Connect with us

Kodagu

ಕುಶಾಲನಗರ ಮತ್ತು ವಿರಾಜಪೇಟೆ ನಗರ ಸ್ಥಳೀಯ ಸಂಸ್ಥೆಗಳನ್ನು 2011 ರ ಜನಗಣತಿಯನ್ನಾಧರಿಸಿ ವಾರ್ಡ್‍ವಾರು ಕ್ಷೇತ್ರಗಳ ಪುನರ್ ವಿಂಗಡಣೆ

Published

on

ಮಡಿಕೇರಿ : ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯತಿಗೆ ಮುಳ್ಳುಸೋಗೆ ಗ್ರಾಮ ಪಂಚಾಯತಿ ಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಸಂಬಂಧ ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಯೋಜನಾ ನಿರ್ದೇಶಕರು. ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಡಗು ಜಿಲ್ಲೆ. ಮಡಿಕೇರಿ ಇವರು ಕುಶಾಲನಗರ ಪುರಸಭೆಯ ವಾರ್ಡ್ ಗಳನ್ನು 2011 ರ ಜನಗತಿಯ ಆಧಾರದ ಮೇರೆ ಪುನರ್ ವಿಂಗಡಣೆ ಮಾಡಲು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.


ಆದ್ದರಿಂದ ಕರ್ನಾಟಕ ಪೌರಸಭೆಗೆ ಅಧಿನಿಯಮ -1964 ರ ಪ್ರಕರಣ 13 ರ ಮೇರಗೆ ಕುಶಾಲಗರ ಪುರಸಭೆಯ ವಾರ್ಡ್‍ಗಳನ್ನು 2011 ರ ಜನಗಣತಿಯನ್ನು ಆಧಾರಿಸಿ ಪುನರ್ ವಿಂಗಡಣೆ ಮಾಡಿ ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಯನ್ನು/ ಸಲಹೆಗಳನ್ನು ಸಲ್ಲಸಲು ಇಚ್ಚಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತವಾಗಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಜಿಲ್ಲಾಧಿಕಾರಿ. ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಸಲ್ಲಸಬೇಕೆಂದು ಹಾಗೂ ಆಕ್ಷೇಪಣೆಯನ್ನು/ ಸಲಹೆಗಳನ್ನು ಸದರಿ ಅವಧಿಯ ತರುವಾರು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿದೆ.

ವಾರ್ಡ್‍ಗಳ ವಿವರ ನಗರ ಸ್ಥಳೀಯ ಸಂಸ್ಥೆಯ ಹೆಸರು- ಪುರಸಭೆ, ಕುಶಾಲನಗರ, ವಾರ್ಡ್ ಹೆಸರು ಮತ್ತು ಸಂಖ್ಯೆ – ವಾರ್ಡ್ ಸಂಖ್ಯೆ-1 ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ತ್ಯಾಗರಾಜ ರಸ್ತೆ ಬಲಬದಿ, ಕೆಂಪಮ್ಮ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ ಭಾಗಶಃ, ವಾರ್ಡ್ ಸಂಖ್ಯೆ-2 ಕಾಳಮ್ಮ ಕಾಲೋನಿ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, ನೇತಾಜಿ ಬಡಾವಣೆ ಭಾಗಶಃ, ವಾರ್ಡ್‍ಸಂಖ್ಯೆ-3-ಸಿಂಗಾರಮ್ಮ ಬಡಾವಣೆ, ಬದ್ರುನ್ನಿಸಾ ಬಡಾವಣೆ, ಶೇಲಜಾ ಬಡಾವಣೆ, ಬಿ.ಎಂ.ರಸ್ತೆ, ನಾಗಪ್ಪಶೆಟ್ಟಿ ಬಡಾವಣೆ, ಬ್ರೆಡ್ಲಿ ಬಡಾವಣೆ, ನೇತಾಜಿ ಬಡಾವಣೆ ಭಾಗಶಃ, ಕೆ.ಪಿ.ಟಿ.ಸಿ.ಎಲ್ ವಸತಿ ಗೃಹ, ಚಿಕ್ಕಣ್ಣ ಬಡಾವಣೆ, ಯೋಗೇಶ್ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, ವಾರ್ಡ್‍ಸಂಖ್ಯೆ-4 ದಂಡಿನಪೇಟೆ, ಹವಾಬಿ ಬಡಾವಣೆ, ಶಾಂತಿ ಮಾರ್ಗ, ಬಿ.ಎಂ ರಸ್ತೆ ಎಡಬದಿ, ವಾರ್ಡ್‍ಸಂಖ್ಯೆ-5 ಬಾಪೂಜಿ ಬಡಾವಣೆ, ಟೌನ್ ಕಾಲೋನಿ, ರಥಬೀದಿ ಬಲ ಪಾಶ್ರ್ವ, ಬಿ.ಎಂ ರಸ್ತೆ, ವಾರ್ಡ್‍ಸಂಖ್ಯೆ-6 ಫಾತೀಮಾ ಕಾನ್ವೆಂಟ್ ಹಿಂಭಾಗ, ದಂಡಿನಪೇಟೆ ಬಾಗಶಃ, ಆಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿ.ಪಿ. ಪುಟ್ಟುಶೆಟ್ಟಿ ಬಡಾವಣೆ, ರಫೀಕ್ ಬಡಾವಣೆ, ಬಿ.ಎಂ ರಸ್ತೆಯ ಎಡಭಾಗ, ಕಬ್ರಸ್ಥಾನ ರಸ್ತೆ ಎಡಭಾಗ.

