರೂಪದಲ್ಲಿರುವ ಒಪ್ಪಂದವನ್ನು ಎಲ್ಲರೂ ಕಲಿಯುವಂತಾಗ ಬೇಕೆಂಬ ನಿಟ್ಟಿನಲ್ಲಿ ಕಾಳಿಮಾಡ ಕುಟುಂಬಸ್ಥರು ಸಂಸ್ಕೃತಿಯ ಬೆಳವಣಿಗೆಗೆ ಉತ್ತೇಜನಕ್ಕೆ ಮುಂದಾಗಿರುವುದು ತುಂಬಾ ಪ್ರಸಂಶನೀಯ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮಾತನಾಡಿ ಭಾಷೆ ಮತ್ತು ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಂಖ್ಯೆ ತುಂಬಾ ಮುಖ್ಯವಾಗಿದೆ. ಕೊಡವ ಜನಾಂಗವು ಚಿಕ್ಕದಾಗಿದ್ದರೂ ಕೆಲವು ಜನರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರಿಂದ ದೇಶ ವಿದೇಶಗಳಲ್ಲಿ ಕೊಡವರನ್ನು ಗುರುತಿಸುವಂತಾಗಿದೆ. ಈ ಮೂಲಕ ನಮ್ಮ ಸಂಸ್ಕೃತಿ ಪದ್ಧತಿ, ದೇಶ ವಿದೇಶಕ್ಕೆ ಸಾರಿದ್ದು ನಮಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಳ್ಳದಿದ್ದರೆ ಉಳಿಸಿಕೊಳ್ಳಲು ಸಾಧ್ಯವಿಲ್ಲ.ನಮ್ಮ ಭಾಷೆಯನ್ನು ಸಹ ಚೆನ್ನಾಗಿ ಹಿಡಿತ ದೊಂದಿಗೆ ಮಾತನಾಡುವುದು ಬರೆಯುವುದನ್ನು  ಕಲಿಯಬೇಕಾಗಿದೆ. ಕೊಡವ ಸಂಸ್ಕೃತಿ ಹಾಗೂ ಬಾಷೆಯನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ ಎಂದು ಹೇಳಿದ ಅವರು ನಾಲ್ಕು ಕೋಟಿಗಿಂತ ಹೆಚ್ಚು ಜನರು ಮಾತನಾಡುವ ಕನ್ನಡ ಭಾಷೆ ಮುಂದಿನ 30- 40 ವರ್ಷದಲ್ಲಿ ಇಲ್ಲದಾಗುತ್ತದೆ ಎಂದು ಯುನೆಸ್ಕೋ ವರದಿ ಎಚ್ಚರಿಸಿದೆ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಮತ್ತಷ್ಟು ಕಡಿಮೆ ಇದ್ದು, ಕನ್ನಡ ಮತ್ತು ಕೊಡವ ಭಾಷೆ ಮಾತನಾಡುವವರು ಎಚ್ಚೆತ್ತುಕೊಳ್ಳಬೇಕಾಗಿದೆ. ಅದರಿಂದ ಭಾಷೆ ಸಂಸ್ಕೃತಿಯ ಮೇಲೆ ಗಮನಕೊಟ್ಟು ರಕ್ಷಣೆ ಮಾಡಿದಾಗ ಮಾತ್ರ ಜನಾಂಗ ಉಳಿಯುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಳಿಮಾಡ ಕುಟುಂಬದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಅವರು ಕೊಡವ ಜನಾಂಗದಲ್ಲಿ ವಿವಿಧ ಕ್ರೀಡಾ ಟೂರ್ನಮೆಂಟ್ ಗಳನ್ನು ಮಾಡಲಾಗುತ್ತಿದೆ. ಇವುಗಳಿಂದ ಕ್ರೀಡೆಯ ಬೆಳವಣಿಗೆಗೆ ಸಹಕಾರ ಆಗುತ್ತದೆ. ಆದರೆ ಕೊಡವ ಸಂಸ್ಕೃತಿಗೆ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ “ಮಂಗಲ ಸಮ್ಮಂಧ ಆಡುಕುವ ” ನಮ್ಮೆಯನ್ನು ಆಯೋಜಿಸಲಾಗಿದೆ. ಕೊಡವ ಜನಾಂಗದಲ್ಲಿ ಸಮ್ಮಂಧ ಅಡುಕುವ ಪದ್ಧತಿ ಮದುವೆಯಲ್ಲಿ ತುಂಬಾ ಮಹತ್ವ ಪಡೆದಿದ್ದು ಅಲಿಖಿತ ಜಾನಪದ ರೂಪದಲ್ಲಿರುವ ಇಂತಹ ಪದ್ಧತಿ ಇತ್ತೀಚೆಗೆ ಕ್ಷೀಣವಾಗುತ್ತಿದ್ದು, ಇದನ್ನು ಗಮನಿಸಿ ಪ್ರತಿ ಮದುವೆಯಲ್ಲಿ ಸರಿಯಾದ ರೀತಿಯಲ್ಲಿ ಈ ಪದ್ಧತಿ ನಡೆಸುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಸ್ಪರ್ಧೆ ಅಲ್ಲ, ಬದಲಿಗೆ ಕೊಡವ ಸಂಸ್ಕೃತಿಯನ್ನು ಬೆಳೆಸುವ ಹಬ್ಬವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕುಟುಂಬದ ಗೌ. ಕಾರ್ಯದರ್ಶಿ ಕಾಳಿಮಾಡ ರಶಿಕ್ ಕಾವೇರಪ್ಪ, ಸಂಚಾಲಕ ಕಾಳಿಮಾಡ ಪದ್ಮ ಬೆಳ್ಯಪ್ಪ, ಹಾಗೂ ತೀರ್ಪುಗಾರರಾದ ಬೊಟ್ಟೋಳಂಡ ಪೊನ್ನಣ್ಣ, ಬೊಳ್ಳೇರ ಪ್ರಥ್ವಿ, ನೆಲ್ಲಮಾಡ ರಾಜ ತಿಮ್ಮಯ್ಯ, ಕರ್ತಮಾಡ ಹರೀಶ್, ಬೊಳ್ಳಿಮಾಡ ಧನು ದೇವಯ್ಯ ಉಪಸ್ಥಿತರಿದ್ದರು

