Mysore
ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ: ಮೈಸೂರಿನಲ್ಲಿ ಸಂಭ್ರಮ
 
																								
												
												
											ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಅಗ್ರಹಾರ ವೃತ್ತದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮ ಆಚರಿಸಲಾಯಿತು.
ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ಕರ್ಣನಿಗೆ ಕೊನೆಗೂ ಕಾಲ ಕೂಡಿಬಂತು. 15 ವರ್ಷದ ಅಭಿಮಾನಿಗಳ ಕನಸು ಈಗ ನನಸಾಗಿದೆ. ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು. ಈ ಬಾರಿ ವಿಷ್ಣು ವರ್ಧನ್ ಅವರ 75 ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಹಬ್ಬದಂತೆ ಆಚರಿಸುತ್ತೇವೆ. ಅಭಿನವ ಸರಸ್ವತಿ ಬಿ.ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ನೀಡಿರುವುದು ಸ್ವಾಗತಿಸುತ್ತೇವೆ ಎಂದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ.ರಾಘವೇಂದ್ರ, ಬಸವರಾಜ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರವಿಚಂದ್ರ, ಎಸ್.ಎನ್.ರಾಜೇಶ್, ಟಿ.ಎಸ್.ಅರುಣ್, ರವಿನಂದನ್, ಮಹಾನ್ ಶ್ರೇಯಸ್, ಲಕ್ಷ್ಮಣ್, ಚಿನ್ನ ಬೆಳ್ಳಿ ಸಿದ್ದಪ್ಪ, ಸಂತೋಷ್, ರವೀಂದ್ರ ಕುಮಾರ್, ಅಭಿ, ಹರೀಶ್ ನಾಯ್ಡು, ರಾಕೇಶ್ ಭಟ್ ಮುಂತಾದವರಿದ್ದರು.
Mysore
ತಿ.ನರಸೀಪುರ: ಪ್ರಾಧಿಕಾರ ರಚನೆ ನಿರ್ಧಾರ ಕೈಬಿಡುವಂತೆ ಒತ್ತಾಯ ಮಾಡಲಾಯಿತು
 
														ತಿ.ನರಸೀಪುರ: ಪ್ರಸಿದ್ಧ ಪೂಜ್ಯ ತಾಣವಾದ ರಾಜಬೊಪ್ಪೇಗೌಡನಪುರ,ಚಿಕ್ಕಲ್ಲೂರು,ಕುರುಬನ ಕಟ್ಟೆ,ಕಪ್ಪಡಿ ಮತ್ತು ಹೊನ್ನಾಪುರದಲ್ಲಿರುವ ಮಂಟೇಸ್ವಾಮಿ,ಸಿದ್ದಪ್ಪಾಜಿ, ರಾಚಪ್ಪಾಜಿ ಗದ್ದುಗೆಗಳು ಸೇರಿದಂತೆ ಒಟ್ಟು ಐದು ಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವ ಸರ್ಕಾರದ ನಿಲುವನ್ನು ಶೀಘ್ರವೇ ಕೈಬಿಡಬೇಕು ಎಂದು ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಸ್ವಾಮಿ ನೀಲಗಾರರು ಹಾಗೂ ತಮ್ಮಡಿಗಳು, ದೇವರಗುಡ್ಡರು ಮತ್ತು ರೈತ ಸಂಘ, ವಿವಿಧ ಸಮುದಾಯದ ಮುಖಂಡರು ಅಗ್ರಹಿಸಿದರು.
ಪಟ್ಟಣದ ಹಳೇ ಪಿಡಬ್ಲ್ಯೂಡಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಸುದ್ದಿ ಘೋಷ್ಠಿಯಲ್ಲಿ ಕುರಿತು ಮಾತನಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕೆ.ಕುಮಾರಸ್ವಾಮಿ ಮಾತನಾಡಿ ಇತ್ತೀಚಿಗೆ ಮುಖ್ಯಮಂತ್ರಿಗಳು ರಾಜ ಬೊಪ್ಪೇಗೌಡನಪುರ,ಕಪ್ಪಡಿ, ಕುರುಬನಕಟ್ಟೆ, ಚಿಕ್ಕಲ್ಲೂರು ಮತ್ತು ಹೊನ್ನಾಪುರದಲ್ಲಿರುವ ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಸ್ವಾಮಿ ಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದು, ಇದು ಧಾರ್ಮಿಕ, ಪವಿತ್ರ ಕ್ಷೇತ್ರಗಳ ಗದ್ದುಗೆಯ ಪಾವಿತ್ರ್ಯತೆಗೆ ಧಕ್ಕೆ ಆಗಲಿದೆ. ಇದರಿಂದ ಎಲ್ಲ ಕ್ಷೇತ್ರಗಳು ವ್ಯಾಪಾರ ಕ್ಷೇತ್ರಗಳಾಗಿ ಬದಲಾಗಿ ತಮ್ಮ ಆಸ್ತಿತ್ವ ಕಳೆದುಕೊಳ್ಳಲಿವೆ. ಹಾಗಾಗಿ ಎಲ್ಲ ಕ್ಷೇತ್ರಗಳ ಪರಂಪರೆ, ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಪ್ರಾಧಿಕಾರ ರಚನೆ ನಿರ್ಧಾರದಿಂದ ಕೈ ಬಿಡುವ ಮೂಲಕ ಹಿಂದೆ ಸರಿಯಬೇಕು ಎಂದರು.

