Connect with us

Mandya

ಮುತುವರ್ಜಿ ವಹಿಸಿ ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಡಾ.ಕುಮಾರ

Published

on

ಮಂಡ್ಯ: ಅಧಿಕಾರಿಗಳು ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚಿಸಿದರು.

ಮುಖ್ಯಮಂತ್ರಿಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ವಿವಿಧ ಇಲಾಖೆಗಳ ಕಾಮಗಾರಿ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಇಲಾಖೆಯ 30 ವಿವಿಧ ಕಾಮಗಾರಿಗಳು ಬಾಕಿ ಇದ್ದು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಹೇಳಿದರು.

ಹಾಸ್ಟೆಲ್ ರಿಪೇರಿ ಕಾಮಗಾರಿಗಳು ನೂತನ ಹಾಸ್ಟೆಲ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿದಾಗ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಕಾಮಗಾರಿಗಳನ್ನು ಮುಗಿಸಬೇಕು. ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಗುತ್ತಿಗೆದಾರರೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಅಂಗನವಾಡಿ ಕೇಂದ್ರಗಳು ಅತಿ ಮುಖ್ಯ, ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನು ವಿಳಂಬ ಮಾಡಲೇ ಶೀಘ್ರವಾಗಿ ಮುಗಿಸಿ
ಎಂದು ಎಚ್ಚರಿಸಿದ್ದರು.

 

ಮಿನ್ಸ್ ಕ್ಯಾನ್ಸರ್ ಕೇರ್ ಸೆಂಟರ್ ಈಗಾಗಲೇ ನಿರ್ಮಾಣಗೊಂಡಿದ್ದು ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದು. ಸಂಬಂಧಪಟ್ಟ ವಿವಿಧ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಭೆ ಆಯೋಜಿಸಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ 166 ಕೊಠಡಿಗಳ ಕಾಮಗಾರಿಗಳು ಇದ್ದು ಈಗಾಗಲೇ 154 ಕೊಠಡಿಗಳ ಕಾಮಗಾರಿಗಳನ್ನು ಮುಗಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸುಸರ್ಜಿತವಾದ ಕೊಠಡಿಗಳನ್ನು ನಿರ್ಮಾಣ ಮಾಡಿ ಎಂದು ಹೇಳಿದರು.

ಸರ್ಕಾರದ ವಿವಿಧ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯವರು ವಿಶೇಷ ಆಸಕ್ತಿ ವಹಿಸಿ ಗುತ್ತಿಗೆದಾರರೊಂದಿಗೆ ಸಮನ್ವಯ ಸಾಧಿಸಿ ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಶಿವಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mandya

ಟನ್ ಕಬ್ಬಿಗೆ 5500.ರೂ. ನೀಡುವಂತೆ ಒತ್ತಾಯ: ಎನ್.ಎಲ್.ಭರತ್ ರಾಜ್ ಆರೋಪ

Published

on

ಶ್ರೀರಂಗಪಟ್ಟಣ : ರಾಜ್ಯ ಸರ್ಕಾರ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ರೂ. 3,200 ಹಾಗೂ 3,300 ನಿಗದಿಪಡಿಸಿದೆ. ಆದರೆ ಮಂಡ್ಯ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ನೀಡದೆ ಪ್ರಾದೇಶಿಕ ತಾರತಮ್ಮ ಮಾಡಿ ರಾಜ್ಯ ಕಬ್ಬು ಬೆಳೆಗಾರ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಎಂದು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಆರೋಪಿಸಿದ್ದಾರೆ.

ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ನೀತಿ ಕೇವಲ ಬೆಳಗಾವಿ ಮತ್ತು ಉತ್ತರ ಕರ್ನಾಟಕ ದ ಜಿಲ್ಲೆಗೆ ಸೀಮಿತ ಮಾಡಿದ್ದಾರೆ.

ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಎಫ್ ಆರ್ ಪಿ ನಿಗಧಿ ಪಡಿಸುವಲ್ಲೂ ಕೇಂದ್ರ ಸರ್ಕಾರ ವಂಚನೆ ಮಾಡಿದೆ. 2009 ಕ್ಕಿಂತ ಮೊದಲು ಶೇ.8.50 ಸಕ್ಕರೆ ಇಳುವರಿ 2000 ದಿಂದ 2018 ರವರೆಗೆ ಶೇ. 9.50 ಸಕ್ಕರೆ ಇಳುವರಿ 2018 ರಿಂದ 22 ರವರೆಗೆ ಶೇ. 10. ಸಕ್ಕರೆ ಇಳುವರಿ, 2022 ರಿಂದ ಶೇ. 10.25 ಸಕ್ಕರೆ ಇಳುವರಿ ಆಧಾರದ ಮೇಲೆ ಎಫ್ ಆರ್.ಪಿ. ನಿಗದಿಪಡಿಸುತ್ತಿದ್ದಾರೆ.

ಇದರಲ್ಲಿ ಮೋದಿಯವರ ಮೋಸ ಜನರಿಗೆ ಅರಿವಾಗಬೇಕು. ಒಂದು ಪರ್ಸೆಂಟ್ ಹೆಚ್ಚಾದರೆ 346 ರೂ.ಗಳನ್ನು ಎಫ್ ಆರ್ ಪಿ ಜೊತೆಗೆ ನೀಡಬೇಕಾಗುತ್ತದೆ. ಆ ಕಾರಣದಿಂದಾಗಿ ಸಕ್ಕರೆ ಇಳುವರಿಯ ಪ್ರಮಾಣವನ್ನೇ ಕಡಿಮೆ ಮಾಡುವಂತಹ ಯತ್ನ ಸರ್ಕಾರಗಳು ಹಾಗೂ ಕಾರ್ಖಾನೆಗಳು ಸಹ ಮಾಡುತ್ತಿವೆ.

ಹಾಗಾಗಿ 9.5 0 ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಗೆ ಕೇಂದ್ರ ಸರ್ಕಾರ 5,500 ರೂಪಾಯಿ ಬೆಲೆಯನ್ನ ನಿಗದಿಪಡಿಸಬೇಕು.
ಹರಿಯಾಣ,850 ಪಂಜಾಬ್, 860ಉತ್ತರ ಪ್ರದೇಶ,750 ತಮಿಳುನಾಡು 349.SAP ನೀಡುತ್ತಿದೆ. ಈ ರಾಜ್ಯಗಳ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 500 ಎಸ್ ಎ ಪಿ ನಿಗದಿಪಡಿಸಬೇಕು( ರಾಜ್ಯ ಸಲಹಾ ಬೆಲೆ )2022 ಮತ್ತು 23 ರಲ್ಲಿ ನಿಗದಿ ಮಾಡಿದ್ದ ಟನ್ ಗೆ 150 ರೂ.ಗಳ ಬಾಕಿಯನ್ನು ಶೀಘ್ರವಾಗಿ ನೀಡಬೇಕು. ಜೊತೆಗೆ 2023,24,25 ನೇ ಸಾಲಿಗೆ SAP. ನಿಗದಿಪಡಿಸಿ ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು.

ದೇಶದ ವಿವಿಧಡೆ ಕಬ್ಬಿನ ಬೆಲೆಗಳು ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಾಗುತ್ತಿದೆ. ಹರಿಯಾಣ, ಪಂಜಾಬ್ಬಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿದೆ. ಗುಜರಾತ್ ನಲ್ಲಿ ತಳಿಗಳ ಆಧಾರದ ಮೇಲೆ 4000 ದಿಂದ 6000 ವರೆಗೆ ಇದೆ. ಮಹಾರಾಷ್ಟ್ರದಲ್ಲಿ 3,650 ನಿಗದಿಯಾಗಿದೆ. ಆದರೆ ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಬಹಳ ಅನ್ಯಾಯವಾಗುತ್ತಿದೆ.

