Connect with us

Health

ಆಧುನಿಕ ಜೀವನ ಶೈಲಿಯಿಂದಾಗಿ ಕಾಯಿಲೆ ಹೆಚ್ಚಳ : ಸಂಸದ ಡಾ.ಸಿ.ಎನ್ ಮಂಜುನಾಥ್

Published

on

ಮಂಡ್ಯ : ಇಂದಿನ ದಿನಗಳಲ್ಲಿ ಹೃದಯ ಮತ್ತು ಮಧುಮೇಹದಂತಹ ಕಾಯಿಲೆಗಳು ಹೆಚ್ಚಾಗಲು ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣವಾಗಿದೆ. ಭಾರತ ದೇಶವು ಹೃದಯ ಮತ್ತು ಮಧುಮೇಹ ರೋಗದ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಖ್ಯಾತ ಹೃದಯ ತಜ್ಞರೂ ಆದ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.ಮಂಡ್ಯ ನಗರದ ಸ್ಪಂದನ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ಯಾತ್‌ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲ ಶ್ರಮದಾನದ ಮೂಲಕ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರು. ಅದೇ ರೀತಿ ಒಳ್ಳೆಯ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಅಂದು ಪಟೇಲರು, ಶ್ಯಾನುಬೋಗರು ಸೇರಿದಂತೆ ಸಿರಿವಂತರ ಕಾಯಿಲೆ ಎನ್ನುತ್ತಿದ್ದರು. ಆದರೆ ಇಂದು ಬಡವರು, ಕೂಲಿ ಕಾರ್ಮಿಕರಿಗೂ ಈ ರೋಗ ಬರುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರೂ ಕೆಲಸ ಮಾಡುವ ಮೂಲಕ ಇಂತಹ ರೋಗಗಳಿಂದ ದೂರ ಇರಬೇಕು. ನಡಿಗೆಯನ್ನು ರೂಢಿಸಿಕೊಳ್ಳಬೇಕು. ಸಂಗಾತಿ ಎಂದರೆ ಜೀವನ ಸಂಗಾತಿಯಲ್ಲ. ಸಂಗಾತಿ ಎಂದರೆ ನಮ್ಮ ದೇಹ. ಅದು ನಮ್ಮ ಉಸಿರು ಇರುವವರೆಗೂ ನಮ್ಮ ಜೊತೆಯೇ ಇರುತ್ತದೆ. ಇಂತಹ ಸಂಗಾತಿಯನ್ನು ಅಚ್ಚುಕಟ್ಟಾಗಿ ಯಾವುದೇ ರೋಗಗಳಿಲ್ಲದಂತೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ಪ್ರತಿದಿನ ಒಂದು ಗಂಟೆಯಾದರೂ ನಡಿಗೆಯನ್ನು ಮಾಡವುದು ಒಳಿತು. ನಾನು ನಿನಗಾಗಿ ಜೀವನ ಪರ್‍ಯಂತ ಇರುತ್ತೇನೆ ಎನ್ನುವ ರೀತಿ ಹೃದಯ ಕೆಲಸ ಮಾಡುತ್ತದೆ. ಅದನ್ನು ಮನವರಿಕೆ ಮಾಡಿಕೊಂಡು ಪ್ರತಿನಿತ್ಯ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಹೃದಯ ಸಮಸ್ಯೆಯಿಂದ ಸ್ವಲ್ಪವಾದರೂ ದೂರ ಇರಬಹುದು ಎಂದರು.ಹೃದಯಾಘಾತವಾದಲ್ಲಿ ತಕ್ಷಣ ಅವರಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಕನಿಷ್ಟ 3 ರಿಂದ 6 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಅವರು ಬದುಕುವ ಸಾಧ್ಯತೆಗಳಿವೆ. 12 ಗಂಟೆಯಾದಲ್ಲಿ ಶೇ. 7ರಷ್ಟು ಮಾತ್ರ ಬದುಕುವ ಸಾಧ್ಯತೆಗಳಿರುತ್ತವೆ. ಚಿಕಿತ್ಸೆ ದೊರೆಯುವುದು ವಿಳಂಬವಾದಲ್ಲಿ ಸಾವಿನ ಸಾಧ್ಯತೆಯೂ ಹೆಚ್ಚಾಗುತ್ತದೆ. ಇದನ್ನು ಮನಗಂಡು ನಾನು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರತೀ 50 ಕಿ.ಮೀ.ಗೊಂದರಂತೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆಗಳನ್ನು ತೆರೆಯುವುದು ಅಗತ್ಯ ಎಂದು ಪ್ರತಿಪಾದಿಸಿದ್ದೇನೆ ಎಂದು ತಿಳಿಸಿದರು.

