Connect with us

Cinema

ಲಾಂಗ್‌ ಹಿಡಿದು ರೀಲ್ಸ್‌ ಪ್ರಕರಣ: ಬಿಗ್‌ಬಾಸ್‌ ಖ್ಯಾತಿಯ ರಜತ್‌ ಮತ್ತೆ ಬಂಧನ

Published

on

ಬೆಂಗಳೂರು: ಲಾಗ್‌ ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಗ್‌ಬಾಸ್‌ ಖ್ಯಾತಿಯ ರಜತ್‌ನನ್ನು ಬುಧವಾರ ಬಂಧಿಸಲಾಗಿದೆ.

ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್‌ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆಯಲ್ಲಿ ಎರಡು ಬಾರಿ ನೋಟಿಸ್‌ ನೀಡಿದ್ದು. ಆದರೆ ರಜತ್‌ ಪೊಲೀಸ್‌ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್‌ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕೋರ್ಟ್‌ ಸೂಚನೆ ಮೇರೆಗೆ ಬಸವೇಶ್ವರನಗರ ಠಾಣೆ ಪೊಲೀಸರು ರಜತ್‌ನನ್ನು ಬಂಧಿಸಿದ್ದಾರೆ.

Continue Reading

Cinema

ತಮಿಳು ಖ್ಯಾತ ನಟ ಅಜಿತ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ತಲಾ

Published

on

ನವದೆಹಲಿ: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರಿಗೆ ಭಾರತ ಸರ್ಕಾರದಿಂದ 2025ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ತಮ್ಮ ಪತ್ನಿ ಶಾಲಿನಿ, ಮಗಳು ಅನೌಷ್ಕಾ ಹಾಗೂ ಮಗ ಆದ್ವಿಕ್‌ರೊಂದಿಗೆ ನವದೆಹಲಿಯ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು.

ಇಂದು ( ಏಪ್ರಿಲ್ 28) ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಜಿತ್‌ ಕುಮಾರ್‌ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಅಜಿತ್ ಕುಮಾರ್ ಅವರು ತಮ್ಮ ಮೂರು ದಶಕಗಳ ಚಿತ್ರರಂಗದ ಸೇವೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಚಿತ್ರಗಳು ವಿಮರ್ಶಾತ್ಮಕ ಪ್ರಶಂಸೆಯ ಜೊತೆಗೆ ವಾಣಿಜ್ಯ ಯಶಸ್ಸನ್ನೂ ಕಂಡಿವೆ. ಇತ್ತೀಚಿನ ಚಿತ್ರ “ವಿದಾಮುಯಾರ್ಚಿ” ಯಶಸ್ಸು ಮತ್ತು ಕಾರ್ ರೇಸಿಂಗ್‌ನಲ್ಲಿ ಅವರ ಸಾಧನೆಗಳು 2025ನ್ನು ಅವರಿಗೆ ಸುವರ್ಣ ವರ್ಷವನ್ನಾಗಿಸಿವೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಜಿತ್ ನಾನು ಈ ಗೌರವಕ್ಕೆ ಅತೀವವಾಗಿ ಕೃತಜ್ಞನಾಗಿದ್ದೇನೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು. ನನ್ನ ಕುಟುಂಬ, ಅಭಿಮಾನಿಗಳು ಮತ್ತು ಬೆಂಬಲಿಗರ ಪ್ರೀತಿಯೇ ನನ್ನ ಯಶಸ್ಸಿನ ಬೆನ್ನೆಲುಬು ಎಂದು ಹೇಳುವ ಮೂಲಕ ಎಲ್ಲರಿಗೆ ಕೃತಜ್ಞತೆ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ, ಸೇರಿದಂತೆ ಇತರ ಪ್ರಮುಖರಿಗೂ ಪದ್ಮ ಭೂಷಣ್ ಪ್ರಶಸ್ತಿ ನೀಡಲಾಯಿತು. ಜೊತೆಗೆ ಕ್ರಿಕೆಟಿಗ ರವಿಚಂದ್ರನ್‌ ಅಶ್ವಿನ್‌ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.

https://x.com/GulteOfficial/status/1916836346288623694

Continue Reading

Cinema

ಪಹಲ್ಗಾಮ್ ದಾಳಿ: ಭಾರತದಲ್ಲಿ ಪಾಕ್‌ ನಟನ ಚಿತ್ರ ಬಿಡುಗಡೆಗೆ ನಿರಾಕರಣೆ

Published

on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಹಿಂದಿ ಚಲನಚಿತ್ರಗಳಲ್ಲಿ ಫವಾದ್ ಖಾನ್‌ಗೆ ಮಹತ್ವದ್ದಾಗಿದ್ದ ಈ ಚಿತ್ರಕ್ಕೆ ಬಹಿಷ್ಕಾರದ ಕರೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಚಿತ್ರ ಮೇ 9 ರಂದು ಬಿಡುಗಡೆಯಾಗಬೇಕಿತ್ತು. “ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಲಾಗುವುದಿಲ್ಲ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading

Cinema

ಸುಮುಖ ಪ್ರೊಡಕ್ಷನ್‌ ಎರಡನೇ ಸಿನಿಮಾ “ಕಜ್ಜ” ಕ್ಕೆ ಮುಹೂರ್ತ

Published

on

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮೂಡಿಬರಲಿರುವ ಎರಡನೇ ಸಿನಿಮಾ “ಕಜ್ಜ” ಇದರ ಮುಹೂರ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಿತು. ಸಿನಿಮಾಕ್ಕೆ ನಿರ್ಮಾಪಕ ವಿಶಾಂತ್ ಮಿನೆಜಸ್ ಕ್ಲಾಪ್ ಮಾಡಿದರು. ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಲ್ ಬೈಲ್, ಅರವಿಂದ ಬೋಳಾರ್ ಚಾಲನೆ ನೀಡಿದರು.

