Connect with us

Mandya

ಮೇ 26 ರಿಂದ 29 ರವರೆಗೆ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರ ಕಾರ್ಯಕ್ರಮ: ಬಿ.ಸಿ. ಶಿವಾನಂದಮೂರ್ತಿ

Published

on

ಮಂಡ್ಯ : ಗ್ವಾರವಾನ್ವಿತ ನ್ಯಾಯಮೂರ್ತಿ ಹಾಗೂ‌ ಉಪಲೋಕಾಯುಕ್ತರಾದ
ಬಿ.ವೀರಪ್ಪ ಅವರು ಮಂಡ್ಯ ಜಿಲ್ಲೆಯ ಪ್ರವಾಸ ಕಾರ್ಯಕ್ರಮವನ್ನು ಪರಿಷ್ಕರಿಸಿದ್ದು, ಅವರು ಮೇ 26 ರಿಂದ 29 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಉಪಲೋಕಾಯುಕ್ತರು ಸಾರ್ವಜನಿಕರಿಂದ ಅಂಬೇಡ್ಕರ್ ಭವನದಲ್ಲಿ ಮೇ 28 ರಂದು ದೂರು ಸ್ವೀಕರಿಸಲಿದ್ದಾರೆ. ಈ ಕುರಿತು ವ್ಯಾಪಕ ಪ್ರಚಾರವಾಗಬೇಕು ಎಂದರು.

ಎಲ್ಲಾ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗಳು ಉಪಲೋಕಾಯುಕ್ತರು ಆಗಮಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಬ್ಯಾನರ್ ಗಳನ್ನು ಅಳವಡಿಸಬೇಕು. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮ ಹಾಗೂ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಹಾಗೂ ಸಾರ್ವಜನಿಕರಿಂದ ದೂರು ಸಹ ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾಸ ಕಾರ್ಯಕ್ರಮ

ಗ್ವಾರವಾನ್ವಿತ ನ್ಯಾಯಮೂರ್ತಿ ಹಾಗೂ‌ ಉಪಲೋಕಾಯುಕ್ತರಾದ
ಬಿ.ವೀರಪ್ಪ ಅವರು ಮೇ 26 ರಿಂದ 29 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಮೇ 26 ರಂದು ಸಂಜೆ 6.30 ಕ್ಕೆ ಮಂಡ್ಯ ಜಿಲ್ಲೆಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.

ಮೇ 27 ರಂದು ಬೆಳಿಗ್ಗೆ 6:30 ಗಂಟೆಗೆ, ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ, ಮಧ್ಯಾಹ್ನ 2.30 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಮೇ 28 ರಂದು ಬೆಳಿಗ್ಗೆ 6:30 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10:00 ಗಂಟೆಯಿ0ದ ಸಂಜೆ 5:00 ರವರೆಗೆ ನಗರದ ಸುಭಾಷ್ ನಗರದಲ್ಲಿರುವ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕರಿಂದ ದೂರು ಮತ್ತು ಅಹವಾಲು ಸ್ವೀಕರಿಸಲಿದ್ದಾರೆ.

ಸಂಜೆ 5:00 ರಿಂದ 6:30 ರವರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಸಹಯೋಗದೊಂದಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದAತೆ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಕಂದಾಯ ಇಲಾಖೆ, ಆರ್‌ಡಿಪಿಆರ್ ಇಲಾಖೆ, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಇತರ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ (ಉಪ ನೋಂದಣಿದಾರರು, ಆರ್‌ಟಿಒಗಳು, ಸಮಾಜ ಕಲ್ಯಾಣ ಕಚೇರಿ, ಡಿಡಿಪಿಐ, ಎಇಒ ಮತ್ತು ಬಿಇಒ ಇಲಾಖೆ ಇತ್ಯಾದಿ) ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಿದ್ದಾರೆ.

