Connect with us

Mysore

ಕಾಂಗ್ರೆಸ್ ಅಹಾರೋತ್ರಿ ಧರಣಿ ಅಂತ್ಯ

Published

on

ಮೈಸೂರು: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸೋಮವಾರ ಬೆಳಗ್ಗೆ ಅಂತ್ಯಗೊಂಡಿತು.

ಎಐಸಿಸಿ ಸೂಚನೆ ಹಿನ್ನೆಲೆಯಲ್ಲಿ ವಿವಿಧ ಹಂತದ ಹೋರಾಟ ರೂಪಿಸಿದ್ದು, ಮೈಸೂರಿನ ಪುರಭವನ ಆವರಣದಲ್ಲಿ ಸೋಮವಾರ ಅಹೋರಾತ್ರಿ ಸತ್ಯಗ್ರಹ ಸಂಘಟಿಸಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ, ಮೈಸೂರು ಉಸ್ತುವಾರಿ ವಿ.ಎಸ್.ಉಗ್ರಪ್ಪ ಅವರ ನೇತೃತ್ವದಲ್ಲಿ ರಾತ್ರಿಪೂರ್ತಿ ಪ್ರತಿಭಟನೆ ನಡೆಸಲಾಯಿತು.


ಸೋಮವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಶಾಸಕರು ಪಾಲ್ಗೊಂಡರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಲಾಯಿತು.

ಜಾನಪದ ಕಥೆ, ಕಾರ್ಯಕರ್ತರ ಗಾಯನ: ಪ್ರತಿಭಟನೆಯಲ್ಲಿ ತೊಡಗಿದ್ದವರು ನಿದ್ದೆಗೆ ಜಾರದಂತೆ ರಾತ್ರಿ ಪೂರ್ತಿ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಹಿರಿಯ ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.

ಜಾನಪದ ಗಾಯಕ ಮೈಸೂರು ಗುರುರಾಜ್ ಅವರು ಇಡೀ ರಾತ್ರಿ ಮಾದಪ್ಪ, ಮಂಟೇಸ್ವಾಮಿ ಕಥಪ್ರಸಂಗ ಹಾಗೂ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಗಾಯನದಲ್ಲಿ ಆಸಕ್ತಿ ಇದ್ದ ಕಾಂಗ್ರೆಸ್ ಮುಖಂಡರೂ ವಿವಿಧ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಬೆಳಗ್ಗೆ 5 ಗಂಟೆಗೆ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಸಾಕ್ಷö್ಯಚಿತ್ರಗಳನ್ನು ವೀಕ್ಷಿಸಿದರು. ರಾಷ್ಟçಗೀತೆ ಹಾಡಲಾಯಿತು. ಕೊನೆಯದಾಗಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟ ಯಶಸ್ವಿಗೊಂಡಿತು.

ಅಹೋರಾತ್ರಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮುಖಂಡರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಿದ್ದೆಗೆ ಜಾರದಂತೆ ಟೀ, ಕಾಫಿ ವಿತರಿಸಲಾಗುತ್ತಿತ್ತು. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಹಂತದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಮಹಿಳೆಯರು ಮುಖಂಡರು ಹಾಜರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾವಣೆ ಮಾಡಿದೆ. ದೇಶದ ಜನರ ದುಡಿಯುವ ಹಕ್ಕನ್ನ ಕಿತ್ತುಕೊಂಡಿದೆ. ಪ್ರಜಾಪ್ರಭುತ್ವದ ಕತ್ತು ಹಿಚುಕುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ನರೇಗಾದಿಂದ 15 ಕೋಟಿ ಜನ ಉದ್ಯೋಗ ಪಡೆಯುತ್ತಿದ್ದರು. ಕೋವಿಡ್ ವೇಳೆ ನರೇಗಾದಿಂದ ಜನರು ಜೀವನ ಸಾಗಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಲಕ್ಷಾಂತರ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ನೀಡಿ, ಜೀವನಕ್ಕೆ ಆಧಾರವಾಗಿದ್ದ ಮನರೇಗಾ ಯೋಜನೆಯನ್ನು ಬದಲಾವಣೆ ಮಾಡಲಾಗಿದೆ. ಕಾಯ್ದೆ ಮರುಸ್ಥಾಪನೆಗೆ ಆಗ್ರಹಿಸಿ ನಮ್ಮ ಹೋರಾಟ ಮುಂದುವರಿಯಲಿದೆ. ಬಡ ಜನರ ಉದ್ಯೋಗದ ಹಕ್ಕು ಕಸಿಯುವ ಹೊಸ ಕಾಯಿದೆಯನ್ನು ಹಿಂಪಡೆಯಬೇಕು ಎಂದರು.