ರೈತ ಸಂಘದ ಜಿಲ್ಲಾ ಮುಖಂಡ ಈ.ರಾಜು ಮಾತನಾಡಿ, ರಾಜ್ಯ ಸರ್ಕಾರಕ್ಕೆ ಈ ಎಲ್ಲ ಶ್ರೀಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಐದೂ ಕ್ಷೇತ್ರಗಳಿಗೂ ಅನುದಾನ ಬಿಡುಗಡೆಗೊಳಿಸಿ ಹೆಚ್ಚು ಅಭಿವೃದ್ಧಿಪಡಿಸಲಿ. ಪ್ರಾಧಿಕಾರ ರಚನೆಯಿಂದ ಶ್ರೀ ಕ್ಷೇತ್ರಗಳ ಅಭಿವೃದ್ಧಿಯ ಬದಲು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ಭಕ್ತ ಸಮೂಹಕ್ಕೆ ಧಕ್ಕೆ ಉಂಟಾಗಲಿದೆ. ಹಾಗಾಗಿ ಸರ್ಕಾರದ ಪ್ರಾಧಿಕಾರ ರಚನೆ ಉದ್ದೇಶವನ್ನು ಕೈಬಿಡಬೇಕು ಹಾಗೂ ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದ ಮುಖಂಡರು ಹಾಗೂ ಬೋಪ್ಪೆಗೌಡನಪುರದ ಸ್ವಾಮಿಜೀಯವರ ಉಪಸ್ಥಿತಿಯಲ್ಲಿ ತಾಲ್ಲೂಕು ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರದ ನಿಲುವನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ. ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜ್ಜಲೂರು ಚಂದ್ರಶೇಖರ್, ಮುಖಂಡ ಕಳ್ಳಿಪುರ ನಾರಾಯಣ್, ಕಿರಗಸೂರು ಮಾಜಿ ಗ್ರಾಪಂ ಅಧ್ಯಕ್ಷ ಸಿ.ಪುಟ್ಟಯ್ಯ, ಹೊಸಹಳ್ಳಿ ಎಂ.ಚಿನ್ನಸ್ವಾಮಿ,ತಾಲೂಕು ಮಡಿವಾಳ ಸಂಘದ ಕಾರ್ಯದರ್ಶಿ ಅಲಗೂಡು ಬಸವರಾಜು, ಯಜಮಾನ ಸಿದ್ದರಾಜು,ರಂಜಿತ್, ಗೆಜ್ಜಗನಹಳ್ಳಿ ಮಹದೇವ, ಬಿಜೆಪಿ ಮುಖಂಡ ಆರ್.ರಾಮಸ್ವಾಮಿ, ಹಳೇ ಕೆಂಪಯ್ಯನಹುಂಡಿ ಎಂ. ಪುಟ್ಟಸ್ವಾಮಿ, ದಲಿತ ಮುಖಂಡರಾದ ಗೆಜ್ಜಗನಹಳ್ಳಿ ಎನ್.ರಾಜೇಶ್, ನಾಗರಾಜು,ನೀಲಗಾರರ ಮುಖಂಡರುಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು.
Mysore
ಎಂಐಟಿ ಕಾಲೇಜಿನಲ್ಲಿ ತರಬೇತಿ ಕಾರ್ಯಗಾರ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಂವಾದ ಕಾರ್ಯಕ್ರಮ
 
														ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ತಾಲೂಕಿನ ಮಹಾರಾಜ ಇನ್ ಟ್ಯೂಷನ್ ಆಫ್ ಟೆಕ್ನಾಲಜಿ ಕಾಲೇಜು ತಾಂಡವಪುರದಲ್ಲಿ ಒರಿಯಂಟೇಷನ್ ಪ್ರೋಗ್ರಾಮ್ ಫೌಂಡರ್ ಇನ್ಷೀಯೇಟಿವ್ ಟಿ.ಐ.ಇ ಮೈಸೂರು ವತಿಯಿಂದ ವಿದ್ಯಾರ್ಥಿಗಳಿಗಾಗಿ ಉದ್ಯಮ ಮತ್ತು ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಿಐಇ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ, ಚಾರ್ಟರ್ ಮೆಂಬರ್ ಡಾಕ್ಟರ್ ಧರ್ಮಪ್ರಸಾದ್ , ಎಂಐಟಿ ಕಾಲೇಜು ಅಧ್ಯಕ್ಷರು ಹಾಗೂ ಪ್ರಿನ್ಸಿಪಾಲ್ ಡಾ. ವೈ.ಟಿ. ಕೃಷ್ಣೇಗೌಡ, ಸೇರಿದಂತೆ ಇನ್ನಿತರ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಚಾರ್ಟರ್ ಮೆಂಬರ್ ಉದ್ಯಮಿ ಡಾ. ಧರ್ಮ ಪ್ರಸಾದ್ ಮಾತನಾಡಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಉದ್ಯಮ ಮತ್ತು ಉದ್ಯಮಿಯಾಗಲು ವೇದಿಕೆಯನ್ನು ನಾವು ಸಿದ್ಧಪಡಿಸುತಿದ್ದೇವೆ. ದೇಶದಲ್ಲಿ ವಿಜ್ಞಾನ ತಂತ್ರಜ್ಞಾನ ಹೆಚ್ಚು ಹೆಚ್ಚು ಬೆಳಿತಾ ಇದೆ. ಕಂಪನಿಯಲ್ಲಿ ಸಾಮಾನ್ಯ ಕೆಲಸಗಾರ ಆಗ ಬದಲು ಕಂಪನಿ ಮಾಲೀಕನಾಗುವುದು ನಿಮ್ಮ ಗುರಿಯಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಯೋಜನೆಗಳನ್ನು ಹಾಕಿಕೊಂಡಾಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ. ದೇಶದಲ್ಲಿ ಎಕನಾಮಿಕ್ ಲೀಡರ್ ಗಳ ಕೊರತೆ ಇದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಕನಾಮಿಕ್ ಲೀಡರ್ ಗಳಾಗಿ ಬೆಳೆಯುವ ಗುರಿಯನ್ನು ಬೆಳೆಸಿಕೊಂಡಾಗ ಮಾತ್ರ ದೇಶದ ಎಕನಾಮಿಕ್ ಪರಿಸ್ಥಿತಿ ಅಭಿವೃದ್ಧಿಯಾಗುವ ಜೊತೆಗೆ ವೈಯಕ್ತಿಕ ಜೀವನದಲ್ಲೂ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಟಿಐಇ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ ಮಾತನಾಡಿ ಇಷ್ಟು ದಿನ ಕಾಲೇಜಿಗೆ ಕಂಪನಿಯ ಎಚ್ ಆರ್ ಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಿಗೆ ಸಂಬಂಧಿಸಿದ ಸಂವಾದಗಳನ್ನು ನಡೆಸುತ್ತಿದ್ದರು. ಆದರೆ ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಮಿಗಳೆ ಕಾಲೇಜಿಗೆ ಆಗಮಿಸಿ ಈ ಕಾರ್ಯಕ್ರಮದ ಮೂಲಕ ಭವಿಷ್ಯದಲ್ಲಿ ಉದ್ಯಮಿ ಆಗುವ ವಿದ್ಯಾರ್ಥಿಗಳಿಗೆ ಸಹಕಾರ ಮತ್ತು ಸಹಾಯ ನೀಡುವುದಾಗಿ ಘೋಷಿಸಿರುವುದು ಖುಷಿಕೊಡುವ ವಿಚಾರವಾಗಿ,ಅಮೇರಿಕಾ ಹಾಗೂ ಭಾರತದ ಉದ್ಯಮ ಮತ್ತು ಉದ್ಯಮಿಗಳ ನೋಡಿದಾಗ ಸಾಕಷ್ಟು ಕೊರತೆಗಳನ್ನು ನಮ್ಮಲ್ಲಿ ಕಾಣಬಹುದು ಹಲವು ಮಂದಿ ಅನೇಕ ರೀತಿಯ ಉದ್ಯಮ ಮಾಡುತ್ತಾರೆ. ಆದರೆ ಇವತ್ತಿನ ಮಾರ್ಕೆಟ್ ಮತ್ತು ನೆಟ್‌ವರ್ಕ್ ಯಾವ ರೀತಿ ಅನಾಲಿಸ್ ಮಾಡುವುದನ್ನು ನಮ್ಮಲ್ಲಿ ಅನೇಕರು ಮರೆತಿರುತ್ತಾರೆ. ಈ ನಿಟ್ಟಿನಲ್ಲಿ ಮುಂದೆ ಉದ್ಯಮಿಗಳಾಗುವ ವಿದ್ಯಾರ್ಥಿಗಳು ಈಗಿನಿಂದಲೇ ಈ ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದು ಇವತ್ತಿನ ಕಾರ್ಯಕ್ರಮದ ಮೂಲಕ ಸದು ಉಪಯೋಗ ಆಗಲಿ ಅಂತ ಶುಭ ಹಾರೈಸಿದರು.

