Connect with us

Chikmagalur

ವಸತಿ, ನಿವೇಶನ ರಹಿತರ ಜನಾಂದೋಲನಕ್ಕೆ ನಿರ್ಧಾರ: ಕಮ್ಯುನಿಸ್ಟ್‌ ಪಕ್ಷ

Published

on

ಚಿಕ್ಕಮಗಳೂರು: ದೆಹಲಿಯಲ್ಲಿ ನಡೆದ ರೈತ ಚಳವಳಿ ಮಾದರಿಯಲ್ಲಿ ನಿವೇಶನ ಮತ್ತು ವಸತಿ ರಹಿತರ ರಾಜ್ಯಮಟ್ಟದ ಜನಾಂದೋಲನ ರೂಪಿಸಲು ಭಾರತ ಕಮ್ಯುನಿಸ್ಟ್ ಪಕ್ಷ ನಿರ್ಧರಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಈ ಮಾಹಿತಿ ನೀಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ರಾಜ್ಯದಲ್ಲಿ 7 ಲಕ್ಷ ಜನ ನಿವೇಶನ ರಹಿತರು ಹಾಗೂ 26 ಲಕ್ಷ ಜನ ವಸತಿ ರಹಿತರು ಇದ್ದಾರೆ ಎಂದರು.

ಪಕ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆಯೇ ಭೂಮಿ ಮತ್ತು ವಸತಿ ರಹಿತರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ನಡೆಸಿದ್ದು, ಈಗ ಇದನ್ನು ರಾಜ್ಯಕ್ಕೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಪಕ್ಷದ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಪಂಜಾಬಿನ ಚಂಡಿಗಡದಲ್ಲಿ ನಡೆಯಲಿದ್ದು, ಬಹುತೇಕ ದಕ್ಷಿಣ ರಾಜ್ಯಗಳಲ್ಲಿಯೇ ನಡೆಯುತ್ತಿದ್ದ ಸಮ್ಮೇಳನವನ್ನು ಈ ಬಾರಿ ಉತ್ತರ ರಾಜ್ಯಕ್ಕೆ ವಿಸ್ತರಿಸಲಾಗಿದೆ ಎಂದರು.

ಪಂಜಾಬ್ , ಬಿಹಾರ,ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಾತಿ ಧ್ರುವೀಕರಣ ಇತರೆ ಕಾರಣಗಳಿಂದ ಪಕ್ಷ ಹಿನ್ನಡೆ ಅನುಭವಿಸಿದ್ದು, ರಾಷ್ಟ್ರೀಯ ಸಮ್ಮೇಳನ ಪಕ್ಷವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಿದೆ ಎಂದು ಹೇಳಿದರು.

ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಆರ್ಥಿಕ ಅಸಮಾನತೆಯ ,ಸಾಮಾಜಿಕ ನ್ಯಾಯ, ಕುಸಿದಿರುವ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಜನಪರ ದಿಕ್ಕಿಗೆ ತರುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ಚರ್ಚಿಸಿದೆ ಎಂದರು .

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ, ರಾಜ್ಯದ ಯುವಜನರ ಉದ್ಯೋಗ ಭದ್ರತೆಗೆ ಆಗ್ರಹಿಸಲು, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ ಖಾತ್ರಿಪಡಿಸಲು, ದಲಿತ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಲು, ಕಾರ್ಮಿಕ ವರ್ಗದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದರು.

Continue Reading

Chikmagalur

ಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ

Published

on

ಚಿಕ್ಕಮಗಳೂರು: ಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ ಆಯೋಜಿಸಲಾಗಿತ್ತು.

ಆಗಸ್ಟ್‌. ರಂದು ಪ್ರತಿಷ್ಠಾನೆಗೊಂಡು ಸೆ.7 ರಂದು ಅದ್ದೂರಿ ಮೆರವಣಿಗೆಯೊಂದಿಗೆ ಶ್ರೀ ವಿದ್ಯಾ ಗಣಪತಿ ವಿಸರ್ಜನೆ ಮಾಡಲಾಯಿತು.

