Connect with us

Special

ಸಚಿವ ಜಾರಕಿಹೊಳಿ-ಕುಮಾರಸ್ವಾಮಿ ರಹಸ್ಯ ಚರ್ಚೆ ?

Published

on

ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ನಗರದ ಹೊರವಲಯದ ನೆಲಮಂಗಲ ಸಮೀಪ ರೆಸಾರ್ಟ್ ಒಂದರಲ್ಲಿ ಸಚಿವ ಸತೀಶ್ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

ರಾಜಕೀಯ ವಿದ್ಯಮಾನ ಸತೀಶ್ ಜೊತೆ ಮತ್ತೊಬ್ಬ ಕಾಂಗ್ರೆಸ್ ಹಿರಿಯ ಮುಖಂಡರು ಉಪಸ್ಥಿತರಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ನೆಲಮಂಗಲದ ವಿವಿಧೆಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಪ್ರವಾಸ ಕೈಗೊಂಡಿದ್ದರು, ಈ ಸಂದರ್ಭದಲ್ಲೇ ಅವರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಗೊಂದಲ ವೇಳೆಯೂ ಕುಮಾರಸ್ವಾಮಿ ಅವರನ್ನು ಸತೀಶ್ ದೆಹಲಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದರು.

ಇ.ಡಿ. ದಾಳಿ

ದಕ್ಷಿಣ ಆಫ್ರಿಕಾದ ವಿವಿಧ ದೇಶಗಳಲ್ಲಿ ಸತೀಶ್ ಕುಟುಂಬ ಬಂಡವಾಳ ಹೂಡಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಇವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದೊಡ್ಡ ಪ್ರಮಾಣದಲ್ಲಿ ದಾಖಲೆ ಮತ್ತು ನಗದನ್ನು ವಶ ಪಡಿಸಿಕೊಂಡಿತ್ತು.ದಾಳಿ ಹಿಂದೆ ಕಾಂಗ್ರೆಸ್ ನಾಯಕರೇ ಇದ್ದಾರೆ ಎಂಬ ಅನುಮಾನ ಜಾರಕಿಹೊಳಿ ಕುಟುಂಬಕ್ಕಿದೆ.

 

ಇ.ಡಿ. ದಾಳಿ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿ, ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಎಡೆ ಮಾಡಿದೆ. ಸ್ಪಷ್ಟ ಮಾಹಿತಿ ಇಲ್ಲಈ ಭೇಟಿ ಅನೌಪಚಾರಿಕವೂ ಅಥವಾ ರಾಜಕೀಯ ಕಾರಣಕ್ಕೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕುಮಾರಸ್ವಾಮಿ ಭೇಟಿ ನಂತರ ಜಾರಕಿಹೊಳಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ತಮ್ಮ ಸರ್ಕಾರಿ ನಿವಾಸದಲ್ಲಿ ಸಮುದಾಯದ ಶಾಸಕರು ಮತ್ತು ಮುಖಂಡರ ನಿರಂತರ ಸಭೆ ನಡೆಸಿದರು.

 ವರದಿ : ಸಿ ಆರ್ ಮಂಜುನಾಥ್

Continue Reading

Special

ಕತ್ರಿನಾ ಕೈಫ್ ಬಾಡಿ ಶೇಮಿಂಗ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

Published

on

ವಯಸ್ಸು, ತೂಕ, ನೋಟ, ಕೌಟುಂಬಿಕ ಹಿನ್ನೆಲೆ, ವೃತ್ತಿಜೀವನದ ಹಿನ್ನಡೆ ಅಥವಾ ತಾಯ್ತನದ ಆಧಾರದ ಮೇಲೆ ಇತರರನ್ನು ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕ್ಷೇಪಾರ್ಹ ರೀತಿಯಲ್ಲಿ ಮಹಿಳೆಯರ ಛಾಯಾಚಿತ್ರಗಳನ್ನು ತೆಗೆಯುವ ಪೆಪರಾಜಿಗಳಿಗೂ  ಎಚ್ಚರಿಕೆ ನೀಡಿದ್ದಾರೆ.

ಬಿಗ್ ಬಾಸ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸ್ಪರ್ಧಿಗಳೊಂದಿಗೆ ಟ್ರೋಲಿಂಗ್, ಏಜ್ ಶೇಮಿಂಗ್ ಹಾಗೂ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ.

ಬಿಗ್ ಬಾಸ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸ್ಪರ್ಧಿಗಳೊಂದಿಗೆ ಟ್ರೋಲಿಂಗ್, ಏಜ್ ಶೇಮಿಂಗ್ ಹಾಗೂ ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದಾರೆ.

