Hassan
ಸಕಲೇಶಪುರ: ಹದಗೆಟ್ಟ ಆಗನಿ ರಸ್ತೆ ಕೂಡಲೇ ದುರಸ್ಥಿ ಪಡಿಸಿ
 
																								
												
												
											ವರದಿ: ಸಿ.ಎಲ್. ಪೂರ್ಣೇಶ್ ಚಕ್ಕುಡಿಗೆ
ಸಕಲೇಶಪುರ : ಹಾನುಬಾಳು ಹೋಬಳಿಯ ದೇವಾಲದಕೆರೆ ಮುಖ್ಯ ರಸ್ತೆಯಿಂದ ಅಗನಿ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ತಕ್ಷಣ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಅಚ್ಚ ಹಸಿರನ್ನೇ ಚಾಚಿ ಮಲಗಿರುವ ಪಶ್ಚಿಮ ಘಟ್ಟದ ಗುಡ್ಡ ಗಾಡು ಪ್ರದೇಶವನ್ನು ಒಳಗೊಂಡ ಸುಂದರ ಪ್ರವಾಸಿ ತಾಣವಾದ ಅಗನಿ ಗುಡ್ಡಗಳು ಪ್ರವಾಸಿಗರನ್ನು ಕೈ ಬೀಸಿ ಕರಿಯತ್ತಿವೆ. ಆಗನಿ ಊರಿನ ರಸ್ತೆಯ ಸ್ಥಿತಿಯಂತೂ ಹದಗೆಟ್ಟಿದೆ. ಇಲ್ಲಿ ಸ್ವಲ್ಪ ಮಳೆ ಬಂದರು ಸಾಕು ಎಲ್ಲಂದರಲ್ಲಿ ಬೃಹತ್ ಹೊಂಡಗಳಲ್ಲಿ ನೀರು ತುಂಬಿ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ.
ಪ್ರವಾಸಿ ತಾಣ ಅಗನಿಯಲ್ಲಿ ಸುಮಾರು ಎಂಟು ರೆಸಾರ್ಟ್ ಗಳು ಇಪ್ಪತ್ತಕ್ಕೂ ಹೆಚ್ಚು ಹೋಂ ಸ್ಟೇ ಗಳಿದ್ದು ರಜಾ ದಿನದಲ್ಲಿ ನೂರಾರು ಪ್ರವಾಸಿಗರು ಇ ಗ್ರಾಮಕ್ಕೆ ಬರುತ್ತಾರೆ ಇಲ್ಲಿನ ಆರ್ಥಿಕ ಕೊಡುಗೆ ಪ್ರವಾಸಿ ಕ್ಷೆತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಸ್ಥಳೀಯವಾಗಿ ಎಷ್ಟೋ ಯುವಕರಿಗೆ ಉದ್ಯೋಗ ನೀಡವೆ ಇ ರೆಸಾರ್ಟ್ ಮತ್ತು ಹೋಂ ಸ್ಟೇ ಗಳು. ಇ ರೆಸಾರ್ಟ್ ಗಳ ಮಾಲೀಕರು ಲಕ್ಷಾಂತರ ರೂಪಾಯಿಗಳ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಾರೆ ಆದರೂ ಇ ಗ್ರಾಮಕ್ಕೆ ಸರಿಯಾದ ಮುಲಭೂತ ಸೌಕರ್ಯಗಳಿಲ್ಲ ಇನ್ನಾದರೂ ಇಂತ ಪ್ರವಾಸಿ ತಾಣವಾದ ಅಗನಿ ಗ್ರಾಮವನ್ನು ಪ್ರವಾಸೋದ್ಯಮ ಇಲಾಖೆಯವರಾಗಲಿ, ಸ್ಥಳೀಯ ಶಾಸಕರು ಇ ಗ್ರಾಮಕ್ಕೊಂದು ಸುಸಜ್ಜಿತ ರಸ್ತೆ ನಿರ್ಮಿಸಿ ಇಲ್ಲಿನ ಜನರು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ರಾಜ್ಯ ಸರ್ಕಾರ ಕೂಡಲೆ ಇ ರಸ್ತೆ ಅಭಿರುದ್ದಿಗೆ ಕ್ರಮವಹಿಸಲಿ ಎಂದು ಅಗನಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಹಾನುಬಾಳು ಗ್ರಾಮದ ಅವರೇಕಾಡು ಪೃಥ್ವಿ ಮಾತನಾಡಿದ್ದು, ಇಲ್ಲಿನ ಸ್ಥಳೀಯರು ಉದ್ಯೋಗ ಕೇಳುವದಿಲ್ಲ, ತಮ್ಮ ತೋಟಗದ್ದೆಗಳಿಗೆ ನೀರಾವರಿ ಯೋಜನೆಗಳನ್ನು ಕೇಳುವದಿಲ್ಲ. ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ಉದ್ಯೋಗ ಅಥವಾ ಇನ್ನಿತರ ಸರ್ಕಾರಿ ಯೋಜನೆ ಕೇಳುವದಿಲ್ಲ. ಮಲೆನಾಡಿನ ಜನರು ಕೇಳುವದು ಒಂದೆ ಅದು ಸರ್ವ ಋತು ರಸ್ತೆ. ಅಗನಿ ರಸ್ತೆಯನ್ನು ಕೂಡಲೆ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಲು ಜನಪ್ರತಿನಿದಿನಗಳು ಗಮನಹರಿಸಲಿ ಎಂದರು.
ರಜಾಕ್ ಪಿಡಬ್ಲ್ಯೂಡಿ ಇಂಜಿನಿಯರ್ ಸಕಲೇಶಪುರ ಅವರು ಮಾತನಾಡಿ, ಅಗನಿ ರಸ್ತೆ ಅಭಿರುದ್ದಿಗೆ ಈಗಾಗಲೇ ಒಂದು ಕೋಟಿ ಎಪ್ಪತ್ತು ಲಕ್ಷ ಅನುದಾನ ಮಂಜೂರಾಗಿದ್ದು ಟೆಂಡರ್ ಕೂಡ ಆಗಿದ್ದು ಮಳೆಯಿಂದ ಕೆಲಸ ಮಾಡಲು ಸಾಧ್ಯವಾಗಿರುವದಿಲ್ಲ ಒಂದು ಕೀಲೋ ಮೀಟರ್ ಟಾರ್ ರಸ್ತೆ ಹಾಗೂ ಸುಮಾರು 350 ಮೀ ಕಾಂಕ್ರಿಟ್ ರಸ್ತೆ ಹಾಗೂ ಒಂದು ಮೋರಿಯನ್ನು ಮಳೆ ಮುಗಿದ ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
Hassan
ಹಾಸನ: ಗೃಹ ನಿರ್ಮಾಣ ಸಹಕಾರ ಸಂಘದಿಂದ ತೇಜೋದಯ ವೃದ್ಧಾಶ್ರಮಕ್ಕೆ ನೆರವು
 