ಮೇ 29 ರಂದು ಬೆಳಿಗ್ಗೆ 6:30 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಬೆಳಿಗ್ಗೆ 9:45 ಗಂಟೆಯಿಂದ 11:00 ಗಂಟೆಯವರೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು, ವಕೀಲರು ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11:00 ಗಂಟೆಯಿ0ದ ಸಂಜೆ 6:00 ರವರೆಗೂ ಜಿಲ್ಲೆಗೆ ಸಂಬಂಧಿಸಿದ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿಯನ್ನು ದೂರುದಾರರ ಮತ್ತು ಪ್ರತಿವಾದಿಗಳ ಸಮ್ಮುಖದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಾಗುವುದು,

ರಾತ್ರಿ 9 ಗಂಟೆಗೆ ರಸ್ತೆಯ ಮೂಲಕ ಕೇಂದ್ರ ಸ್ಥಾನ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Mandya

ಮೇ.16 ರಿಂದ 19 ರ ವರೆಗೆ ಕೀಲಾರ ಗ್ರಾಮದ ಸೋಮೇಶ್ವರಸ್ವಾಮಿ ದೇವಾಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ : ಕೆ.ಕೆ.ರಾಧಾಕೃಷ್ಣ

Published

on

ಮಂಡ್ಯ: ಕೀಲಾರ ಗ್ರಾಮದ ಸೋಮೇಶ್ವರಸ್ವಾಮಿ ದೇವಾಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟ್‌ನ ವತಿಯಿಂದ ದೇವಾಲಯದ ಜೀರ್ಣೋದ್ಧಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮೇ.16ರಿಂದ ರ 19 ವರೆಗೆ ಹಮ್ಮಿಕೊಳ್ಳಳಾಗಿದೆ ಎಂದು ಸಮಿತಿಯ ಪ್ರಧಾನ ಪೋಷಕ ಕೆ.ಕೆ.ರಾಧಾಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯವು ೭೫೦ ವರ್ಷಗಳ ಹಿಂದೆ ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದ್ದು, ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಆಗಿನ ವಾಸ್ತುಶಿಲ್ಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲಾಗಿದೆ ಎಂದರು.

ಮೇ. 16ರ ಬೆಳಿಗ್ಗೆ 9.30 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ೧೧.೩೦ಕ್ಕೆ ದೇವಸ್ಥಾನದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ ದಿವ್ಯ ಸಾನಿಧ್ಯವನ್ನು ವಹಿಸುವರು ಎಂದು ಹೇಳಿದರು.

ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನ ಉಪಾಧ್ಯಕ್ಷ ಸುರೇಂದ್ರಕುಮಾರ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಸಂಶೋಧನಾ ವಿಭಾಗದ ಶಲ್ವಪಿಳ್ಳೈ ಅಯ್ಯಂಗಾರ್, ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ನಿವೃತ್ತಾ ಪ್ರಾಧ್ಯಾಪಕ ಶೈವಾಗಮರತ್ನ ಪ್ರೊ.ಎಂ.ಮಲ್ಲಣ್ಣ, ಬೆಂಗಳೂರಿನ ಶೇಷಾಧ್ರಿ ಸ್ವಾಮೀಜಿ ಉಪಸ್ಥಿತರಿರಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಾಚ್ಯವಸ್ತು ಇಲಾಖೆಗೆ ಆಯುಕ್ತ ದೇವಾರಜು.ಎ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಶಿವಕುಮಾರ ಬಿರಾದಾರ್, ಹಿರಿಯೂರು ಅವದಾನಿ ನರಸಿಂಹಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಜೆ ೦೭ರಿಂದ ಮೇ.೧೯ರವರೆಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೇ.೧೯ರ ಬೆಳಿಗ್ಗೆ ೧೧.೩೦ಕ್ಕೆ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಭೆ ನಡೆಯಲಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆಯ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್‌ಗೌಡ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜಯರಾಮೇಗೌಡ, ಡಿ.ಶಿವರಾಜ್, ಕೆ.ಟಿ.ಶಿವರಾಮ್, ಆನಂದ್, ಲೋಕೇಶ್, ಸುರೇಶ್ ಕೀಲಾರ, ಕೀಲಾರ ಕೃಷ್ಣೇಗೌಡ ಇದ್ದರು.