ಸಮಾರೋಪ ಕಾರ್ಯಕ್ರಮ :
ಕಾರ್ಯಕ್ರಮದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು.
ಪ್ರಥಮ ಬಹುಮಾನವನ್ನು ಆಳಮೇoಗಡ, ದ್ವಿತೀಯ ಬಹುಮಾನವನ್ನು ಚೆಟ್ಟಿಯಾರಂಡ ಹಾಗೂ ತೃತೀಯ ಬಹುಮಾನವನ್ನು ತೀತಿಮಾಡ ಕುಟುಂಬ ತಂಡಗಳು ಪಡೆಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಕಿರು ಕಾಣಿಕೆ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಕೊಡುವ ಸಂಸ್ಕೃತಿಕ ಕಾರ್ಯಕ್ರಮಗಳು ನೃತ್ಯಗಳು ಕಲಾವಿದರಿಂದ ಹಾಡುಗಾರಿಕೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಕುಟುಂಬದ ಹಿರಿಯರಾದ ಕಾಳಪ್ಪ, ಶಿವಪ್ಪ,ರಾಣಾ, ಪಾಪುಣಿ, ಗಣೇಶ್, ಪಾರ್ವತಿ,ರಾಮು ಕಾಳಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಕಾಳಿಮಾಡ ಶಿವಪ್ಪ ಪ್ರಾರ್ಥಿಸಿ, ರೇಷ್ಮಾಪೂಣಚ್ಚ ಮತ್ತು ಸೀಮಾ ಪ್ರಶಾಂತ್ ನಿರೂಪಿಸಿದರು. ಕುಟುಂಬದ ಅಧ್ಯಕ್ಷ ಮೋಟಯ್ಯ ಸ್ವಾಗತಿಸಿ ಕಾರ್ಯದರ್ಶಿ ರಶೀಕ್ ಕಾವೇರಪ್ಪ ವಂದಿಸಿದರು.

Continue Reading

Kodagu

ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆ ಚೆಂಬು ಗ್ರಾಮದ ಪ್ರಮುಖರಿಂದ ಶಾಸಕ ಎ.ಎಸ್. ಪೊನ್ನಣ್ಣ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ

Published

on

ವಿರಾಜಪೇಟೆ: ಚೆಂಬು ಗ್ರಾಮದ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಮುಖರು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿಯ ಪ್ರಮುಖ ನಾಯಕ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ನಂಬಿಯಾರ್, ನಾಯರಗದ್ದೆ ಲೋಲಾಕ್ಷ, ಕೂಗಲೆ ಗೋಪಾಲಕೃಷ್ಣ ಹಾಗೂ ನಿವೃತ್ತ ಅರಣ್ಯ ಅಧಿಕಾರಿ ಬಾಲೆಂಬಿ ರಾಮಚಂದ್ರ ಅವರು ಶಾಸಕ ಎ.ಎಸ್. ಪೊನ್ನಣ್ಣ ಅವರ ಜನಪರ ಕಾಳಜಿ, ಅಭಿವೃದ್ಧಿ ಕೆಲಸಗಳು ಹಾಗೂ ಸಾಮಾಜಿಕ ಚಿಂತನೆಯನ್ನು ಮೆಚ್ಚಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.