														ಹಾಸನ: ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ತೇಜೋದಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ಜೀವಿಗಳಿಗೆ ಬೆಂಬಲ ಒದಗಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವೆಯನ್ನು ಮೆಚ್ಚಿದರು. ಆಶ್ರಮದ ನಿರ್ವಾಹಕರಾದ ಶ್ರೀ ತೇಜ ಅವರನ್ನು ಅಭಿನಂದಿಸಿ, ಸಂಘದ ಪರವಾಗಿ ಕೈಲಾದ ಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಹಿರಿಯ ಜೀವಿಗಳಿಗೆ ಹಣ್ಣು, ಹಂಪಲು ಮತ್ತು ಊಟದ ವ್ಯವಸ್ಥೆ ಮಾಡಲಾಯಿತು.

ಇದೆ ವೇಳೆ ಅಧ್ಯಕ್ಷರು ಮಾತನಾಡಿ, ನಮ್ಮ ಸಂಘದ ನಿರ್ದೇಶಕರು ಭವಿಷ್ಯದಲ್ಲಿಯೂ ತಮ್ಮ ಕೈಲಾದಷ್ಟು ಸಹಾಯ ಮುಂದುವರಿಸಬೇಕು ಎಂದು ಕೋರಿದರು. ಇತ್ತೀಚಿನ ಸ್ವಾರ್ಥಪರ ಸಮಾಜದಲ್ಲಿ, ಸ್ವಾರ್ಥರಹಿತವಾಗಿ ಸೇವೆ ಸಲ್ಲಿಸುತ್ತಿರುವ ತೇಜ ಅವರ ನಿಸ್ವಾರ್ಥ ಮನೋಭಾವವನ್ನು ಶ್ಲಾಘಿಸಿ ಗೌರವಿಸಲಾಯಿತು. ಅಶ್ರಮಕ್ಕೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸಂಘದ ವತಿಯಿಂದ ರೂ.೨೫,೦೦೦ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ಸಾವಿತ್ರಮ್ಮ, ದಾಕ್ಷಾಯಿಣಿ, ವರುಣ್ ಕುಮಾರ್, ಸುರೇಶ್, ಕಾರ್ಯದರ್ಶಿ ಪ್ರವೀಣ್, ಹಾಗೂ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪರಮೇಶ್ ಎಂ.ಎನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Hassan
ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ
 
