Politics
ಮದ್ದೂರು ಕಲ್ಲು ತೂರಾಟ ಪ್ರಕರಣ|ಬಿಜೆಪಿ ಸತ್ಯಶೋಧನಾ ತಂಡ ರಚನೆ: ಬಿ.ವೈ.ವಿಜಯೇಂದ್ರ
 
																								
												
												
											ಬೆಂಗಳೂರು: ಮದ್ದೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಸತ್ಯಶೋಧನಾ ತಂಡ ರಚನೆ ಮಾಡಿದ್ದು, ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಬಳಿಕ ವರದಿ ನೀಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ನಿಜಾಮರ ಆಡಳಿತವನ್ನು ನಿನ್ನೆ ಪ್ರಕರಣ ನೆನೆಪು ಮಾಡಿದೆ ಎಂದು ವ್ಯಂಗ್ಯ ಮಾಡಿದರು.

ಸಿಎಂ ಮತ್ತು ಗೃಹ ಸಚಿವರು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಕ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ. ಅದಕ್ಕ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಗಣೇಶ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ವರ್ತಿಸಿದ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿರುವ ಮಾಹಿತಿ ಇದೆ. ನಾನೇನು ಪಾಕಿಸ್ತಾನದಲ್ಲಿ ಇದ್ದೇವಾ? ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ? ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಅಸಂಖ್ಯಾತ ಹಿಂದೂ ಕಾರ್ಯಕರ್ತರು ಸಿಎಂ ಅವರನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ ಎಂದು ಟೀಕಿಸಿದರು.
Politics
ಭಾರತವನ್ನು ಮುನ್ನಡೆಸುವುದಕ್ಕೆ ಪ್ರಧಾನಿ ಮೋದಿ ಅವರಿಂದ ಸಾಧ್ಯ: ಬಿ.ವೈ. ವಿಜಯೇಂದ್ರ
 
														ಬೆಂಗಳೂರು: ಪ್ರಧಾನಿ ಮೋದಿ ಅವರಿಂದ ಮಾತ್ರ ಭಾರತವನ್ನು ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಜನತೆ ಕಾಂಗ್ರೆಸ್ ಪಕ್ಷದ ಬಗ್ಗೆ ಏಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಚರ್ಚಿಸಬೇಕು ಅಥವಾ ಚಿಂತನೇ ಮಾಡಬೇಕೆ ವಿನಾಃ ಇವಿಎಂ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ಮುರ್ಖತನದ ಪರಮಾವಧಿ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಜೀ ಅವರಿಂದ ಮಾತ್ರ ಭಾರತವನ್ನ ಮುನ್ನಡೆಸುವುದಕ್ಕೆ ಸಾಧ್ಯವೆಂದು ದೇಶದ ಜನ ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದೆ ಪ್ರಸ್ತುತ ಇವಿಎಂ ಮೇಲೆ ದೂರುವುದು ಮತ್ತು ದೋಷಪೂರಿತ ಎಂದು ಕಾಂಗ್ರೆಸ್ ಹೇಳುತ್ತಿರುವುದು ಹುಚ್ಚುತನದ ಪರಮಾವಧಿ ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರಿಗೆ ಇವಿಎಂ ಮೇಲೆ ಏಕೆ ವಿಶ್ವಾಸ ಕಡಿಮೆ ಆಗಿದೆ? ರಾಹುಲ್ ಗಾಂಧಿಯವರು ಸತತವಾಗಿ 3 ಬಾರಿ ಕೇಂದ್ರ ಲೋಕಸಭಾ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು.
ಬ್ಯಾಲೆಟ್ ಪೇಪರ್ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯು ಬ್ಯಾಲೆಟ್ ಪೇಪರ್‌ಗೆ ಹೆದರುವುದಿಲ್ಲ, ನಾವು ಏಕೆ ಹೆದರಬೇಕು? ಎಂದು ಕೇಳಿದರಲ್ಲದೇ ಕೇಂದ್ರದಲ್ಲಿ ಸತತವಾಗಿ 3 ಬಾರಿ ನರೇಂದ್ರ ಮೋದಿ ಜೀ ಅವರ ಸರ್ಕಾರ ಇದೆ. ಬಿಜೆಪಿ ಬ್ಯಾಲೆಟ್ ಪೇಪರ್‌ಗೆ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಇವಿಎಂ ಬಗ್ಗೆಯೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
Hassan
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್
 
														ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಗಳಂತೆ ತಮ್ಮ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ.
ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದ್ದು, ಪುಸ್ತಕಗಳನ್ನು ನೀಡುವುದು ಹಾಗೂ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಜ್ವಲ್ ಸದ್ಯ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನು ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ.
ಇನ್ನೂ ಟ್ರಯಲ್ ಕೋರ್ಟ್‌ಗೆ ಆಗಾಗ ಬರಬೇಕಾಗಿರುವುದರಿಂದ ಹಾಗೂ ವಕೀಲರ ಜೊತೆ ಇತರೆ ಪ್ರಕರಣಗಳ ಸಂಬಂಧ ಚರ್ಚೆ ಮಾಡಬೇಕಾಗಿರುವ ಕಾರಣ ಪ್ರಜ್ವಲ್ ಅವರನ್ನು ಪೂರ್ತಿ ಕೆಲಸಕ್ಕೆ ನಿಯೋಜಿಸಿಲ್ಲ.
Hassan
ಹಾಸನ ಮಹಾನಗರ ಪಾಲಿಕೆಗೆ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ಸದನದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಧ್ವನಿ
 
