Connect with us

Special

ನಿಮ್ಮ ವಾಹನದ ಮೇಲೆ ಇರುವ ದಂಡವನ್ನು 50% ರಿಯಾಯಿತಿಯೊಂದಿಗೆ ಪಾವತಿಸಲು ಸರ್ಕಾರದಿಂದ ಅವಕಾಶ

Published

on

50% Discount on Vehicle Penalty : ನಿಮ್ಮ ಎಲ್ಲಾ ವಾಹನಗಳ ಮೇಲೆ ಇರುವ ದಂಡವನ್ನು ರಿಯಾಯಿತಿ ದರದಲ್ಲಿ ಪಾವತಿಸಲು ಕರ್ನಾಟಕ ಸರ್ಕಾರ ಅವಕಾಶ ನೀಡಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರಿಗೆ ಅನ್ವಯವಾಗಲಿದೆ?

ಸಂಚಾರಿ ಇ – ಚಲನ್ ನಲ್ಲಿ ದಾಖಲಾಗಿರುವಂತಹ ಸಂಚಾರಿ ಪ್ರಕರಣಗಳಿಗೆ ಅಥವಾ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವವರಿಗೆ ದಾಖಲಾಗಿರುವ ದಂಡವನ್ನು ಪಾವತಿಸಲು ಒಂದು ಬಾರಿ ಅವಕಾಶವಾಗಿ 50% ರಿಯಾಯಿತಿ ದರದಲ್ಲಿ ಪಾವತಿಸಲು ಅನುಮತಿ ನೀಡಿದೆ.

ಪಾವತಿಸಲು ಕೊನೆಯ ದಿನಾಂಕ – ದಂಡವನ್ನು ಪಾವತಿಸಲು ಸೆಪ್ಟೆಂಬರ್ 12ನೇ ತಾರೀಖಿನವರೆಗೆ ಅವಕಾಶ ನೀಡಲಾಗಿದ್ದು, ಆನ್ಲೈನ್ ಮೂಲಕ ಪಾವತಿಸುವ ಮಾಹಿತಿ ಕೆಳಗಿದೆ.

ಆನ್‌ಲೈನ್‌ ಮುಖಾಂತರ ಪಾವತಿಸುವುದು ಹೇಗೆ?

ಇದನ್ನು ಪಾವತಿಸುವುದು ಬಹಳ ಸುಲಭವಾಗಿದ್ದು, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಮೊಬೈಲ್ ಆಪ್ ಮುಖಾಂತರ ಪಾವತಿಸಬಹುದು.

ಸಹಾಯವಾಣಿ ಸಂಖ್ಯೆ : 080-49203888
ವೆಬ್‌ಸೈಟ್‌ : www.karnatakaone.gov.in

Continue Reading

Special

ರಾಜ್ಯ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

Published

on

New Rules for Age Relaxation : ಈಗಿನಿಂದ 2027ರ ಡಿಸೆಂಬರ್ 31 ನೇ ತಾರೀಖಿನವರೆಗೆ ನಡೆಯುವ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರ ನೇಮಕಾತಿಯ ಕುರಿತು ವಯೋಮಿತಿಯಲ್ಲಿ ಹೊಸ ಬದಲಾವಣೆ ಮಾಡಿ, ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹೊಸ ನಿಯಮ ಯಾವ ಯಾವ ನೇಮಕಾತಿಗಳಿಗೆ ಅನ್ವಯವಾಗಲಿದೆ?
ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷ ಸಡಿಲಿಕೆ ನೀಡಿ ಆದೇಶ ಹೊರಡಿಸಿರುವ ನಿಯಮವು ಕೇವಲ ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಾದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಗೆ ಮಾತ್ರ ಒಂದು ಬಾರಿಯ ಕ್ರಮವಾಗಿ ಸಡಿಲೀಸಲಾಗಿದೆ. ಅದೇ ರೀತಿ ಇದು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ನೇಮಕಾತಿಯಲ್ಲಿ ನಡೆಯುತ್ತಿರುವಂತಹ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಹಲವಾರು ನೇಮಕಾತಿಗಳು ರದ್ದಾಗಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಏನಿದು ಒಳ ಮೀಸಲಾತಿ ಪ್ರಕರಣ?