ಕಟಾವು ಮತ್ತು ಸಾಗಾಣಿಕೆ ವೆಚ್ಚ 900 ರಿಂದ1300 ರವರೆಗೆ ಖರ್ಚು ಬರುತ್ತಿದೆ. ಬೆಳಗಾಂ ಕಬ್ಬಿನ ದರಕ್ಕೂ ನಮಗೂ 1,000 ದಷ್ಟು ನಷ್ಟ ಆಗುತ್ತಿದೆ ಹಾಗಾಗಿ ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಕೊಟ್ಟು ನಮಗೂ 3,300 ಗಳ ಬೆಲೆ ನೀಡಬೇಕೆಂದು ಆಗ್ರಹಿಸಿದರು.

ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್ ಕಾಕಂಬಿ ಬಗಾಸ್, ಡಿಸ್ಟಿಲರಿಸ್, ಕೋಜೆನ್ ಇತರೆ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.50 ರಷ್ಟು ಪಾಲನ್ನು ನೀಡಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಪರಿಶಿಸಲು ಪ್ರತಿ ಕಾರ್ಖಾನೆಗಳಿಗೆ ಕನಿಷ್ಠ ಐದು ಮಂದಿ ಕಬ್ಬು ಬೆಳೆಗಾರರು ಮತ್ತು ತಜ್ಞರ ಸಮಿತಿ ರಚಿಸಬೇಕು.

ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹಾಗೂ ಜವಾಬ್ದಾರಿಯನ್ನು ಸಕ್ಕರೆ ಕಾರ್ಖಾನೆ ಮಾಲೀಕರೇ ನಿರ್ವಹಿಸಬೇಕು. ರೈತ ವಿರೋಧಿ ಸಹಕಾರಿ ಹಾಗೂ ಸಾರ್ವಜನಿಕ ರಂಗದ ಸಕ್ಕರೆ ಕಾರ್ಖಾನೆಗಳ ವಿರೋಧಿಯಾದ ಡಾ. ರಂಗರಾಜನ್ ಸಮಿತಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಸ್ಥಾಪಿತವಾದ ಸಕ್ಕರೆ ರಂಗವನ್ನು ಅನಿಯಮಿತವಾಗಿ ರದ್ದತಿಗಾಗಿ ತಂದಿರುವ ಕರ್ನಾಟಕ ಕಬ್ಬು ಖರೀದಿ ಹಾಗೂ ಪೂರೈಕೆ ನಿಯಂತ್ರಣ ಕಾಯ್ದೆ 2013 ರದ್ದುಗೊಳಿಸಬೇಕು ಹಾಗೂ 2013 ಕ್ಕಿಂತ ಮೊದಲೇ ಇದ್ದ ರಾಜ್ಯ ಸಲಹಾ ಬೆಲೆ ಸ್ಥಾಪಿಸಬೇಕು.

ಕೇಂದ್ರದ ಸಕ್ಕರೆ ನಿಯಂತ್ರಣ ಮಂಡಳಿ ಹೊಸದಾಗಿ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನವಾಗಿ ಎಕರೆಗೆ 10,000 ನೀಡಬೇಕು ಎಂದು ಒತ್ತಾಯಿಸಿದರು.

ನೂತನ ಸಮಿತಿ ಆಯ್ಕೆ:

