Connect with us

Mysore

ಮೈಸೂರು ದಸರಾ: 48 ಗಂಟೆಗಳ ಕಾಲ ಕಂಬಳ ಆಯೋಜನೆಗೆ ಸಿದ್ಧತೆ, 150–160 ಕೋಣಗಳ ಜೋಡಿಭಾಗಿ : ಅಶೋಕ್ ರೈ

Published

on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಕಂಬಳ ಆಯೋಜಿಸಲು ಅವಕಾಶ ಕಲ್ಪಿಸಿರುವುದು ಸಂತಸದ ವಿಚಾರ ಎಂದು ಕಂಬಳ ಉಪಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಕಳೆದ ವರ್ಷವೂ ಕಂಬಳ ಆಯೋಜನೆಗೆ ಅವಕಾಶ ದೊರೆತಿದ್ದರೂ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಅಶೋಕ್ ರೈ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಸುಮಾರು 150ರಿಂದ 160 ಕೋಣಗಳ ಜೋಡಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಂದು ಕೋಣದೊಂದಿಗೆ ಸುಮಾರು 50 ಮಂದಿ ಆಗಮಿಸಲಿದ್ದು, ಕೋಣಗಳಿಗೆ ಅಗತ್ಯವಿರುವ ಕುಡಿಯುವ ನೀರು, ಎಸಿ ವ್ಯವಸ್ಥೆ ಹಾಗೂ ಹುಲ್ಲು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಮಾಲೀಕರೇ ವ್ಯವಸ್ಥೆ ಮಾಡಿಕೊಳ್ಳಲಿದ್ದಾರೆ.

ಕಂಬಳದಲ್ಲಿ ವಿಜೇತರಿಗೆ 16 ಗ್ರಾಂ ಚಿನ್ನ ಬಹುಮಾನವಾಗಿ ನೀಡಲಾಗುವುದು. ಆದರೆ ಚಿನ್ನದ ಬಹುಮಾನಕ್ಕಾಗಿ ಕಂಬಳದ ಕೋಣಗಳು ಭಾಗವಹಿಸುವುದಿಲ್ಲ. ಗೌರವಕ್ಕಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅಶೋಕ್ ರೈ ಹೇಳಿದ್ದಾರೆ.

ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಯಾದ ಕಂಬಳವನ್ನು ಮೈಸೂರಿನ ಜನರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರಿಗೆ ಕಂಬಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಎರಡು ದಿನಗಳ ಕಾಲ, ಒಟ್ಟು 48 ಗಂಟೆ ನಿರಂತರವಾಗಿ ಕಂಬಳ ನಡೆಯಲಿದೆ.

ಒಂದು ಕೋಣಕ್ಕೆ ₹65 ಸಾವಿರ ನೀಡಲಾಗುವುದು. ಮುಖ್ಯಮಂತ್ರಿ ಕಂಬಳವನ್ನು ಉದ್ಘಾಟಿಸಲಿದ್ದು, ವಿದೇಶಿ ಪ್ರತಿನಿಧಿಗಳಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಕಂಬಳ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.

ಕಂಬಳ ಆಯೋಜನೆಗೆ ಸುಮಾರು ₹4ರಿಂದ ₹5 ಕೋಟಿ ವೆಚ್ಚವಾಗುವ ನಿರೀಕ್ಷೆಯಿದ್ದು, ಖರ್ಚು-ವೆಚ್ಚದ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ರಾಜಮನೆತನದ ವಿರೋಧದ ಕುರಿತು ಪ್ರತಿಕ್ರಿಯಿಸಿದ ಅಶೋಕ್ ರೈ, ಈ ಬಗ್ಗೆ ಮಹಾರಾಜರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ಅರಮನೆ ಆವರಣದಲ್ಲಿ ಕಂಬಳ ಆಯೋಜನೆಗೆ ಮಹಾರಾಣಿ ಅವರು ಆರಂಭದಲ್ಲಿ ಅವಕಾಶ ನೀಡಿರಲಿಲ್ಲ. ಬಳಿಕ ಅವಕಾಶ ನೀಡಿದ್ದರು. ಇದೀಗ ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಕಂಬಳಕ್ಕೆ ಆಹ್ವಾನ ನೀಡುವ ಉದ್ದೇಶವಿದೆ. ಅವಕಾಶ ಸಿಕ್ಕರೆ ಭೇಟಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ದಸರಾಕ್ಕೆ ಆಗಮಿಸುವ ಎಲ್ಲರಿಗೂ ಕಂಬಳ ವೀಕ್ಷಿಸುವ ಅವಕಾಶ ಕಲ್ಪಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