ಪರಿಶಿಷ್ಟ ಜಾತಿಯಲ್ಲಿರುವಂತಹ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ, ಪ್ರವರ್ಗ ಎ, ಬಿ ಹಾಗೂ ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ.

ಈ ಎಲ್ಲಾ ಪ್ರವರ್ಗಗಳಿಗೆ ಸೇರಿ ಇರುವ ಮೀಸಲಾತಿ 17% ಅನ್ನು ಈ ಮೂರು ಪ್ರವರ್ಗಗಳಿಗೆ ಮೀಸಲಾತಿ ಶೇಕಡವಾರು ಹಂಚಿಕೆಯು ಈ ಕೆಳಗಿನಂತಿರುತ್ತದೆ.


* ಪ್ರವರ್ಗ ಎ ಸಮುದಾಯದ ಅಭ್ಯರ್ಥಿಗಳಿಗೆ – 6%
* ಪ್ರವರ್ಗ ಬಿ ಸಮುದಾಯದ ಅಭ್ಯರ್ಥಿಗಳಿಗೆ – 6%
* ಪ್ರವರ್ಗ ಸಿ ಸಮುದಾಯದ ಅಭ್ಯರ್ಥಿಗಳಿಗೆ – 5%

Continue Reading

Special

SSLC ಅರ್ಧ ವಾರ್ಷಿಕ ಪರೀಕ್ಷೆಯು 12ನೇ ತಾರೀಖಿನಿಂದ ಆರಂಭ : ಪರೀಕ್ಷೆ ಬರೆಯುವ ಮುನ್ನ ಈ ಮಾಹಿತಿ ತಿಳಿಯಿರಿ

Published

on

Karnataka SSLC Semester exam 2025 : ಕರ್ನಾಟಕ ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳ ಅರ್ಧ ವಾರ್ಷಿಕ ಪರೀಕ್ಷೆ ಇದೇ ತಿಂಗಳು ಸಪ್ಟೆಂಬರ್ 12ನೇ ತಾರೀಖಿನಿಂದ ಆರಂಭವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಇಲ್ಲಿದೆ.

ಈ ಪರೀಕ್ಷೆಯು ಸೆಪ್ಟೆಂಬರ್ 12ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ನಡೆಯಲಿದ್ದು, ವಿಷಯವಾರು ದಿನಾಂಕಗಳ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿ :

• ಪ್ರಥಮ ಭಾಷೆ – ಸೆಪ್ಟೆಂಬರ್ 12
• ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ, ಸಂಗೀತ, ಕರ್ನಾಟಕ ಸಂಗೀತ – ಸಪ್ಟೆಂಬರ್ 13
• ದ್ವಿತೀಯ ಭಾಷೆ – ಸಪ್ಟೆಂಬರ್ 15
• ಗಣಿತ ಸಮಾಜಶಾಸ್ತ್ರ – ಸಪ್ಟೆಂಬರ್ 16

• ತೃತೀಯ ಭಾಷೆ, ಎನ್ ಎಸ್ ಕ್ಯೂ ಎಫ್ ವಿಷಯಗಳು – ಸಪ್ಟೆಂಬರ್ 17
• ಸಮಾಜ ವಿಜ್ಞಾನ – ಸಪ್ಟೆಂಬರ್ 18
• ಜಿಟಿಎಸ್ ಪರೀಕ್ಷೆ – ಸಪ್ಟೆಂಬರ್ 19

ಪರೀಕ್ಷೆ ನಡೆಯುವ ಸಮಯ : ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಉಳಿದ ಎಲ್ಲಾ ವಿಷಯಗಳು ಬೆಳಗ್ಗೆ 10.30 ಕ್ಕೆ ಆರಂಭವಾಗಲಿದೆ.

