Kodagu
ಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ
 
																								
												
												
											Kodagu
ಅರಣ್ಯ ಕಡಿತ ನಿರ್ಬಂಧ ನೀತಿ ಜಾರಿ – ಕಾಫಿಗೆ ಹೊಡೆತ
 
														ಗೋಣಿಕೊಪ್ಪ: ಯುರೋಪಿಯನ್ ಒಕ್ಕೂಟದ ದೇಶಗಳು ಮುಂದಿನ ದಿನಗಳಲ್ಲಿ ತಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವ ಕಾಫಿಗೆ ಯುರೋಪಿಯನ್ ಒಕ್ಕೂಟದ ಅರಣ್ಯ ಕಡಿತ ನಿರ್ಬಂಧ ನೀತಿ ಜಾರಿಗೆ ಮುಂದಿನ ವರ್ಷ ಜೂನ್ ಕೊನೆಯವರೆಗೆ ಅವಕಾಶ ನೀಡಿದ್ದು ಇದು ಮುಂದಿನ ದಿನಗಳಲ್ಲಿ ದೇಶದಿಂದ ರಫ್ತಾಗುವ ಕಾಫಿಗೆ ಹೊಡೆತ ಬೀಳಲಿದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಫೆಡರೇಷನ್ ಉಪಾಧ್ಯಕ್ಷ ವಿಶ್ವನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಿಸಾನ್ ಸಂಘ ಗೋಣಿಕೊಪ್ಪ ಕೆ ವಿ ಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಲೆ ಏರಿಳಿತ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ದೇಶದಲ್ಲಿ ಕಾಫಿ ಒಂದು ರಫ್ತು ಆಧಾರಿತ ಉತ್ಪನ್ನವಾಗಿದೆ. ದೇಶದ ಶೇಕಡ 70ರಷ್ಟು ಅಧಿಕ ಕಾಫಿಯನ್ನು 120 ದೇಶ ಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಲ್ಲಿ ಯುರೋಪಿಯನ್ ಒಕ್ಕೂಟ ಮುಖ್ಯ ಗ್ರಾಹಕ. ಈಗ ಈ ದೇಶಗಳು ಜಾರಿಗೊಳಿಸಲು ಉದ್ದೇಶಿಸಿರುವ ಅರಣ್ಯ ಕಡಿತ ನೀತಿ ಅಡಿಯಲ್ಲಿ ಕಾಫಿ ಸೇರ್ಪಡೆಯಾಗಿದೆ. ಈ ನಿಯಾಮವಳಿಯ ಪ್ರಕಾರ ಯುರೋಪಿಯನ್ ಒಕ್ಕೂಟಕ್ಕೆ ಕಾಫಿಯನ್ನು ರಫ್ತು ಮಾಡಲು ನಿಮ್ಮ ತೋಟದ ಭೂ ಪ್ರದೇಶದ ಅಥವಾ ಭೂಪ್ರದೇಶದ ಆಕಾರನ್ನು ಪಾಲಿಗಾನ್ ಸ್ವರೂಪದಲ್ಲಿ ಅವರೊಂದಿಗೆ ಹಂಚಿಕೊಳ್ಳಬೇಕು. ನಂತರ ಇದನ್ನು ಪರಿಗಣಿಸಿ ತಾವು ಜಾರಿಗೆ ತಂದಿರುವ ನಿಯಮಾವಳಿಗೆ ಇದು ಒಪ್ಪಿಗೆ ಆದರೆ ತಮ್ಮ ದೇಶಕ್ಕೆ ಕಾಫಿಯನ್ನು ಆಮದು ಮಾಡಿಕೊಳ್ಳುತ್ತವೆ.
ಮುಂದುವರೆದು ಮಾತನಾಡಿದ ಅವರು ದೇಶದಲ್ಲಿ ಕಾಫಿ ಆಂತರಿಕ ಬಳಕೆ ಹಿನ್ನಡೆಯಲ್ಲಿದ್ದು ಇದಕ್ಕೆ ಮುಖ್ಯ ಕಾರಣ ಚಿಕೋರಿ ಬಳಸುವುದು. ಪ್ರಸ್ತುತ ಚಿಕೋರಿ 70% ಹಾಗೂ ಕಾಫಿ 30% ಅನುಪಾತದಲ್ಲಿದ್ದು ಇದು 30% ಹಾಗು 70% ಆದಲ್ಲಿ ಅಂತರಿಕ ಬಳಕೆಯಿಂದ ಕಾಫಿಗೆ ಹೆಚ್ಚಿನ ಮೌಲ್ಯ ಸಿಗುತ್ತದೆ.
ಮುಖ್ಯವಾಗಿ ಬೆಳೆಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಳೆಯ ಬಗ್ಗೆ ಆಗುತ್ತಿರುವ ಬದಲಾವಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪಡೆದುಕೊಳ್ಳಬಹುದು.
ಭಾರತಕ್ಕೆ ಉಗಾಂಡ, ವಿಯೆಟ್ನಾಂ ಹಾಗೂ ಶ್ರೀಲಂಕಾ ಪ್ರಬಲ ಸ್ಪರ್ಧಿಗಳಾಗಿವೆ.
ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನದ ಸಂಚಾಲಕ ಎಂಎಂ ರವೀಂದ್ರ ಮಾತನಾಡಿ ಕಾಫಿಯನ್ನು ರಾಷ್ಟ್ರೀಯ ಪಾನೀಯ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮುಖ್ಯವಾಗಿ ಸೈನ್ಯ
ಹಾಗೂ ರೈಲುಗಳಲ್ಲಿ ಇದರ ಬಳಕೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ನೂರಕ್ಕೂ ಅಧಿಕ ಬೆಳೆಗಾರರು ಭಾಗವಹಿಸಿದ್ದರು.
ಕರ್ನಾಟಕ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿರ ಪ್ರವೀಣ್ ವಂದಿಸಿದರು.
Kodagu
ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ
 
