Connect with us

Politics

ನಾವು ಬಿಜೆಪಿ-RSS ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ: ಸಿಎಂ ಸಿದ್ದರಾಮಯ್ಯ

Published

on

ಬೆಳಗಾವಿ: ನಾವು ಬಿಜೆಪಿ-RSS ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ-ಬಗ್ಗಲ್ಲ. ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗೂ ಮತ್ತು ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಇಂದು(ಏಪ್ರಿಲ್‌.28) AICC ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತೀದ್ದೀರಿ. ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದನ್ನು ಬಿಟ್ಟರೆ ಬೇರೆ ಏನು ಮಾಡಿದ್ದೀರೆಂದು ಜನರಿಗೆ ತೋರಿಸಿ ಎಂದು ಸವಾಲು ಹಾಕಿದರು.

ಭಾರತೀಯರು ಬ್ರಿಟಿಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕಿದ್ದೀರಾ ? ಸ್ವಾತಂತ್ರ್ಯ ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡುತ್ತಾ ಕೂತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್‌ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಲೋಪ ಅಲ್ಲವಾ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದಾ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತೀರಾ ಎಂದು ಪ್ರಶ್ನಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳ ಕಾಲ ಆಗಿದೆ. RSS ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ ನೀವು. ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನು ಕೊಟ್ಟಿದ್ದೀರಿ ಎಂದು ದೇಶದ ಜನಕ್ಕೆ ವಿವರಿಸಿ ಎಂದು ಸವಾಲು ಹಾಕಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ 32% ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ25 ಇಳಿಸಿದಿರಿ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಿದಿರಿ. ನಾಚಿಕೆ ಆಗುತ್ತಿಲ್ಲ ನಿಮಗೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿಯ ಆಡಳಿತವನ್ನು ಪ್ರಶ್ನಿಸಬಾರದಾ ? ಭಾರತೀಯರನ್ನು ನಿರಂತರ ಸುಳ್ಳುಗಳಲ್ಲಿ ಇನ್ನೂ ಎಷ್ಟು ವರ್ಷ ಮರಳು ಮಾಡ್ತೀರಿ. ಸತ್ಯ ಹೇಳಿ ಎಂದು ಸವಾಲು ಹಾಕಿದರು.

ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟೀಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ-RSS ನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ ಎಂದರು.

ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ‌ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ, ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಸರ್ಕಾರಕ್ಕೆ ಆ ಶಕ್ತಿ ಇನ್ನೂ ಇದೆ ಎಂದರು.

ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ ಹೇಳಿ ಎಂದರು.

ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಿರಂತರವಾಗಿ ಭಾರತೀಯರನ್ನು ಸುಳ್ಳುಗಳ ಸರಮಾಲೆಯಲ್ಲಿ ಮುಳುಗಿಸಿ, ಸಮಾಜವನ್ನು ಬಿರುಕಿ ಮೂಡಿಸಿ ಕಾಲ ಕಳೆಯುತ್ತಿದೆ. ನಿಮಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ. ನಾವು ಉತ್ತರ ಕೊಡ್ತೀವಿ ಎಂದು ಹೇಳಿದರು.

Continue Reading

Politics

ಡಿಕೆ ಬ್ರದರ್ಸ್‌ಗೆ ನೋಟಿಸ್‌ ಜಾರಿ ಮಾಡಿದ ದೆಹಲಿ ಪೊಲೀಸರು

Published

on

ನವದೆಹಲಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಅವರ  ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರಿಗೆ ದೆಹಲಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ  ಸಂಬಂಧಿಸಿದಂತೆ ಆರ್ಥಿಕ ಅಪರಾಧ ವಿಭಾಗದಿಂದ ನೋಟಿಸ್‌ ನೀಡಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ವಿವರವಾದ ಹಣಕಾಸು ಹಾಗೂ ವಹಿವಾಟು ಮಾಹಿತಿಯನ್ನು ಕೋರಿ ನೋಟಿಸ್ ನೀಡಿದ್ದಾರೆ.

ನ.29 ರಂದು ನೋಟಿಸ್ ನೀಡಿರುವ ಪೊಲೀಸರು, ಡಿ.19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.

ಡಿ.ಕೆ.ಸುರೇಶ್ ಅವರಿಗೂ ನೋಟಿಸ್ ನೀಡಿರುವ ದೆಹಲಿ ಪೊಲೀಸರು, ಎಷ್ಟು ದುಡ್ಡು ನೀಡಿದ್ದೀರಿ, ಯಾವ ಉದ್ದೇಶಕ್ಕೆ ಬಳಕೆಯಾಗಿದೆ, ಹಣವನ್ನು ನೀಡಿದ್ದು ಹೇಗೆ, ಎಷ್ಟು ಹಣ ನೀಡಿದ್ದೀರಿ ಎಂಬ ಪ್ರಶ್ನೆಗಳಿಗೆ ವಿವರ ಕೇಳಿದ್ದಾರೆ.

