Mysore
ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 4.54 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ: ಬಿ.ಎಸ್. ರವೀಂದ್ರ ಕುಮಾರ್
 
																								
												
												
											ತಿ.ನರಸೀಪುರ: ತಾಲೂಕಿನ ಬನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 4.54 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ರವೀಂದ್ರ ಕುಮಾರ್ ಹೇಳಿದರು.
ಸಂಘದ ಆವರಣದಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಈ ಸಾಲಿನಲ್ಲಿ ಸಂಘವು ರೈತರಿಗೆ 4.41ಕೋಟಿ ರೂ. ಕೆಸಿಸಿ ಸಾಲ, 49 ಲಕ್ಷ ರೂಗಳ ವ್ಯಾಪಾರ ಸಾಲವನ್ನು ನೀಡಿದೆ. ಎಲ್ಲ ರೈತರು ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡುತ್ತಿದ್ದಾರೆ. ಆದರೆ ಇದರಲ್ಲಿ 28 ರೈತರು ಮಾತ್ರ ಸಕಾಲದಲ್ಲಿ ಸಾಲ ಮರು ಪಾವತಿ ಮಾಡುತ್ತಿಲ್ಲ. ಹಾಗಾಗಿ ಸುಸ್ತಿದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡದಿದ್ದಲ್ಲಿ ಸಂಘವನ್ನೇ ಸುಸ್ತಿದಾರ ಸಂಘವೆಂದು ಪರಿಗಣಿಸಿ ನಮ್ಮ ಜಿಲ್ಲಾ ಸಹಕಾರ ಬ್ಯಾಂಕ್ ನಿಂದ ಸಿಗುವ ಸಾಲ ಮತ್ತು ಇನ್ನಿತರೆ ಸೌಲಭ್ಯಗಳಿಂದ ವಂಚಿತವಾಗುತ್ತದೆ. ಇದುವರೆಗೂ 488 ರೈತರಿಗೆ ಸಾಲ ನೀಡಿದ್ದು, ಸಾಲ ನೀಡಿಕೆಯಲ್ಲಿ ಯಾವುದೇ ರಾಜಕೀಯ ಪ್ರಭಾವ ಬಳಸಲ್ಲ. ರೈತರಿಗೆ ಸರ್ಕಾರದ ಸೌಲಭ್ಯ ನೀಡುವುದು ನಮ್ಮ ಸಂಘದ ಉದ್ದೇಶ ಎಂದರು.

ವ್ಯವಸಾಯ ಈ ಭಾಗದ ಮೂಲ ವೃತ್ತಿ. ಬೇಸಾಯಕ್ಕೆ ಬೆಂಬಲವಾಗಿ ರೈತರು ನಿಲ್ಲಬೇಕು. ಯಾವ ಯಾವ ರೈತರಿಗೆ ಸಾಲ ಸೌಲಭ್ಯ ಅವಶ್ಯವಿದೆಯೋ ಅಂತಹ ರೈತರನ್ನು ಪಟ್ಟಿ ಮಾಡಲಾಗಿದೆ. ಜಿಲ್ಲಾ ಬ್ಯಾಂಕ್ ನಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಸಕಾಲದಲ್ಲಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಬ್ಯಾಂಕ್ ಆಡಳಿತ ಮಂಡಳಿ ರಚನೆಯಾದ ಬಳಿಕ ಅವಶ್ಯಕತೆಯಿರುವ ರೈತರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ಜತೆಗೆ ಅವಶ್ಯಕತೆ ಇರುವವರಿಗೆ ಯಶಸ್ವಿನಿ ಯೋಜನೆ, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಬಿ.ಕೆ. ನಾರಾಯಣ, ನಿರ್ದೇಶಕರಾದ ಚಿಕ್ಕಸ್ವಾಮಿ, ಧರ್ಮಲಿಂಗು,ಬಿ.ಎಂ.ರಮೇಶ್,ಲೋಕೇಶ್, ಆರ್.ರವಿಕುಮಾರ್, ಮಾಯಿಗೌಡ, ಕೆ.ಬಸವರಾಜು, ಜ್ಯೋತಿ,ಸಾರಿಕಾ,ಹೇಮಂತ್ ಕುಮಾರ್,ಸಂಘದ ಕಾರ್ಯದರ್ಶಿ ಆರ್.ಶೋಭಾ, ಸಿಬ್ಬಂದಿ ಸಿ.ಭಾಸ್ಕರ್, ಎಂ.ಮಂಜುಳಾ, ಪಿ.ಮಂಜುನಾಥ್ ಇತರರು ಹಾಜರಿದ್ದರು.
Mysore
ಕೆ.ಆರ್.ನಗರ: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ರವಿಶಂಕರ್
 
														ಕೃಷ್ಣರಾಜನಗರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಂದು ಪ್ರೌಢಶಾಲಾ ಮಟ್ಟದ ಮಕ್ಕಳಿಗೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಈ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕಿನ ಜನಪ್ರಿಯ ಶಾಸಕ ರವಿಶಂಕರ್ ಅವರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪನವರು ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು.