														ಹಾಸನ : ಪ್ರತಿಷ್ಠಿತ ಸಂಸ್ಥೆಯಾದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು, ಹಾಸನ ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ ಬಿ ಅವರು ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ರಾಧಾಕೃಷ್ಣನ್ ಅವರ ಸಾಧನೆ ಆದರ್ಶ ಗುಣ, ವ್ಯಕ್ತಿತ್ವ, ಶಿಕ್ಷಣದ ಪ್ರಾಮುಖ್ಯತೆ ಮತ್ತು ಮಹತ್ವ, ಶಿಕ್ಷಕರೇ ದೇಶದ ಭದ್ರ ಬುನಾದಿ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ ಅವರು ಶಿಕ್ಷಣ ಎನ್ನುವುದು ಕಲಿತು ಕೇವಲ ಅಂಕಗಳನ್ನು ಗಳಿಸುವಂತಾಗದೆ ಜೀವನದ ನೈತಿಕ ಮಾನವೀಯ ಮೌಲ್ಯಗಳನ್ನು ಕಲಿಸುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ಹೆಚ್ ಕೆ ಎಸ್ ಅಂತರರಾಷ್ಟ್ರೀಯ ಶಾಲೆಯ ಪ್ರಾಂಶುಪಾಲರಾದ ಡಾ. ಗೌರಿ ಎ ಎಸ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡುತ್ತಾ ಎಲ್ಲಾ ಶಿಕ್ಷಕರಿಗೂ ಶುಭಾಶಯ ಕೋರಿದರು. ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಅವರು ಭಾರತೀಯ ಪರಂಪರೆಯಲ್ಲಿ ಗುರು ಶಿಷ್ಯರ ಸಂಬಂಧ ಅತ್ಯುತ್ತಮವಾದದ್ದು, ವಿದ್ಯಾರ್ಥಿಗಳ ಓರೆ ಕೋರೆಗಳನ್ನು ತಿದ್ದಿ ಕಲಿಸುವವ ಗುರು. ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಉದ್ದೇಶಗಳನ್ನು ತಿಳಿಸುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪ ಪ್ರಾಂಶುಪಾಲರಾದ ಶ್ರೀ ಆದಿತ್ಯ ವಟಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮದ ಪ್ರಯುಕ್ತ ಶ್ರೀ ಗಣಪತಿ ಎ ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು (ವಿಭಜಿತ) ಹಾಸನ, ಶ್ರೀ ನವಾಜ್ ಗಣಿತ ಶಿಕ್ಷಕರು ಹೆಚ್ ಕೆ ಎಸ್ ಅಂತರರಾಷ್ಟ್ರೀಯ ಶಾಲೆ ಹಾಸನ, ಶ್ರೀಮತಿ ಅಶ್ವಿನಿ ಸಿ ಎಲ್ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜು ಹಾಸನ, ಶ್ರೀ ರಮೇಶ್ ಎಂ ಮುಖ್ಯಸ್ಥರು ಕನ್ನಡ ವಿಭಾಗ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು ಹಾಸನ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ನಿರೂಪಿಸಿದರೆ, ಸಂಸ್ಕೃತ ಉಪನ್ಯಾಸಕರಾದ ಗಣೇಶ ಕೆ ಭಟ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ವನ್ಯಶ್ರೀ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
Hassan
ಹಾಸನ: ಸರ್ಕಾರಿ ನೌಕರರ ಕಾಲವಲ್ಲ, ಉದ್ಯಮದಾರರ ಕಾಲ
 