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಮಹದೇವಪುರ ವಲಯದ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಗೌರವ ಅಧ್ಯಕ್ಷರಾಗಿ ನಂಜೇಗೌಡ ಮತ್ತು ಚುಂಚೆಗೌಡ .
ಅಧ್ಯಕ್ಷರಾಗಿ. ಬಿ ರಾಮಚಂದ್ರ, ಉಪಾಧ್ಯಕ್ಷರಾಗಿ .ನಾಗೇಂದ್ರ. ಚನ್ನಹಳ್ಳಿ ನಿಂಗೇಗೌಡ . ಕಾರ್ಯದರ್ಶಿಯಾಗಿ. ರವಿಕುಮಾರ್ ಎಮ್.ಸಿ. ಸಹ ಕಾರ್ಯದರ್ಶಿ ರಾಜು ಶಿವಕುಮಾರ್. ಸಮಿತಿ ಸದಸ್ಯರಾಗಿ ಸತೀಶ್ .ಚಂದ್ರಶೇಖರ್,  ಜಿ.ಮಾದೇಗೌಡ . ಜವನೇಗೌಡ., ಪ್ರಸನ್ನ ಅಬ್ದೂಲ್ ಸುಕೂರ್ . ಪುಟ್ಟಸ್ವಾಮಿ .ಕೇಬಲ್ ಜವನೇಗೌಡ, ರಾಮಕೃಷ್ಣಪ್ಪ. ಎಮ್.ಬಿ.ಪುಟ್ಟಸ್ವಾಮಿ . ಪಟೇಲ್ ಶಿವರಾಮೇಗೌಡ, ಎಸ್.ನಾಗರಾಜ್, ಎಮ್.ಜೆ.ಮಹೇಶ್ ಆಯ್ಕೆಯಾಗಿದ್ದಾರೆ. ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ತಿಳಿಸಿದ್ದಾರೆ.

ವೇದಿಕೆಯಲ್ಲಿ ನಂಜೇಗೌಡ, ಚುಂಚೇಗೌಡ .ರಾಮಕೃಷ್ಣಪ್ಪ ಅಬ್ದುಲ್ ಸುಕೂರ್. ರಾಮಚಂದ್ರ ರವಿಕುಮಾರ್ ರಾಜು. ಶಿವಕುಮಾರ್ ನಿಂಗೇಗೌಡ ಉಪಸ್ಥಿತಿರಿದ್ದರು.

 

Continue Reading

Mandya

ತಾಲೂಕು ಪಂಚಾಯತ್‌ಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಜಿ.ಪಂ. ಸಿಇಓ ಕೆ.ಆರ್. ನಂದಿನಿ 

Published

on

ಮಂಡ್ಯ: ಸ್ವಚ್ಛ ಭಾರತ, ಮಹಾತ್ಮ ಗಾಂಧಿ ನರೇಗಾ, ಎನ್ಆರ್‌ಎಲ್‌ಎಂ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಮಳವಳ್ಳಿ ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿ.ಪಂ. ಸಿಇಓ ಕೆ.ಆರ್. ನಂದಿನಿ ಸೂಚಿಸಿದರು.

ತಾಲೂಕು ಪಂಚಾಯತ್ ಕಚೇರಿಗೆ  ಇಂದು  ಭೇಟಿ ನೀಡಿದ ಅವರು, ಪ್ರತಿ ಸೋಮವಾರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕುಂದು ಕೊರತೆ ಸಭೆ ಆಯೋಜಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಸ್ವೀಕೃತವಾಗಿರುವ ಕುಂದು ಕೊರತೆ ಅರ್ಜಿಗಳ ಬಗ್ಗೆ ಈವರೆಗೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಪಡೆದು ಪರಿಶೀಲನೆ ನಡೆಸಿದರು.