ವಾರ್ಡ್‍ಸಂಖ್ಯೆ-7 ಬಿ.ಎಂ ರಸ್ತೆ ಎಡಭಾಗ. ಇಂದಿರಾ ಬಡಾವಣೆ, ಕಬ್ರಸ್ಥಾನ ರಸ್ತೆ ಬಲಭಾಗ, ಬಿದ್ದಪ್ಪ ಬಡಾವಣೆ, ಫರ್ನಾಂಡೀಸ್, ಬಡಾವಣೆ, ವಾರ್ಡ್‍ಸಂಖ್ಯೆ 8 ಅಂಬೇಡ್ಕರ್ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ನಿಂಗೇಗೌಡ ಬಡಾವಣೆ, ಪಂಪ್ ಹೌಸ್ ರಸ್ತೆ, ಬಿ ಎಂ ರಸ್ತೆ ಎಡಭಾಗ, ಭವಾನಿ ಬಡಾವಣೆ, ಯೋಗನಂದ ಬಡಾವಣೆ, ಎಸ್ ಎಲ್ ಸನ್ ಪ್ರಾಪರ್ಟಿ, ನಂಜಪ್ಪ ಬಡಾವಣೆ, ಕರ್ನಾಟಕ ಅರಣ್ಯ ತರಬೇತಿ ಕೇಂದ್ರ.

