Connect with us

Mysore

3.53 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ,  ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ: ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಇಂದು ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್ ಟಿ ಸಮುದಾಯದ ರಸ್ತೆ ಅಭಿವೃದ್ಧಿ, ಆಟೋ ನಿಲ್ದಾಣ ಹಾಗೂ ಕುರಿಹುಂಡಿ ಗ್ರಾಮಕ್ಕೆ ತೆರಳುವ ಬಸ್ ತಂಗುದಾಣ ಸೇರಿದಂತೆ ಬೆಳಲೆ, ಮೊಬ್ಬಳ್ಳಿ, ಗೀಕಳ್ಳಿ ಹುಂಡಿ, ಕೋಡಿ ನರಸಿಪುರ, ದೊಡ್ಡ ಕವಲಂದೆ, ದೇವನೂರು, ನಂಜನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಷ್ಟಾಪನೆ ನೆರವೇರಿಸಿ ಹುಲ್ಲಹಳ್ಳಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಚಿವರಾಗಿರುವಂತಹ ಪ್ರಿಯಾಂಕ ಖರ್ಗೆ ರವರು ವಿಶೇಷ ಕಾಳಿಜಿ ವಹಿಸಿ ಎಸ್‌ಟಿಪಿ ಅನುದಾನ 50 ಲಕ್ಷ ಬಿಡುಗಡೆಯಾಗಿದೆ. ಕಾಲೇಜು ಕಟ್ಟಡವನ್ನು ಇವತ್ತು ಶಂಕುಸ್ಥಾಪನೆ ಮಾಡಿದ್ದೇವೆ.

ವಿಶೇಷ ಅನುದಾನ ಕೊಡಿಸುವಲ್ಲಿ ಪ್ರಿಯಾಂಕ ಖರ್ಗೆ ಪಾತ್ರವಿದ್ದು ಮುಖ್ಯಮಂತ್ರಿ ಅನುದಾನ ಸಚಿವರುಗಳ ಸಾಕಾರದಿಂದ ಕಾಲೇಜು ಕಟ್ಟಡ ಭೂಮಿ ಪೂಜೆ ಮಾಡಿದ್ದೇವೆ.

ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ಇಂದು ಒಂದೇ ದಿನ ತಾಲೂಕಿನ ಹಲವು ಗ್ರಾಮಗಳಲ್ಲಿ 3.53 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಕಳೆದ ವರ್ಷವೂ 20 ಕೋಟಿ ವೆಚ್ಚದಲ್ಲಿ ಹುಲ್ಲಹಳ್ಳಿ ಗ್ರಾಮದಿಂದ ದುಗ್ಗಹಳ್ಳಿ ಗೇಟ್ ವರೆಗೆ ಡಾಂಬರೀಕರಣ ಮಾಡಲು ಚಾಲನೆ ನೀಡಲಾಗಿತ್ತು.

ಈಗಾಗಲೇ ಈ ವರ್ಷವೂ ಕೂಡ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಅನುದಾನಗಳನ್ನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಎರಡು ವರ್ಷದಲ್ಲಿ ಅನುದಾನ ತಂದು ಅಭಿವೃದ್ಧಿ ಕೆಲಸಗಳು ಆಗಿವೆ. ಇನ್ನು ಮುಂದೇನು ಸಹ ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಶಿವನಂಜ ನಾಯಕ, ಹುಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಮ್ಮ, ಉಪಾಧ್ಯಕ್ಷ ಲೋಕೇಶ್, ಬೆಳಲೆ ಮಹೇಶ್, ಗುರುಸ್ವಾಮಿ, ಜಯಮಾಲ ಬೀರೇಗೌಡ, ಕುರಿಹುಂಡಿ ರಾಜಣ್ಣ, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಕರಳಪುರ ವಿಜಯ್, ಪ್ರಕಾಶ್, ಪ್ರಸಾದ್, ಕುರಹಟ್ಟಿ ಮಹೇಶ್, ಹಾಡ್ಯ ಆದರ್ಶ್, ಬದನವಾಳು ಸೋಮು, ಚಂದನ್ ಗೌಡ, ಶಂಕರಪುರ ಬಾಲರಾಜ್, ಕರಳಪುರ ನಾಗರಾಜ್ , ಗುತ್ತಿಗೆದಾರ ನಂಜನಹಳ್ಳಿ ಮಾದಪ್ಪ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.