ಬಳಿಕ ಮಾತಾಡಿದ ಫಾದರ್ ಮೆಲ್ವಿನ್ ಪಿಂಟೊ ಎಸ್ ಜೆ ಸುಮುಖ ಪ್ರೊಡಕ್ಷನ್‌ ಮೊದಲ ಸಿನಿಮಾಕ್ಕೆ ತುಳುನಾಡಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತುಡರ್‌ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದು ಮುಂದಿನ ಸಿನಿಮಾ ಕೂಡಾ ಜನರು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಒಳ್ಳೆಯ ತಂಡ ಸಿನಿಮಾದಲ್ಲಿ ದುಡಿಯುತ್ತಿದ್ದು ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಇನ್ನಷ್ಟು ಮನೋರಂಜನೆ ನೀಡಲು ಉತ್ಸಾಹಿ ಯುವಕರ ತಂಡ ಸಜ್ಜಾಗಿದೆ ಎಂದರು.

ಬಳಿಕ ಮಾತಾಡಿದ ಅರವಿಂದ ಬೋಳಾರ್ “ಕಜ್ಜ” ಅಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಆದಷ್ಟು ಬೇಗನೆ ಜನರ ಮುಂದೆ ಸಿನಿಮಾ ಬರಲಿ. ಹಿಂದಿನ ಸಿನಿಮಾಕ್ಕೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕೊಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿ ಎಂದರು.

ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಕಜ್ಜ ಸಿನಿಮಾದ ಕತೆ ಚೆನ್ನಾಗಿದೆ. ಉತ್ತಮ ಕಲಾವಿದ್ದಾರೆ. ಹೊಸಬರಿಗೂ ಅವಕಾಶ ನೀಡಿದ್ದಾರೆ. ತುಡರ್ ಸಿನಿಮಾದಂತೆ ಕಜ್ಜ ಸಿನಿಮಾ ಕೂಡಾ ಜಯಬೇರಿ ಬಾರಿಸಲಿ ಎಂದರು.

ಪ್ರದೀಪ್ ಕುಮಾರ್ ಕಲ್ಕೂರ, ಸಾಯಿರಾಂ, ರವಿಶಂಕರ್ ಮಿಜಾರ್, ರಮಾನಂದ ಪೂಜಾರಿ ಬೋಳಾರ್, ಉದಯ ಪೂಜಾರಿ ಬಲ್ಲಾಲ್ ಭಾಗ್, ಶಾಹಿನ್ ಶೇಖ್, ಪ್ರೇಮ್ ಶೆಟ್ಟಿ ಸುರತ್ಕಲ್, ಹರೀಶ್ ಶೆಟ್ಟಿ, ಸಿನಿಮಾದ ನಟ ನಿರ್ದೇಶಕ ಸಿದ್ಧಾರ್ಥ್‌ ಶೆಟ್ಟಿ, ಉಮೇಶ್‌ ಮಿಜಾರ್‌, ಸದಾಶಿವ ಅಮೀನ್‌, ವೆನ್ಸಿಟಾ ಡಯಾಸ್‌, ಲಂಚುಲಾಲ್, ಮೋಹನ್ ಕೊಪ್ಪಳ, ಬಾಲಕೃಷ್ಣ ಶೆಟ್ಟಿ, ರೂಪ ವರ್ಕಾಡಿ, ಮೋಹನ್ ರಾಜ್, ಅರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಿನಿಮಾದಲ್ಲಿ ಸಿದ್ದಾಥ್೯ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಜಯಶ್ರೀ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ನಿರ್ದೇಶನ : ಜಿಸ್ನು ಎಸ್ ಮೆನನ್ ಸಿದ್ದಾಥ್೯ ಶೆಟ್ಟಿ, ನಿರ್ಮಾಪಕರು: ವಿಶಾಂತ್ ಮಿನೆಜಸ್, ಛಾಯಾಗ್ರಾಹಣ: ಚಂದು ಮೆಪ್ಪಾಯೂರ್, ಸಂಕಲನ : ಶರತ್ ಹೆಗ್ಡೆ, ನೃತ್ಯ: ವಿಜೇತ್ ಆರ್ ನಾಯಕ್, ಸಾಹಸ: ಯೋಗಾನಂದ್, ಪ್ರೊಡಕ್ಷನ್ ಮ್ಯಾನೇಜರ್: ಕಾರ್ತಿಕ್ ರೈ ಅಡ್ಯನಡ್ಕ

Continue Reading

Trending

error: Content is protected !!