ಈ ಕಾರ್ಯಕ್ರಮದ ಆಯೋಜಕರಾದ ದಾಯಾನಂದ ಪ್ರೌಢಶಾಲೆ ದೈಹಿಕ ಶಿಕ್ಷಕ ಕೃಷ್ಣೇಗೌಡ ಹಾಜರಿದ್ದರು. ಒಂದು ಕಾರ್ಯಕ್ರಮದಲ್ಲಿ 100 ಮೀಟರ್ ಓಟ 200 ಮೀಟರ್ ಓಟ ಮತ್ತು ಗುಂಡು ಎಸೆತ ಡಿಸ್ಕಸ್ ತ್ರೋ ವಾಲಿಬಾಲ್ ಥ್ರೋ ಬಾಲ್ ಮುಂತಾದ ಕ್ರೀಡೆಗಳು ನಡೆಯುತ್ತಿದ್ದವು.
Mysore
ಗುರುವಾರ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನಾಚರಣೆ
 
														ಶಂಕರ್ ಕಟ್ಟೆಮಳಲವಾಡಿ,
ಹುಣಸೂರು : ತಾಲೂಕಿನಲ್ಲಿ ದಿನಾಂಕ 11-9-2025 ನೇ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನಾಚರಣೆ ಹಮ್ಮಿಕೊಂಡಿದ್ದು ಸಮಯ 9 ಗಂಟೆಗೆ ಮುನೇಶ್ವರ ಕಾವಲು ಮೈದಾನದಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿ ಶಿಕ್ಷಕರ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ, ಶಾಲೆಗೆ ರಜೆ ಘೋಷಣೆ ಮಾಡಿದ್ದು ಎಲ್ಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ ತಿಳಿಸಿದರು.
ಅವರು ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ಚೆನ್ನವೀರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ ಹಾಗೂ ಕಾರ್ಯದರ್ಶಿ ಪ್ರಸನ್ನ ಇದ್ದರು.
Mysore
ಪೊಲೀಸ್ ಠಾಣೆಯಲ್ಲಿ ಹಿಂದೂ ಕಾರ್ಯಕರ್ತರ ಭಜನೆ
 
														ಮೈಸೂರು : ಚಾಮುಂಡಿ ಚಲೋಗೆ ಅವಕಾಶ ನೀಡಿದ ಹಿನ್ನೆಲೆ.
ಪೊಲೀಸ್ ಠಾಣೆಯಲ್ಲಿ ಭಜನೆ ಮಾಡುತ್ತಿರುವ ಹಿಂದೂ ಕಾರ್ಯಕರ್ತರು.
ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿ ಅನೇಕ ಕಡೆ ಭಜನೆ ಮಾಡುವ ಮೂಲಕ ಪ್ರತಿಭಟನೆ.

ಕರಾವಳಿ ಭಾಗದಿಂದ ಚಾಮುಂಡಿ ಚಲೋಗೆ ಬಂದಿದ್ದ ಕಾರ್ಯಕರ್ತರು.
ಬಂಧಿಸಿ ಕರೆದೊಯ್ದರು ಸಿ.ಎ.ಆರ್. ಗ್ರ್ಯಾಂಡ್ ನಲ್ಲೇ ಭಜನೆ ಮಾಡಿದ ಆಕ್ರೋಶ.
ಭಜನೆ ಮೂಲಕ ನಿರಂತರ ಪ್ರತಿಭಟನೆ ಮಾಡುತ್ತಿರುವ ಹಿಂದೂ ಕಾರ್ಯಕರ್ತರು.
- 
																	   Mysore22 hours ago Mysore22 hours agoಅರ್ಧವೃತ್ತಾಕಾರದ ಬೆಂಜ್ ಜೋಡಣೆ ಸಮಾನ ಕಲಿಕೆಗೆ ಪೂರಕ: ಸಂಶೋಧಕ ಸಂಜಯ್ ಸಿಂಗಮಾರನಹಳ್ಳಿ 
- 
																	   Mysore8 hours ago Mysore8 hours agoರಾಜಕೀಯ ಪಕ್ಷಗಳು ಜನಕಲ್ಯಾಣದ ಪರ್ಯಾಯ ಶಕ್ತಿ: ಡಾ.ಬಿಜೆವಿ 
- 
																	   Mandya22 hours ago Mandya22 hours agoಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ 
- 
																	   Hassan3 hours ago Hassan3 hours agoಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಡೆಕ್ಕನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ 
- 
																	   Kodagu4 hours ago Kodagu4 hours agoಚನ್ನಪಟ್ಟಣದಲ್ಲಿ ಅಪಘಾತ: ಕೊಡಗಿನ ದಂಪತಿ ದುರ್ಮರಣ 
- 
																	   Kodagu23 hours ago Kodagu23 hours agoಸೆ.11 ಕ್ಕೆ “ವಿಷಪೂರಿತ ಹಾವುಗಳು : ಗುರುತಿಸುವಿಕೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ 
- 
																	   Chikmagalur19 hours ago Chikmagalur19 hours agoಶ್ರೀ ವಿದ್ಯಾ ಗಣಪತಿ ಯುವಕರ ಬಳಗದ ವತಿಯಿಂದ 9ನೇ ವರ್ಷದ ಅದ್ದೂರಿ ಗಣೇಶೋತ್ಸವ 
- 
																	   Hassan21 hours ago Hassan21 hours agoಆಚಾರ್ಯ ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ಹಾಸನ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನಿಂದ ಜಿಲ್ಲಾಮಟ್ಟದ ಕವಿಗೋಷ್ಠಿ 

 
											 
											 
											 
											 
											