ವಾರ್ಡ್‍ಸಂಖ್ಯೆ-9 ಬಿ.ಎಂ ರಸ್ತೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಅದರ ಮುಂಭಾಗದ ಪ್ರದೇಶ, ಅಥಿತಿ ರೆಸ್ಟೋರೆಂಟ್ ಹೋಟಲ್‍ನ ಸುತ್ತಮುತ್ತಲಿನ ಪ್ರದೇಶ, ಗ್ರೀನ್ ಹೋಟೆಲ್, ಎಸ್.ಎಲ್.ಎನ್.ಪ್ರೋಪರ್ಟಿಸ್ ಮಾದಾಪಟ್ಟಣ, ಬಾಗಶಃ, ಸ್ವಂದ ಫಾರ್ಮ್. ವಾರ್ಡ್‍ಸಂಖ್ಯೆ-10 ಗುಂಡೂರಾವ್ ಬಡಾವಣೆ, ಆರ್. ಕೆ. ಬಡಾವಣೆ ಭಾಗಶಃ. ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಟ್ರಕ್ ಬಾಲಕರ ವಿದ್ಯಾರ್ಥಿ ನಿಲಯ, ಗಂಧದ ಕೋಟೆ, ವಿ.ಎಲ್.ಗೌರೀಶ್ ರವರ ತೋಟ, ಪರಿಪಾಳ ಜವರಪ್ಪ ಮಲ್ಲೇಶ. ವೆಂಕಟೇಶ ಬಡಾವಣೆ, ತಾವರ ಕೆರೆ, ಪೂನಂ ಲೇಜೌಟ್, ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜು, ಕಾಶಿವಿಶ್ವನಾತ ದೇವಾಲಯ, ಮಾದಾಪಟ್ಟದಿಂದ ಗೊಂದಿಬಸವನಹಳ್ಳಿಗೆ ಹೋಗುವ ಬಲಭಾಗದ ಪ್ರದೇಶ,
ವಾರ್ಡ್‍ಸಂಖ್ಯೆ-11 ಬೈಚನಹಳ್ಳಿ, ಎಂ.ಪಿ.ಎಂ.ಸಿ, ಕಾವೇರಿ ಬಡಾವಣೆ, ಐ.ಬಿ.ರಸ್ತೆ ಎಡಭಾಗ, ಬಿ.ಎಂ..ರಸ್ತೆ ಬಲಭಾಗ, ಅರಣ್ಯ ಇಲಾಖೆ, ಪುರಸಭೆ ಕಾರ್ಯಾಲಯ, ಶ್ರೀಮಹಾಗಣಪತಿ ದೇವಸ್ಥಾನ.
ವಾರ್ಡ್ ಸಂಖ್ಯೆ 12 ರಲ್ಲಿ ಐ.ಬಿ.ರಸ್ತೆ, ಬೈಪಾಸ್ ರಸ್ತೆ ಎಡ ಮತ್ತು ಬಲ, ರಾಧಕೃಷ್ಣ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ತಹಶೀಲ್ದಾರ್ ಅವರ ಕಚೇರಿ ಮತ್ತು ಸೋಮೇಶ್ವರ ದೇವಸ್ಥಾನ ರಸ್ತೆಯ ಬಲಭಾಗ.
ವಾರ್ಡ್ ಸಂಖ್ಯೆ 13 ರಲ್ಲಿ ಅವದಾನಿ ಬಡಾವಣೆ, ಬಸಪ್ಪ ಬಡಾವಣೆ, ಶ್ರೀ ಸಾಯಿ ಬಡಾವಣೆ, ಸೋಮವಾರಪೇಟೆ ರಸ್ತೆ ಬಲ ಬದಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವಸತಿ ಗೃಹ, ಸೋಮೇಶ್ವರ ಬಡಾವಣೆ ಮತ್ತು ಆದಿಶಂಕರಾಚಾರ್ಯ ಬಡಾವಣೆ ಭಾಗಶಃ.
ವಾರ್ಡ್ ಸಂಖ್ಯೆ 14 ರಲ್ಲಿ ವೆಂಕಟೇಶ್ವರ ಬಡಾವಣೆ, ಮಾರುತಿ ಬಡಾವಣೆ, ಓಂಕಾರ ಬಡಾವಣೆ, ಕೈಗಾರಿಕ ಬಡಾವಣೆ, ಸೋಮೇಶ್ವರ ಕೆರೆ, ನಿರ್ಮಿತಿ ಕೇಂದ್ರ, ಉಪ ನೋಂದಣಾಧಿಕರಿ ಕಚೇರಿ ಹಿಂಭಾಗ ಪ್ರದೇಶ, ಗೌಡ ಸಮಾಜ, ಅಂಗನವಾಡಿ, ಅಂಬೇಡ್ಕರ್ ಬಡಾವಣೆ ಮತ್ತು ಜನತಾ ಕಾಲೋನಿ ರಸ್ತೆಯ ಬಲಭಾಗ.
