Chamarajanagar
ಯಳಂದೂರು: ತಾಲೂಕು ನಾಯಕ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
 
																								
												
												
											ಯಳಂದೂರು: ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಯಳಂದೂರು ತಾಲ್ಲೂಕಿನ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಾಷ್ಕರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ತಾಲ್ಲೂಕು ನಾಯಕ ಮಂಡಳಿ ಅಧ್ಯಕ್ಷರಾದ ಮುರುಳಿಕೃಷ್ಣರವರು ನೆರವೇರಿಸಿದರು. ನಂತರ ಮಂಡಳಿಯ ಪದಾಧಿಕಾರಿಗಳು ಹಾಗೂ ಮುಖಂಡರು ಶ್ರೀ ಮಹರ್ಷಿ ವಾಲ್ಮೀಕಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.
ಎಂಟು ಬೀದಿಯ ಯಜಮಾನರಾದ ಮೂರ್ತಿ ರವರು ಮಾತನಾಡಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಚನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಪೋಷಕರು ಬೇಗ ಮದುವೆ ಮಾಡಬೇಡಿ,ಅವರಿಗೆ ಆಸ್ತಿ ಮಾಡುವ ಬದಲು, ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ,ಪಿ ಯು ಸಿ ಹಾಗೂ ಪದವಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಘದ ನೆನಪಿನ ಕಾಣಿಕೆ ನೀಡಿ,ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.
ಶಿಕ್ಷಕರು ಹಾಗೂ ಅತ್ಯುತ್ತಮ ನಿರೂಪಕರಾದ ರಂಗನಾಥ್ ರವರು ನಿರೂಪಣೆ ಮಾಡಿ ವಿದ್ಯಾರ್ಥಿಗಳಿಗೆ ಕೇಲವು ಕಿವಿ ಮಾತುಗಳನ್ನು ಹೇಳಿದರು.ಕಲಾವಿದರಾದ ಗಣಿಗನೂರು ಸುರೇಶ್ ರವರು ರಸ ಮಂಜರಿ ಕಾರ್ಯಕ್ರಮ ನಡೆಸಿ ಎಲ್ಲಾರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಮಂಡಳಿ ಗೌರವ ಅಧ್ಯಕ್ಷರು ರಾಚನಾಯಕ, ಕಾರ್ಯದರ್ಶಿ ವೆಂಕಟಾಚಲ,ಖಜಾಂಚಿ ಉಮೇಶ್,,ಪಟ್ಟಣ ಪಂಚಾಯತಿ ಸದಸ್ಯರು ಮಹೇಶ್, ರಂಗನಾಥ್, ಮಾಜಿ ಸದಸ್ಯರು ಭೀಮಪ್ಪ, ಮುಖಂಡರುಗಳಾದ ಮಹೇಶ್, ಮಣಿಗಾರ್ ರಂಗನಾಥ್, ಸೇರುಗಾರ್ ಬಿಳಿಗಿರಂಗನಾಯಕ, ಮಂಜು, ಬಂಗಾರ ನಾಯಕ,ಮದ್ದೂರು ಬಂಗಾರು, ಕಂದಹಳ್ಳಿ ಮಹೇಶ್ ಕುಮಾರ್,ಚಂಗಚಹಳ್ಳಿ ಮಹದೇವಸ್ವಾಮಿ, ಗುಂಬಳ್ಳಿ ರಾಜಣ್ಣ, ಕಿಟ್ಟಿ, ಮದ್ದೂರು ರಾಮಚಂದ್ರು,ವರದ ನಾಯಕ, ಸಮುದಾಯದ ವಿವಿಧ ಗ್ರಾಮಗಳ ಯಜಮಾನ್ರು,ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Chamarajanagar
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಲವು ಕ್ರೀಡೆಗಳಲ್ಲಿ ವಿಜೇತರಾದ ಜೆಎಸ್‌ಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು
 
														ಯಳಂದೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯಳಂದೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದರು.
ಕಬ್ಬಡಿ ಪ್ರಥಮ ಸ್ಥಾನ, ಖೋಖೊ ಪ್ರಥಮ, ಸ್ಥಾನ ಥ್ರೋಬಾಲ್ ಪ್ರಥಮ ಸ್ಥಾನ, ಚೆಸ್ ಪ್ರಥಮ ಸ್ಥಾನ,ಶಟಲ್ ಕಾಕ್ ಪ್ರಥಮ ಸ್ಥಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.