														ವಿರಾಜಪೇಟೆ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ಪದಗ್ರಹಣ ಕಾರ್ಯಕ್ರಮಕ್ಕೆ ವಿರಾಜಪೇಟೆಯ ಪ್ರಗತಿ ಶಾಲಾ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಾಷ್ಟ್ರೀಯ ಪರಿಸರ ಪ್ರಶಸ್ತಿ ವಿಜೇತರೂ, ಆಗಿರುವ ಶ್ರೀ ಸಿ. ಎನ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ, ವಿಧಾನಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಸುಜಾ ಕುಶಾಲಪ್ಪ ಅವರು, ಮಕ್ಕಳು ಸಮಾಜದ ಭವಿಷ್ಯದ ಆಸ್ತಿಯಾಗಿದ್ದು, ಅವರನ್ನು ಸಮರ್ಥ ಮತ್ತು ಸ್ವಚ್ಛ ಸಮಾಜ ನಿರ್ಮಾಣದಲ್ಲಿ ಜೋಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು.

ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಇಂದು ಕೊಡಗು ಜಿಲ್ಲೆಯಲ್ಲೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದ್ದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಸಂಘಟನೆಯು ನಡೆಸುವ ಸೃಜನಾತ್ಮಕ ಮಕ್ಕಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಲ್ಲದೆ, ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆಯಿತ್ತರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರು ಮಾತನಾಡಿ ಅತ್ಯಂತ ಪ್ರಾಮಾಣಿಕ ಮತ್ತು ನೈಜತೆಗೆ ಹತ್ತಿರವಾಗಿ ಮಕ್ಕಳ ಸೇವೆಯನ್ನು ಮಾಡುತ್ತಿರುವ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಮತ್ತು ಸರ್ಕಾರ ಇಂತಹ ಸಂಘಟನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಿ, ಮಕ್ಕಳ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳನ್ನ ಒರಗೆ ಹಚ್ಚಲು ಪ್ರೇರೇಪಿಸಬೇಕು. ಅರಣ್ಯ ಇಲಾಖೆಯ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಹಾಕಿಕೊಳ್ಳುವುದಾಗಿ ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದೇಶ್ ಅವರು ಮಾತನಾಡಿ, ಸಂಘಟನೆ ಬೆಳೆದು ಬಂದ ಹಾದಿ ಮತ್ತು ಕೊಡಗಿನಲ್ಲಿ ಈ ಸಂಘಟನೆ ಅಸ್ತಿತ್ವದ ಅವಶ್ಯಕತೆಯ ಬಗ್ಗೆ ಕೂಲಂಕುಶವಾಗಿ ವಿವರಿಸಿದರು. ಮತ್ತೋರ್ವ ಮುಖ್ಯ ಅತಿಥಿ, ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಅವರು ಸಂಘಟನೆಗೆ ಶುಭ ಹಾರೈಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ, ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಕೊಡಗಿನಲ್ಲಿ ಸಾಹಿತ್ಯ ಲೋಕ ನಡೆದು ಬಂದ ಹಾದಿ ಮತ್ತು ಕೊಡಗು ಜಿಲ್ಲೆಗೆ ಮಕ್ಕಳ ಸಾಹಿತ್ಯ ಪರಿಷತ್‌ನ ಅನಿವಾರ್ಯತೆಯ ಬಗ್ಗೆ ವಿವರಿಸಿದರು.