ಎಂಐಟಿ ಕಾಲೇಜು ಅಧ್ಯಕ್ಷರು ಹಾಗೂ ಪ್ರಿನ್ಸಿಪಾಲ್ ಡಾ. ವೈ.ಟಿ. ಕೃಷ್ಣೇಗೌಡ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ನಂತರ ರೂ.30000 ಮತ್ತು 40,000 ಸಂಬಳಕ್ಕೆ ಆಸಪಡಿದೆ ತಾವೇ ಸಂಬಳ ಕೊಡುವ ಮಾಲೀಕರಾಗಿ ಬೆಳೆಯಬೇಕು ಹೀಗಾಗಿ ಇವತ್ತು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಉದ್ಯಮಿಗಳ ಜೊತೆ ತಂತ್ರಜ್ಞಾನ ಮತ್ತು ಉದ್ಯಮದ ಕೌಶಲ್ಯತೆ ಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದೇವೆ. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಭವಿಷ್ಯದಲ್ಲಿ ಸಾಧನೆ ಮಾಡಬೇಕು. ಶ್ರದ್ಧೆಯಿಂದ ಈ ಕಾರ್ಯಗಾರ ಮಾಹಿತಿಗಳನ್ನು ಪಡೆದು ಯಶಸ್ವಿ ವ್ಯಕ್ತಿಗಳಾಗಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಎಂಐಟಿ ಕಾಲೇಜು ಜಂಟಿ ಕಾರ್ಯದರ್ಶಿ ಡಾ. ಹೆಚ್.ಕೆ. ಚೇತನ್, ಬೋರ್ಡ್ ಮೆಂಬರ್ ರಾಮ್ ಕೆವಲೂರು, ಅಸಿಸ್ಟೆಂಟ್ ಮೆಂಬರ್ ಮಂಜುನಾಥ್ ಭಟ್, ಟಿಐಇ ಎಜುಕೆಟ್ ಡೈರೆಕ್ಟರ್ ಮಹೇಶ್ ವಿ ಕಟ್ಟಾಲೆ , ಅಸೋಸಿಯೇಟ್ ಪ್ರೊಫೆಸರ್ ಸಿ. ಸುನಿಲ್, ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿಯರು ಭಾಗವಹಿಸಿದ್ದರು.
Mysore
ಸರಗೂರು: ಪ್ರಥಮ ಬಾರಿಗೆ ಸಹಕಾರ ಕ್ಷೇತ್ರ ಪ್ರವೇಶಿಸಿದ ಶಾಸಕ ಅನಿಲ್ ಚಿಕ್ಕಮಾದು
 