Continue Reading

Mysore

ಪ್ರಜಾಪ್ರಭುತ್ವ ಸಂರಕ್ಷಣೆಗೆ ಉಪರಾಷ್ಟ್ರಪತಿ ಕೊಡುಗೆ: ಸಂಸದ ಯದುವೀರ್ ವಿಶ್ವಾಸ

Published

on

ಮೈಸೂರು: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂರಕ್ಷಣೆ ತೋರುವ ವಿಶ್ವಾಸವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳನ್ನು ಪಡೆದಿರುವ ರಾಧಾಕೃಷ್ಣನ್‌ ಅವರು 300 ಮತಗಳನ್ನು ಪಡೆದಿರುವ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್‌ ರೆಡ್ಡಿ ವಿರುದ್ಧ ಜಯಗಳಿಸಿದ್ದಾರೆ.

ರಾಧಾಕೃಷ್ಣನ್‌ ಅವರಿಗೆ ಸಂಸದರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

“ರಾಧಾ ಕೃಷ್ಣನ್ ಅವರ ಆಯ್ಕೆ ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಬಲಿಷ್ಠತೆಗೆ ಸಾಕ್ಷಿಯಾಗಿದೆ. ಅವರ ಗೆಲುವು ಅವರ ನಾಯಕತ್ವ, ಸಮಗ್ರತೆ ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆ ತೋರುವ ಅವರ ಅಚಲ ನಂಬಿಕೆಗೆ ಮತ್ತಷ್ಟು ಮೆರುಗು ದೊರೆತಿದೆ” ಎಂದು ಯದುವೀರ್ ಒಡೆಯರ್ ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.

“ಉಪರಾಷ್ಟ್ರಪತಿಯಾಗಿ ರಾಧಾ ಕೃಷ್ಣನ್ ಸಂಸತ್ತಿನ ಘನತೆಯನ್ನು ಎತ್ತಿಹಿಡಿಯುವಲ್ಲಿ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅನುಭವ ಮತ್ತು ದೃಷ್ಟಿಕೋನವು ದೇಶವನ್ನು ಸಮಗ್ರ ಬೆಳವಣಿಗೆ ಮತ್ತು ಸ್ಥಿರತೆಯತ್ತ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ರಾಧಾಕೃಷ್ಣನ್‌ ಅವರ ನಾಯಕತ್ವ ಅತ್ಯಂತ ಮಹತ್ತದ್ದಾಗಿದ್ದು, ಮೌಲ್ಯಯುತವೂ ಆಗಿದೆ ಎಂದು ತಿಳಿಸಿದ್ದಾರೆ.

“ನಿಷ್ಠೆ, ಜವಾಬ್ದಾರಿ ಮತ್ತು ಸಮರ್ಪಣಾ ಭಾವನೆ ಹೊಂದಿರುವ ರಾಧಾಕೃಷ್ಣನ್‌ ದೇಶ ಸೇವೆಯಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Continue Reading

Mysore

ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 4.54 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ: ಬಿ.ಎಸ್. ರವೀಂದ್ರ ಕುಮಾರ್

Published

on

ತಿ.ನರಸೀಪುರ: ತಾಲೂಕಿನ ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 4.54 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ರವೀಂದ್ರ ಕುಮಾರ್ ಹೇಳಿದರು.

ಸಂಘದ ಆವರಣದಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಈ ಸಾಲಿನಲ್ಲಿ ಸಂಘವು ರೈತರಿಗೆ 4.41ಕೋಟಿ ರೂ. ಕೆಸಿಸಿ ಸಾಲ, 49 ಲಕ್ಷ ರೂಗಳ ವ್ಯಾಪಾರ ಸಾಲವನ್ನು ನೀಡಿದೆ. ಎಲ್ಲ ರೈತರು ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡುತ್ತಿದ್ದಾರೆ. ಆದರೆ ಇದರಲ್ಲಿ 28 ರೈತರು ಮಾತ್ರ ಸಕಾಲದಲ್ಲಿ ಸಾಲ ಮರು ಪಾವತಿ ಮಾಡುತ್ತಿಲ್ಲ. ಹಾಗಾಗಿ ಸುಸ್ತಿದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡದಿದ್ದಲ್ಲಿ ಸಂಘವನ್ನೇ ಸುಸ್ತಿದಾರ ಸಂಘವೆಂದು ಪರಿಗಣಿಸಿ ನಮ್ಮ ಜಿಲ್ಲಾ ಸಹಕಾರ ಬ್ಯಾಂಕ್ ನಿಂದ ಸಿಗುವ ಸಾಲ ಮತ್ತು ಇನ್ನಿತರೆ ಸೌಲಭ್ಯಗಳಿಂದ ವಂಚಿತವಾಗುತ್ತದೆ. ಇದುವರೆಗೂ 488 ರೈತರಿಗೆ ಸಾಲ ನೀಡಿದ್ದು, ಸಾಲ ನೀಡಿಕೆಯಲ್ಲಿ ಯಾವುದೇ ರಾಜಕೀಯ ಪ್ರಭಾವ ಬಳಸಲ್ಲ. ರೈತರಿಗೆ ಸರ್ಕಾರದ ಸೌಲಭ್ಯ ನೀಡುವುದು ನಮ್ಮ ಸಂಘದ ಉದ್ದೇಶ ಎಂದರು.