ವಾರ್ಡ್ ಸಂಖ್ಯೆ 15 ರಲ್ಲಿ ಕುವೆಂಪು ಬಡಾವಣೆ, ಶ್ರೀನಿಧಿ ಬಡಾವಣೆ, ತಪೋವನ, ತಾಲ್ಲೂಕು ಪಂಚಾಯಿತಿ ಹಿಂಭಾಗ, ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಹಿಂಭಾಗ, ನಂದಿ ಬಡಾವಣೆ, ಕಾವೇರಿ ಬಡಾವಣೆ ಮತ್ತು ಕೆ.ಪಿ.ಚಂದ್ರಕಲಾ ಬಡಾವಣೆ.
ವಾರ್ಡ್ ಸಂಖ್ಯೆ 16 ರಲ್ಲಿ ಬಸಪ್ಪ ಬಡಾವಣೆ ಮತ್ತು ಶಕ್ತಿ ಬಡಾವಣೆ. ವಾರ್ಡ್, 17 ರಲ್ಲಿ ಜನತಾ ಕಾಲೋನಿ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, 6ನೇ ಕ್ರಾಸ್, 7ನೇ ಕ್ರಾಸ್ ಮತ್ತು ಮಾರುತಿ ಬಡಾವಣೆ.
ವಾರ್ಡ್ ಸಂಖ್ಯೆ 18 ರಲ್ಲಿ ಚಾಮುಂಡೇಶ್ವರಿ ಬಡಾವಣೆ, ಚೆನ್ನಕೇಶವ ಪ್ರೆಸ್ ಹಿಂಭಾಗದ ಮನೆಗಳು, ಆಫಿಸರ್ಸ್ ಕಾಲೋನಿ, ಮಾಲಿನ್ಯ ನೀರಿನ ಶುದ್ದೀಕರಣ ಘಟಕ, ಅಂಬೇಡಕರ್ ಭವನ, ವಾಲ್ಮೀಕಿ ಭವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ವಸತಿಗಳು, ಶಿವಾನಂದ ರವರ ಮನೆಯ ಸುತ್ತಮುತ್ತ ಪ್ರದೇಶ.
ವಾರ್ಡ್ ಸಂಖ್ಯೆ 19 ರಲ್ಲಿ ಐ.ಬಿ, ಹಳೆ ಹೌಸಿಂಗ್ ಬೋರ್ಡ್, ಸಿ.ಪಿ.ಸುಕನ್ಯ ಲೇಒಔಟ್/ ಚೂಡೇಗೌಡ ಬಡಾವಣೆ, ಡಾ.ಶಿವರಾಮ ಕಾರಂತ ಬಡಾವಣೆ, ಥೋಮಸ್ ಬಡಾವಣೆ, ಸಿದ್ದಯ್ಯ ಪುರಾಣಿಕ ಬಡಾವಣೆ, ಕೋಣಮಾರಮ್ಮ ದೇವಸ್ಥಾನ ಹಿಂಭಾಗ.
ವಾರ್ಡ್ ಸಂಖ್ಯೆ 20 ರಲ್ಲಿ ನೆಹರೂ ಬಡಾವಣೆ, ಎಚ್.ಆರ್.ಪಿ.ಕಾಲೋನಿ, ಕರಿಯಪ್ಪ ಬಡಾವಣೆ ಮತ್ತು ವಿನಾಯಕ ಬಡಾವಣೆ.
ವಾರ್ಡ್ ಸಂಖ್ಯೆ 21 ರಲ್ಲಿ ಕರ್ನಾಟಕ ಗೃಹ ಮಂಡಳಿ, ಮಂಜುನಾಥ ಬಡಾವಣೆ, ಚೈತ್ರ ಬಡಾವಣೆ, ಆರ್‍ಆರ್‍ಆರ್ ಬಡಾವಣೆ, ಆರ್ ಸಿ ಬಡಾವಣೆ ಭಾಗಶಃ, ಮಂಜೇಗೌಡ ಬಡಾವಣೆ, ನಂಜುಂಡೇಶ್ವರ ಬಡಾವಣೆ, ಸ್ವಾಮಿ ಬಡಾವಣೆ, ಕಾರು ಚಾಲಕ ಬಡಾವಣೆ, ಗೊಂದಿ ಬಸವನಹಳ್ಳಿ ಭಾಗಶಃ, ಸಿದ್ದಯ್ಯ ಬಡಾವಣೆ, ಪಿ.ಪಿ.ಸತ್ಯನಾರಾಯಣ ಬಡಾವಣೆ.
ವಾರ್ಡ್ ಸಂಖ್ಯೆ 22 ರಲ್ಲಿ ನಾಗೇಗೌಡ ಬಡಾವಣೆ, ಕಾಲಬೈರವೇಶ್ವರ ಬಡಾವಣೆ, ಅಣ್ಣೇಗೌಡ ಬಡಾವಣೆ, ಕರ್ನಾಟಕ ರಾಜ್ಯ ಅಗ್ನಿಶಾಮಕದಳ ಹಿಂಭಾಗ ಬರುವ ಮನೆಗಳು, ಮುಕಾಂಬಿಕಾ ವಿದ್ಯಾಸಂಸ್ಥೆ, ಎಸ್‍ಎಲ್‍ಎನ್ ಪ್ರಾಪರ್ಟಿಸ್, ಶ್ರೀ ಬಲಮುರಿ ಗಣಪತಿ ದೇವಸ್ಥಾನ ಸುತ್ತಮುತ್ತಲು ಪ್ರದೇಶ ಮತ್ತು ಬಸವೇಶ್ವರ ಬಡಾವಣೆ. ವಾರ್ಡ್ ಸಂಖ್ಯೆ 23 ರಲ್ಲಿ ಗೊಂದಿಬಸವನಹಳ್ಳಿ ಭಾಗಶಃ.
