Connect with us

Chamarajanagar

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ : ನೊಂದಣಿಗೆ ಜಿಲ್ಲಾಧಿಕಾರಿ ಮನವಿ

Published

on

ಚಾಮರಾಜನಗರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆಪ್ಟೆಂಬರ್ 15ರಂದು ನಡೆಯಲಿದ್ದು, ಇದರ ಅಂಗವಾಗಿ ಸೈಕಲ್ ಜಾಥವನ್ನು ಸೆ. 15ರಂದು ಬೆಳಿಗ್ಗೆ 6.30 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗದಿಂದ ಹಮ್ಮಿಕೊಳ್ಳಲಾಗಿದೆ.

ಸೈಕಲ್ ಜಾಥಾದಲ್ಲಿ 14 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ನೌಕರರು ಸೇರಿದಂತೆ ಎಲ್ಲರೂ ಭಾಗವಹಿಸಬಹುದಾಗಿದೆ.

ಸೈಕಲ್ ಜಾಥಾದಲ್ಲಿ ಭಾಗವಹಿಸುವವರು https://forms.gle/TB6urg2Xn6hPzQtw6 ಈ ಲಿಂಕ್ ಮೂಲಕ ಸೆಪ್ಟೆಂಬರ್ 13ರ ಸಂಜೆ 5 ಗಂಟೆಯೊಳಗೆ ನೊಂದಾಯಿಸಿಕೊಳ್ಳಬೇಕು. ಬನ್ನಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ನಮ್ಮೊಂದಿಗೆ ಭಾಗವಹಿಸಿ, ನನ್ನ ಮತ ನನ್ನ ಹಕ್ಕು ಎಂಬ ಮಹತ್ವದ ಆಶಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Continue Reading

Chamarajanagar

ಯಳಂದೂರು: ತಾಲೂಕು ನಾಯಕ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Published

on

ಯಳಂದೂರು: ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಯಳಂದೂರು ತಾಲ್ಲೂಕಿನ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಾಷ್ಕರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ತಾಲ್ಲೂಕು ನಾಯಕ ಮಂಡಳಿ ಅಧ್ಯಕ್ಷರಾದ ಮುರುಳಿಕೃಷ್ಣರವರು ನೆರವೇರಿಸಿದರು. ನಂತರ ಮಂಡಳಿಯ ಪದಾಧಿಕಾರಿಗಳು ಹಾಗೂ ಮುಖಂಡರು ಶ್ರೀ ಮಹರ್ಷಿ ವಾಲ್ಮೀಕಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.

ಎಂಟು ಬೀದಿಯ ಯಜಮಾನರಾದ ಮೂರ್ತಿ ರವರು ಮಾತನಾಡಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಚನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಪೋಷಕರು ಬೇಗ ಮದುವೆ ಮಾಡಬೇಡಿ,ಅವರಿಗೆ ಆಸ್ತಿ ಮಾಡುವ ಬದಲು, ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ,ಪಿ ಯು ಸಿ ಹಾಗೂ ಪದವಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಘದ ನೆನಪಿನ ಕಾಣಿಕೆ ನೀಡಿ,ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

ಶಿಕ್ಷಕರು ಹಾಗೂ ಅತ್ಯುತ್ತಮ ನಿರೂಪಕರಾದ ರಂಗನಾಥ್ ರವರು ನಿರೂಪಣೆ ಮಾಡಿ ವಿದ್ಯಾರ್ಥಿಗಳಿಗೆ ಕೇಲವು ಕಿವಿ ಮಾತುಗಳನ್ನು ಹೇಳಿದರು.ಕಲಾವಿದರಾದ ಗಣಿಗನೂರು ಸುರೇಶ್ ರವರು ರಸ ಮಂಜರಿ ಕಾರ್ಯಕ್ರಮ ನಡೆಸಿ ಎಲ್ಲಾರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ನಾಯಕ ಮಂಡಳಿ ಗೌರವ ಅಧ್ಯಕ್ಷರು ರಾಚನಾಯಕ, ಕಾರ್ಯದರ್ಶಿ ವೆಂಕಟಾಚಲ,ಖಜಾಂಚಿ ಉಮೇಶ್,,ಪಟ್ಟಣ ಪಂಚಾಯತಿ ಸದಸ್ಯರು ಮಹೇಶ್, ರಂಗನಾಥ್, ಮಾಜಿ ಸದಸ್ಯರು ಭೀಮಪ್ಪ, ಮುಖಂಡರುಗಳಾದ ಮಹೇಶ್, ಮಣಿಗಾರ್ ರಂಗನಾಥ್, ಸೇರುಗಾರ್ ಬಿಳಿಗಿರಂಗನಾಯಕ, ಮಂಜು, ಬಂಗಾರ ನಾಯಕ,ಮದ್ದೂರು ಬಂಗಾರು, ಕಂದಹಳ್ಳಿ ಮಹೇಶ್ ಕುಮಾರ್,ಚಂಗಚಹಳ್ಳಿ ಮಹದೇವಸ್ವಾಮಿ, ಗುಂಬಳ್ಳಿ ರಾಜಣ್ಣ, ಕಿಟ್ಟಿ, ಮದ್ದೂರು ರಾಮಚಂದ್ರು,ವರದ ನಾಯಕ, ಸಮುದಾಯದ ವಿವಿಧ ಗ್ರಾಮಗಳ ಯಜಮಾನ್ರು,ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Continue Reading

Chamarajanagar

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಲವು ಕ್ರೀಡೆಗಳಲ್ಲಿ ವಿಜೇತರಾದ ಜೆಎಸ್‌ಎಸ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು

Published

on

ಯಳಂದೂರು:  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯಳಂದೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಜೆಎಸ್ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದರು.