														ಬೆಂಗಳೂರು: ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿರುವ ಸರ್ಕಾರ ಅದಕ್ಕನುಗುಣವಾಗಿ ಅನುದಾನ ನೀಡದೆ ವಂಚನೆ ಮಾಡಿದೆ ಎಂದು ಶಾಸಕ ಸ್ವರೂಪ ಪ್ರಕಾಶ್ ತಿಳಿಸಿದರು.
ಅಧಿವೇಶನದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ್ದು ಸಂತೋಷದ ವಿಚಾರ ಇದಕ್ಕೆ ನಾವು ಕೂಡ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೆವು ಆದರೆ ಕೇವಲ ನಾಮಕಾವಸ್ಥೆಗೆ ಮೇಲ್ದರ್ಜೆಗೇರಿಸಿ ಅನುದಾನ ನೀಡದೆ ಇದ್ದರೆ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮಹಾನಗರ ಪಾಲಿಕೆಗಾಗಿ ಹಾಸನದ ಸುತ್ತಮುತ್ತಲ 37 ಹಳ್ಳಿಗಳನ್ನು ನಗರಸಭೆಗೆ ಸೇರಿಸಿಕೊಂಡಿದೆ ಆದರೆ ಅವರಿಗೆ ನೀಡಬೇಕಾಗಿರುವ ಸೌಲಭ್ಯಗಳಲ್ಲಿ ವಂಚನೆ ಮಾಡಿದಂತಾಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಇದ್ದ ಗ್ರಾಮಗಳು ಇದೀಗ ಮಹಾನಗರ ಪಾಲಿಕೆಗೆ ಒಳಗೊಂಡಿವೆ. ಅದಕ್ಕನುಗುಣವಾಗಿ ಅವರು ಕೂಡ ಹತ್ತುಪಟ್ಟು ಹೆಚ್ಚು ಕಂದಾಯ ಕಟ್ಟುತ್ತಿದ್ದಾರೆ. ಆದರೆ ಆ ಗ್ರಾಮಗಳನ್ನು ಮಹಾನಗರ ಪಾಲಿಕೆ ಹಂತದಲ್ಲಿ ಅಭಿವೃದ್ಧಿಪಡಿಸಲು ಆಗುತ್ತಿಲ್ಲ. ಈ ಹಿಂದೆ ಸರ್ಕಾರ ಅನುದಾನ ನೀಡುವ ಭರವಸೆ ನೀಡಿ ಇದೀಗ ಪೌರಾಡಳಿತ ಇಲಾಖೆಗೆ ಮುಂದಿನ ಮೂರು ವರ್ಷಗಳು ಯಾವುದೇ ನೇಮಕಾತಿ ಅಥವಾ ಹಣ ಬಿಡುಗಡೆ ಮಾಡಲು ಆಗುವುದಿಲ್ಲ ಎಂಬ ಪತ್ರವನ್ನು ಹೊರಡಿಸಿದೆ ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಈಗಾಗಲೇ ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದ್ದು ರಸ್ತೆಗಳು ಗುಂಡಿಮಯವಾಗಿದೆ ಆದರೆ ಅವುಗಳನ್ನು ಮುಚ್ಚಲು ಹಣವಿಲ್ಲದೆ ಪರದಾಡುವಂಥಾಗಿದೆ, ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಹಾಕುತ್ತಿದ್ದು ನಮ್ಮ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಮನಗಂಡು ಆಡಳಿತ ಪಕ್ಷದ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರು ಹೆಚ್ಚಿನ ಅನುದಾನ ನೀಡಿ ಹೊಸದಾಗಿ ಶಾಸಕರಾಗಿರುವ ನಮಗೆ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
- 
																	   Mysore11 hours ago Mysore11 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Kodagu8 hours ago Kodagu8 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ 
- 
																	   Manglore5 hours ago Manglore5 hours agoಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ‘ಸ್ಕೈವಾಕರ್’ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯ 
- 
																	   Hassan7 hours ago Hassan7 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ 
- 
																	   Kodagu4 hours ago Kodagu4 hours agoವಿರಾಜಪೇಟೆ ಸುತ್ತಮುತ್ತ ಸೆ.11 ರಂದು ವಿದ್ಯುತ್ ವ್ಯತ್ಯಯ 
- 
																	   Chikmagalur23 hours ago Chikmagalur23 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 
- 
																	   National2 hours ago National2 hours agoಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ. ರಾಧಾಕೃಷ್ಣನ್ 
- 
																	   Mandya23 hours ago Mandya23 hours agoಮದ್ದೂರು ಕಲ್ಲು ತೂರಾಟ| ತಪ್ಪಿತಸ್ಥರ ಮೇಲೆ ಗೂಂಡಾ ಆಕ್ಟ್ ನಂತಹ ಕಠಿಣ ಕ್ರಮವನ್ನು ಕೈಗೊಳ್ಳಬೇಕು: ಹಿಂದೂ ಜನಜಾಗೃತಿ ಸಮಿತಿ 

 
											 
											 
											 
											 
											