Connect with us

Mysore

ಮೈಸೂರು ದಸರಾ ಗಜಪಡೆಗೆ 3ನೇ ಹಂತದ ತಾಲೀಮು ಆರಂಭ

Published

on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಿದ್ಧತೆಗಳು ಭರದಿಂದ ಸಾಗಿದ್ದು, ದಸರಾ ಗಜಪಡೆಗೆ ಇಂದು 3ನೇ ಹಂತದ ತಾಲೀಮು ಆರಂಭವಾಗಿದೆ. ಮಳೆಯ ನಡುವೆಯೇ ಗಜಪಡೆ ತಾಲೀಮಿಗೆ ತೆರಳಿತು.


ತಾಲೀಮಿಗೂ ಮುನ್ನ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಹೇಂದ್ರ ಆನೆಗೆ ಮರದ ಅಂಬಾರಿ ಕಟ್ಟುವ ಮೂಲಕ ಅಂಬಾರಿ ಹೊರುವ ತಾಲೀಮು ನಡೆಸಲಾಯಿತು. ಮರದ ಅಂಬಾರಿ ಸೇರಿದಂತೆ ಒಟ್ಟು ಸುಮಾರು 1 ಸಾವಿರ ಕೆ.ಜಿ. ತೂಕವನ್ನು ಮಹೇಂದ್ರ ಹೊತ್ತು ಸಾಗಿದನು.

ಮಹೇಂದ್ರನಿಗೆ ಕುಮ್ಕಿ ಆನೆಗಳಾಗಿ ಲಕ್ಷ್ಮಿ ಹಾಗೂ ಚೈತ್ರ ಸಾಥ್ ನೀಡಿದವು. ಮಹೇಂದ್ರನ ಹಿಂದೆ ಇತರ ಗಜಪಡೆಯ ಆನೆಗಳೂ ಸಾಗಿದವು. ಮೈಸೂರಿನಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿದೆ.

ಈ ಬಾರಿ ಚಿನ್ನದ ಅಂಬಾರಿ ಹೊರುವ ಆನೆಗಳ ಆಯ್ಕೆಗಾಗಿ ಪ್ರಶಾಂತ, ಧನಂಜಯ, ಮಹೇಂದ್ರ, ಸುಗ್ರೀವ ಹಾಗೂ ಏಕಲವ್ಯ ಸೇರಿದಂತೆ ಐದು ಆನೆಗಳ ಮೇಲೆ ಗಮನ ಹರಿಸಲಾಗಿದೆ. ಈ ಎಲ್ಲಾ ಆನೆಗಳಿಗೂ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದ್ದು, ಅಭಿಮನ್ಯು ಅಕ್ಟೋಬರ್ 5ರಂದು, ಸೋಮವಾರ ಮೈಸೂರಿಗೆ ಆಗಮಿಸಲಿದ್ದಾನೆ ಎಂದು ಮೈಸೂರಿನಲ್ಲಿ ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.

Continue Reading

Mysore

ಶಾಲಾ ಮಕ್ಕಳಿಗೆ ಅನುಚಿತ ವರ್ತನೆ ಆರೋಪ: 59 ವರ್ಷದ ಶಿಕ್ಷಕ ಬಂಧನ

Published

on

ಮೈಸೂರು: ಶಾಲಾ ಮಕ್ಕಳಿಗೆ ಅನುಚಿತವಾಗಿ ವರ್ತಿಸಿ, ಮಕ್ಕಳ ಗುಪ್ತಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ 59 ವರ್ಷದ ಮುಖ್ಯ ಶಿಕ್ಷಕನನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.


ಆರೋಪಿಯನ್ನು ರಾಮಶೆಟ್ಟಿ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಸುಮಾರು 30 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಶೆಟ್ಟಿ, ನಿವೃತ್ತಿಯ ಅಂಚಿನಲ್ಲಿದ್ದರು ಎನ್ನಲಾಗಿದೆ.

ಶಿಕ್ಷಕನ ವರ್ತನೆಯ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಶಾಲೆಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದ್ದು, ಪ್ರಭಾರಿ ಬಿಇಒ ಅನಂತರಾಜು ಉಪಸ್ಥಿತರಿದ್ದರು. ಮಕ್ಕಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ದೂರು ದಾಖಲಿಸಿಕೊಂಡ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಶಿಕ್ಷಕ ರಾಮಶೆಟ್ಟಿಯನ್ನು ಬಂಧಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕೂಡ ಆರೋಪಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Continue Reading

Mysore

ಕ್ರಿಮಿನಾಶಕ ಕಾಳು ಮಾತ್ರೆ ಸೇವಿಸಿ ಗೃಹಿಣಿ ಆತ್ಮಹ*ತ್ಯೆಗೆ ಶರಣು

Published

on

ಹುಣಸೂರು: ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ ಕ್ರಿಮಿನಾಶಕ ಕಾಳು ಮಾತ್ರೆ ಸೇವಿಸಿ ಮೃತಪಟ್ಟಿರುವ ಘಟನೆ ತಾಲೂಕಿನ ಗಾವಡಗೆರೆ ಹೋಬಳಿಯ ಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದ್ದು, ಆ ಗ್ರಾಮದ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಬಿಳಿಕೆರೆ ಠಾಣಾ ಪೊಲೀಸರು ಒರ್ವನನ್ನು ಬಂಧಿಸಿದ್ದಾರೆ.
ಆಗಿದ್ದೇನು, ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಲಕ್ಕನಕೊಪ್ಪಲು ಗ್ರಾಮದ ಶ್ರೀಕಾಂತ್ ಪತ್ನಿ ಸಿಂಧೂ(26)ಸಾವನ್ನಪ್ಪಿದವರು. ಇವರಿಗೆ ಪತಿ ಶ್ರೀಕಾಂತ್, ಇಬ್ಬರು ಮಕ್ಕಳಿದ್ದಾರೆ. ಕೃತ್ಯಕ್ಕೆ ಕಾರಣನಾದ ಅದೇ ಗ್ರಾಮದ ಎಲ್.ಕೆ.ವಿಕಾಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.