ಈ ಹಿಂದೆ ಕೇಂದ್ರ ಸರ್ಕಾರವೇ ಮನರೇಗಾಕ್ಕೆ ಹಣ ಕೊಡುತ್ತಿತ್ತು. ಹೊಸ ಕಾಯ್ದೆಯಂತೆ ಈಗ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಕೊಡಬೇಕಿದೆ. ಕೇವಲ ಹೆಸರನ್ನು ಮಾತ್ರ ಬದಲಾವಣೆ ಮಾಡಿದ್ದಾರೆ. ಇದರ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಯಥಾವತ್ತಾಗಿ ಮನ್‌ರೇಗಾ ಯೋಜನೆ ಜಾರಿ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸಿದೆ. ಗ್ರಾಮೀಣ ಬಡವರ ಬದುಕಿಗೆ ಆಸರೆಯಾಗಿರುವ ಈ ಯೋಜನೆಯನ್ನು ಮರುಜೀವಂತಗೊಳಿಸಬೇಕು. ಮನರೇಗಾ ಮರಳಿ ತರೋಣ ಜನರ ಉದ್ಯೋಗದ ಹಕ್ಕನ್ನು ಉಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ದರ್ಶನ್ ಧ್ರುವನಾರಾಣ, ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಮಾಜಿ ಶಾಸಕರಾದ ಎಚ್.ಪಿ. ಮಂಜುನಾಥ್, ಜಿ.ಎನ್.ನಂಜುಂಡಸ್ವಾಮಿ, ಎಂ.ಕೆ. ಸೋಮಶೇಖರ್, ಜಿಲ್ಲಾಧ್ಯಕ್ಷ ಡಾ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಬಿ.ಎಲ್.ಭೈರಪ್ಪ, ಕೆ.ವಿ. ಮಲ್ಲೇಶ್, ಭಾಸ್ಕರ್ ಎಲ್.ಗೌಡ, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ಎಂ.ಶಿವಣ್ಣ, ರವಿ ಮಂಚೇಗೌಡನಕೊಪ್ಪಲು, ಈಶ್ವರ್ ಚಕ್ಕಡಿ, ಕೆ.ಮಹೇಶ್, ಹುಣಸೂರು ಬಸವಣ್ಣ ಮುಂತಾದವರು ಭಾಗವಹಿಸಿದ್ದರು.

 

Continue Reading

Mysore

ಯಶಸ್ವಿಗೊಂಡ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ

Published

on

ತಿ.ನರಸೀಪುರ:ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.

 

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ರೋಗಿಗಳು ಶಿಬಿರದಲ್ಲಿ ತಮ್ಮ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಂಡರು. ಈ ಪೈಕಿ 189 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ವಿವಿಧ ಕಣ್ಣಿನ ಸಮಸ್ಯೆ ಇರುವ 121 ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ರಕ್ತದಾನ, ಅರೋಗ್ಯ ಮತ್ತು ಕಣ್ಣಿನ ಪರೀಕ್ಷಾ ಶಿಬಿರಗಳನ್ನು ಆಯೋಜನೆ ಮಾಡುವುದು ಅತ್ಯಂತ ಪುಣ್ಯದ ಕಾಯಕ.ಇಂತಹ ಶಿಬಿರಗಳ ಆಯೋಜನೆಯಿಂದ ನೊಂದವರ ಬಳಿಗೆ ಅಲ್ಪ ಸಹಾಯ ನೀಡಿದ ಆತ್ಮತೃಪ್ತಿ ಇರುತ್ತದೆ. ನಮ್ಮ ಸಂಘದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಶಿಬಿರಗಳ ಸಾರ್ಥಕತೆಯ ಆಧಾರ ಮೇಲೆ ಬೇರೆ ಬೇರೆ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು.ತಾಲೂಕಿನ ಜನರು ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

 

ಶಂಕರ ಆಸ್ಪತ್ರೆಯ ನೇತ್ರತಜ್ಞ ನವೀನ್ ಮಾತನಾಡಿ, ಸರ್ಕಾರಿ ನೌಕರ ಸಂಘದ ವತಿಯಿಂದ ಜನಪರ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಸಾಮಾಜಿಕ ಕಳಕಳಿವುಳ್ಳ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿ. ಶಿಬಿರದಲ್ಲಿ ಆಯ್ಕೆಯಾದ ಗ್ಲಾಕೋಮಾ, ರೇಟಿನಾ, ಕಣ್ಣಿನಪೊರೆ ಸೇರಿದಂತೆ ಕಣ್ಣಿನ ಹಲವು ಸಮಸ್ಯೆವುಳ್ಳ ರೋಗಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.

ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೋಸ್ಲೆ ನಾಗೇಶ್, ಗೌರವಾಧ್ಯಕ್ಷರು ಸುಬ್ರಮಣ್ಯ, ಖಜಾಂಚಿ ನಾಗರಾಜು, ರಾಜ್ಯ ಪರಿಸರ ಸದಸ್ಯ ನಾರಾಯಣಮೂರ್ತಿ, ಪಶು ಸಂಗೋಪನಾ ಇಲಾಖೆ ಶಿವಸ್ವಾಮಿ, ಪಾಪಣ್ಣ, ಬಿಸಿಎಂ ಇಲಾಖೆ ಈಶ್ವರ್, ಆರೋಗ್ಯ ಇಲಾಖೆ ನಾಗು, ಶಂಕರ್, ಸರ್ವೆಇಲಾಖೆ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆ ಮಂಜುನಾಥ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ರೇವಣ್ಣ, ಖಜಾಂಚಿ ಸಿದ್ದಮಲ್ಲಪ್ಪ ಉಪಾಧ್ಯಕ್ಷ ಸಿ.ಮಹದೇವಸ್ವಾಮಿ, ನಿರ್ದೇಶಕರಾದ ಕಿಕ್ಕೇರಿ ಶೆಟ್ಟಿ, ಎಸ್.ನಂದಿನಿ, ರಘು, ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಂಬಳ್ಳಿ ನಾಗರಾಜು, ನಾಗೇಶ್, ಕುಮಾರ್ ನೇತ್ರಾಧಿಕಾರಿ ಉಮೇಶ್, ಮಹೇಶ ಮೂರ್ತಿಶಂಕರ್ ಆಸ್ಪತ್ರೆ ವೈದ್ಯ ಡಾ. ಮಂಜುನಾಥ್, ನೂರ್,ಶೇಷರಾಜ್,ವೈಷ್ಣವಿ,ದಿವ್ಯಾ,ಶಿಬಿರ ಸಂಯೋಜಕ ಶ್ರೀಕಂಠ ಮೂರ್ತಿ, ಕ್ಷೇತ್ರ ಅಧಿಕಾರಿ ಸುನೀಲ್ ಇತರರು ಹಾಜರಿದ್ದರು.

Continue Reading

Mysore

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Published

on

ತಿ.ನರಸೀಪುರ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಕೇಂದ್ರ ಸರ್ಕಾರ ನೀಟ್ ವೃತ್ತಿಪರ ಕೋರ್ಸ್ ಪರೀಕ್ಷೆಯನ್ನು ರದ್ದು ಮಾಡಿರುವುದನ್ನು ಖಂಡಿಸಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ವಿದ್ಯೋದಯ ವೃತ್ರದಲ್ಲಿ ಜಮಾವಣೆಗೊಂಡಿದ್ದ ಕಾಂಗ್ರೆಸ್ ಯುವ ಮುಖಂಡರು, ಕಾರ್ಯಕರ್ತರು, ಮಾನವ ಸರಪಳಿ ರಚಿಸಿ ನೀಟ್ ಪರೀಕ್ಷೆ ರದ್ದುಪಡಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್, ಕೇಂದ್ರ ಸರ್ಕಾರ ತನ್ನ ನಿರ್ಲಕ್ಷ್ಯದಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇದರಿಂದ ದೇಶದ 27ಲಕ್ಷ ವಿದ್ಯಾರ್ಥಿಗಳ ಭವಿಷ್ಯಡೋಲಾಯಮಾನವಾಗಿದೆ.ಈ ಅಕ್ರಮದಿಂದ ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇoದ್ರ ಪ್ರಧಾನ್ ರಾಜೀನಾಮೆ ಪಡೆಯಬೇಕು ಎಂದು ಅಗ್ರಹಿಸಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕೇಂದ್ರ ಸರ್ಕಾರದ ದುಷ್ಟ ಆಡಳಿತ ನೀತಿಯನ್ನು ಖಂಡಿಸಿ ಧರಣಿ ನಡೆಸಲಾಗುತ್ತಿದ್ದು, ಕೇಂದ್ರ ಸರ್ಕಾರ ನೀಟ್ ಪ್ರಶ್ನೆ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವಾಜ್ ಖಾನ್ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟಕರ ವಾಗಿದೆ. ತಮಿಳು ನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಮತ್ತು ಅಸ್ಸಾಂ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕೇಂದ್ರ ಸರ್ಕಾರ ಏಕಾಏಕಿ ಪೆಟ್ರೋಲ್ ಮತ್ತು ಗ್ಯಾಸ್ ದರವನ್ನು ಸಿಕ್ಕಾಪಟ್ಟೆ ಹೆಚ್ಚಳ ಮಾಡಿದ್ದು, ಇದರಿಂದ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟಗಳ ಅರಿವಿಲ್ಲ.ಇವರಿಗೆ ಕಾರ್ಪೋರೇಟ್ ವಲಯದ ಹಿತ ಮಾತ್ರ ಮುಖ್ಯ. ಬಿಜೆಪಿ ಸರ್ಕಾರ ಜನವಿರೋಧಿ ನೀತಿಯಿಂದ ಜನ ಬೇಸತ್ತು ಹೋಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.


ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 89 ಬಾರಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಹಲವು ಪ್ರತಿಭಾನ್ವಿತ ವೈದ್ಯ, ಅಭಿಯಂತರ ಮತ್ತು ಇನ್ನಿತರೆ ಉನ್ನತ ವ್ಯಾಸಂಗ ಮಾಡಲು ಆಕಾಂಕ್ಷಿ ವಿದ್ಯಾರ್ಥಿಗಳು ಸಿದ್ದರಿದ್ದರು. ಆದರೆ, ಕೇಂದ್ರ ಸರ್ಕಾರದ ದುರಾಡಳಿತದಿಂದ ದೇಶದ ಸಾಕಷ್ಟು ವಿದ್ಯಾರ್ಥಿಗಳು ಭ್ರಮನಿರಸನ ಗೊಂಡಿದ್ದಾರೆ. ಹಾಗಾಗಿ ಕೇಂದ್ರ ಆಶಕ್ತ ಸರ್ಕಾರ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಹೊತ್ತು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬನ್ನೂರು ಬ್ಲಾಕ್ ಉಪಾಧ್ಯಕ್ಷ ಸಯ್ಯದ್ ಮಜರ್,ಸೋಸಲೆ ದೇವರಾಜು, ಕನ್ನಾಯಕನಹಳ್ಳಿ ಕುಮಾರ್,ಮಲ್ಲೇಶ್ ಚೌಹಳ್ಳಿ, ತೊಟ್ಟವಾಡಿ ರಾಜೇಂದ್ರ, ಕೇತಹಳ್ಳಿ ಸಿದ್ದಶೆಟ್ಟಿ, ಅರುಣ್ ಕುಮಾರ್, ಸುನಿಲ್ ರಾಜು, ರಂಗರಾಮು, ತೊಟ್ಟವಾಡಿ ರವಿ, ಗಂಗಾಧರ ಚೌಹಳ್ಳಿ, ಹೆಮ್ಮಿಗೆ ರವಿ, ಕಲಿಯೂರು ಸತ್ಯ, ಹ್ಯಾಕನೂರು ಕುಮಾರ್, ಮಹದೇವಸ್ವಾಮಿ, ಮಾವಿನಹಳ್ಳಿ ಮಹಮ್ಮದ್ ಸೈಯದ್ ಭಾಗವಹಿಸಿದ್ದರು.

Continue Reading

Mysore

ದೈವ ನಿಂದನೆ ಪ್ರಕರಣ: ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್

Published

on

ಮೈಸೂರು : ಚಾಮುಂಡಿ ಬೆಟ್ಟಗೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ನೀಡಿ, ಚಾಮುಂಡಿ ತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೈವ ನರ್ತನ ಕುರಿತ ಅವಹೇಳನಕಾರಿ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಅವರು ದೇವಿಯ ಮುಂದೆ ಕ್ಷಮೆ ಯಾಚಿಸಿದರೆಂದು ತಿಳಿದುಬಂದಿದೆ.

ಸಾಮಾನ್ಯ ಭಕ್ತರಂತೆ ಕ್ಯೂನಲ್ಲಿ ನಿಂತು ದೇವಿಯ ದರ್ಶನ ಪಡೆದ ನಟ, ಗರ್ಭಗುಡಿ ವರೆಗೆ ಮಾಸ್ಕ್ ಧರಿಸಿಕೊಂಡೇ ಬಂದರು. ಬಳಿಕ ಗರ್ಭಗುಡಿಗೆ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ವಿಶೇಷ ಆರ್ಭಟವಿಲ್ಲದೆ ಖಾಲಿ ಕೈಯಲ್ಲಿ ಆಗಮಿಸಿದ ಅವರು, ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದರು.

ಯಾರಿಗೂ ಪೂರ್ವ ಮಾಹಿತಿ ನೀಡದೇ ಸಾಮಾನ್ಯರಂತೆ ದೇವಸ್ಥಾನಕ್ಕೆ ಬಂದಿದ್ದ ರಣವೀರ್ ಸಿಂಗ್, ಪೂಜೆ ಹಾಗೂ ದರ್ಶನದ ಬಳಿಕ ಮೌನವಾಗಿ ದೇವಸ್ಥಾನದಿಂದ ನಿರ್ಗಮಿಸಿದರು.

Continue Reading

Trending

error: Content is protected !!