“ಇದ್ದಕ್ಕಿದ್ದಂತೆ ಎಲ್ಲರೂ ವಯಸ್ಸಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾರಾದರೂ ವಯಸ್ಸಾಗಿದ್ದಾರೆ ಎಂದು ಹೇಳುತ್ತಾರೆ. ನೀವು ಯಾರನ್ನಾದರೂ ಏಕೆ ಟ್ರೋಲ್ ಮಾಡಲು ಬಯಸುತ್ತೀರಿ? ಅವರ ತೂಕ, ನೋಟ, ಕುಟುಂಬ, ನಗು, ವೃತ್ತಿಜೀವನದ ವೈಫಲ್ಯ ಅಥವಾ ತಾಯಿಯಾಗುವುದನ್ನು ಇಟ್ಟುಕೊಂಡು ಏಕೆ ಟ್ರೋಲ್ ಮಾಡಬೇಕು? ಎಂದ ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.

ಗರ್ಭಿಣಿಯಾಗಿರುವ ಮಹಿಳೆಯನ್ನು ನೀವು ಏಕೆ ಟ್ರೋಲ್ ಮಾಡುತ್ತೀರಿ? ಗರ್ಭಾವಸ್ಥೆಯಲ್ಲಿ ಎಲ್ಲರೂ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಅವಳು ಗರ್ಭಿಣಿಯಾಗಿದ್ದರಿಂದ ತೂಕ ಹೆಚ್ಚಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಟಿ ಕತ್ರಿನಾ ಕೈಫ್‌ ವಿರುದ್ಧದ ಟ್ರೋಲ್‌ಗೆ ಖಡಕ್‌ ಉತ್ತರ ನೀಡಿದ್ದಾರೆ.

ವಿಡಿಯೋದಲ್ಲಿ ಸಲ್ಮಾನ್ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ, ತಾಯಿಯಾದ ಬಳಿಕ ತೂಕ ಹೆಚ್ಚಿಸಿಕೊಂಡಿದ್ದಕ್ಕಾಗಿ ಟ್ರೋಲ್‌ಗೆ ಒಳಗಾಗಿದ್ದ ನಟಿ ಕತ್ರಿನಾ ಕೈಫ್ ಅವರನ್ನು ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಟ್ರೋಲಿಂಗ್ ಕುರಿತು ಸ್ಪರ್ಧಿಗಳೊಂದಿಗೆ ಚರ್ಚಿಸುವ ವೇಳೆ ಸಲ್ಮಾನ್ ಖಾನ್ ಕೋಪಗೊಂಡಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಅವರು ತಮ್ಮ ಕೋಟ್ ತೆಗೆದು ಕ್ಯಾಪ್ ಕೆಳಗೆ ಎಸೆದು ಟ್ರೋಲರ್ಸ್‌ ವಿರುದ್ಧ ಗರಂ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಅನುಮತಿಯಿಲ್ಲದೆ ಹಿಂದಿನಿಂದ ಛಾಯಾಚಿತ್ರ ತೆಗೆಯುವವರ ವಿರುದ್ಧವೂ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Continue Reading

Special

ಶಫಾಲಿ ವರ್ಮಾ ಶತಕದ ಅಬ್ಬರ: ಬಾಂಗ್ಲಾ 81ಕ್ಕೆ ಆಲೌಟ್‌, ಫೈನಲ್‌ಗೆ ಭಾರತ

Published

on

ನಿಸ್ಶಿನ್: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡೆಯನ್ನು ಸೆಮಿಫೈನಲ್‌ನಲ್ಲಿ ಶಫಾಲಿ ವರ್ಮಾ ಅವರ ಸ್ಫೋಟಕ ಶತಕದ ಆಟದ ನೆರವಿನಿಂದ ಬಾಂಗ್ಲಾ ತಂಡವನ್ನು 114 ರನ್‌ಗಳ ಅಂತರದಿಂದ ಸೋಲಿಸಿದ ಭಾರತ ಫೈನಲ್‌ ಪ್ರವೇಶಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಭಾರತ 4 ವಿಕೆಟ್‌ ನಷ್ಟಕ್ಕೆ 195 ರನ್‌ ಗಳಿಸಿದೆ. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 15.4 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲೌಟ್‌ ಆಯ್ತು.ಈ ಗೆಲುವಿನೊಂದಿಗೆ ಭಾರತ ಫೈನಲ್‌ ಪ್ರವೇಶಿಸಿದ್ದು ಚಿನ್ನದ ಪದಕಕ್ಕಾಗಿ ಶ್ರೀಲಂಕಾ ಜೊತೆ ಕಾದಾಟ ನಡೆಸಲಿದೆ.