ಮಂಡ್ಯದಂತಹ ನಗರಕ್ಕೆ ಹೃದಯ ಚಿಕಿತ್ಸೆ ನೀಡುವಂತಹ ಆಸ್ಪತ್ರೆಯ ಆಗತ್ಯತೆ ಇದೆ. ಕಾರ್ಡಿಯಾಕ್ ಕ್ಯಾತ್‌ಲಾಗ್ ಬೇಕಾಗಿದೆ. ನಮ್ಮ ದೇಶದಲ್ಲಿ ಮೂರೂವರೆ ಸಾವಿರ ಇಂತಹ ಘಟಕಗಳಿವೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಟ ಆರೂವರೆ ಸಾವಿರ ಕಾರ್ಡಿಯಾಕ್ ಕ್ಯಾತ್‌ಲಾಗ್ ಆಸ್ಪತ್ರೆಗಳ ಅಗತ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸಳೆಯುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.ನಾವು ಮೈಸೂರಿನಲ್ಲಿ ಜಯದೇವ ಕೇಂದ್ರವನ್ನು ತೆರೆದಿದ್ದೆವು. ಇದರೊಂದಿಗೆ 45 ಕಡೆಗಳಲ್ಲಿ ಇಂತಹ ವ್ಯವಸ್ಥೆ ರೂಪಿಸಿದ್ದು, ಮೈಸೂರು ವಿಭಾಗದಲ್ಲಿ 15, ಬೆಂಗಳೂರು ವಿಭಾಗದಲ್ಲಿ 15 ಹಾಗೂ ಗುಲ್ಬರ್ಗಾ ವಿಭಾಗದಲ್ಲಿ 15 ಆಸ್ಪತ್ರೆಗಳಲ್ಲಿ ಹೃದಯ ತಪಾಸಣಾ ಘಟಕಗಳನ್ನು ಸ್ಥಾಪಿಸಿದ್ದೇವೆ ಎಂದರು.ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆದಿತ್ಯ, ಹೃದ್ರೋಗ ತಜ್ಞೆ ಡಾ.ದೀಪ್ತಿ ಮಂಗೇಶ್, ಸ್ತ್ರೀ ರೋಗತಜ್ಞೆ ಡಾ. ಶ್ರೀಕಲಾ, ಡಾ.ರವೀಂದ್ರನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Health

ಕಡಿಮೆ ದರಕ್ಕೆ ಸಿಗುತ್ತದೆ ಎಂದು ಈ ಎಣ್ಣೆಯನ್ನು ಅಡುಗೆ ಮಾಡಲು ಬಳಸಿದರೆ ಕ್ಯಾನ್ಸರ್, ಶುಗರ್ ಬರುವುದು ಖಂಡಿತ

Published

on

Effects of Refined Oil in food : ಅನೇಕ ಜನರು ಅಡುಗೆ ಮಾಡಲು ಕಡಿಮೆ ದರಕ್ಕೆ ಸಿಗುತ್ತದೆ ಅಥವಾ ಅದರ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿ ಸಂಸ್ಕರಿಸಿದ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.

ಈ ಲೇಖನದಲ್ಲಿ ಸಂಸ್ಕರಿಸಿದ ಎಣ್ಣೆ ಎಂದರೇನು? ಯಾವೆಲ್ಲಾ ಸಂಸ್ಕರಿಸಿದ ಎಣ್ಣೆಯ ಅಡಿಯಲ್ಲಿ ಬರುತ್ತವೆ? ಹಾಗಿದ್ದರೆ ಅಡುಗೆ ಮಾಡಲು ಯಾವ ಎಣ್ಣೆ ಬಳಸಿದರೆ ಉತ್ತಮ ಎಂದು ಈ ಲೇಖನದಲ್ಲಿ ತಿಳಿಸಳಿದ್ದೇವೆ.

ಸಂಸ್ಕರಿಸಿದ ಎಣ್ಣೆ ಎಂದರೇನು?

ನೈಸರ್ಗಿಕ ತೈಲದ ಸಂಸ್ಕರಿತ ರೂಪವೆ ಸಂಸ್ಕರಿಸಿದ ತೈಲ ಅಥವಾ ಇಂಗ್ಲಿಷ್ ನಲ್ಲಿ ಇದನ್ನು Refined Oil ಎಂದು ಕರೆಯಲಾಗುತ್ತದೆ. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ನೈಸರ್ಗಿಕ ತೈಲವನ್ನು ಹಲವಾರು ರಾಸಾಯನಿಕಗಳೊಂದಿಗೆ ಸಂಸ್ಕರಿಸಿ, ದೀರ್ಘಾವಧಿಯ ಜೀವಿತಾವಧಿಯೊಂದಿಗೆ ವಾಸನೆ-ಮುಕ್ತ & ಸುವಾಸನೆ-ಮುಕ್ತ ತೈಲವಾಗಿ ಇದನ್ನು ತಯಾರಿಸಲಾಗುತ್ತದೆ.