ಮುಂದಿನ ಸೋಮವಾರದಿಂದ ತಾ.ಪಂ. ಕಚೇರಿಗಳಲ್ಲಿ ಕುಂದುಕೊರತೆ ಸಭೆಯ ಅನುಪಾಲನಾ ಸಭೆ

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಆಗಸ್ಟ್. 18 ರಿಂದ ಪ್ರತಿ ಸೋಮವಾರವೂ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲಾ ಪಂಚಾಯತ್ ಕಚೇರಿಗೆ ಈವರೆಗೆ 300ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಈ ಅರ್ಜಿಗಳ ಕುರಿತು ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ಇಂದಿನಿಂದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅನುಪಾಲನಾ ಸಭೆಯನ್ನು ನಡೆಸಲಾಗುತ್ತಿದೆ. ಮುಂದಿನ ಸೋಮವಾರವೂ ಸಹ ಮತ್ತೊಂದು ತಾಲೂಕು ಪಂಚಾಯತ್ ನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಅನುಪಾಲನಾ ಸಭೆಯನ್ನು ನಡೆಸಲಾಗುತ್ತದೆ ಎಂದು ಜಿ.ಪಂ. ಸಿಇಓ ರವರು ತಿಳಿಸಿದರು.

ಶೌಚಾಲಯ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹಧನ ಪಾವತಿಸಿ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ರೂ.12,000/-ಗಳಂತೆ ಪ್ರೋತ್ಸಾಹಧನ ಬಿಡುಗಡೆಯಾಗಿದ್ದು, ಸದರಿ ಅನುದಾನವನ್ನು ಫಲಾನುಭವಿಗಳಿಗೆ ಪಾವತಿಸಲು ಕ್ರಮವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾಗ್ರಿ ಮೊತ್ತವನ್ನು ಆಧ್ಯತೆಯ ಮೇಲೆ ಪಾವತಿಸಲು ಸೂಚನೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಗ್ರಿ ಮೊತ್ತವನ್ನು ಹಿರಿತನದ ಆಧಾರದಲ್ಲಿ ಪಾವತಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ತೆರಿಗೆ ವಸೂಲಾತಿಯಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸಲು ಯೋಜನೆ ರೂಪಿಸಿ: ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ತೆರಿಗೆ ವಸೂಲಾತಿ ಮಾಡಲು ಯೋಜನೆ ರೂಪಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕರೆ ನೀಡಿದರು.

ಪ್ರತೀ ಗುರುವಾರ ಹಮ್ಮಿಕೊಳ್ಳಲಾಗುತ್ತಿರುವ ತೆರಿಗೆ ವಸೂಲಾತಿ ವಿಶೇಷ ಅಭಿಯಾನದಂದು ಹೆಚ್ಚಿನ ಪ್ರಗತಿ ಸಾಧಿಸಲು ಹಾಗೂ ಉಳಿದ ದಿನಗಳಲ್ಲಿಯೂ ತೆರಿಗೆ ವಸೂಲಾತಿಗೆ ಕ್ರಮವಹಿಸಬೇಕೆಂದು ತಿಳಿಸಿದರು.

ಗ್ರಾ.ಪಂ. ಅಭಿಲೇಖಾಲಯದ ಬಗ್ಗೆ ವರದಿ ಸಲ್ಲಿಸಲು ಸೂಚನೆ: ಗ್ರಾ.ಪಂ.ಗಳಲ್ಲಿನ ದಾಖಲೆಗಳು, ಇ-ಸ್ವತ್ತು ಸಂಬಂಧಿಸಿದ ಕಡತಗಳು ಸೇರಿದಂತೆ ಇತರೆ ದಾಖಲೆಗಳ ನಿರ್ವಹಣೆಗೆ ಗ್ರಾ.ಪಂ.ಗಳು ಸುಸಜ್ಜಿತ ಅಭಿಲೇಖಾಲಯಗಳನ್ನು ನಿರ್ವಹಣೆ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಭಿಲೇಖಾಲಯ ನಿರ್ವಹಣೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ವರದಿ ಸಲ್ಲಿಸುವಂತೆ ತಾ.ಪಂ. ಇಓ ಗಳಿಗೆ ಸೂಚಿಸಿದರು.