ಗೊರಿಲ್ಲಾ tabolo ಹಾಗೂ ನಾಸಿಕ್ ಡೋಲ್‌ಗಳೊಂದಿಗೆ ಮೆರವಣಿಗೆ ಸಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತಜನರು ಪಾಲ್ಗೊಂಡಿದ್ದು, ಅದರೊಂದಿಗೆ ಕ್ರೀಡಾಕೂಟ , ಲಕ್ಕಿ ಡ್ರಾ ಬಹುಮಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.

Continue Reading

Chikmagalur

 ಬಾಳೆಹೊನ್ನೂರು: ದುರ್ಗಾದೇವಿ ವಿಗ್ರಹ ನಿರ್ಮಾಣಕ್ಕೆ ಚಾಲನೆ

Published

on

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸುವ ಶ್ರೀ ದುರ್ಗಾಪರಮೇಶ್ವರಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ  ಭಾನುವಾರ ರೇಣುಕನಗರದ ಶ್ರೀಶಾಸ್ತ ಕಲಾಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಈ ಕುರಿತು ಮಾಹಿತಿ ನೀಡಿ, ಸೆ.22 ರಿಂದ ಅ.2ರವರೆಗೆ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುವುದು. ಪ್ರತೀ ವರ್ಷದಂತೆ ಈ ವರ್ಷವೂ ಹನ್ನೊಂದು ದಿನಗಳ ಪರ್ಯಂತ ನವರಾತ್ರಿ ಮಹೋತ್ಸವ ನಡೆಯಲಿದ್ದು, ಜಿಲ್ಲೆಯಲ್ಲಿ ಅತೀ ದೊಡ್ಡ ನಾಡಹಬ್ಬ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.
ಹನ್ನೊಂದು ದಿನಗಳ ಪರ್ಯಂತ ದುರ್ಗಾದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ತ್ರಿಕಾಲ ಪೂಜೆ, ನಿತ್ಯ ಸಂಜೆ ವೈವಿದ್ಯಮಯ ಧರ್ಮ, ಕಲೆ, ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ದುರ್ಗಾ ಮಂಟಪದಲ್ಲಿ ನಡೆಯಲಿವೆ.
ಆಯುಧಪೂಜೆ ದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಜಯದಶಮಿಯ ಅಂತಿಮ ದಿನ ವಿವಿಧ ಆಕರ್ಷಣೆಗಳೊಂದಿಗೆ ಹದಿನೈದಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ವೈಭವಯುತವಾದ ಮೆರವಣಿಗೆ ನಡೆಸಲಾಗುವುದು. ಕಳೆದ ವರ್ಷದಿಂದ ದುರ್ಗಾ ಸಮಿತಿಯ ವತಿಯಿಂದ ಭದ್ರಾನದಿಗೆ ಕಾಶಿ ಗಂಗಾರತಿ ಮಾದರಿಯಲ್ಲಿ ಭದ್ರಾ ಆರತಿಯನ್ನು ಧಾರ್ಮಿಕ ವಿಧಿಗಳೊಂದಿಗೆ ನಡೆಸಿ, ಭದ್ರಾನದಿಯಲ್ಲಿ ದುರ್ಗಾದೇವಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಸದಸ್ಯರಾದ ನಾರಾಯಣಶೆಟ್ಟಿ ತುಪ್ಪೂರು, ಬಿ.ಜಗದೀಶ್ಚಂದ್ರ, ವಿಗ್ರಹ ಶಿಲ್ಪಿ ಮಣಿಕಂಠ ಮತ್ತಿತರರು ಹಾಜರಿದ್ದರು.
Continue Reading

Chikmagalur

ಇವಿಎಂ ಮೇಲಿರುವ ಗಮನ ಅಭಿವೃದ್ಧಿಯ ಮೇಲೆ ಯಾಕಿಲ್ಲ: ಮಾಲತೇಶ್

Published

on

ಬಾಳೆಹೊನ್ನೂರು: ದೇಶದ ಚುನಾವಣಾ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲದ, ಇವಿಎಂ ಮೇಲೆ ಎಳ್ಳ? ವಿಶ್ವಾಸವಿಲ್ಲದ ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಮುಂದಾಗಿರುವುದು ಆ ಪಕ್ಷದ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಮಾಲತೇಶ್‌ಗೌಡ ಸಿಗಸೆ ಹೇಳಿದ್ದಾರೆ.