Continue Reading

Mandya

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿನ ಸಾಧನೆಗಳ ದಾಖಲೆ ಪ್ರಕಟಿಸಿದ ಕೆ.ಅನ್ನದಾನಿ

Published

on

ಮಂಡ್ಯ: ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ೨೦ ಮತ್ತು ೧೪ ತಿಂಗಳ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಚಾಲನೆಗೊಂಡು ಅಭಿವೃದ್ಧಿಗೊಂಡ ಕಾರ್ಯಗಳನ್ನು ದಾಖಲೆ ಸಮೇತ ಪ್ರಕಟಿಸಿದ ಮಾಜಿ ಶಾಸಕ ಕೆ.ಅನ್ನದಾನಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ದಾಖಲೆ ಸಮೇತ ಚರ್ಚೆಗೆ ತಾವೇ ದಿನಾಂಕ ನಿಗದಿ ಪಡಿಸಿ ಅಥವಾ ದಿನಾಂಕ ನಿಗದಿ ಪಡಿಸಿ ಕರೆಯಬೇಕೆ ಹೇಳಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಡಿದ ಕೆಲಸ ಮಾತನಾಡಬೇಕು. ಮಾತನಾಡುವುದೇ ಕೆಲಸವಾಗಬಾರದೆಂದು ವೇದಿಕೆಯೊಂದರಲ್ಲಿ ಶಾಸಕ ಮಿಸ್ಟರ್ ಎಂಎಲ್‌ಎ ಮಾತನಾಡುತ್ತಾ ವೈಯಕ್ತಿಕವಾಗಿ ಹಾಡೇಳುವವನು ಎಂದು ಅಪಹಾಸ್ಯ ಮಾಡಿರುವ ಶಾಸಕ ನರೇಂದ್ರಸ್ವಾಮಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.

ಮಳವಳ್ಳಿ ತಾಲೂಕಿನಲ್ಲಾದ ಅಭಿವೃದ್ದಿ ಕೆಲಸಗಳು ತಮ್ಮಿಂದಲೇ ಆಗಿದೆ ಎಂದು ಮಿಸ್ಟರ್ ಎಂಎಲ್‌ಎ ಬಿಂಬಿಸಿಕೊಳ್ಳುತ್ತಿದ್ದು, ಅವರು ಮಂತ್ರಿಯಾಗಿ, ಶಾಸಕರಾಗಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ತಾಲೂಕಿಗೆ ತಂದಿದ್ದಾರೆ ಎಂಬುದರ ದಾಖಲೆ ಬಿಡುಗಡೆ ಮಾಡಿ ಚರ್ಚೆಗೆ ಬರಲಿ ಎಂದು ತಾಕೀತು ಮಾಡಿದರು.

ನಾನು ದೇವರಾಜ ಅರಸು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ವೇಳೆ ಹಿಂದುಳಿದ ವರ್ಗದ ಜನರಿಗೆ ಅನುದಾನ ಒದಗಿಸಿ, ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದ್ದೇನೆ. ಇದರಿಂದ ಕುರುಬ, ಕುಂಬಾರ, ತಿಗಳ ಸೇರಿದಂತೆ ಹಲವು ಸಮಾಜದವರು ಅಭಿವೃದ್ಧಿಯ ಹಾದಿಗೆ ಸಾಗಲು ಸಹಕಾರಿಯಾಗಿದೆ ಎಂದು ದಾಖಲೆಗಳನ್ನು ಮುಂದಿಟ್ಟರು.
ತಾವು ಮಂತ್ರಿಯಾಗಿದ್ದವೇಳೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬ ಸಾಧನೆ ತೆರೆದಿಡಲಿ, ಈಗ ಎರಡು ವರ್ಷಗಳಿಂದ ತಾಲೂಕಿಗೆ ಎಷ್ಟು ಹಣ ತಂದಿದ್ದಾರೆ ಎಂದು ಸಾಭೀತು ಮಾಡಲಿ ಎಂದು ಆಗ್ರಹಿಸಿದ ಅವರು ತಮ್ಮೆಲ್ಲಾ ದಾಖಲೆಗಳ ಸಮೇತ ತಾವು ಪೂಜಿಸುವ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಬರಲಿ ಎಂದು ಸವಾಲಿಗೆ ಕರೆ ನೀಡಿದರು.

ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಅಕ್ರಮ ಖಾತೆ ಮಾಡಿಸಿಕೊಂಡಿರುವುದನ್ನು ರದ್ದು ಪಡಿಸಿದ್ದೇನೆ ಎಂದು ಹೇಳಿಕೊಳ್ಳುವ ಮಿಸ್ಟರ್ ಎಂಎಲ್‌ಎ, ತನ್ನ ಶಿಷ್ಯ, ಗ್ಯಾರೆಂಟಿ ಸಮಿತಿ ಸದಸ್ಯ ಸಾಧಿಕ್ ಪಾಷ ಆರ್‌ಟಿಸಿ ೨೯೫ರಲ್ಲಿ ೮೦ ಎಕರೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ ಎಂದರು.

