Mysore
ಗುರುವಾರ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನಾಚರಣೆ
 
																								
												
												
											ಶಂಕರ್ ಕಟ್ಟೆಮಳಲವಾಡಿ,
ಹುಣಸೂರು : ತಾಲೂಕಿನಲ್ಲಿ ದಿನಾಂಕ 11-9-2025 ನೇ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನಾಚರಣೆ ಹಮ್ಮಿಕೊಂಡಿದ್ದು ಸಮಯ 9 ಗಂಟೆಗೆ ಮುನೇಶ್ವರ ಕಾವಲು ಮೈದಾನದಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿ ಶಿಕ್ಷಕರ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ, ಶಾಲೆಗೆ ರಜೆ ಘೋಷಣೆ ಮಾಡಿದ್ದು ಎಲ್ಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ ತಿಳಿಸಿದರು.
ಅವರು ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ಚೆನ್ನವೀರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ ಹಾಗೂ ಕಾರ್ಯದರ್ಶಿ ಪ್ರಸನ್ನ ಇದ್ದರು.
Mysore
ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರ ಭಜನೆ
 
														ಮೈಸೂರು : ಚಾಮುಂಡಿ ಚಲೋಗೆ ಅವಕಾಶ ನೀಡಿದ ಹಿನ್ನೆಲೆ.
ಪೊಲೀಸ್ ಠಾಣೆಯಲ್ಲಿ ಭಜನೆ ಮಾಡುತ್ತಿರುವ ಹಿಂದೂ ಕಾರ್ಯಕರ್ತರು.
ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿ ಅನೇಕ ಕಡೆ ಭಜನೆ ಮಾಡುವ ಮೂಲಕ ಪ್ರತಿಭಟನೆ.

ಕರಾವಳಿ ಭಾಗದಿಂದ ಚಾಮುಂಡಿ ಚಲೋಗೆ ಬಂದಿದ್ದ ಕಾರ್ಯಕರ್ತರು.
ಬಂಧಿಸಿ ಕರೆದೊಯ್ದರು ಸಿ.ಎ.ಆರ್. ಗ್ರ್ಯಾಂಡ್ ನಲ್ಲೇ ಭಜನೆ ಮಾಡಿದ ಆಕ್ರೋಶ.
ಭಜನೆ ಮೂಲಕ ನಿರಂತರ ಪ್ರತಿಭಟನೆ ಮಾಡುತ್ತಿರುವ ಹಿಂದೂ ಕಾರ್ಯಕರ್ತರು.
Mysore
ಚಾಮುಂಡಿ ಬೆಟ್ಟಕ್ಕೆ ಹೋಗುವ ಪ್ರತಿಯೊಂದು ರಸ್ತೆಯಲ್ಲೂ ನಾಕ ಬಂದಿ.
 
														ಮೈಸೂರು: ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ
ಹಿಂದೂ ಜಾಗರಣ ವೇದಿಕೆಯಿಂದ ಚಾಮುಂಡಿ ಚಲೋ ಹಿನ್ನೆಲೆ.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.
300 ಕ್ಕು ಹೆಚ್ಚು ಪೊಲೀಸರ ನಿಯೋಜನೆ.