Continue Reading

Mysore

ಶ್ರೀಮಂತ ಮನೆಯಲ್ಲಿ ಹುಟ್ಟಿದ್ರೆ ನಾಯಕರಾಗಲ್ಲ : ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ದೃನಾರಾಯಣ್ ಹೇಳಿಕೆ

Published

on

ನಂಜನಗೂಡು :  ದೇಶಕ್ಕೆ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಕೊಡುಗೆ ಅಪಾರ ಮತ್ತು ಅನನ್ಯ, ಅವರ ತತ್ವ ಸಿದ್ಧಾಂತ ಮತ್ತು ಸಾಧನೆಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆ ಎಂದು ಕ್ಷೇತ್ರದ ಜನಪ್ರಿಯ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ಇಂದು ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಮಹಾತ್ಮ ಗಾಂಧಿಯ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ತಕ್ಷಣ ನಾಯಕರಾಗಲು ಸಾಧ್ಯವಿಲ್ಲ. ಮಹಾತ್ಮಾ ಗಾಂಧೀಜಿಯವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಸೌತ್ ಆಫ್ರಿಕಾದಲ್ಲಿ ಅನುಭವಿಸಿದ ನೋವು, ಬಾಂಬೆಯಲ್ಲಿ ವಕೀಲಿ ವೃತ್ತಿಯಲ್ಲಿ ಆದ ಅನುಭವವನ್ನೆಲ್ಲ ಕ್ರೋಢೀಕರಿಸಿ ನಾಯಕತ್ವ ಬೆಳೆಸಿಕೊಂಡರು. ಸಮಾಜದಲ್ಲಿ ಎಲ್ಲಿ ನೋವಿದೆಯೋ, ಯಾರಿಗೆ ತುಳಿತವಾಗುತ್ತಿದೆಯೋ ಅವರ ಕೈಹಿಡಿದು ಎತ್ತುವ ಕೆಲಸ ಮಾಡುವವನೇ ನಿಜವಾದ ನಾಯಕ.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಾತ್ಯತೀತ ಮೌಲ್ಯ ಎತ್ತಿ ಹಿಡಿದವರು. ಮೂಲ ಹೆಸರಾದ ಶ್ರೀವಾಸ್ತವ ಎಂಬ ಜಾತಿ ಸೂಚಕ ಹೆಸರನ್ನು ಬಿಟ್ಟು ‘ಶಾಸ್ತ್ರಿ’ ಎಂಬ ಬಿರುದನ್ನು ಇಟ್ಟುಕೊಂಡರು. ರೈಲ್ವೇ ಮಂತ್ರಿಯಾಗಿದ್ದಾಗ ರೈಲು ಅಪಘಾತವಾದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದ ಅವರ Accountability, Transparency ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