Continue Reading

Special

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋದರೆ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು ಎಂದು ಸರ್ಕಾರದ ಸುಗ್ರೀವಾಜ್ಞೆ

Published

on

ಯಾವುದೇ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಆಸ್ಪತ್ರೆಯ ಸಿಬ್ಬಂದಿಗಳು ಯಾವುದೇ ರೀತಿಯ ಮುಂಗಡ ಹಣ ಕೆಳದೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ಸರ್ಕಾರವು ಸುಗ್ರೀವಾಜ್ಞೆ ನೀಡಿದೆ. ಅದೇ ರೀತಿ ಇದನ್ನು ತಪ್ಪಿದಲ್ಲಿ ರೂ. 1 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲಾಗುವುದೆಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕೇವಲ ರಸ್ತೆ ಅಪಘಾತ ಅಲ್ಲದೆ ಸುಟ್ಟ ಗಾಯ, ಹಲ್ಲೆಯಿಂದಾಗಿ ಗಾಯ, ವಿಷಪ್ರಾಶನ ಸೇರಿದಂತೆ ಇತ್ಯಾದಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದವರಿಗೆ ತುರ್ತು ಚಿಕಿತ್ಸೆ ನೀಡಬೇಕು.

ಅಪಘಾತಕ್ಕೊಳಗಾದ ಅಥವಾ ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸಲು ಸಂಬಂಧಿಸಿದ ತುರ್ತು ಚಿಕಿತ್ಸೆಯನ್ನು ಆಸ್ಪತ್ರೆಯು ತಕ್ಷಣದ ವೈದ್ಯಕೀಯ ತಪಾಸಣೆ ಸೇವೆ ಮತ್ತು ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ಅಗತ್ಯವೆಂದು ಪರಿಗಣಿಸಿ ಒದಗಿಸಿಕೊಡುವುದು ಕಡ್ಡಾಯ.

ಒಂದು ವೇಳೆ ಅಗತ್ಯವಿರುವ ಸೌಲಭ್ಯಗಳು ಕೊರತೆಯಿದ್ದಲ್ಲಿ, ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡುವುದಕ್ಕಿಂತ ಮೊದಲು ಕನಿಷ್ಠ ಪಕ್ಷ ಪ್ರಥಮ ಚಿಕಿತ್ಸೆ ನೀಡಬೇಕು ಹಾಗೂ ವೈದ್ಯಕೀಯ ವಿವರಗಳೊಂದಿಗೆ ಸ್ಥಳಾಂತರಿಸಬೇಕಾಗಿ ಎಂದು ಆರೋಗ್ಯ ಇಲಾಖೆಯು ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ.

ಅಪಘಾತದಲ್ಲಿ ದಿನಾಂಕದಿಂದ 7 ದಿನಗಳವರೆಗೆ ₹1.50 ಲಕ್ಷ ಮೌಲ್ಯದ ಯಾವುದೇ ಗೊತ್ತು ಪಡಿಸಿದ ಆಸ್ಪತ್ರೆಯಲ್ಲಿ ನಗದು ಚಿಕಿತ್ಸೆಗೆ ಅರ್ಹರು:

ಹೌದು, ಯಾವುದೇ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರೆ, ಅಂತವರಿಗೆ ಯಾವುದೇ ಗೊತ್ತು ಪಡಿಸಿದ ಆಸ್ಪತ್ರೆಯಲ್ಲಿ ಅಪಘಾತ ದಿನಾಂಕದಿಂದ 7 ದಿನಗಳವರೆಗೆ ₹1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಅಗತ್ಯವಿರುವ ಹಣವನ್ನು ಮೋಟಾರು ವಾಹನ ಅಪಘಾತ ನಿಧಿಯಿಂದ ಮರುಪಾವತಿ ಮಾಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.

Continue Reading

Trending

error: Content is protected !!