ಈ ಪ್ರಕರಣಗಳ ತನಿಖೆಯಾಗಲೆಂದು ಅವರು ಯಾವಾಗ ಒತ್ತಾಯಿಸಿದರು. ಎಷ್ಟು ಹೋರಾಟ ಮಾಡಿದ್ದಾರೆ, ಯಾರನ್ನು ಆಗ್ರಹಿಸಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಸದರಿ ತನಿಖೆಯಾಗಲೆಂದು ೨೦೨೪ರ ಜನವರಿ ೦೧ರಂದು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದು, ಅದರ ಫಲವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆದು ೩೦೫ ಎಕರೆಯ ಅಕ್ರಮ ಖಾತೆಗಳ ರದ್ದು ಮಾಡಲಾಗಿದೆ. ಈಗ ಇದರ ಲಾಭವನ್ನು ಮಿಸ್ಟರ್ ಎಂಎಲ್‌ಎ ಪಡೆಯುತ್ತಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂರಿಗಾಲಿಯಲ್ಲಿ ಶಾಲೆಯ ಕಾಂಪೌಂಡ್ ಹಾಗೂ ವಾಟರ್ ಟ್ಯಾಂಕ್ ತೆರವುಗೊಳಿಸಿ ಮನೆ ನಿರ್ಮಿಸಿರುವುದಾಗಿ ಗ್ರಾಮದ ಫಣೀಶ್ ದೂರು ದಾಖಲು ಮಾಡಿದ್ದಾರೆ. ಇಂತಹ ಅಕ್ರಮಗಳಿಗೆ ಯಾರು ಹೊಣೆ ಎಂಬುದನ್ನು ಹೇಳುವಂತೆ ಒತ್ತಾಯಿಸಿದರು.