100 ಮೀಟರ್ ಓಟದ ಸ್ಪರ್ಧೆಯಲ್ಲಿ ಅಮೃತ ಪ್ರಥಮ ಸ್ಥಾನ, ವಿನುತ ದ್ವಿತೀಯ ಸ್ಥಾನ,200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೀರ್ತನ ಪ್ರಥಮ ಸ್ಥಾನ ಅಮೃತ ದ್ವಿತೀಯ ಸ್ಥಾನ, 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪೂರ್ತಿ ಪ್ರಥಮ ಸ್ಥಾನ ತ್ರಿವೇಣಿ ದ್ವಿತೀಯ ಸ್ಥಾನ, 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಸುನಿತ ಪ್ರಥಮ ಸ್ಥಾನ ರಶ್ಮಿ ದ್ವಿತೀಯ ಸ್ಥಾನ, 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಸುನೀತ ಪ್ರಥಮ ಸ್ಥಾನ ಹಾಗೂ ಸಂಜನಾ ದ್ವಿತೀಯ ಸ್ಥಾನವನ್ನು ಪಡೆದರು.
ಗುಂಡು ಎಸೆತದಲ್ಲಿ ರಾಣಿ ಪ್ರಥಮ ಸ್ಥಾನ ರಕ್ಷಿತ ದ್ವಿತೀಯ ಸ್ಥಾನ, ಜಾವೆಲಿನ್ ನಲ್ಲಿ ಸುಶ್ಮಿತಾ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ವಿನುತ ಪ್ರಥಮ ಸ್ಥಾನ,ತಟ್ಟೆ ಎಸೆತದಲ್ಲಿ ರೇಣುಕ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದು ಪ್ರಾಂಶುಪಾಲರಾದ ಚಂದ್ರಶೇಖರ ಎಚ್ ಎಸ್ ರವರು ತಿಳಿಸಿರುತ್ತಾರೆ.
Chamarajanagar
ಬೂದಂಬಳ್ಳಿಯಲ್ಲಿ ಅದ್ದೂರಿ ಗಣಪತಿ ವಿಸರ್ಜನೆ
 
														ಯಳಂದೂರು : ಸಮೀಪದ ಬೂದಂಬಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮಹೋತ್ಸವವನ್ನು ವಿಜೃಂಭಣೆಯಿಂದ ನೆರೆವೇರಿಸಲಾಯಿತು.
ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಗೌರಮ್ಮ ಮೂರ್ತಿಯನ್ನು ಮಂಗಳವಾದ್ಯ ವೀರಾಗಾಸೆಯೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರೆವಣಿಗೆ ಮಾಡಲಾಯಿತು.

ಈ ವೇಳೆ ಮಹಿಳೆಯರು ಅವರವರ ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗಣಪನಿಗೆ ಪೂಜೆ ಸಲ್ಲಿಸಿದರು. ಯುವಕರು ಮಕ್ಕಳು ಗಣಪತಿ ಬಪ್ಪ ಮೊರಾಯಾ ಎಂದು ಜೈಕಾರ ಹಾಕಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು ಬಳಿಕ ಮೂಕಳ್ಳಿ ಸೇತುವೆ ಬಳಿ ಗಣಪತಿ ವಿಸರ್ಜನೆ ಮಾಡಲಾಯಿತು. ಬಳಿಕ ಪ್ರಸಾದ ವಿನಿಯೋಗ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು,ಗ್ರಾಮ ಪಂಚಾಯತಿ ಸದಸ್ಯರುಗಳು, ಯುವಕರು, ಮಹಿಳೆಯರು, ಮಕ್ಕಳು ಹಾಜರಿದ್ದರು.
Chamarajanagar
ಈದ್ ಮಿಲಾದ್ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
 