ಎಲ್ಲರನ್ನು ಶಾಸಕರು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಶುಭ ಕೋರಿದರು.ಶಾಸಕರ ವಿರಾಜಪೇಟೆ ಗೃಹ ಕಚೇರಿಯಲ್ಲಿ ನಡೆದ ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶೌಕತ್ ಅಲಿ, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಹಿರಿಯ ನಾಯಕ ಸೋಮಣ್ಣ ಬಾಲಂಬಿ, ಬೂತ್ ಅಧ್ಯಕ್ಷರುಗಳಾದ ಚನ್ನಪ್ಪ ನಡುಬೆಟ್ಟು, ಪಕೀರ ಮಂಗಳಪಾರೆ, ನವೀನ ರಾಮಕಜ, ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಶಶಿಕಲಾ ಕಟ್ಟೆಪಾರೆ, ನಾಪೋಕ್ಲು ಬ್ಲಾಕ್ ಸಮಿತಿ ಪದಾಧಿಕಾರಿ ಭುವನೇಶ್ವರ ಕೊಪ್ಪದ, ಯುವ ಕಾಂಗ್ರೆಸ್ನ ಜಯಪ್ರಕಾಶ್ ಪನ್ನೇಡ್ಕ, ರೋಹಿತ್ ಪನ್ನೇಡ್ಕ, ರಶೀದ್ ಬಾಲಂಬಿ, ಚೆನಿಯಪ್ಪ ಕಟ್ಟೆಪಾರೆ, ಪುರುಷೋತ್ತಮ ಕಟ್ಟೆಪ್ಪಾರೆ, ರಘುನಾಥ್ ಬಾಲಂಬಿ, ಶಿವರಾಮ ಕೊಪ್ಪದ, ಪೆತ್ತಾಜೆ ಸೂರ್ಯ ಮತ್ತು ವಲಯದ ಪ್ರಮುಖರು ಉಪಸ್ಥಿತರಿದ್ದರು.

Continue Reading

Kodagu

ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಕೆ

Published

on

ಮಡಿಕೇರಿ :  ಮಹದೇವಪೇಟೆಯ ಪಂಪಿನಕೆರೆಯಲ್ಲಿ ಭಾನುವಾರ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾಗೆ ಚಾಲನೆ ದೊರೆಯಿತು.
ನಾಲ್ಕು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಚಾಲನೆ ನೀಡಿದರು.


ನಗರದ ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಪುಷ್ಪಾಲಂಕೃತವಾಗಿ, ಭಕ್ತರ ಜಯಘೋಷದೊಂದಿಗೆ ಮರೆವಣಿಗೆ ಆರಂಭವಾಯಿತು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ದೇವತೆಗಳ ಕರಗಗಳು ಮೆರವಣಿಗೆ ಹೊರಟವು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪೂಜೆಯ ನಂತರ ಆರಂಭವಾದ ಕರಗಗಳು ನಗರ ಪ್ರದಕ್ಷಿಣೆ ಇನ್ನು 9 ದಿನಗಳ ಕಾಲ ಮುಂದುವರಿಯಲಿದೆ.

ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಿಂದ ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ದೇವಾಲಯದಿಂದ ಜಿಜೇಶ್
ಕೋಟೆ ಮಾರಿಯಮ್ಮ ದೇವಾಲಯದಿಂದ
ಪ್ರಜ್ವಲ್ ಹಾಗೂ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಿಂದ ಗಿರೀಶ್ ಎಂಬುವರು ಕರಗ ಹೊತ್ತಿದ್ದರು.

ಕರಗ ಪೂಜೆ ಸಂದರ್ಭದಲ್ಲಿ ಶಾಸಕರಾದ ಡಾ. ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸೂರಜ್, ಪೌರಾಯುಕ್ತರಾದ ಎಚ್.ಆರ್.ರಮೇಶ್ ದಸರಾ ಸಮಿತಿ ಪ್ರಮುಖರಾದ ಅರುಣ್ ಕುಮಾರ್, ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ಪ್ರಕಾಶ್ ಆಚಾರ್ಯ, ಟಿ.ಪಿ.ರಮೇಶ್, ಅನಂತ ಶಯನ, ಜಿ.ಚಿದ್ವಿಲಾಸ್, ಅನಿಲ್ ಎಚ್ ಟಿ, ರಮೇಶ್, ಚುಮ್ಮಿ ದೇವಯ್ಯ, ಮೋಹನ್, ಕವನ್ ಮಡಿಕೇರಿ ದಸರಾ ಹಾಗೂ ವಿವಿಧ ದೇವಾಲಯ ಸಮಿತಿ ಪ್ರಮುಖರು ಇದ್ದರು.

Continue Reading

Trending

error: Content is protected !!