ಸದಾ ಗೆದ್ದೆತ್ತಿನ ಬಾಲ ಹಿಡಿಯುವ ಮತ್ತು ದೇಶದ ಜನರನ್ನು ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್ ಗೆದ್ದರೆ ಪಕ್ಷದ ಗೆಲುವು ಅಂತ ಎದೆಯುಬ್ಬಿಸಿ ಬೀಗುತ್ತಾ, ಸೋತಾಗ ದೇಶದ ಚುನಾವಣಾ ವ್ಯವಸ್ಥೆ ಮತ್ತು ಇವಿಎಂನತ್ತ ಬೊಟ್ಟು ಮಾಡುವ ನೀಚ ರಾಜಕೀಯ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಸರಣಿಯಾಗಿ ಮತಗಳ್ಳತನದ ಆರೋಪ ಮಾಡುವ ಮೂಲಕ ಕಾಂಗ್ರೆಸ್‌ನವರು ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನೇ ಅನುಮಾನಿಸುವ ಮೂಲಕ ರಾಹುಲ್‌ಗಾಂಧಿ ಅವರು ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಇದೀಗ ಕಾಂಗ್ರೆಸ್ ಮುಖಂಡರು ತನ್ನ ಪಕ್ಷದ ವರಿ?ರನ್ನು ಮೆಚ್ಚಿಸುವ ಸಲುವಾಗಿ ಇವಿಎಂ ಸಾಕು, ಬ್ಯಾಲೆಟ್ ಪೇಪರ್ ಬೇಕು ಎನ್ನುವ ಮೂಲಕ ಹೊಸ ನಾಟಕ ಶುರು ಮಾಡಿಕೊಂಡಿದ್ದಾರೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹಿಂದೊಮ್ಮೆ ಭಾಷಣ ಮಾಡುವಾಗ ಈ ಹಿಂದೆ ಕಾಂಗ್ರೆಸ್ ಪಕ್ಷ ಹೇಗೆ ಚುನಾವಣೆಗಳನ್ನು ಕಳ್ಳತನದಿಂದ ಗೆಲ್ಲುತ್ತಿತ್ತು ಎಂಬುದನ್ನು ಹೇಳಿದ್ದರು. ಬ್ಯಾಲೆಟ್ ಪೇಪರ್ ಇದ್ದ ದಿನಗಳಲ್ಲಿ ನಮಗೆ ಬೇಕಾದವರಿಗೆ ವೋಟ್ ಗುದ್ದಿ ಚುನಾವಣೆಯನ್ನು ನಡೆಸುತ್ತಿದ್ದೆವು. ಇವಿಎಂ ಬಂದ ಮೇಲೆ ಆ ರೀತಿಯ ಚುನಾವಣೆಗಳನ್ನು ನಡೆಸಲು ಆಗುತ್ತಿಲ್ಲ ಎಂದು ಬಹಿರಂಗವಾಗಿಯೇ ಸತ್ಯವನ್ನು ಒಪ್ಪಿಕೊಂಡಿದ್ದರು.