Continue Reading

Politics

ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ

Published

on

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು  ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲವೆಂದು ದೆಹಲಿ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆಂದು ಹೋದರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದರೆಂದು ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನೆಂದು ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಎಂದು ಗೊತ್ತಾಯಿತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರೆಂದು ಗೊತ್ತಾಯಿತ್ತೆಂದು ಎಂದು ವ್ಯಂಗ್ಯ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ವಾಗ್ದಾಳಿ ನಡೆಸಿದರು.

ಈ ದೇಶ ನಡೆಸೋ ಕಾಂಗ್ರೆಸ್ ಕೈಯಲ್ಲಿ ಇವತ್ತು ಬಂಡವಾಳ ಇಲ್ಲ. ಬಂಡವಾಳಕ್ಕೆ ಇರೋ ಒಂದೇ ಒಂದು ರಾಜ್ಯ ಕರ್ನಾಟಕ. ವೇಣುಗೋಪಾಲ್ ಅಲ್ಲಿ ಕುಳಿತು ಕಾಂಗ್ರೆಸ್‌ನಲ್ಲಿ ಇರೋ 2-3 ಗುಂಪುಗಳನ್ನು ಕರೆಯುತ್ತಿದ್ದಾರೆ. ಯಾವ ಗುಂಪು ಎಷ್ಟು ಬಾಳಿಕೆ ಬರುತ್ತದೆಂದು ವೇಣುಗೋಪಾಲ್ ನೋಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮೊದಲು ಎಟಿಎಂ ಲೀಡರ್ ಬೇರೆ ಇದ್ದರು. ಆ ಜನರಲ್ ಸೆಕ್ರೆಟರಿ ಬೇರೆ. ಹೈಕಮಾಂಡ್ ಜನರಲ್ ಸೆಕ್ರೆಟರಿ ವೇಣುಗೋಪಾಲ್. ಇವರು ಯರ‍್ಯಾರು ಎಷ್ಟಕ್ಕೆ ಬಾಳುತ್ತೀರಾ. ನೀವು ಎಷ್ಟಕ್ಕೆ ಬಾಳುತ್ತೀರಾ ಅಂತ ಇಬ್ಬರನ್ನು ತೂಕ ಮಾಡೋ ಸ್ಥಿತಿಗೆ ಬಂದಿದೆ. ರಾಜ್ಯದ ಹಿತ ಮರೆತು ಅಧಿಕಾರ ಉಳಿಯೋಕೆ,  ಕುರ್ಚಿ ಉಳಿಸಿಕೊಳ್ಳಬೇಕೆಂದು ಸಿಎಂ-ಡಿಸಿಎಂ ಪೈಪೋಟಿಗೆ ಬಿದ್ದು ರಾಜ್ಯದ ಸ್ಥಿತಿ ಗಂಭೀರ ಮಾಡಿದ್ದಾರೆ ಎಂದು ಸಿಎಂ, ಡಿಸಿಎಂ ಮತ್ತು ಕಾಂಗ್ರೆಸ್‌ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅನೇಕ ಸಮಸ್ಯೆ ಇದೆ, ರೈತರ ಬಗ್ಗೆ ದಲಿತರ ಬಗ್ಗೆ ಕೇಳೋರು ಇಲ್ಲ. ದಲಿತರ ಯೋಗ ಕ್ಷೇಮ ಈ ಸರ್ಕಾರ ನೋಡಿಲ್ಲ. ಕಾಂಗ್ರೆಸ್‌ನಲ್ಲಿರೋ ದಲಿತ ಲೀಡರ್‌ಗಳಿಗೂ ಕಾಂಗ್ರೆಸ್ ಉಳಿಯೋದು ಮುಖ್ಯ. ದಲಿತ ಸಮುದಾಯ ಉಳಿಯೋದು ಮುಖ್ಯ ಅಲ್ಲ. ಅಧಿವೇಶನ 8 ರಿಂದ ಪ್ರಾರಂಭ ಆಗುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡೋಕೆ ಅಧಿವೇಶನ ಮಾಡುತ್ತೇವೆ. ಆದರೆ ಈಗಾಗಲೇ 31 ಬಿಲ್‌ಗಳು ಇವೆ. ಈಗ ಮತ್ತೆ 22 ಹೊಸ ಬಿಲ್‌ಗಳು ಇವೆಂದು ಹೇಳುತ್ತಿದ್ದಾರೆ. ಇದು ಬಿಲ್ ಪಾಸ್ ಅಧಿವೇಶನಾ ಎಂದು ಪ್ರಶ್ನೆ ಮಾಡಿದ್ದಾರೆ.