ಸಂಸ್ಕರಣೆಯ ಮಾಡುವ ಪ್ರಕ್ರಿಯೆಯಲ್ಲಿ ಇದಕ್ಕೆ ಅಧಿಕ ತಾಪಮಾನ ಕೊಡುವುದರಿಂದ ಅದರಲ್ಲಿರುವ ಎಲ್ಲಾ ಮೌಲ್ಯವಾದ ಅಂಶಗಳು ಕಳೆದು ಹೋಗುತ್ತವೆ. ಜೊತೆಗೆ ಇದರಲ್ಲಿ ಕೆಟ್ಟ LDL ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು ಹಾಗೂ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಬಹುದಾದ ಟ್ರಾನ್ಸ್ ಕೊಬ್ಬಿನ ಪ್ರಮಾಣಗಳನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಎಣ್ಣೆಗೆ ಉದಾಹರಣೆಗಳು :

• ಸೂರ್ಯಕಾಂತಿ ಎಣ್ಣೆ
• ಅಕ್ಕಿ ಹೊಟ್ಟು ಎಣ್ಣೆ
• ಸೋಯಾ ಬೀನ್ ಎಣ್ಣೆ
• ಕಡಲೆಕಾಯಿ ಎಣ್ಣೆ ಹಾಗೂ ಮುಂತಾದವು

ಇದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬಿರಲಿದೆ?

ಸಂಸ್ಕರಿಸಿದ ಎಣ್ಣೆಯನ್ನು ದಿನನಿತ್ಯ ಸೇವಿಸಿದಂತೆ ನಿಯಮಿತ ಕ್ಯಾನ್ಸರ್, ಶುಗರ್ ಸೇರಿದಂತೆ ಹಲವಾರು ಅರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಆದ್ದರಿಂದ ನೀವು ಅಡುಗೆ ಮಾಡಲು ಈ ಕೆಳಗಿನ ಎಣ್ಣೆಗಳನ್ನು ಬಳಸಬಹುದು :

• ಕೋಲ್ಡ್ ಪ್ರೆಸ್ ಎಣ್ಣೆಗಳು –
ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ ಮುಂತಾದವು..

ವಿ. ಸೂ : ಈ ಮೇಲಿನ ಲೇಖನವು ಕೇವಲ ಮಾಹಿತಿ ನೀಡುವ ಉದ್ದೇಶವಾಗಿದ್ದು, ನಿಮ್ಮ ಆರೋಗ್ಯಕ್ಕೆ ಸಂಬಂದಿಸಿದ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಇದಕ್ಕೆ ಸಂಬಂದಿಸಿದ ಪರಿಣಿತರ ಸಹಾಯ ಪಡೆದು ನಿರ್ಧಾರ ತೆಗೆದುಕೊಳ್ಳಿ.

Continue Reading

Health

ಮೀಸಲ್ಸ್- ರುಬೆಲ್ಲಾ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಿ

Published

on

ಮಂಡ್ಯ : ದಢಾರ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಜಿಲ್ಲೆಯಲ್ಲಿ ಮಕ್ಕಳು ಮೀಸಲ್ಸ್- ರುಬೆಲ್ಲಾ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು‌

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ದಢಾರ ರುಬೆಲ್ಲಾ ನಿರ್ಮೂಲನೆ ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆ ನಡೆಸಿ ಮಾತನಾಡಿದರು.

