Connect with us

Mysore

ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲೂ ಬಿಜೆಪಿ ಪ್ರತಿಭಟನೆ

Published

on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ವತಿಯಿಂದ ಆರೋಪಿಸಿ ಮೈಸೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.


ಕಾಡಾ ಕಚೇರಿ ಆವರಣದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಮಾಜಿ ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಮಹದೇವಯ್ಯ, ಸದಾನಂದ್, ಮಿರ್ಲೆ ಶ್ರೀನಿವಾಸ್‌ಗೌಡ, ಮಹೇಶ್ ಮುಂತಾದವರಿದ್ದರು.

 

Continue Reading

Mysore

ಡ್ರಗ್ಸ್ ಮುಕ್ತ ಕರ್ನಾಟಕ- ಜನ ಜಾಗೃತಿ ಆಂದೋಲನಕ್ಕೆ ಚಾಲನೆ

Published

on

ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಪ್ರಾಂತ ಸಮಿತಿ, ಪರಿವರ್ತನಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಡ್ರಗ್ಸ್ ಮುಕ್ತ ಕರ್ನಾಟಕ- ಜನ ಜಾಗೃತಿ ಆಂದೋಲನ ರಥಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.

ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸ್ತಬ್ಧಚಿತ್ರಕ್ಕೆ ಹಸಿರು ನಿಶಾನೆ ತೋರಿಸಲಾಯಿತು.

ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಬೆಂಗಳೂರಿನ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಲೆಫ್ಟಿನೆಂಟ್ ಕರ್ನಲ್ ವೈ.ಕೆ.ಸಂಜೀವ್, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಿವೇಕವಂಶಿ, ಕನ್ನಿಕಾಪರಮೇಶ್ವರಿ ದೇವಾಲಯದ ಕಾರ್ಯದರ್ಶಿಯೂ ಆದ ಉದ್ಯಮಿ ಎಸ್.ಕೆ.ದಿನೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಅವಿನಾಶ್ ನಿರೂಪಿಸಿದರೆ, ಜಯಸಿಂಹ ಸ್ವಾಗತಿಸಿದರು.‌

ನಗರದ ಹರಿವಿದ್ಯಾಲಯ, ಜಿಎಸ್‌ಎಸ್ಎಸ್ ಶಾಲೆ, ಸದ್ವಿದ್ಯಾ ಶಾಲೆ, ಮೈಸೂರು ಮೆಡಿಕಲ್ ಕಾಲೇಜು, ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆ, ಕಾವೇರಿ ಕಾಲೇಜು ಮುಂತಾದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Mysore

ಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ

Published

on

ಮೈಸೂರು: ​2025 ರ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ದಸರಾ ವಸ್ತು ಪ್ರದರ್ಶನದ ಉಪಸಮಿತಿಗಳಲ್ಲಿ ಒಂದಾದ ಮಹಿಳಾ ಉದ್ಯಮಿ ಉಪಸಮಿತಿ-2025 ಕ್ಕೆ ಎಸ್. ರಂಗನಾಥ ಅವರು ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

​ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್. ರಂಗನಾಥ ಅವರು ಪ್ರಸ್ತುತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Continue Reading

Mysore

ನಿಮ್ಮ ಎಲ್ಲಾ ತುರ್ತು ಸಂದರ್ಭಗಳಲ್ಲಿ 112 ಸಂಪರ್ಕಿಸಿ: ಸಿ.ಎಂ.ರವೀಂದ್ರ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಎಂದು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸಿ.ಎಂ.ರವೀಂದ್ರ ತಿಳಿಸಿದರು.

ನಂಜನಗೂಡು ನಗರದ ಟಿಚರ್ಸ್ ಕಾಲೋನಿಯಲ್ಲಿ ಮೈಸೂರು ಜಿಲ್ಲಾ ಪೊಲೀಸ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆ, ನಂಜನಗೂಡು ಉಪ ವಿಭಾಗ ವತಿಯಿಂದ ಮನೆಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಟುಂಬ ಸಂಭ್ರಮ, ಸ್ನೇಹ ಬಳಗ ಮತ್ತು ಪೊಲೀಸ್ ಇಲಾಖೆ ನಂಜನಗೂಡು ಟೌನ್ ಇವರ ವತಿಯಿಂದ ಸರಗಳ್ಳತನ ಅಪರಾಧ ತಡೆ ಇನ್ನಿತರ ವಿಚಾರಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದರು.

ಮೊಬೈಲ್ ಬಳಕೆಯಿಂದ ದುಷ್ಪರಿಣಾಮ ಬೀರುತ್ತಿದ್ದು, ಮಕ್ಕಳಿಗೆ ಪೋಷಕರು ಮೊಬೈಲ್ ಕೊಡಬಾರದು. ಸಾಧ್ಯವಾದಷ್ಟು ಮನೆಗಳ ಮುಂದೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಕಂಡಾಗ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯಿಂದ ಎರಡ್ಮೂರು ದಿನಗಳ ಕಾಲ ಹೊರಗಡೆ ಹೋದ ಸಂದರ್ಭದಲ್ಲಿ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಅಲ್ಲದೇ ನಿಮ್ಮ ತುರ್ತು ಸಂದರ್ಭಗಳಿಗೆ 112ಗೆ ಕರೆ ಮಾಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುರ್ತು ಸೇವೆಗಳು, ಮನೆ ಕಳ್ಳತನ, ಸರಕಳ್ಳತನ, ಸೈಬರ್ ಅಪರಾಧ, ಆನ್‌ಲೈನ್‌ ವಂಚನೆ, ಮಾದಕ ವಸ್ತುಗಳ ಬಗ್ಗೆ, ಕಾನೂನು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಎಎಸ್ಐ ದೇವರಾಜು, ಮಂಜುನಾಥ್, ಲಿಂಗೇಗೌಡರು, ಸಿಬ್ಬಂದಿಗಳಾದ ಕೃಷ್ಣ, ಮುರುಳಿಧರ್, ತಿಮ್ಮಯ್ಯ, ಶಿವಕುಮಾರ್, ವೈ.ಎಂ. ಮಹೇಶ್, ಬೀರಪ್ಪ, ಭರತ್, ಶಿವರಾಂ, ಸೈಯದ್ ಅರ್ಕುಡ, ನೇತ್ರಾವತಿ, ಸುಷ್ಮಿತಾ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

Continue Reading

Trending

error: Content is protected !!