ಸದನ ನಡೆಯೋದೆ 8-9 ದಿನ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಇಲ್ಲ. ರಾಜು ಕಾಗೆ ಪ್ರತ್ಯೇಕ ರಾಜ್ಯ ಬೇಕು ಅಂತ ಕೇಳುತ್ತಿದ್ದಾರೆ. ನಿಮ್ಮದೇ ಶಾಸಕರು. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಕಾಂಗ್ರೆಸ್ ದೇಶ, ರಾಜ್ಯ ಒಡೆಯೋದ್ರಲ್ಲಿ ನಿಪುಣರು. ಯುಪಿ, ಛತ್ತೀಸ್‌ಗಢ, ಆಂಧ್ರ ಪ್ರದೇಶ ಒಡೆದರು. ಈಗ ಕರ್ನಾಟಕ ಒಡೆಯೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಈ ಬಿಲ್ ಪಾಸ್ ಮಾಡೋಕೆ ವಿಶೇಷ ಅಧಿವೇಶನ ಕರೆಯಿರಿ. ಆದರೆ ಬೆಂಗಳೂರಿಗೆ ಸಂಬಂಧಿಸಿದ ಬಿಲ್ ಬೆಳಗಾವಿಯಲ್ಲಿ ಮಾಡೋದು ಸರಿಯಲ್ಲ ಎಂದರು.

ಸಚಿವ ಹೆಚ್‌.ಕೆ. ಪಾಟೀಲ್‌ರನ್ನು ಏನೋ ಅಂದುಕೊಂಡಿದ್ದೆ. ಉತ್ತರ ಕರ್ನಾಟಕ ಭಾಗದ ನಾಯಕರಾಗಿ ಅವರು ಆ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಹೀಗೆ ತಾರತಮ್ಯ ಆಗೋಕೆ ಉತ್ತರ ಕರ್ನಾಟಕದ ನಾಯಕರೇ ಕಾರಣ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಯಾಕೆ ಹಿಂದುಳಿದಿದೆ? ಅಲ್ಲಿಯವರೇ ಸಿಎಂ ಆಗಿದ್ದರು ಯಾಕೆ ಅಭಿವೃದ್ಧಿ ಆಗಿಲ್ಲ? ತಾರತಮ್ಯ ಮಾಡೋರಿಗೆ ತಕ್ಕ ಪಾಠ ಕಲಿಸೋ ಕೆಲಸ ಮಾಡಬೇಕು ಎಂದು ಹೇಳಿದರು.

Continue Reading

Politics

ನವೆಂಬರ್‌ ಕ್ರಾಂತಿ ಹೈಕಮಾಂಡ್‌ ಬಿಡಲ್ಲ: ಸತೀಶ್‌ ಜಾರಕಿಹೊಳಿ

Published

on

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುವುದಿಲ್ಲ, ಹಾಗೇ ಮಾಡಲು  ಹೈಕಮಾಂಡ್ ಬಿಡಲ್ಲ ಎಂದು  ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನವೆಂಬರ್ ಕ್ರಾಂತಿ ಆಗಲ್ಲ  ಕ್ರಾಂತಿ ಆಗಲು 20 ರಿಂದ 30 ದಿನ ಇದೆ. ಏನಾಗುತ್ತದೆ ಎಂದು ನೋಡೋಣ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ಲ ಹೈಕಮಾಂಡ್‌ ಹಾಗೇ ಮಾಡಲು ಬಿಡಲ್ಲ ಎಂದು ಹೇಳಿದರು.

ಏಕನಾಥ್ ಶಿಂಧೆ ಒಬ್ಬರೇ,  ಪವಾರ್ ಒಬ್ಬರೇ ಇನ್ನೊಬ್ಬ ಶಿಂಧೆ,  ಪವರ್ ಹುಟ್ಟಿಕೊಳ್ಳಲು ಆಗಲ್ಲ ಎಂದರು.

ದಲಿತ ಸಿಎಂ  ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅವಕಾಶ ಬರುವವರೆಗೆ ಕಾಯಬೇಕು. ಈಗಂತೂ ಅವಕಾಶ ಇಲ್ಲ ಸಮಯಕ್ಕಾಗಿ ಕಾಯಬೇಕು. ಅವಕಾಶ  ಸೃಷ್ಠಿಯಾಗಬೇಕು. ಅಲ್ಲಿವರೆಗೆ ಕಾಯಬೇಕು ಎಂದರು.

Continue Reading

Trending

error: Content is protected !!