ಸ್ಥಳಕ್ಕೆ ಡಿಸಿಪಿ ಬಿಂದು ಮಣಿ ಭೇಟಿ.
ಚಾಮುಂಡಿ ಬೆಟ್ಟಕ್ಕೆ ಹೋಗುವ ಪ್ರತಿಯೊಂದು ರಸ್ತೆಯಲ್ಲೂ ನಾಕ ಬಂದಿ.
ಚಾಮುಂಡಿ ಚಲೋ ವಿರೋಧಿಸಲು ಬಂದ ದಲಿತ ಮಹಾಸಭಾ ಅಧ್ಯಕ್ಷನನ್ನು ವಶಕ್ಕೆ ಪಡೆದ ಖಾಕಿ
ಪ್ರತಾಪ ಸಿಂಹನ ನಡಿಗೆ ದ್ವೇಷದ ಕಡೆಗೆ , ಮಹದೇವಪ್ಪನ ನಡಿಗೆ ಸೌಹಾರ್ದದ ಕಡೆಗೆ ಎಂದು ಘೋಷಣೆ ಕೂಗಿದ ರಾಜೇಶ್.
ರಾಜೇಶ್ ನನ್ನು ಬಂಧಿಸಿ ಕರೆದೊಯ್ದ ಪೊಲೀಸರು.
ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪೊಲೀಸರ ಸರ್ಪಗವಲು.
ಪೊಲೀಸರು ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ.
ಚಾಮುಂಡಿ ಚಲೋಗೆ ಬಂದಿದ್ದ ಬಿಜೆಪಿ ನಾಯಕರು.
ಈ ನಡುವೆ ಚಲೋಗೆ ಅವಕಾಶ ನೀಡದ ಪೊಲೀಸರು.
ಬೆಟ್ಟಕ್ಕೆ ಹೋಗೆ ಹೋಗ್ತೀವಿ ಅಂತ ಬಿಜೆಪಿ ನಾಯಕರ ಪಟ್ಟು.
ಬಿಜೆಪಿ ಮುಖಂಡ ಶುಶ್ರುತ್ ಗೌಡ ಸೇರಿ ಅನೇಕರು ಪೊಲೀಸರ ವಶಕ್ಕೆ.
ಸ್ಥಳಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಆಗಮನ.
ಚಾಮುಂಡಿ ಚಲೋಗೆ ಅನುಮತಿ ಇಲ್ಲ.
ದಯಮಾಡಿ ಹೊರಡಿ ಎಂದ ಪೊಲೀಸರು.
ಒಪ್ಪದ ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು.
ಮೈಸೂರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೈಡ್ರಾಮಾ.
Mysore
ಅನುಮತಿ ಇಲ್ಲದಿದ್ದರೂ ಜಾಥಾಕ್ಕೆ ಯತ್ನ: ಎರಡೂ ಸಂಘಟನೆಯವರು ಅರೆಸ್ಟ್
 
														ಮೈಸೂರು: ಮೈಸೂರಲ್ಲಿ ಹೆಚ್ಚಾಯ್ತು ದಸರಾ ದಂಗಲ್
ಅನುಮತಿ ಇಲ್ಲದ ಎರಡೂ ಸಂಘಟನೆಗಳ ಮುಖಂಡರ ಅರೆಸ್ಟ್.
ಯಾರನ್ನೂ ಬೆಟ್ಟಕ್ಕೆ ಹೋಗುವುದಕ್ಕೆ ಬಿಡಲ್ಲ ಎಂದ ಪೊಲೀಸರು.

ಒಂದೆಡೆ ಹಿಂದೂ ಮುಖಂಡರು ಅರೆಸ್ಟ್.
ಮತ್ತೊಂದೆಡೆ ದಲಿತ ಮಹಾ ಸಭಾ ಮುಖಂಡರ ಬಂಧನ.
ಮಾಜಿ ಶಾಸಕ ಎಲ್.ನಾಗೇಂದ್ರ ಕೂಡ ಬಂಧನ.
- 
																	   Mysore18 hours ago Mysore18 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore23 hours ago Mysore23 hours agoಬಾನು ಮುಷ್ತಾಕ್ ಕ್ಷಮೆ ಕೇಳಿದರೆ ಪಿಐಎಲ್ ವಾಪಸ್: ಪ್ರತಾಪ್ ಸಿಂಹ 
- 
																	   Mysore4 hours ago Mysore4 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mandya18 hours ago Mandya18 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Kodagu41 minutes ago Kodagu41 minutes agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ 
- 
																	   Hassan17 hours ago Hassan17 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ 
- 
																	   Kodagu19 hours ago Kodagu19 hours agoಸೆ.11 ಕ್ಕೆ “ವಿಷಪೂರಿತ ಹಾವುಗಳು : ಗುರುತಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ 
- 
																	   Chikmagalur16 hours ago Chikmagalur16 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 

 
											 
											 
											 
											 
											