Connect with us

Kodagu

ಕುಶಾಲನಗರ| ಕಾಲೇಜಿನಲ್ಲಿ ಮಾರಕಾಸ್ತ್ರ ಹಿಡಿದು ರಿಲ್ಸ್: ವಿದ್ಯಾರ್ಥಿ ವಿರುದ್ಧ ಎಫ್‌ಐಆರ್‌ ದಾಖಲು

Published

on

ಕುಶಾಲನಗರ: ನಗರದ  ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಾರಕಾಸ್ತ್ರ ಹಿಡಿದು ರಿಲ್ಸ್ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿದ್ಯಾರ್ಥಿ ವಿರುದ್ದ ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಕಾಲೇಜಿನೊಳಗೆ ಲಾಂಗ್ ಹಿಡಿದು ರಿಲ್ಸ್ ಮಾಡಿದ್ದ, ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ಪ್ರಾಂಶುಪಾಲರು ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಕೂಡ ಅಸಮಧಾನ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣ ನಿಗಾವಹಿಸಿದ ಪೊಲೀಸರು ನೀಡಿದ ದೂರಿನ ಮೇರೆಗೆ ಇಂದು ರಿಲ್ಸ್ ಮಾಡಿದ್ದ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು ಮಾಡಿ ಪೊಲೀಸರು ಮುಂದಿನ ಕ್ತಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಾದ‌ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿದ್ದಾನೆ.

Continue Reading

Kodagu

ತಾಲೂಕು ಮಟ್ಟದ ಪಂದ್ಯಾಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಂತ ಅಂತೋಣಿ ಪ್ರೌಢ ಶಾಲೆ ವಿದ್ಯಾರ್ಥಿಗಳು

Published

on

ಪೊನ್ನಂಪೇಟೆ: ನಗರದ ಸಂತ ಅಂತೋಣಿ ಪ್ರೌಢ ಶಾಲೆ ಬಾಲಕ ಬಾಲಕಿಯರ ಬ್ಯಾಡ್ ಮಿಂಟನ್ ತಂಡವು ತಾಲೂಕು ಮಟ್ಟದ ಪಂದ್ಯಾಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ .

ಈ ತಂಡವನ್ನು ಪವನ್ ಮತ್ತು  ಪೌಶಿಕ ಅವರು ಉಸ್ತುವಾರಿಗಳಾಗಿ ತಂಡವನ್ನು ಮುನ್ನಡೆಸಿದರು.

Continue Reading

Kodagu

ವಿರಾಜಪೇಟೆ ಸುತ್ತಮುತ್ತ ಸೆ.11 ರಂದು ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : 66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-3 ಕೆ.ಎಸ್.ಆರ್.ಟಿ.ಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್ಗಳಲ್ಲಿ ಸೆಪ್ಟೆಂಬರ್. 11 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಫೀಡರ್ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ಮೀನುಪೇಟೆ, ಸುಣ್ಣದ ಬೀದಿ, ಖಾಸಗಿ ಬಸ್ ನಿಲ್ದಾಣ, ಪೋಲಿಸ್ ಸ್ಠೇಷನ್ ಹಿಂಬಾಗ, ಆರ್ಜಿ, ಪೆರಂಬಾಡಿ, ಹೆಗ್ಗಳ, ತೋರ, ರಾಮನಗರ, ಬಟ್ಟಮಕ್ಕಿ, ಎಡಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Kodagu

ಮಡಿಕೇರಿಯ ವಿವಿಧೆಡೆ ಸೆ.10 ರಂದು ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : 66/11ಕೆ.ವಿ ಮಡಿಕೇರಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್12 ರಾಜಾಸೀಟ್ ಫೀಡರ್‌ನಲ್ಲಿ ಸೆಪ್ಟೆಂಬರ್. 10 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆಯವರೆಗೆ ದಸರಾ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಆದ್ದರಿಂದ ಡಿ.ಸಿ ಕಚೇರಿ, ರಾಜಸೀಟ್ ರಸ್ತೆ, ಇಂದಿರಾನಗರ, ಚಾಮುಂಡೇಶ್ವರಿನಗರ, ನ್ಯೂ ಎಕ್ಸಟೆಂಕ್ಷನ್, ಎಲ್.ಐ.ಸಿ ರಸ್ತೆ, ಸ್ಟುವರ್ಟ್ ಹಿಲ್, ಗೌಳಿ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Trending

error: Content is protected !!