ನಂತರ ಕೇಂದ್ರ ಸಮಿತಿ ವತಿಯಿಂದ, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರಿಗೆ, ಅಧಿಕೃತ ಆದೇಶ ಪತ್ರದೊಂದಿಗೆ ಸನ್ಮಾನಿಸಿ, ಅಧಿಕಾರ ನೀಡಲಾಯಿತು. ಆ ನಂತರ ಜಿಲ್ಲಾ ಸಮಿತಿ ಮತ್ತು 5 ತಾಲೂಕು ಸಮಿತಿಗಳ ಪದಗ್ರಹಣ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಚಿನ್, ಕೊಡಗು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ಕರಿನೆರವಂಡ ಡ್ಯಾನಿ ಕುಶಾಲಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ ಕರುಂಬಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಪಾಲೆರ ಮಂದಣ್ಣ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ವಿನೋದ್ ಮೋಡಗದ್ದೆ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಅಪ್ಪುಡ ಸುದೀಶ್ ಕುಶಾಲಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷೆ ಚೈತನ್ಯ ಸಿ ಮೋಹನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಕುಶಾಲನಗರದ ತ್ರ್‌ಷ್ಯ ಪೊನ್ನೆಟ್ಟಿ ಪ್ರಾರ್ಥಿಸಿ, ಮಡಿಕೇರಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಹರ್ಷಿತ ಶೆಟ್ಟಿ ಮನವಳಿಕೆಗುತ್ತು ಅವರು ಸ್ವಾಗತಿಸಿದರೆ, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ ವಿನೋದ್ ಮೂಡಗದ್ದೆ ವಂದಿಸಿ ವಿರಾಜಪೇಟೆಯ ಕಣಿಯರ ಕೌಶಲ್ಯ ಹರೀಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಪುಟಾಣಿಗಳಾದ ಯಶಸ್ವಿನಿ ನೀಲಮ್ಮ, ಭೋಜಮ್ಮ ಕೆ.ಬಿ, ಭೂಮಿಕಾ ಕೆ.ಬಿ, ವಿಹಾನಿ ಸಿ.ಜೆ, ತಶ್ಮ, ರೀತು, ದೇವಿಕ, ವರ್ಷಿಣಿ, ಧೃತಿ, ತಶ್ವಿತ, ವಿಹಾನ್ ಅಯ್ಯಪ್ಪ ಕೆ.ಬಿ, ಹರ್ಷಿತಾ ಬಿ
.ಆರ್, ಚೇಂದಿರ ದೀಪ್ತಿ ದೇಚಮ್ಮ, ಚೇಂದಿರ ದೀಕ್ಷಿತ್ ಬೋಪಣ್ಣ, ಚೇನಂಡ ರಕ್ಷಾ ಮುತ್ತಮ್ಮ, ಚಾಮೆರ ನಕ್ಷ ದೇಚಮ್ಮ, ದೃಶ್ಯ ಪೊನ್ನೇಟಿ, ತಷ್ಮಿತ, ಅಷ್ಮಿತ, ದೃಷ್ಟಿ ಕಾವೇರಮ್ಮ, ಗಾಯತ್ರಿ ಟಿ.ವಿ, ಸಾರಜಾಬ್ಸನ್ ಆರ್., ತ್ರ್‌ಷ ಕೆ.ಎನ್, ನಿಧಿ ವೈ.ಕೆ, ನಿತಿನ್ ಎಂ.ಆರ್, ಯಶ್ವಂತ್ ಎಂ.ಆರ್, ಶ್ರೀನಂದ ಸಿ.ಎಸ್, ಸಿಂಚನ ಆರ್.ಆರ್, ರೇವತಿ ಕೆ.ಬಿ, ಅವರುಗಳು ಹಾಡು, ನೃತ್ಯ, ಕವನ ವಾಚನ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳ ಮೂಲಕ ರಂಜಿಸಿದರು.
Kodagu
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿರೋಧಿಸಿ ಮಂಡಲ ಬಿಜೆಪಿ ಪ್ರತಿಭಟನೆ
 