ಹಾಡೇಳುವವನು ಎಂದು ಅಪಹಾಸ್ಯ ಮಾಡುತ್ತಿದ್ದು, ನಾನೊಬ್ಬ ಜನಪದ ಕಲಾವಿದ ಹಾಡೇಳುವುದು ನನ್ನ ಕಲೆ ಎರಡು ಪದವಿ ಪಡೆದು, ಜನಪದ ಪಿಹೆಚ್‌ಡಿಯನ್ನು ಪಡೆದಿದ್ದೇನೆ. ನಿನ್ನಂತೆ ಗುಂಡಾಗಿರಿ, ಬೆದರಿಸುವ ಕಲೆ ನನಗಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳದ ನೀನು ಇಸ್ಪೀಟ್ ಆಟದ ಗಿರಾಕಿ, ಮರಳು ದಂಧೆ ಮಾಡುವ ಗಿರಾಕಿ, ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು.
ಅಸಮರ್ಥ, ಹಾಡಿನ ಗಿರಾಕೆ ಎಂಬ ಅಪಹಾಸ್ಯದ ಪದ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಿನ್ನ ವಿರುದ್ದ ಬೇರೆ ತರಹದ ಪದಬಳಕೆ ಮಾಡಬೇಕಾಗುವುದು ಎಂದ ಅವರು, ಡಿಸಿಸಿ ಬ್ಯಾಂಕ್‌ನ ಸದಸ್ಯರನ್ನು ಅಮಾನತು ಮಾಡಿ, ತನಗೆ ಬೇಕಾದವರಿಗೆ ಸದಸ್ಯತ್ವ ಕೊಡಿಸುವ ಮೂಲಕ ಡಿಸಿಸಿ ಬ್ಯಾಂಕ್‌ನಲ್ಲಿ ಇಷ್ಟ ಬಂದಂತೆ ಮಿಸ್ಟರ್ ಎಂಎಲ್‌ಎ ಅನಾಚಾರ ಮಾಡುತ್ತಿದ್ದಾನೆ ಎಂದು ದೂರಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ತನ್ನ ಅನಾಚಾರ ನಡವಳಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ತನ್ನ ಕಿಸೆ ತುಂಬಿಸಿಕೊಳ್ಳುವ ನಿಟ್ಟನಲ್ಲಿ ಪಡೆದಿರುವ ಮಿಸ್ಟರ್ ಎಂಎಲ್‌ಎ ತನ್ನ ಖಜಾನೆಯನ್ನಷ್ಟೇ ವೃದ್ಧಿ ಪಡಿಸಿಕೊಳ್ಳಬಲ್ಲ. ಇದರಿಂದ ಮಳವಳ್ಳಿ ಕ್ಷೇತ್ರಕ್ಕೆ ಏನನ್ನು ಕೊಡಲು ಸಾಧ್ಯವಿಲ್ಲ, ಇತರರನ್ನು ಹೆದರಿಸಿ ಹಣ ಮಾಡಲಷ್ಟೇ ಈ ಹುದ್ದೆ ಪಡೆದಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.
ಸಮ್ಮೇಳನದಲ್ಲಿ ವೇದಿಕೆ ಸಮಿತಿಯು ವೇದಿಕೆ ನಿರ್ಮಾಣ ಹಾಗೂ ನಿರ್ವಹಣೆಗೆ ೮.೬೦ ಕೋಟಿ ರೂ ವೆಚ್ಚ ಮಾಡಿರುವುದಾಗಿ ಲೆಕ್ಕ ಕೊಟ್ಟಿದ್ದು, ಯಾವುದಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆ ಎಂಬುದನ್ನು ಪಾರದರ್ಶಕವಾಗಿ ತಿಳಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರು ಹೊಣೆ ಹೊರಬೇಕಾಗುತ್ತದೆ ಎಂದ ಅವರು ಅವರು ವೆಚ್ಚ ಮಾಡಿರುವ ಹಣಕ್ಕೆ ಸದರಿ ಮಾದರಿಯ ಎರಡು ವೇದಿಕೆಗಳನ್ನು ಖರೀದಿಸಬಹುದು ಎಂದು ಖಾರವಾಗಿ ನುಡಿದರು.
ಐಶ್ವರ್ಯಗೌಡ ವಿರುದ್ಧ ಇ.ಡಿ ತನಿಖೆಗೆ ಆದೇಶ:
ಚಿನ್ನಾಭರಣ ಅಕ್ರಮವೆಸಗಿದ ಐಶ್ವರ್ಯಗೌಡ ವಿರುದ್ಧ ಇ.ಡಿ ತನಿಖೆಗೆ ಆದೇಶಿಸಿರುವುದ ನನ್ನ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಇಷ್ಟು ದಿನ ಆಕೆಗೆ ಸಹಕಾರ ನೀಡಿರುವುದು ಯಾರು ಎಂಬುದರ ವಿಚಾರವಾಗಿ ನನ್ನ ಮೇಲೆ ಗೂಬೆ ಕೂರಿಸಲಾಗುತ್ತಿತ್ತು. ಇದನ್ನು ಬಹಿರಂಬ ಪಡಿಸಲು ನಾನು ಹೋರಾಟದ ಮೂಲಕ ಒತ್ತಾಯ ಮಾಡಿದ ಹಿನ್ನಲೆ ತನಿಖೆಯನ್ನು ಇ.ಡಿಗೆ ವಹಿಸಲಾಗಿದ್ದು, ಇದರಿಂದ ಆಕೆಗೆ ಸಹಕಾರ ನೀಡಿದವರು ಯಾರು ಎಂಬುದು ಬಯಲಾಗಲಿದೆ ಎಂದರು.

ಈಕೆ ಬಳಸುತ್ತಿದ್ದು ಕೆಎ ೦೯ ಎಂಕೆ ೪೬೮೯ ಸಂಖ್ಯೆಯ ಬೆನ್ಸ್ ಕಾರನ್ನು ವಿನಯ್ ಕುಲಕರ್ಣಿ ನೀಡಿರುವುದಾಗಿ ತಿಳಿದು ಬಂದಿದ್ದು, ಏತಕ್ಕಾಗಿ ಸದರಿ ಕಾರನ್ನು ಈಕೆಗೆ ನೀಡಲಾಗಿತ್ತು ಎಂಬುದು ಸಹ ಇ.ಡಿ ತನಿಖಾ ಸಂಸ್ಥೆ ಬೆಳಕಿಗೆ ತರಬೇಕಿದೆ ಎಂದು ಇದೇ ವೇಳೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ ವಿಭಾಗದ ಅಧ್ಯಕ್ಷ ಎಸ್.ಡಿ.ಜಯರಾಂ, ತಾಲೂಕು ಎಸ್ಸಿ ವಿಭಾಗದ ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಶ್ರೀಧರ್, ಕಾಂತರಾಜ್, ಸಿದ್ದಾಚಾರಿ ಇದ್ದರು.