ವ್ಯವಸಾಯ ಈ ಭಾಗದ ಮೂಲ ವೃತ್ತಿ. ಬೇಸಾಯಕ್ಕೆ ಬೆಂಬಲವಾಗಿ ರೈತರು ನಿಲ್ಲಬೇಕು. ಯಾವ ಯಾವ ರೈತರಿಗೆ ಸಾಲ ಸೌಲಭ್ಯ ಅವಶ್ಯವಿದೆಯೋ ಅಂತಹ ರೈತರನ್ನು ಪಟ್ಟಿ ಮಾಡಲಾಗಿದೆ. ಜಿಲ್ಲಾ ಬ್ಯಾಂಕ್ ನಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಸಕಾಲದಲ್ಲಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಬ್ಯಾಂಕ್ ಆಡಳಿತ ಮಂಡಳಿ ರಚನೆಯಾದ ಬಳಿಕ ಅವಶ್ಯಕತೆಯಿರುವ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ಜತೆಗೆ ಅವಶ್ಯಕತೆ ಇರುವವರಿಗೆ ಯಶಸ್ವಿನಿ ಯೋಜನೆ, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಕೆ. ನಾರಾಯಣ, ನಿರ್ದೇಶಕರಾದ ಚಿಕ್ಕಸ್ವಾಮಿ, ಧರ್ಮಲಿಂಗು,ಬಿ.ಎಂ.ರಮೇಶ್,ಲೋಕೇಶ್, ಆರ್.ರವಿಕುಮಾರ್, ಮಾಯಿಗೌಡ, ಕೆ.ಬಸವರಾಜು, ಜ್ಯೋತಿ,ಸಾರಿಕಾ,ಹೇಮಂತ್ ಕುಮಾರ್,ಸಂಘದ ಕಾರ್ಯದರ್ಶಿ ಆರ್.ಶೋಭಾ, ಸಿಬ್ಬಂದಿ ಸಿ.ಭಾಸ್ಕರ್, ಎಂ.ಮಂಜುಳಾ, ಪಿ.ಮಂಜುನಾಥ್ ಇತರರು ಹಾಜರಿದ್ದರು.

Continue Reading

Mysore

ಕೆ.ಆರ್‌.ನಗರ: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ರವಿಶಂಕರ್‌

Published

on

ಕೃಷ್ಣರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಂದು ಪ್ರೌಢಶಾಲಾ ಮಟ್ಟದ ಮಕ್ಕಳಿಗೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಈ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕಿನ ಜನಪ್ರಿಯ ಶಾಸಕ ರವಿಶಂಕರ್ ಅವರು ಪಾಲ್ಗೊಂಡಿದ್ದರು.

ಈ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪನವರು ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು.

ಈ  ಕಾರ್ಯಕ್ರಮದ ಆಯೋಜಕರಾದ ದಾಯಾನಂದ ಪ್ರೌಢಶಾಲೆ ದೈಹಿಕ ಶಿಕ್ಷಕ ಕೃಷ್ಣೇಗೌಡ ಹಾಜರಿದ್ದರು. ಒಂದು ಕಾರ್ಯಕ್ರಮದಲ್ಲಿ 100 ಮೀಟರ್ ಓಟ 200 ಮೀಟರ್ ಓಟ ಮತ್ತು ಗುಂಡು ಎಸೆತ ಡಿಸ್ಕಸ್ ತ್ರೋ ವಾಲಿಬಾಲ್ ಥ್ರೋ ಬಾಲ್ ಮುಂತಾದ ಕ್ರೀಡೆಗಳು ನಡೆಯುತ್ತಿದ್ದವು.

Continue Reading

Trending

error: Content is protected !!