														ಸೋಮವಾರಪೇಟೆ: ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಹ್ವಾನ ವಿರೋಧಿಸಿ ಇಂದು ಮಂಡಲ ಬಿಜೆಪಿ ಪ್ರತಿಭಟನೆ ನಡೆಸಿತು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ದಸರಾ ಉದ್ಘಾಟನೆಗೆ ಕನ್ನಡ ವಿರೋಧಿ ಭಾನು ಮುಷ್ತಾಕ್ ರವರನ್ನು ಆಹ್ವಾನಿಸುವ ಮೂಲಕ ಈ ನಾಡಿನ ಅಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಡದೇವತೆ ಚಾಮುಂಡೇಶ್ವರಿ ದೇವಾಲಯ ಹಿಂದೂಗಳದಲ್ಲಾ ಎನ್ನುವ ಮೂಲಕ ಈ ನಾಡಿಗೆ ಹಾಗೂ ರಾಜಮನೆತನಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾನು ಮುಷ್ತಾಕ್ ಈ ನಾಡಿನ ಸಂಪ್ರದಾಯದಂತೆ,ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡುವುದಾದರೆ ಮಾತ್ರ ಮಾಡಲಿ ಇಲ್ಲವಾದರೆ ನಮ್ಮ ತೀವ್ರವಿರೋದವಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಭಾರತೀಶ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಒಂದಲ್ಲಾ ಒಂದು ಯಡವಟ್ಟು ಮಾಡುತ್ತಿದೆ ಎಂದರು.ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಒಂದೊಂದು ಗಂಭೀರ ವಿವಾದಗಳನ್ನು ಹೊರತಂದು ಜನರ ದಿಕ್ಕುತಪ್ಪಿಸುವ ಕೆಲಸಮಾಡುತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಜಿ.ಮಾದಪ್ಪ,ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ,ಜಿಲ್ಲಾ ಬಿಜೆಪಿ, ಉಪಾಧ್ಯಕ್ಷರು ಗಳಾದ ಮನುಕುಮಾರ್ ರೈ, ಮಾದಪ್ಪ,ಮಂಡಲ ಅಧ್ಯಕ್ಷ ಗೌತಮ್,ಕಾರ್ಯದರ್ಶಿ ದರ್ಶನ್, ಇಂದಿರಾ ಮೋನಪ್ಪ, ಮೋಕ್ಷಿತ್ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
- 
																	   Mysore18 hours ago Mysore18 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore4 hours ago Mysore4 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mysore22 hours ago Mysore22 hours agoಬಾನು ಮುಷ್ತಾಕ್ ಕ್ಷಮೆ ಕೇಳಿದರೆ ಪಿಐಎಲ್ ವಾಪಸ್: ಪ್ರತಾಪ್ ಸಿಂಹ 
- 
																	   Mandya17 hours ago Mandya17 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Hassan17 hours ago Hassan17 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ 
- 
																	   Kodagu19 hours ago Kodagu19 hours agoಸೆ.11 ಕ್ಕೆ “ವಿಷಪೂರಿತ ಹಾವುಗಳು : ಗುರುತಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ 
- 
																	   Hassan21 hours ago Hassan21 hours agoಹೊಳೆನರಸೀಪುರದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ, ಸುಳ್ಳು ದಾಖಲೆ, ಸುಳ್ಳು ಸಾಕ್ಷಿ : ನಟರಾಜು ಆರೋಪ 
- 
																	   Chikmagalur15 hours ago Chikmagalur15 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 

 
											 
											 
											 
											 
											