														ವರದಿ: ಸೈಯದ್ ಮುಷರಫ್
ಯಳಂದೂರು: ಈದ್ ಮಿಲಾದ್ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಪಟ್ಟಣದ ಮುಸ್ಲಿಂ ಮುಖಂಡರಿಂದ ಹಮ್ಮಿಕೊಳ್ಳಲಾಗಿತ್ತು.
ಧರ್ಮ ಗುರುಗಳಾದ ಅಬ್ರಹರ್ ಅಹಮದ್ ಮಾತನಾಡಿ ಈದ್-ಎ-ಮಿಲಾದ್-ಉನ್-ನಬಿ (ಈದ್ ಮಿಲಾದ್) ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಆಚರಣೆಯಾಗಿದ್ದು, ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್‌ನ 12ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ, ಮುಸ್ಲಿಮರು ಪ್ರವಾದಿಯವರ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ, ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಅನ್ನಸಂತರ್ಪಣೆ, ದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮೆರವಣಿಗೆಗಳನ್ನು ನಡೆಸುತ್ತಾರೆ, ಕೆಲವು ಮುಸ್ಲಿಮರು ಉಪವಾಸವನ್ನೂ ಮಾಡುತ್ತಾರೆ. ಬಡವರಿಗೆ, ನಿರ್ಗತಿಕರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುತ್ತಾರೆ ಎಂದು ತಿಳಿಸಿದರು.

ಮುಖಂಡರಾದ ನಯಾಜ್ ಖಾನ್ ಮಾತನಾಡಿ, ಈ ಹಬ್ಬವು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುವ ಸಂಕೇತವಾಗಿದೆ, ಇದನ್ನು ಮೌಲಿದ್ ಎಂದೂ ಕರೆಯುತ್ತಾರೆ.
ಈದ್ ಮಿಲಾದ್ ಪ್ರವಾದಿಯವರ ದಯೆ, ಸಹಾನುಭೂತಿ ಮತ್ತು ಬೋಧನೆಗಳನ್ನು ನೆನಪಿಸಲು ಮೀಸಲಾಗಿದೆ. ಈ ದಿನವನ್ನು ಪ್ರೀತಿ, ಏಕತೆ ಮತ್ತು ಆಧ್ಯಾತ್ಮಿಕ ಅರಿವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದರಿಂದ ಮುಸ್ಲಿಮರು ಪ್ರವಾದಿಯ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ ಎಂದು ತಿಳಿಸಿದರು.
ಪಟ್ಟಣದಲ್ಲಿರುವ ಮಸೀದಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ವೈದ್ಯ ಶಶಿರೇಖಾ ಈದ್ ಮಿಲಾದ್ ಶುಭಾಶಯಗಳನ್ನು ಮುಸ್ಲಿಂ ಮುಖಂಡರಿಗೆ ಕೋರಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮುನಾವರ್ ಬೇಗ್, ಆರೋಗ್ಯ ರಕ್ಷಣಾ ಸಮಿತಿ ಸದಸ್ಯರಾದ ಜಮೀರ್, ಮುಖಂಡರಾದ ಇರ್ಫಾನ್, ಜಿಬ್ರಾನ್, ಜಮೀಲ್,ರಿಜ್ವಾನ್, ಜಮೀರ್, ತನ್ವೀರ್, ರೆಹಮಾನ್, ನಿಜಾಂ, ನವಾಬ್ ,ಮುನಾವರ್ ಪಾಷಾ, ಅಲ್ತಾಫ್, ಪರ್ವೇಜ್ ಪಾಷ ಸೇರಿದಂತೆ ನೂರಾರು ಮುಸ್ಲಿಂ ಮುಖಂಡರು ಹಾಜರಿದ್ದರು.
- 
																	   Mysore23 hours ago Mysore23 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore9 hours ago Mysore9 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mandya23 hours ago Mandya23 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Kodagu5 hours ago Kodagu5 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ 
- 
																	   Chikmagalur20 hours ago Chikmagalur20 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 
- 
																	   Kodagu1 hour ago Kodagu1 hour agoವಿರಾಜಪೇಟೆ ಸುತ್ತಮುತ್ತ ಸೆ.11 ರಂದು ವಿದ್ಯುತ್ ವ್ಯತ್ಯಯ 
- 
																	   Hassan4 hours ago Hassan4 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ 
- 
																	   Hassan22 hours ago Hassan22 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ 

 
											 
											 
											 
											 
											