ಈ ರೀತಿಯ ಪ್ರಸಂಗಗಳು ಕಾಂಗ್ರೆಸ್ ಸರ್ಕಾರದ ಆಲೋಚನೆ ಮತ್ತು ಮನಸ್ಥಿತಿ ಎಂಥದ್ದು ಎನ್ನುವುದಕ್ಕೆ ಉದಾಹರಣೆಯಾಗಿದೆ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದುಕೊಂಡು ಸಂವಿಧಾನ ಉಳಿಸಿ ಎಂದು ದೇಶದ ಜನರ ಮುಂದೆ ನಾಟಕ ಮಾಡುವ ಕಾಂಗ್ರೆಸ್ ಪಕ್ಷ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವಲು ಯಾವ ಕಾನೂನುಗಳು ಬೇಕೋ ಆ ಎಲ್ಲಾ ಕಾನೂನುಗಳನ್ನು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದೊಂದಾಗೇ ಜಾರಿಗೆ ತರುತ್ತಿದೆ. ಜನರ ಮುಂದೆ ಬಣ್ಣ ಹಚ್ಚದೆಯೇ ನಾಟಕವಾಡುವ ಕಾಂಗ್ರೆಸ್ ಪಕ್ಷ ಒಂದು ಸರ್ಕಾರವಾಗಿ ಬಂದಾಗ ಸಂವಿಧಾನದ ಆಶಯಗಳಿಗೆ ಮಣ್ಣು ಮುಕ್ಕಿಸುವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ.

ದೇಶದ ರಾಜಕಾರಣದಲ್ಲಿ ತನ್ನ ಇರುವಿಕೆಯನ್ನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಹಿಂಬಾಗಿಲ ಮೂಲಕ ಅಧಿಕಾರಕ್ಕೇರುವ ಕನಸನ್ನು ಕಾಣುತ್ತಿದೆ. ಸೋಲುಗಳು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಆ ಪಕ್ಷದ ದೇಶ ವಿರೋಧಿ ಮನಸ್ಥಿತಿ, ಹಿಂದುತ್ವ, ಹಿಂದೂ ಧರ್ಮ ಮತ್ತು ಸಹಬಾಳ್ವೆಯ ಬಗ್ಗೆ ಅವರಿಗಿರುವ ವಿರೋಧದ ಮನಸ್ಥಿತಿ, ರಾಷ್ಟ್ರೀಯತೆ ಮೇಲೆ ಕಾಂಗ್ರೆಸ್ ಪಕ್ಷಕ್ಕಿರುವ ಅಸಡ್ಡೆತನ ಈ ರೀತಿಯ ಕಾನೂನುಗಳನ್ನು ಜಾರಿಗೆ ತರುವುದರ ಹಿಂದೆ ಎದ್ದು ಕಾಣುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ಕಾಂಗ್ರೆಸ್ ಪಕ್ಷದ ಈ ಮನಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಕಾಂಗ್ರೆಸ್ ಎನ್ನುವ ಹೆಸರು ಇತಿಹಾಸದ ಪುಟಗಳನ್ನು ಸೇರುವ ದಿನ ದೂರವಿಲ್ಲ.

ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಕಾಯ್ದೆ, ನಿಯಮಗಳಿಗೆ ತಿದ್ದುಪಡಿ ಮಾಡಿದರೆ ಅದರ ಪ್ರಕಾರ ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಧಾನಸಭಾ ಚುನಾವಣಾ ಮತದಾರರ ಪಟ್ಟಿ ಪರಿಗಣಿಸಬೇಕು ಎಂದು ಕೇಂದ್ರದ ಅಥವಾ ರಾಜ್ಯದ ಯಾವುದೇ ನಿಯಮದಲ್ಲೂ ಹೇಳಿಲ್ಲ. ಗ್ಯಾರಂಟಿ ಯೋಜನೆಯ ಜಪದಲ್ಲೇ ಮುಳುಗಿ ಹೋಗಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಅಭಿವೃದ್ಧಿ, ರಾಜ್ಯದ ಜನರ ಅಭ್ಯುದಯದ ಬಗ್ಗೆ ಮಾತ್ರ ಚಕಾರವೆತ್ತುತ್ತಿಲ್ಲ.

ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಅನುಮಾನಿಸುವ ಮತ್ತು ಅವಮಾನಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೀಳು ರಾಜಕೀಯ ತರವಲ್ಲ. ಇನ್ನಾದರೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುರುಳಿಲ್ಲದ ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Trending

error: Content is protected !!