ತಹಸಿಲ್ದಾರ್ ಸ್ಮಿತಾ ರಾಮು ಕೂಡ ಮಾತನಾಡಿ, ಗಾಂಧೀಜಿ ನನ್ನ ಹೆಸರು ಶಕ್ತಿ ಮತ್ತು ಪ್ರೇರಣೆ ಪ್ರತೀಕ. ನಾವು ಬಾಲ್ಯದಲ್ಲಿದ್ದಾಗ ಗಾಂಧೀಜಿಯ ಇಂತಿ ಎಂದು ಗಾಂಧಿವೇಶ ದಾರಿಗಳ ವೇಶ ಭೂಷಣ ಶಾಲೆಗಳಲ್ಲಿ ಕಾಣಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಕಣ್ಮರೆಯಾಗಿದೆ. ದೇಶಕ್ಕೆ ಗಾಂಧೀಜಿಯವರ ಕೊಟ್ಟ ಕೊಡುಗೆ ನಾವು ಸ್ಮರಿಸಬೇಕು. ಮಕ್ಕಳು ಮತ್ತು ಯುವ ಪೀಳಿಗೆಗೆ ಗಾಂಧಿ ತತ್ವ ಸಿದ್ಧಾಂತಗಳ ಬಗ್ಗೆ ತಿಳಿ ಹೇಳುವ ಕೆಲಸವನ್ನು ಪೋಷಕರು ಮತ್ತು ನಾವುಗಳು ಇಂತಹ ಕಾರ್ಯಕ್ರಮಗಳಲ್ಲಿ ಮಾಡಬೇಕು. ಸ್ವಾತಂತ್ರ್ಯ ತಂದುಕೊಡಲು ಅವರು ನಡೆಸಿದ ಹೋರಾಟದ ಪರಿಣಾಮ ನಾವು ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದೇವೆ ಇಂದು ಮಹಾತ್ಮ ಗಾಂಧೀಜಿ ಅವರ ಗುಣಗಾನ ಮಾಡಿದರು.

ಮುಖ್ಯ ಭಾಷಣಕಾರರಾದ ನಂಜುಂಡಯ್ಯ ಮಾತನಾಡಿ ಮಹಾತ್ಮ ಗಾಂಧಿಯ ಜೀವನ ಚರಿತ್ರೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಡಲೆಕಾಯಿ:

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಟೀ, ಕಾಫಿ, ಬಿಸ್ಕೆಟ್ ವಿತರಣೆ ಬದಲು ಶಾಸಕರು, ಗಣ್ಯರು ಮತ್ತು ಆಹ್ವಾನಿತರಿಗೆ ಕಡಲೆಕಾಯಿ ಹಾಗೂ ಬಿಸ್ಲೇರಿ ನೀರು ವಿಶೇಷತೆಯಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ , ತಹಸೀಲ್ದಾರ್ ಸ್ಮಿತಾ ರಾಮು , EO ಜೆರಾಲ್ಡ್ ರಾಜೇಶ್ , ನಗರಸಭೆ ಆಯುಕ್ತರು ಬಸವರಾಜು, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ , ದೇವಸ್ಥಾನ ವ್ಯವಸ್ಥಾನ ಸಮಿತಿ ಅಧ್ಯಕ್ಷ ಬಸವೇಗೌಡ, ಕಂದಾಯ ಇಲಾಖೆ ರಾಜು, ವಿಎ ಶಿವಕುಮಾರ್, ಮಾಜಿ ನಗರಸಭೆ ಸದಸ್ಯರಾದ ಗಾಯತ್ರಿ ಮೋಹನ್ , ಮುಖಂಡರುಗಳಾದ ಮಂಜುನಾಥ್ , ಶ್ರೀಧರ್ , ಗೋವಿಂದ ರಾಜ್ , ಕಳಲೆ ರಾಜೇಶ್, ಕರಳಪುರ ವಿಜಯ್, ಸೇರಿದಂತೆ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಹಾಜರಿದ್ದರು.

 ವರದಿ: ಮಹದೇವಸ್ವಾಮಿ ಪಟೇಲ್

Continue Reading

Mysore

SIR ವಿಚಾರ: ಆರ್‌ಎಸ್‌ಎಸ್ ಕಚೇರಿಯಲ್ಲೇ ಫಾರಂ-7 ಮುದ್ರಣ, ಮತ ಡಿಲೀಟ್‌ಗೆ ಸಂಚು: ತನ್ವೀರ್ ಸೇಠ್ ಆರೋಪ

Published

on

ಮೈಸೂರು: SIR ಪ್ರಕ್ರಿಯೆ ವಿಚಾರವಾಗಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿದ್ದಾರೆ. ಆರ್‌ಎಸ್‌ಎಸ್ ಕಚೇರಿಯಲ್ಲೇ ಫಾರಂ ನಂಬರ್-7 ಮುದ್ರಣವಾಗುತ್ತಿದ್ದು, ಅಲ್ಲಿಂದ ನೇರವಾಗಿ ಬಿಜೆಪಿಯವರ ಕೈಗೆ ಫಾರಂಗಳು ತಲುಪಿವೆ ಎಂದು ಆರೋಪಿಸಿದರು.

