Manglore
ಪದವಿ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನ ನೀಡುವುದು ಅಗತ್ಯ: ಅಮೃತ್ ಕಿರಣ್ ರೈ
ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಅನಿವಾರ್ಯ. ಫಾರ್ಮಾಸಿಟಿಕಲ್ ಕೆಮಿಸ್ಟ್ರಿ ಯಂತಹ ಸರ್ಟಿಫಿಕೇಟ್ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ಕೌಶಲ್ಯಪೂರ್ಣ ಅನುಭವವನ್ನು ನೀಡುತ್ತವೆ.
ಇಂತಹ ಕೋರ್ಸ್ಗಳು ಪದವೀಧರರನ್ನು ನಿರುದ್ಯೋಗದಿಂದ ಹೊರಗಿಡುತ್ತವೆ ಎಂದು ಸೌತ್ ಕೆನರಾ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ ಮಾಲೀಕರಾದ ಅಮೃತ್ ಕಿರಣ್ ರೈ ಹೇಳಿದರು.
ಇವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು ಇಲ್ಲಿನ ರಾಸಾಯನ ಶಾಸ್ತ್ರ ವಿಭಾಗವು ಆಯೋಜಿಸಿದ ಫಾರ್ಮಾಸಿಟಿಕಲ್ ಕೆಮಿಸ್ಟ್ರಿ ಸರ್ಟಿಫಿಕೇಟ್ ಕೋರ್ಸ್ಗನ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ ಡಾ ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಇಂತಹ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಕಾಲೇಜು ಸದಾ ಜೊತೆಯಾಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯಗಳಿಗೆ ಮಾತ್ರ ಸೀಮಿತವಾಗಿರದೆ ಕೈಗಾರಿಕಾ ಜ್ಞಾನವನ್ನು ಪಡೆಯಬೇಕು” ಎಂದರು. ಹಾಗೂ ಕೋರ್ಸ್ ಗೆ ವಿದ್ಯಾರ್ಥಿಗಳು ತೋರಿದ ಆಸಕ್ತಿಯನ್ನು ಅಭಿನಂದಿಸಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಮಾಲಿನಿ ಕೆ ಸ್ವಾಗತಿಸಿ, ರಚನಾ ಹಾಗೂ ಬಳಗದವರು ಪ್ರಾರ್ಥಿಸಿದರು.ಕೋರ್ಸ್ ಸಂಯೋಜಕರಾದ ಡಾ. ಎಡ್ವಿನ್ ಎಸ್. ಡಿ’ಸೋಜ ವಂದಿಸಿ, ವಿದ್ಯಾರ್ಥಿನಿ ನಿಫಾನ ಕಾರ್ಯಕ್ರಮವನ್ನು ನಿರೂಪಿಸಿದರು.
Manglore
ಬಂಟ್ವಾಳ: ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಅಜ್ಜಿ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಎಳೆದೊಯ್ದಿದ್ದ ಮೊಮ್ಮಗ ಅರೆಸ್ಟ್
ಬಂಟ್ವಾಳ: ಅಜ್ಜಿಯ ಕೈಯಿಂದ ಬಲವಂತವಾಗಿ ಚಿನ್ನದ ಬಳೆಗಳನ್ನು ಎಳೆದೊಯ್ದು ಪರಾರಿಯಾಗಿದ್ದ ಆರೋಪಿತ ಮೊಮ್ಮಗನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು ₹5 ಲಕ್ಷ ಮೌಲ್ಯದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತೆಂಕಕಜೆಕಾರು ನಿವಾಸಿ ಹಾಗೂ ಅವ್ವಮ್ಮ ಅವರ ಮೊಮ್ಮಗ ಶಬೀರ್ (33) ಬಂಧಿತ ಆರೋಪಿ.

ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಉದ್ದದ ಗುಡ್ಡೆ ಎಂಬಲ್ಲಿ ಆಗಸ್ಟ್ 14ರಂದು ಘಟನೆ ನಡೆದಿತ್ತು. ಸಾದಿಕ್ ಎಂಬವರ ತಾಯಿ ಅವ್ವಮ್ಮ (82) ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದಿದ್ದ ಅಪರಿಚಿತನೋರ್ವನು ಮನೆಯೊಳಗೆ ಪ್ರವೇಶಿಸಿದ್ದ. ಬಳಿಕ ಅವರ ಎರಡೂ ಕೈಗಳಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ. ಈ ವೇಳೆ ಅವ್ವಮ್ಮ ಅವರ ಕೈಗೆ ಗಾಯವಾಗಿತ್ತು.