ಲಂಕಾ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಂದಿನಿ ಶರ್ಮಾ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್‌ ಕಿತ್ತರೆ ಕ್ರಾಂತಿ ಗೌಡ್‌, ಶ್ರೇಯಾಂಕಾ ಪಾಟೀಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಭಾರತದ ಪರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಶಫಾಲಿ ವರ್ಮಾ 24 ಎಸೆತಗಳಲ್ಲಿ 50 ರನ್‌ ಹೊಡೆದರೆ ಅಂತಿಮವಾಗಿ 49 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸ್‌ ಸಿಡಿಸಿ ಅಜೇಯ 100 ರನ್‌ ಸಿಡಿಸಿದರು. ಸ್ಮೃತಿ ಮಂಧಾನ 37 ರನ್‌, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 40 ರನ್‌ ಹೊಡೆದು ಔಟಾದರು.

Continue Reading

Special

ಕೋಟಿ ಕೊಟ್ಟು 36 ‘ಐಫೋನ್ 18 ಪ್ರೊ’ ಕೊಂಡ ಇಬ್ಬರು ಯುವಕರು

Published

on

ದುಬೈ : ದೇಶದ ವಿವಿಧ ಮಾರುಕಟ್ಟೆಗಳಿಗೆ ಇದೀಗ ಐಫೋನ್ 18 ಪ್ರೊ ಲಗ್ಗೆ ಇಟ್ಟಿದೆ. ಅಂಗಡಿಗಳ ಮುಂದೆ ಜನರು ಕಿಲೋ ಮೀಟರ್ ಗಂಟಲೆ ಕ್ಯೂ ನಿಂತು ಕಾಯುತ್ತಾ ಐಫೋನ್ ಗಳನ್ನು ಕೊಳ್ಳುತ್ತಿದ್ದಾರೆ. ಇದರ ನಡುವೆ ಇಬ್ಬರು ಯುವಕರು ಬರೋಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಸುಮಾರು 36 ಐಫೋನ್ ಗಳನ್ನು ಕೊಳ್ಳುವುದರ ಮೂಲಕ ಎಲ್ಲರನ್ನು ಬೆರಗಾಗಿಸಿದ್ದಾರೆ.

ಹೌದು, ದುಬೈ ನಿವಾಸಿಗಳಾದ ರೈಹಾನ್ ಮತ್ತು ಮುಹಮ್ಮದ್ ಶಬೀಬ್ ಎಂಬಿಬ್ಬರು ಯುವಕರು ಒಂದೇ ದಿನ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ 36 ಫೋನ್‌ಗಳನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಹೊಸ ಫೋನ್ ಪಡೆಯಲು ಇವರು ದುಬೈ ಮಾಲ್‌ನ ವಾಹನ ನಿಲುಗಡೆ ಆವರಣದಲ್ಲೇ ಇಡೀ ರಾತ್ರಿ ಕಳೆದು ಮುಂಜಾನೆ ಆಪಲ್ ಮಳಿಗೆಯ ಬಾಗಿಲು ತಟ್ಟಿದ್ದಾರೆ. ಇವರು ಮಳಿಗೆಯ ಸಮೀಪದಲ್ಲೇ ವಾಸವಿದ್ದರೂ, ಮನೆಯಲ್ಲಿ ಮಲಗಿದರೆ ಬೆಳಿಗ್ಗೆ ತಡವಾಗಿ ಎದ್ದು ನಿಗದಿತ ಸಮಯ ತಪ್ಪಿಹೋಗಬಹುದು ಎಂಬ ಆತಂಕದಿಂದ ರಾತ್ರಿಯೇ ಮಾಲ್ ಆವರಣಕ್ಕೆ ಬಂದು ತಂಗಿದ್ದರು. ಬೆಳಿಗ್ಗೆ 6 ಗಂಟೆಗೆ ಮಳಿಗೆ ತೆರೆಯುತ್ತಿದ್ದಂತೆ ಇವರು ಮೊದಲ ಸಾಲಿನಲ್ಲಿ ನಿಂತು ಫೋನ್‌ಗಳನ್ನು ಪಡೆದುಕೊಂಡಿದ್ದಾರೆ.

ಅಂದಹಾಗೆ ಭಾರತದಲ್ಲಿರುವ ತಮ್ಮ ಆಪ್ತ ಸ್ನೇಹಿತರು ಹಾಗೂ ಗ್ರಾಹಕರಿಗಾಗಿ ತಾವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಫೋನ್‌ಗಳನ್ನು ಖರೀದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮೊದಲ ದಿನವೇ ಸುಮಾರು 400,000 ದಿರ್ಹಮ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚ ಮಾಡಿ 36 ಮೊಬೈಲ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 14 ಫೋನ್‌ಗಳನ್ನು ದುಬೈ ಮಾಲ್‌ನಲ್ಲಿ ಹಾಗೂ ಉಳಿದವುಗಳನ್ನು ಮಾಲ್ ಆಫ್ ದಿ ಎಮಿರೇಟ್ಸ್ ಮಳಿಗೆಯಿಂದ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಮರುದಿನಕ್ಕಾಗಿ ಮತ್ತೆ 40 ಹೊಸ ಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ.

Continue Reading

Trending

error: Content is protected !!