ಕಬ್ಬಡಿ ಪ್ರಥಮ ಸ್ಥಾನ, ಖೋಖೊ ಪ್ರಥಮ, ಸ್ಥಾನ ಥ್ರೋಬಾಲ್ ಪ್ರಥಮ ಸ್ಥಾನ, ಚೆಸ್ ಪ್ರಥಮ ಸ್ಥಾನ,ಶಟಲ್ ಕಾಕ್ ಪ್ರಥಮ ಸ್ಥಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.

100 ಮೀಟರ್ ಓಟದ ಸ್ಪರ್ಧೆಯಲ್ಲಿ ಅಮೃತ ಪ್ರಥಮ ಸ್ಥಾನ, ವಿನುತ ದ್ವಿತೀಯ ಸ್ಥಾನ,200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೀರ್ತನ ಪ್ರಥಮ ಸ್ಥಾನ ಅಮೃತ ದ್ವಿತೀಯ ಸ್ಥಾನ, 400 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪೂರ್ತಿ ಪ್ರಥಮ ಸ್ಥಾನ ತ್ರಿವೇಣಿ ದ್ವಿತೀಯ ಸ್ಥಾನ, 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಸುನಿತ ಪ್ರಥಮ ಸ್ಥಾನ ರಶ್ಮಿ ದ್ವಿತೀಯ ಸ್ಥಾನ, 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಸುನೀತ ಪ್ರಥಮ ಸ್ಥಾನ ಹಾಗೂ ಸಂಜನಾ ದ್ವಿತೀಯ ಸ್ಥಾನವನ್ನು ಪಡೆದರು.

ಗುಂಡು ಎಸೆತದಲ್ಲಿ ರಾಣಿ ಪ್ರಥಮ ಸ್ಥಾನ ರಕ್ಷಿತ ದ್ವಿತೀಯ ಸ್ಥಾನ, ಜಾವೆಲಿನ್ ನಲ್ಲಿ ಸುಶ್ಮಿತಾ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ವಿನುತ ಪ್ರಥಮ ಸ್ಥಾನ,ತಟ್ಟೆ ಎಸೆತದಲ್ಲಿ ರೇಣುಕ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಎಂದು ಪ್ರಾಂಶುಪಾಲರಾದ ಚಂದ್ರಶೇಖರ ಎಚ್ ಎಸ್ ರವರು ತಿಳಿಸಿರುತ್ತಾರೆ.

Continue Reading

Chamarajanagar

ಬೂದಂಬಳ್ಳಿಯಲ್ಲಿ ಅದ್ದೂರಿ ಗಣಪತಿ ವಿಸರ್ಜನೆ

Published

on

ಯಳಂದೂರು : ಸಮೀಪದ ಬೂದಂಬಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮಹೋತ್ಸವವನ್ನು ವಿಜೃಂಭಣೆಯಿಂದ ನೆರೆವೇರಿಸಲಾಯಿತು.

ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಗೌರಮ್ಮ ಮೂರ್ತಿಯನ್ನು ಮಂಗಳವಾದ್ಯ ವೀರಾಗಾಸೆಯೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರೆವಣಿಗೆ ಮಾಡಲಾಯಿತು.

ಈ ವೇಳೆ ಮಹಿಳೆಯರು ಅವರವರ ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಗಣಪನಿಗೆ ಪೂಜೆ ಸಲ್ಲಿಸಿದರು. ಯುವಕರು ಮಕ್ಕಳು ಗಣಪತಿ ಬಪ್ಪ ಮೊರಾಯಾ ಎಂದು ಜೈಕಾರ ಹಾಕಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು ಬಳಿಕ ಮೂಕಳ್ಳಿ ಸೇತುವೆ ಬಳಿ ಗಣಪತಿ ವಿಸರ್ಜನೆ ಮಾಡಲಾಯಿತು. ಬಳಿಕ ಪ್ರಸಾದ ವಿನಿಯೋಗ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕೋಮಿನ ಯಜಮಾನರುಗಳು,ಗ್ರಾಮ ಪಂಚಾಯತಿ ಸದಸ್ಯರುಗಳು, ಯುವಕರು, ಮಹಿಳೆಯರು, ಮಕ್ಕಳು ಹಾಜರಿದ್ದರು.

Continue Reading

Trending

error: Content is protected !!