ಈ ಕುರಿತು ಸಾದಿಕ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆಗಸ್ಟ್ 16ರಂದು ಆರೋಪಿ ಅವ್ವಮ್ಮ ಅವರ ಮೊಮ್ಮಗ ಶಬೀರ್ (33) ನನ್ನು ಬಂಧಿಸಿದ್ದಾರೆ. ಆತನಿಂದ ಕಳವು ಮಾಡಲಾಗಿದ್ದ ಎರಡು ಚಿನ್ನದ ಬಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Manglore
ಆಹಾರದ ವಿಚಾರದಲ್ಲಿ ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೆ ಕ್ರಮ, ಜನರ ಆರೋಗ್ಯವೇ ಮುಖ್ಯ: ಯು.ಟಿ.ಖಾದರ್ ಪಿಜಿ, ಹಾಸ್ಟೆಲ್‌ಗಳ ಆಹಾರ ನೈರ್ಮಲ್ಯಕ್ಕೂ ಕಟ್ಟುನಿಟ್ಟಿನ ಸೂಚನೆ!
ಮಂಗಳೂರು: ನಗರದ ಕೆಎಫ್‌ಸಿ ಮಳಿಗೆಯಲ್ಲಿ ಹಳಸಿದ ಹಾಗೂ ದುರ್ವಾಸನೆ ಬೀರುವ ಚಿಕನ್ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮಳಿಗೆಯನ್ನು ಸೀಲ್ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಆಹಾರ ಗುಣಮಟ್ಟ ಉಲ್ಲಂಘಿಸುವ ಯಾವುದೇ ದೊಡ್ಡ ಅಥವಾ ಸಣ್ಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಕೆಎಫ್‌ಸಿ ಮಳಿಗೆಯಲ್ಲಿ ಆಹಾರ ಅಸುರಕ್ಷತೆ ಬಗ್ಗೆ ಗಮನಕ್ಕೆ ಬಂದ ತಕ್ಷಣವೇ ಆಯುಕ್ತರೊಂದಿಗೆ ಚರ್ಚಿಸಿ ಮಳಿಗೆಯನ್ನು ಬಂದ್ ಮಾಡಿಸಿ ಸೀಲ್ ಮಾಡಿಸಿದ್ದೇವೆ. ಇಷ್ಟೊಂದು ಕಠಿಣ ಜಾಗೃತಿ ಮತ್ತು ತಪಾಸಣೆಗಳ ನಡುವೆಯೂ ಮಂಗಳೂರಿನಂತಹ ನಗರದಲ್ಲಿ ಇಂತಹ ಬೇಜವಾಬ್ದಾರಿ ಕಂಡುಬಂದಿರುವುದು ಆಘಾತಕಾರಿ ಎಂದರು.

ಇದೇ ವೇಳೆ ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರಗೊಳಿಸಿರುವುದಾಗಿ ತಿಳಿಸಿದ ಸಚಿವರು, ಕೇವಲ ಹೋಟೆಲ್‌ಗಳಷ್ಟೇ ಅಲ್ಲದೆ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಂಗುವ ಪಿಜಿ, ಹಾಸ್ಟೆಲ್ ಹಾಗೂ ಕ್ಯಾಟರಿಂಗ್ ಕೇಂದ್ರಗಳ ಮೇಲೂ ನಿಗಾ ಇಡಲಾಗುತ್ತದೆ. ಮನೆ ಬಿಟ್ಟು ಬಂದಿರುವ ಯುವಜನರಿಗೆ ಸ್ವಂತ ಮಕ್ಕಳಂತೆ ಭಾವಿಸಿ ಶುದ್ಧ, ಪೌಷ್ಟಿಕ ಆಹಾರ ನೀಡಬೇಕು. ಕಳಪೆ ಊಟ ನೀಡುವ ಪಿಜಿಗಳನ್ನು ಮುಚ್ಚಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ವೈರಸ್ ಹರಡುವುದನ್ನು ತಡೆಯಲು ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ಕುಡಿಯುವ ನೀರನ್ನೇ ಒದಗಿಸಬೇಕು. ಆಹಾರ ಸುರಕ್ಷತಾ ಇಲಾಖೆಯ ಸಿಬ್ಬಂದಿ ಕೊರತೆಯನ್ನು ನೀಗಿಸುವುದರ ಜೊತೆಗೆ, ಸುಪ್ರೀಂ ಕೋರ್ಟ್ ಕೂಡ ಪ್ರಶ್ನಿಸಲಾಗದಂತಹ ಅತ್ಯಾಧುನಿಕ ‘ಹೈ ಸ್ಟ್ಯಾಂಡರ್ಡ್ ಫುಡ್ ಟೆಸ್ಟಿಂಗ್ ಲ್ಯಾಬ್’ ಅನ್ನು ರಾಜ್ಯದಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