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ಕುಕ್ಲೂರು ಗ್ರಾಮ ಭಾಗಶಃ ಮತ್ತು ಮಗ್ಗುಲ ಗ್ರಾಮ ಭಾಗಶಃ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿ ಗ್ರಾಮ ಭಾಗಶಃ, ಆರ್ಜಿ ಗ್ರಾಮ ಪಂಚಾಯಿತಿಯ ಆರ್ಜಿ ಗ್ರಾಮ ಭಾಗಶಃ, ಬೇಟೋಳಿ ಗ್ರಾ.ಪಂ. ಬೇಟೋಳಿ ಗ್ರಾಮ ಭಾಗಶಃ, ಕೆದಮುಳ್ಳೂರು ಗ್ರಾ.ಪಂ.ಯ ಕೊಟ್ಟೋಳಿ ಗ್ರಾಮ ಭಾಗಶಃ ಮತ್ತು ಕದನೂರು ಗ್ರಾ.ಪಂ. ಕದನೂರು ಗ್ರಾಮ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ವಿರಾಜಪೇಟೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಸಂಬಂಧ ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಮುಖ್ಯಾಧಿಕಾರಿ, ಪುರಸಭೆ, ವಿರಾಜಪೇಟೆ ಇವರು ವಿರಾಜಪೇಟೆ ಪುರಸಭೆಯ ವಾರ್ಡ್‍ಗಳನ್ನು 2011 ರ ಜನಗಣತಿಯ ಆಧಾರದ ಮೇರೆ ಪುನರ್ ವಿಂಗಡಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಪ್ರಕರಣ 13 ರ ಮೇರೆಗೆ ವಿರಾಜಪೇಟೆ ಪುರಸಭೆಯ ವಾರ್ಡ್‍ಗಳನ್ನು 2011 ರ ಜನಗಣತಿಯನ್ನು ಆಧಾರಿಸಿ ಪುನರ್ ವಿಂಗಡಣೆ ಮಾಡಿ, ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಸಲ್ಲಿಸಬೇಕೆಂದು ಹಾಗೂ ಆಕ್ಷೇಪಣೆಯನ್ನು ಸಲಹೆಗಳನ್ನು ಈ ಅವಧಿಯ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ವಾರ್ಡ್‍ಗಳ ವಿವರ : ವಿರಾಜಪೇಟೆ 1 (ಚರ್ಚ್ ರಸ್ತೆ), ವಿರಾಜಪೇಟೆ-2(ಅರಸು ನಗರ), ವಿರಾಜಪೇಟೆ 3(ಮಲೆತಿರಿಕೆ ಬೆಟ್ಟ), ವಿರಾಜಪೇಟೆ-4(ತೆಲುಗರ ಬೀದಿ), ವಿರಾಜಪೇಟೆ 5(ದಖ್ಖನಿ ಮೊಹಲ್ಲಾ), ವಿರಾಜಪೇಟೆ-6(ಜೈನರ ಬೀದಿ), ವಿರಾಜಪೇಟೆ-7(ಮೊಗರಗಲ್ಲಿ), ವಿರಾಜಪೇಟೆ-8 (ನೆಹರುನಗರ-1), ವಿರಾಜಪೇಟೆ-9(ನೆಹರು ನಗರ-2), ವಿರಾಜಪೇಟೆ-10(ವಿದ್ಯಾನಗರ-01), ವಿರಾಜಪೇಟೆ-11(ವಿದ್ಯಾನಗರ-02), ವಿರಾಜಪೇಟೆ-12(ನಿಸರ್ಗ ಲೇಔಟ್), ವಿರಾಜಪೇಟೆ-13(ಕಲ್ಲುಬಾಣೆ), ವಿರಾಜಪೇಟೆ-14(ಮಂಜುನಾಥ ನಗರ), ವಿರಾಜಪೇಟೆ-15(ವಿಜಯನಗರ), ವಿರಾಜಪೇಟೆ-16(ಸುಣ್ಣದ ಬೀದಿ), ವಿರಾಜಪೇಟೆ-17(ಶಾಂತಿನಗರ), ವಿರಾಜಪೇಟೆ-18(ಮೀನುಪೇಟೆ),ವಿರಾಜಪೇಟೆ-19(ಗೌರಿಕೆರೆ), ವಿರಾಜಪೇಟೆ-20(ಗಾಂಧಿನಗರ), ವಿರಾಜಪೇಟೆ-21(ಚಿಕ್ಕಪೇಟೆ), ವಿರಾಜಪೇಟೆ-23(ಶಿವಕೇರಿ),