ಮಧ್ಯಮ ಅಥವಾ ತೀವ್ರ ಅಪೌಷ್ಠಿಕತೆ ಹೊಂದಿರುವ ಮಕ್ಕಳಲ್ಲಿ ರೋಗದ ಹರಡುವಿಕೆ ಹೆಚ್ಚು. ದಢಾರ-ರುಬೆಲ್ಲಾ ಖಾಯಿಲೆಯಿಂದ ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಮಕ್ಕಳಿಗೆ 9 ರಿಂದ 11 ತಿಂಗಳುಗಳಲ್ಲಿ ಮೊದಲನೇ ವರಸೆ ಲಸಿಕೆಯನ್ನು ಮತ್ತು 16 ರಿಂದ 24 ತಿಂಗಳಲ್ಲಿ ಎರಡನೇ ವರಸೆ ದಢಾರ-ರುಬೆಲ್ಲಾ ಲಸಿಕೆ ಯನ್ನು ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಏಪ್ರಿಲ್ 2024 ರಿಂದ ಅಕ್ಟೋಬರ್ 2024 ರವರೆಗೆ ಮೀಸಲ್ಸ್- ರುಬೆಲ್ಲಾ ಮೊದಲನೇ ವರಸೆ ಲಸಿಕೆ ಪಡೆಯಲು 12361 ಗುರಿ ನಿಗಧಿಯಾಗಿದ್ದು 11885 ಮಕ್ಕಳಿಗೆ ಲಸಿಕೆ ನೀಡಿ ಶೇ 96.1 % ಗುರಿ ಸಾಧಿಸಲಾಗಿದೆ. ಎರಡನೇ ವರಸೆಯಲ್ಲಿ 12361 ಗುರಿ ನಿಗಧಿಯಾಗಿದ್ದು 11759 ಮಕ್ಕಳಿಗೆ ಲಸಿಕೆ ನೀಡಿ 95.1% ಗುರಿ ಸಾಧಿಸಲಾಗಿದೆ. ಶೇ 100 ರಷ್ಟು ಸಾಧನೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಮೀಸಲ್ಸ್- ರುಬೆಲ್ಲಾ ಖಾಯಿಲೆಯ ಲಕ್ಷಣಗಳು ಅಥವಾ ಯಾವುದೇ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಮಾಡುವಂತೆ ತಿಳಿಸಿದರು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಕುರಿತು ಹಾಗೂ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವಲ್ಲಿ ಧಾರ್ಮಿಕ ಮುಖಂಡರು/ಪ್ರಭಾವಿ ವ್ಯಕ್ತಿಗಳು/ಇಲಾಖಾ ಮುಖ್ಯಸ್ಥರುಗಳು ವ್ಯಾಪಕವಾಗಿ ಐ.ಇ.ಸಿ ಚಟುವಟಿಕೆ ನಡೆಸಿ ಸಹಕರಿಸುವುದು ಎಂದರು.

ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳು ಲಸಿಕೆ ಪಡೆದಿರುವುದರ ಕುರಿತು ಖಾತರಿಪಡಿಸಿಕೊಳ್ಳಬೇಕು ಎಂದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಆರ್.ಸಿ.ಎಚ್ ಅಧಿಕಾರಿ ಅಶ್ವಥ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಸೇರಿದಂತೆ ಇನ್ನಿತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

Hassan

ತಾಲೂಕಿನಾದ್ಯಂತ ಈವರೆಗೂ 8 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ

Published

on

ಆಲೂರು: ತಾಲೂಕಿನಾದ್ಯಂತ ಈವರೆಗೂ 8 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ಸಾರ್ವಜನಿಕರು ಬಹಳಷ್ಟು ಎಚ್ಚರ ವಹಿಸುವುದು ಅಗತ್ಯವಾಗಿದ್ದು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಕೆಲವೊಂದು ಉಪಕ್ರಮಗಳನ್ನು ನೀಡಿದೆ. ಇವುಗಳನ್ನು ಪಾಲಿಸಿದರೆ ಡೆಂಗ್ಯೂವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತೀಮಾ ಹೇಳಿದರು.

\

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಜ್ವರ ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತದೆ. ಈಡೀಸ್ ಈಜಿಪ್ಟ್ ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಹಗಲಿನಲ್ಲಿ ಕಚ್ಚುವ ಈ ಸೊಳ್ಳೆಗಳು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ

ಕಂಡುಬರುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್ ಸಿಂಡೋಮ್ ಇದರ ಮೂರು ವಿಧಗಳಾಗಿವೆ ಸ್ವಲ್ಪ ಕಾಣಿಸಿದಾಗಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದ ಅವರು, ಸಾರ್ವಜನಿಕರು ತಪ್ಪದೇ ತಮ್ಮ ಮನೆಯೊಳಗೆ ಮತ್ತು ಮೇಲ್ಬಾವಣೆಯ ನೀರಿನ ತೊಟ್ಟಿಗಳನ್ನ ತಪ್ಪದೆ ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ಸ್ವಚ್ಛ ಗೊಳಿಸಿ ನಂತರ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು ಎಂದರು.

ಮನೆಯ ಒಳಗೆ ಹಾಗೂ ಹೊರಭಾಗದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಒಡೆದ ಬಾಟಲಿ, ಟಿನ್‌, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಮೈ ತುಂಬಾ ಬಟ್ಟೆ ಧರಿಸಬೇಕು. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

Continue Reading

Trending

error: Content is protected !!