Continue Reading

Mandya

ಮೇ.20 ರಂದು ಮನ್ ಮುಲ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

Published

on

ಮಂಡ್ಯ : ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿ ಆಡಳಿತ ಮಂಡಳಿಯ-2025 ರ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಅವರು ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುತ್ತಾರೆ.

ಚುನಾವಣೆಯು ಮೇ 20 ರಂದು ಮಂಗಳವಾರ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇ 20 ರಂದು ಬೆಳ್ಳಿಗೆ 9 ರಿಂದ 11 ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಮಧ್ಯಾಹ್ನ 1 ಗಂಟೆಗೆ ಆಡಳಿತ ಮಂಡಳಿಯ ಸಭೆ ಹಾಗೂ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಪರಿಶೀಲನೆಯ ನಂತರ ಕ್ರಮಬದ್ಧವಾದ ಅಭ್ಯರ್ಥಿಗಳ ನಾಮಪತ್ರಗಳು ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರಗಳ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು.

ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಯ ನಂತರ 30 ನಿಮಿಷಗಳ ಕಾಲ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗುವುದು.

ನಾಮಪತ್ರಗಳ ವಾಪಸ್ಸು ಪಡೆಯಲು ನೀಡಿದ ಅವಧಿಯ ನಂತರ ನಾಮಪತ್ರಗಳ ವಾಪಸ್ಸು ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಣೆಗೊಳಿಸಲಾಗುವುದು.

ಅಂತಿಮವಾಗಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲಿದ್ದಲ್ಲಿ ರಹಸ್ಯ ಮಾತಾದಾನ ನಡೆಸಿ, ಮತದಾನದ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಿಸಲಾಗುವುದು.

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ ಚುನಾವಣೆಗೆ ಸಂಬಂಧಿಸಿದಂತೆ ಫೆಬ್ರವರಿ 02 ರಂದು ಚುನಾವಣೆಯನ್ನು ನಡೆಸಲಾಗಿದ್ದು, ಘನ ನ್ಯಾಯಾಲಯದ ಅಂತಿಮ ಆದೇಶಗಳ ರೀತ್ಯಾ ಎಲ್ಲಾ ಮತಕ್ಷೇತ್ರಗಳ ಫಲಿತಾಂಶವನ್ನು ಪ್ರಕಟಿಸಿರುತ್ತದೆ.

ಚುಬಾವಣೆಯಲ್ಲಿ ಮಂಡ್ಯ-03, ಮದ್ದೂರು-02, ಮಳವಳ್ಳಿ-01, ಪಾಂಡವಪುರ-01, ಶ್ರೀರಂಗಪಟ್ಟಣ-01, ಕೆ.ಆರ್.ಪೇಟೆ-02 ಮತ್ತು ನಾಗಮಂಗಲ-02 ಒಟ್ಟು 12 ಜನ ನಿರ್ದೇಶಕರು ಆಯ್ಕೆಯಾಗಿರುತ್ತಾರೆ.

ಎಲ್ಲಾ ಚುನಾಯಿತ ಮತ್ತು ನಾಮನಿರ್ದೇಶಿತರಿಗೆ ಚುನಾವಣಾ ನೋಟಿಸ್ ಅನ್ನು ಮುದ್ದಾಂ ಹಾಗೂ ನೊಂದಾಯಿತ ಅಂಚೆ ಮುಖಾಂತರ ಜಾರಿ ಮಾಡಲಾಗಿರುತ್ತದೆ.

ಸದರಿ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿರುವವರ ವಿವರ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಚುನಾಯಿತ ನಿರ್ದೇಶಕರು- ಒಟ್ಟು12
(ಒಬ್ಬರಿಗೆ ಒಂದು ಮತಗಳಂತೆ), ಸರ್ಕಾರದ ನಾಮನಿರ್ದೇಶಿತ ಸದಸ್ಯರು- 01, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು-01, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಪ್ರತಿನಿಧಿ-01, ಪಶುಸಂಗೋಪನಾ ಇಲಾಖೆಯ ಮಂಡ್ಯಜಿಲ್ಲಾ ಉಪ ನಿರ್ದೇಶಕರು-01, ಮತ್ತು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳದ ಪ್ರತಿನಿಧಿ-01 ಒಟ್ಟು 17 ಜನ ಮತದಾನದ ಹಕ್ಕನ್ನು ಹೊಂದಿರುತ್ತಾರೆ ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ರಿಟರ್ನಿಂಗ್ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Trending

error: Content is protected !!