Continue Reading

Kodagu

ಸೆ.29ಕ್ಕೆ ಜಾನಪದ ದಸರಾ – ಕಲಾತಂಡಗಳ ಹೆಸರು ನೋಂದಾವಣಿಗೆ ಅವಕಾಶ

Published

on

ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ 4 ನೇ ವಷ೯ದ ಜಾನಪದ ದಸರಾವನ್ನು ಸೆಪ್ಟೆಂಬರ್ 29 ರಂದು ಸೋಮವಾರ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.

ಸೆ.29 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದಶ೯ನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದಭ೯ ಜಾನಪದ ವಸ್ತು ಪ್ರದಶ೯ನ, ಕಲಾಜಾಥಾ ಕೂಡ ಜರುಗಲಿದೆ ಎಂದು ಜಾನಪದ ಪರಿಷತ್ ಪ್ರಕಟಣೆ ತಿಳಿಸಿದೆ.

ಜಾನಪದ ದಸರಾ ಸಂದಭ೯ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದಶ೯ನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದಭ೯ ನೀಡಲು ಇಚ್ಚಿಸುವ ಪ್ರದಶ೯ನದ ಬಗ್ಗೆ ತಮ್ಮ ಹೆಸರನ್ನು ಸೆಪ್ಟೆಂಬರ್ 20 ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಜಾನಪದ ದಸರಾದಲ್ಲಿ ಕಲಾ ಪ್ರದಶ೯ನ ನೀಡಲಿಚ್ಚಿಸುವ ಕಲಾವಿದರು, ಕಲಾತಂಡಗಳು ಸೆಪ್ಟೆಂಬರ್ 20 ರೊಳಗಾಗಿ ಅಜಿ೯ಗಳನ್ನು ಅಧ್ಯಕ್ಷರು, ಕೊಡಗು ಜಾನಪದ ಪರಿಷತ್, ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ – 571201 ಇಲ್ಲಿಗೆ ಕಳುಹಿಸಬೇಕು, ಜಾನಪದ ದಸರಾ ಸಂಬಂಧಿತ ಹೆಚ್ಚಿನ ಮಾಹಿತಿಗೆ ಸಂಪಕ೯ ಸಂಖ್ಯೆಗಳು – 9886181613, ಎಸ್ ಐ ಮುನೀರ್ ಅಹಮ್ಮದ್ , ಪ್ರಧಾನ ಕಾಯ೯ದಶಿ೯, 94486 14999 ಎಸ್ ಎಸ್ ಸಂಪತ್ ಕುಮಾರ್ ಖಜಾಂಜಿ, ಕೊಡಗು ಜಿಲ್ಲಾ ಜಾನಪದ ಪರಿಷತ್,

Continue Reading

Kodagu

ಜಾತಿ ಜನಗಣತಿ ಸಂದರ್ಭ ಒಕ್ಕಲಿಗನೆಂದು ಬರೆಸಲು ಕೊಡಗು ಒಕ್ಕಲಿಗರ ಸಂಘ ಮನವಿ

Published

on

ಮಡಿಕೇರಿ: ರಾಜ್ಯ ಸರ್ಕಾರದ ವತಿಯಿಂದ ಇದೇ ಸೆ.22 ರಿಂದ ಕರ್ನಾಟಕದ ಸಮಗ್ರ ಜನತೆಯ ಜಾತಿ ಜನಗಣತಿ ನಡೆಯಲಿದ್ದು, ಒಕ್ಕಲಿಗ ಜನಾಂಗದವರು ತಪ್ಪದೇ ಒಕ್ಕಲಿಗ ಎಂದು ತಮ್ಮ ಜಾತಿಯನ್ನು ಬರೆಸುವಂತೆ ಮತ್ತು ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದಂತೆ ನೀಡುವಂತೆ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಅವರು ಮನವಿ ಮಾಡಿದ್ದಾರೆ.