ಸಿಂಧು ರವರ ಗಂಡ ಶ್ರೀಕಾಂತ್ ಬಿಳಿಕೆರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಾವು 8 ವರ್ಷಗಳ ಹಿಂದೆ ಕೆ.ಆರ್.ನಗರ ತಾಲೂಕಿನ ಮಾವತ್ತೂರು ಗ್ರಾಮದ ಎಂ.ಆರ್.ಸಿಂಧೂ ಎಂಬ ಮಹಿಳೆಯನ್ನು ವಿವಾಹವಾಗಿದ್ದು, ಸೆ.21ರ ಸೋಮವಾರ ಮಧ್ಯಾಹ್ನ ಪತ್ನಿ ಸಿಂಧೂ ಕರೆ ಮಾಡಿ ತೊಂದರೆಯಲ್ಲಿದ್ದೇನೆಎಂಬ ಮಾಹಿತಿಗೆ ಮನೆಗೆ ಬಂದು ನೋಡಿದಾಗ ಪತ್ನಿ ಸಿಂಧೂ ಕ್ರಿಮಿನಾಶಕ ಕಾಳು ಮಾತ್ರೆ ಸೇವಿಸಿರುವುದಾಗಿ ತಿಳಿಸಿದ್ದು, ತಕ್ಷಣವೇ ಕೆ.ಆರ್.ನಗರ ಆಸ್ಪತ್ರೆಗೆ ಹೋಗಿದ್ದಾರೆ ನಂತರ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾವಿಗೂ ಮುನ್ನ ನನ್ನ ಸಾವಿಗೆ ಗ್ರಾಮದ ಎಲ್.ಕೆ.ವಿಕಾಸ್ ಕಾರಣವೆಂದು ತಿಳಿಸಿದ್ದಾಳೆ, ಆಕೆಯ ಮೊಬೈಲ್ ಪರಿಶೀಲಿಸಿದ ವೇಳೆ ವಿಕಾಸ್‌ನ ಹೆಸರನ್ನು ಮತ್ತೊಂದು ಹೆಸರಿನ (ಕಾವ್ಯ) ಹೆಸರಿನಡಿ ಸೇವ್ ಮಾಡಿಕೊಂಡಿದ್ದು, ಕಾಳು ಸೇವನೆಗೂ ಮುನ್ನ ಇಬ್ಬರೂ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ, ಪತ್ನಿಯ ಸಾವಿಗೆ ವಿಕಾಸ್ ಪ್ರೇರಣೆಯೇ ಕಾರಣವಾಗಿದ್ದು, ಈತನಿಗೆ ತಂದೆ-ತಾಯಿಯ ಸಹಕಾರವಿತ್ತೆಂದು ಬಿಳಿಕೆರೆ ಠಾಣೆಗೆ ದೂರು ನೀಡಿದ ಮೇರೆಗೆ ಆತ್ಮಹತ್ಯಾ ಪ್ರಚೋದನಾ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಕಾಸ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ರವಿ, ಇನ್ಸ್ಪೆಕ್ಟರ್ ಪುನಿತ್ ಭೇಟಿ ಇತ್ತಿದ್ದರು. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸ್ವಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಸಿದರು.

Continue Reading

Mysore

ತಮಿಳುನಾಡಿಗೆ ನೀರು ಹರಿಸುವ ಆದೇಶ ವಿರೋಧಿಸಿ ಪ್ರತಿಭಟನೆ

Published

on

ಮೈಸೂರು: ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಹೊರಬಿದ್ದಿರುವ ಆದೇಶವನ್ನು ವಿರೋಧಿಸಿ ಮೈಸೂರಿನಲ್ಲಿ ಕನ್ನಡ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾಕಾರರು ಸೇರಿ ರಾಜ್ಯ ಸರ್ಕಾರ ಹಾಗೂ CWRC–CWMA ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಸೇನಾಪಡೆ ಕಾರ್ಯಕರ್ತರು, ಒಂದು ಕೈಯಲ್ಲಿ ಬೆಣ್ಣೆ ಹಾಗೂ ಮತ್ತೊಂದು ಕೈಯಲ್ಲಿ ಸುಣ್ಣ ಹಿಡಿದು ಘೋಷಣೆ ಕೂಗಿದರು. ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ನೀಡಲಾಗುತ್ತಿದೆ ಎಂಬ ಸಂದೇಶ ಸಾರುವ ಮೂಲಕ ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು. ರಾಜ್ಯದ ಜಲಾಶಯಗಳ ನೀರಿನ ಲಭ್ಯತೆ ಹಾಗೂ ಬರ ಪರಿಸ್ಥಿತಿಯನ್ನು ಪರಿಗಣಿಸಿ ನೀರು ಬಿಡುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಕಾವೇರಿ ನೀರು ಹಂಚಿಕೆ ಕುರಿತು CWRC ಮತ್ತು CWMA ನಿರ್ದೇಶನಗಳ ಬಗ್ಗೆ ಕರ್ನಾಟಕದಲ್ಲಿ ಈ ಹಿಂದೆ ಕೂಡ ಪ್ರತಿಭಟನೆಗಳು ನಡೆದಿವೆ.

Continue Reading

Trending

error: Content is protected !!