ಆರ್‌ಎಸ್‌ಎಸ್ ನಿರ್ದೇಶನದಂತೆ ಮತಗಳನ್ನು ಡಿಲೀಟ್ ಮಾಡುವ ಸಂಚು ನಡೆದಿದೆ. ಇದಕ್ಕೆ ಬಿಜೆಪಿ ಮಾತೃ ಸಂಸ್ಥೆಯೇ ಕಾರಣ ಎಂದು ತನ್ವೀರ್ ಸೇಠ್ ಆರೋಪಿಸಿದರು.

ಎನ್.ಆರ್ ಕ್ಷೇತ್ರದಲ್ಲಿ ಇದುವರೆಗೆ ಸುಮಾರು 10 ಸಾವಿರ ಮತಗಳನ್ನು ಡಿಲೀಟ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿವೆ. ಕ್ಷೇತ್ರ ಅಥವಾ ವಾರ್ಡ್‌ಗೆ ಸಂಬಂಧವೇ ಇಲ್ಲದವರಿಂದಲೂ ಅರ್ಜಿಗಳು ಬಂದಿವೆ. ಪ್ರತಿ ಬೂತ್‌ನಲ್ಲಿ 100ರಿಂದ 150 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ದಲಿತರು ಹಾಗೂ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಚಿಕ್ಕಮಗಳೂರು ಕ್ಷೇತ್ರದ ಮತದಾರರನ್ನು ಎನ್.ಆರ್ ಕ್ಷೇತ್ರಕ್ಕೆ ಸೇರ್ಪಡೆಗೊಳಿಸುವ ಯೋಜನೆ ನಡೆದಿದೆ ಎಂಬ ಅನುಮಾನವಿದೆ. ತಮಗೆ ಬೇಕಾದವರ ಹೆಸರು ಸೇರ್ಪಡೆ ಮಾಡುವುದು, ಬೇಡವಾದವರ ಹೆಸರು ಡಿಲೀಟ್ ಮಾಡಿಸುವುದು ಬಿಜೆಪಿಯ ಯೋಜನೆ ಎಂದು ತನ್ವೀರ್ ಸೇಠ್ ಆರೋಪಿಸಿದರು.

ಪ್ರಮೋದಾದೇವಿ ಒಡೆಯರ್‌ಗೆ ದಸರಾ ಆಹ್ವಾನ

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಸಂಪ್ರದಾಯದಂತೆ ದಸರಾ ಮಹೋತ್ಸವಕ್ಕೆ ಆಹ್ವಾನ ನೀಡಿದ್ದೇವೆ. ಅವರು ಸಂತೋಷದಿಂದ ಆಹ್ವಾನ ಸ್ವೀಕರಿಸಿದ್ದು, ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅವರಿಂದ ಯಾವುದೇ ಸಲಹೆ ಕೇಳಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಯುವ ಸಂಭ್ರಮದಲ್ಲಿ ಅಧಿಕಾರಿಗಳ ರೀಲ್ಸ್ ವಿಚಾರ

ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಅಧಿಕಾರಿಗಳೇ ರೀಲ್ಸ್ ಮಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, “ಹೌದಾ?” ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Continue Reading

Mysore

ದಸರಾ ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‌ಗೆ ಅಧಿಕೃತ ಆಹ್ವಾನ

Published

on

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮೈಸೂರು ಅರಮನೆಗೆ ಭೇಟಿ ನೀಡಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಆಹ್ವಾನ ಪತ್ರಿಕೆ ನೀಡಿ ದಸರಾ ಮಹೋತ್ಸವಕ್ಕೆ ಆಮಂತ್ರಿಸಿದರು.

ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ರಾಜಮಾತೆ ಅವರಿಗೆ ಜಿಲ್ಲಾಡಳಿತದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Continue Reading

Trending

error: Content is protected !!