														ಹಾಸನ: “ಪ್ರಸ್ತುತದಲ್ಲಿ ಇದು ಸರಕಾರಿ ನೌಕರರ ಕಾಲವಲ್ಲ. ಸ್ವಂತ ಉದ್ಯೋಗ ಆರಂಭಿಸಲು ಮುಂದಾಗುವವರಿಗೆ ಇದು ಸೂಕ್ತ ಕಾಲವಾಗಿದೆ. ಸರ್ಕಾರ ನೀಡುತ್ತಿರುವ ಯೋಜನೆಗಳ ಸದುಪಯೋಗ ಪಡೆದು ರೈತರು ಹಾಗೂ ಯುವಕರು ಕಿರು ಉದ್ಯಮಗಳತ್ತ ಹೆಜ್ಜೆಯಿಡಬೇಕು” ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೆಪೆಕ್ ಲಿಮಿಟೆಡ್ ಇವರ ಜಂಟಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರಿ ನೌಕರರ ಕಾಲ ಇದಲ್ಲ. ಏನಿದ್ದರೂ ಉದ್ಯಮಿದಾರರ ಕಾಲ, ಫಲಾನುಭವಿಗಳಿಗೆ ಇದರ ಸದುಪಯೋಗ ಪಡೆದು ಕೊಳ್ಳುಬೇಕು. ಈ ಸ್ಕಿಂ ನಲ್ಲಿ ಲೋನ್ ಪಡೆಯಬೇಕೆಂದು ಹೇಳಿದಾಗ ಅವರಿಗೆ ಸಹಾಯ ಮಾಡಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸ ಇಲಾಖೆಯವರು ಮಾಡಬೇಕು. ದೊಡ್ಡ ದೊಡ್ಡ ಉದ್ಯಮ ಬೇರೆ, ಲೋಕಲ್ ಉದ್ಯಮಿಗೆ ಹೆಚ್ಚಿನ ಪವರ್ ಇರುತ್ತದೆ ಎಂದರು.

ಸ್ತ್ರೀ ಶಕ್ತಿ ಗುಂಪುಗಳು ಇನ್ನು ವಯಕ್ತಿಕ ಅನೇಕ ಸಂಸ್ಥೆಗಳು ಚನ್ನಾಗಿ ವ್ಯಾಪಾರ, ವ್ಯವಹಾರ ಮಾಡುತ್ತಾರೆ. ವ್ಯವಸ್ಥಿತವಾಗಿ ಸರಕಾರದ ಸಾಲ ತೆಗೆದುಕೊಂಡು ಶಿಸ್ತು ಬದ್ಧವಾಗಿ ಮಾಡಿದರೇ ಅದರಲ್ಲಿ ಯಶಸ್ವು ಕಾಣಬಹುದು ಎಂದರು. ರೈತರಿಗೆ ಬರೀ ಕೃಷಿಯಲ್ಲೇ ತೃಪ್ತಿ ಸಾಧಿಸುವುದು ಕಷ್ಟ. ಮಾರುಕಟ್ಟೆಯಲ್ಲಿ ಒಳ್ಳೆಯ ಧರ ಸಿಗದಿರುವುದು, ಬೆಳೆ ರೋಗಗಳಿಗೆ ತುತ್ತಾಗುವುದು ಮುಂತಾದ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳು ರೈತರಿಗೆ ಬಲ ತುಂಬುತ್ತವೆ ಎಂದು ಹೇಳಿದರು.
ದೊಡ್ಡ ಉದ್ಯಮಗಳಿಗಿಂತ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಶಕ್ತಿ ಇದೆ. ಸ್ವಸಹಾಯ ಗುಂಪುಗಳು ಹಾಗೂ ವೈಯಕ್ತಿಕ ಸಂಸ್ಥೆಗಳು ಸರ್ಕಾರದ ಸಾಲವನ್ನು ಶಿಸ್ತಿನಿಂದ ಪಡೆದು ವ್ಯವಹಾರ ಮಾಡಿದರೆ ಖಂಡಿತ ಯಶಸ್ಸು ಸಾಧಿಸಬಹುದು ಎಂದು ಅವರು ತಿಳಿಸಿದರು.
- 
																	   Mysore21 hours ago Mysore21 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore6 hours ago Mysore6 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mandya20 hours ago Mandya20 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Hassan24 hours ago Hassan24 hours agoಹೊಳೆನರಸೀಪುರದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದ, ಸುಳ್ಳು ದಾಖಲೆ, ಸುಳ್ಳು ಸಾಕ್ಷಿ : ನಟರಾಜು ಆರೋಪ 
- 
																	   Chikmagalur18 hours ago Chikmagalur18 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 
- 
																	   Hassan20 hours ago Hassan20 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ 
- 
																	   Kodagu3 hours ago Kodagu3 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ 
- 
																	   Hassan2 hours ago Hassan2 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ 

 
											 
											 
											 
											 
											