Manglore
‘ವಂದೇಮಾತರಂ’ಗೆ ಅವಮಾನ- ಸೋನಿಯಾ ಗಾಂಧಿ ವಿರುದ್ಧ ಉರ್ವ ಠಾಣೆಯಲ್ಲಿ ದೂರು ದಾಖಲು
ಮಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ವಂದೇ ಮಾತರಂಗೆ ಅವಮಾನ ಮಾಡಿ, ಅರ್ಧಕ್ಕೆ ನಿಲ್ಲಿಸುವಂತೆ ಹೇಳಿರುವ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ಉರ್ವ ಠಾಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ತಕ್ಷಣ ಎಫ್ಐಆರ್ ದಾಖಲಿಸಿ ಸೋನಿಯಾ ಗಾಂಧಿಯವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಅವರು ಒತ್ತಾಯಿಸಿದರು. ಒಂದು ವೇಳೆ ಎಫ್ಐಆರ್ ದಾಖಲಿಸದಿದ್ದಲ್ಲಿ ರಾಜ್ಯದಲ್ಲಿ ರಾಷ್ಟ್ರವಿರೋಧಿ ಸರಕಾರಕಾವಿದೆ ಎಂದು ನಾವು ಭಾವಿಸುತ್ತೇವೆ. ಇಂಥವರ ಪ್ರಭಾವಕ್ಕೆ ಒಳಪಟ್ಟು ಪೊಲೀಸರು ಎಫ್ಐಆರ್ ದಾಖಲಿಸದಿದ್ದಲ್ಲಿ, ಉಚ್ಚ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಮುಂದಿನ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ವಿಕಾಸ್ ಪುತ್ತೂರು ಆಗ್ರಹಿಸಿದರು.
-
Mysore18 hours agoಭರ್ತಿಗೂ ಮುನ್ನವೇ ಖಾಲಿಯಾಗುತ್ತಿದೆ ಕಬಿನಿ ಜಲಾಶಯ; ತಮಿಳುನಾಡಿಗೆ ಅಗತ್ಯಕ್ಕಿಂತ ಅಧಿಕ ನೀರು ಹರಿಸುತ್ತಿರುವುದಕ್ಕೆ ಆಕ್ರೋಶ
-
State20 hours agoಚಾಮರಾಜನಗರ ಶೂಟೌಟ್ ಕೇಸ್: ‘ಮೃತರು ರೈತರೇ ಹೊರತು ಬೇಟೆಗಾರರಲ್ಲ’ – ಸಿಎಂ ವಿಜಯ್ ಖಂಡನೆ, ಉನ್ನತ ಮಟ್ಟದ ತನಿಖೆಗೆ ಆಗ್ರಹ
-
Mandya12 hours agoಸಿಇಒ ಕೆ.ಆರ್. ನಂದಿನಿ ಅವರ ಕಾರ್ಯವೈಖರಿ ಖಂಡಿಸಿ ವಿವಿಧ ಸಂಘಟನೆಗಳಿಂದ ಆಹೋರಾತ್ರಿ ಧರಣಿ
-
Chamarajanagar14 hours agoಹನೂರು ಶೂಟೌಟ್: ಮೃತರ ಕುಟುಂಬಗಳಿಗೆ ತಲಾ ₹25 ಸಾವಿರ ವೈಯಕ್ತಿಕ ಪರಿಹಾರ
-
Mysore17 hours agoಸ್ವಾತಂತ್ರ್ಯವು ಕೇವಲ ಆಚರಣೆಯಲ್ಲ, ಇದು ನಮ್ಮ ಹೆಮ್ಮೆ ಹಾಗೂ ಜವಾಬ್ದಾರಿಯ ಸಂಕೇತ ಎಂದ: ಶಾಸಕ ಕೆ. ವೆಂಕಟೇಶ್
-
Politics8 hours agoSIR ಸಮೀಕ್ಷೆ ಪೂರ್ಣ: ಆಗಸ್ಟ್ 24ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ
-
Kodagu13 hours agoಚೆಟ್ಟಿಮಾನಿ ಸಿಂಗತ್ತೂರು ಗ್ರಾಮದಲ್ಲಿ ಸಾಕು ನಾಯಿ ಮೇಲೆ ಚಿರತೆ ದಾಳಿ-ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
-
Chikmagalur15 hours agoಚಿಕ್ಕಮಗಳೂರಿನಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