ಈ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರ ಮುಂದಿನ ದಿನಗಳಲ್ಲಿ ಯೋಜನೆ ಅಥವಾ ಕಾರ್ಯಕ್ರಮ ರೂಪಿಸುವಾಗ ಜಾತಿ ಜನಗಣತಿಯ ದತ್ತಾಂಶ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬಾರದು ಎಂದು ಕೋರಿದ್ದಾರೆ.

ಗಣತಿದಾರರು ಮನೆಮನೆಗೆ ಬಂದಾಗ ಒಕ್ಕಲಿಗ ಜನಾಂಗದವರು ತಪ್ಪದೇ ಒಕ್ಕಲಿಗ ಎಂದು ಬರೆಸಬೇಕು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಒಕ್ಕಲಿಗ ಸಮುದಾಯದವರು ನಿಖರವಾದ ಮಾಹಿತಿಯನ್ನು ಸಂಪೂರ್ಣವಾಗಿ ನೀಡಬೇಕು. ಶಿಕ್ಷಣ, ಉದ್ಯೋಗ, ಆಸ್ತಿ, ಆರ್ಥಿಕ ಪರಿಸ್ಥಿತಿ ಮೊದಲಾದ ಮಾಹಿತಿಗಳನ್ನು ತಪ್ಪಾಗಿ ನೀಡದೆ ಸತ್ಯಾಂಶವನ್ನು ತಿಳಿಸಬೇಕು. ಯಾವುದೇ ಕಾರಣಕ್ಕೂ ಹೆಚ್ಚು ಕಡಿಮೆ ಮಾಡಬಾರದು ಮತ್ತು ಸುಳ್ಳು ಮಾಹಿತಿಯನ್ನು ನೀಡಬಾರದು. ಒಕ್ಕಲಿಗ ಜನಾಂಗದವರು ಗಣತಿಯಿಂದ ಹೊರಗೆ ಉಳಿಯಬಾರದು ಎಂದು ಸಲಹೆ ನೀಡಿದ್ದಾರೆ.

ಸೆ.22ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದ್ದು, ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಸರಿಯಾಗಿ ನೀಡಬೇಕು. ವಿದ್ಯಾವಂತರು ತಮ್ಮ ತಮ್ಮ ಗ್ರಾಮಗಳಲ್ಲಿ ಒಕ್ಕಲಿಗ ಕುಟುಂಬಗಳಿಗೆ ತಿಳುವಳಿಕೆ ನೀಡಿ ಯಾರೊಬ್ಬರು ಗಣತಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸಿ ಉಪಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿಗಳ ಹೆಸರನ್ನು ಬರೆಸಬೇಕು ಅಥವಾ ಒಕ್ಕಲಿಗ ಎಂದೇ ಬರೆಸಬೇಕು ಎಂದು ಎಸ್.ಎಂ.ಚಂಗಪ್ಪ ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಸದ ವಿವಿಧ ಯೋಜನೆಗಳು, ಶಿಕ್ಷಣ, ಉದ್ಯೋಗ ಮತ್ತು ಹೆಚ್ಚಿನ ಸೌಲಭ್ಯಗಳು ಹಿಂದುಳಿದ ಜನಾಂಗಗಳ ಮೀಸಲಾತಿ ಆಧಾರದಲ್ಲಿ ಹಂಚಿಕೆಯಾಗುವುದರಿಂದ ಒಕ್ಕಲಿಗ ಸಮುದಾಯ ಸಮರ್ಪಕವಾಗಿ ಮಾಹಿತಿಯನ್ನು ಒದಗಿಸಬೇಕು ಎಂದು ಕೋರಿದ್ದಾರೆ.

Continue Reading

Kodagu

ಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ

Published

on

ಪೊನ್ನಂಪೇಟೆ ತಾಲೂಕಿನ ಪೂಕೋಳ ಗ್ರಾಮದ
ಕಾಳಿಮಾಡ ಸೋಮಯ್ಯ ಹಾಗೂ ಸರಸು ಚನ್ನಪಟ್ಟಣ
ತಾಲೂಕು ದೇವರ ಹೊಸಹಳ್ಳಿ ಬಳಿ ರಸ್ತೆ ಅಪಘಾತದಲ್ಲಿ ಮೃತ
ಪಟ್ಟಿದ್ದು,ಮಗ ಸಜನ್ ಪಾರಾಗಿದ್ದಾರೆ.

Continue Reading

Trending

error: Content is protected !!