														ಸರಗೂರು: ಪಟ್ಟಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ
ನಿರ್ದೇಶಕರಾಗಿ ಆಯ್ಕೆ ಆಗಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ನಂತರ ಪ್ರಭುಸ್ವಾಮಿಯವರು ಮಾತನಾಡಿ , ಶಾಸಕ ಅನಿಲ್ ಚಿಕ್ಕಮಾದು ಈ ಬಾರಿ ನಡೆದ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕೋಟೆ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ನೇಮಕಗೊಂಡು ಸ್ಪರ್ಧಿಸಿದ್ದರು. ಕಾರಣಾಂತರಗಳಿಂದ ಒಂದು ಮತದ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು.

ಕೊನೆಗೆ ನ್ಯಾಯಾಲಯದ ತೀರ್ಪಿನಂತೆ ಒಂದು ಮತದ ಎಣಿಕೆ ನಡೆದು ಅನಿಲ್ ಚಿಕ್ಕಮಾದು ಗೆಲುವು ಸಾಧಿಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ಪ್ರಥಮವಾಗಿ ಪ್ರವೇಶಿಸಿದ್ದಾರೆ ಎಂದರು.
ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್, ಪ್ರಭುಸ್ವಾಮಿ, ಎಸ್.ಎಸ್.ಬಸವರಾಜು, ರಂಗನಾಥ್,
ಯೋಗಿಶ್ , ಎಸ್.ಬಿ.ನಾಗರಾಜು, ನಂದೀಶ್, ಬಿಲೇಶ್, ಸುಹೇಲ್, ಪುಟ್ಟರಾಜು, ಜಗದೀಶ್, ಕಾಂಗ್ರೆಸ್ ಕಾರ್ಯಕರ್ತರು
ಪಾಲ್ಗೊಂಡಿದ್ದರು.
- 
																	   State6 hours ago State6 hours agoಸೆ.14 ರಿಂದ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ 
- 
																	   Mysore22 hours ago Mysore22 hours agoಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದೇ ನಮೂದಿಸಿ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ 
- 
																	   Special9 hours ago Special9 hours agoಬಾಗಲಕೋಟೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 
- 
																	   Hassan5 hours ago Hassan5 hours agoಸಾಲ ಬಾಧೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆ 
- 
																	   Uncategorized6 hours ago Uncategorized6 hours agoಪ್ರತಿಯೊಬ್ಬ ಶಿಕ್ಷಕನೂ ನಿರಂತರ ವಿದ್ಯಾರ್ಥಿ – ಶ್ರೀಮತಿ ತಾರ ಎಸ್.ಸ್ವಾಮಿ 
- 
																	   National4 hours ago National4 hours agoಟಿ-20 ಏಷ್ಯಾಕಪ್| ಭಾರತ-ಪಾಕ್ ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ 
- 
																	   Manglore2 hours ago Manglore2 hours agoವಿದ್ಯಾಭಾರತಿ ರಾಜ್ಯ ಮತ್ತು ಪ್ರಾಂತಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ವಿವೇಕಾನಂದ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ 
- 
																	   Mandya7 hours ago Mandya7 hours agoಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಶ್ರೀರಂಗಪಟ್ಟಣ ರೈತರು ಕೇಂದ್ರ ಸಚಿವ ಹೆಚ್ಡಿಕೆ ಭೇಟಿ 

 
											 
											 
											 
											 
											