ಇ-ಸ್ವತ್ತು ವಿತರಣೆಗೆ ಕ್ರಮವಹಿಸಲು ಸೂಚನೆ: ಹೊಸ ತಂತ್ರಾಂಶದ ಮೂಲಕ ಇ-ಸ್ವತ್ತು ವಿತರಣೆ ಮಾಡಲು ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಈ ಬಗ್ಗೆ ಸಾಕಷ್ಟು ತರಬೇತಿಗಳನ್ನು ಸಹ ನೀಡಲಾಗಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಮಳವಳ್ಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ತಾಲ್ಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕ (ಪಂ.ರಾಜ್) ಪಾರ್ಥಸಾರಥಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿಡಿಓಗಳು ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

Continue Reading

Mandya

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ SC, ST ಆಯೋಗದ ಅಧ್ಯಕ್ಷ ಡಾ. ಮೂರ್ತಿ

Published

on

ಮದ್ದೂರು : ರಾಜ್ಯ ಎಸ್‌, ಎಸ್‌ಟಿ ಆಯೋಗದ ಅಧ್ಯಕ್ಷ ಡಾ. ಮೂರ್ತಿ ರವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ,ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನಂತರ ಅವರು ಮಾತನಾಡಿ ಆಯೋಗದಲ್ಲಿ ಈಗಾಗಲೇ ಸುಮಾರು 2,800 ಅರ್ಜಿಗಳು ದಾಖಲಾಗಿವೆ ಅವುಗಳಲ್ಲಿ ಸುಮಾರು 60 ರಿಂದ 70 ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ನಾನು ಆಯೋಗದ ಅಧ್ಯಕ್ಷನಾದ ಬಳಿಕ ಬಹಳಷ್ಟು ಅಹವಾಲುಗಳು ರಾಜ್ಯದ ಇತರೆಡೆಗಳಿಂದ ಬರುತ್ತಿದ್ದವು. ಹೀಗಾಗಿ ತಾಲೂಕು ಮಟ್ಟದಲ್ಲಿಯೇ ಸಭೆ ನಡೆಸಿದ್ದು, ಅರ್ಜಿ ಸ್ವೀಕರಿಸಿ ಅಲ್ಲಿಯೇ ಅಧಿಕಾರಿಗಳ ಸಭೆಯನ್ನೂ ನಡೆಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಇಂದು ನನ್ನ ಸ್ವಂತ ತಾಲೂಕಾದ ಮದ್ದೂರಿನಲ್ಲಿ ಸಭೆ ನಡೆಸಿದ್ದೇನೆ ಎಂದು ಹೇಳಿದರು.


ಇಂದು ಸಾರ್ವಜನಿಕವಾಗಿ ಒಟ್ಟು 26 ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಜಮೀನು, ದೌರ್ಜನ್ಯ, ಸುಳ್ಳು ಜಾತಿ ಸಲ್ಲಿಕೆ ವಿಚಾರಗಳು ಸೇರಿದಂತೆ ಸ್ಮಶಾನ ವಿವಾದಗಳಿಗೆ ಸಂಭಂಧಿಸಿದಂತೆ ಅರ್ಜಿಗಳನ್ನು ಪಡೆಯಲಾಗಿದೆ ಎಂದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಶೀಘ್ರ ಬಗೆಹರಿಸಲು ಸೂಚಿಸಿದ್ದೇನೆ ಎಂದರು.


ಈ ವೇಳೆ ಮುಖಂಡರಾದ ಹಿಂದುಳಿದ ವರ್ಗದ ಮುಖಂಡರಾದ ಚಿದಂಬರ ಮೂರ್ತಿ, ಗುಡಿಗೆರೆ ಬಸವರಾಜು, ಕುಮಾರ್ ಕೊಪ್ಪ,ರಾಮಾನಂದ್, ಆಲೂರು ಬಸವರಾಜು, ಹಳ್ಳಿಕೆರೆ ಮಾದೇಶ್, ಆಲೂರು ಕುಮಾರ್, ಮಹದೇವಪ್ಪ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಮಾಜ ಕಲ್ಯಾಣಾಧಿಕಾರಿ ನಾಗರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Continue Reading

Trending

error: Content is protected !!