Connect with us

Cinema

ಮುತ್ತುರಾಜ್‌ ಅಭಿಮಾನಿ ಮನೆಗೆ ಯುವರಾಜ್ ಕುಮಾರ್ ಭೇಟಿ

Published

on

ಶ್ರೀರಂಗಪಟ್ಟಣ: ಗಂಜಾಮ್ ನಲ್ಲಿರುವ ಡಾ.ರಾಜ್ ಕುಮಾರ್ ಅಭಿಮಾನಿ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜು ರವರ ನೂತನ ಮನೆಗೆ ಯುವ ನಾಯಕನಟ ಯುವರಾಜ್ ಕುಮಾರ್ ಭೇಟಿ ನೀಡಿ ಶುಭ ಹಾರೈಸಿದರು.

ವರನಟರಾದ ನಮ್ಮ ತಾತನ ಅಭಿಮಾನಿಯ ಕುಟುಂಬದ ಕರೆಗೆ ಓಗೊಟ್ಟು ಅವರ ಮನೆಗೆ ಬಂದಿದ್ದು, ತಮ್ಮ ಕುಟುಂಬದ ಮೇಲೆ ಇಟ್ಟಿರೋ ಅಭಿಮಾನಕ್ಕೆ ಚಿರ ಋಣಿಯಾಗಿರುವುದಾಗಿ ತಿಳಿಸುದ್ದಾರೆ.

ಇದೇ ವೇಳೆ ಅಭಿಮಾನಿ ಕುಟುಂಬವು ಯುವರಾಜ್ ಕುಮಾರ್ ರನ್ನು ಆತ್ಮೀಯವಾಗಿ ಸನ್ಮಾನಿಸಿ ತಮ್ಮ ನೂತನ ಮನೆಯ ಗೋಡೆಯ ಮೇಲೆ ಯುವರಾಜ್ ಕುಮಾರ್ ರಿಂದ ಹಸ್ತಾಕ್ಷರ ಪಡೆದು ಸಂತಸ ವ್ಯಕ್ತಪಡಿಸಿದರು.

 

Continue Reading

Cinema

ಸೀಬರ್ಡ್ ಬಸ್‌ಗೆ ಬೆಂಕಿ ಆವಘಡ : 20ಕ್ಕು ಹೆಚ್ಚು ಮಂದಿ ಸಜೀವ ದಹನ

Published

on

ಹಿರಿಯೂರು : ಬೆಂಗಳೂರಿನಿಂದ ಗೋಕರ್ಣಕ್ಕೆ  ತೆರಳುತ್ತಿದ್ದ ಸೀಬರ್ಡ್‌ ಬಸ್‌  ರಾಷ್ಟ್ರೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲತ್ತು ಬಳಿ ಅಪಘಾತ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ

ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಸಿರಾ ಮತ್ತು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬಸ್ ಅತಿವೇಗದಿಂದ ಕಂಟೈನರ್ ಲಾರಿ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Continue Reading

Cinema

ಯುದ್ಧಕ್ಕೆ ಸಿದ್ಧ ಕಿಚ್ಚ ಸುದೀಪ ಹೇಳಿಕೆ: ಫ್ಯಾನ್ ಫೈಟ್ ಮಧ್ಯೆ ಪೈರಸಿ ವಾರ್‌

Published

on

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಡಿ.25ಕ್ಕೆ  ) ವರ್ಲ್ಡ್‌ವೈಡ್‌ ಬಿಡುಗಡೆಯಾಗುತ್ತಿದೆ. ಆದರೆ ರಿಲೀಸ್‌ಗೂ ಮುನ್ನವೇ ಮಾರ್ಕ್ ಫುಲ್ ಸೌಂಡ್ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು, ಇಡೀ ಸ್ಯಾಂಡಲ್‌ವುಡ್‌ಗೆ ಕಿಚ್ಚು ಹಚ್ಚಿದೆ.

ಹುಬ್ಬಳಿಯ ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚನ ಮಾತಿಗಾಗಿ ಎಲ್ಲರೂ ಕಾದಿದ್ದರು. ಸುದೀಪ್ ಆಡಿದ ಒಂದು ಮಾತು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರೋಕ್ಷವಾಗಿ ಫ್ಯಾನ್ಸ್‌ವಾರ್‌ ಮಾತಿನ ಯುದ್ಧಭೂಮಿಯಾಗಿ ಬದಲಾಗಿದೆ. ಯುದ್ಧಕ್ಕೆ ಸಿದ್ಧ..ಯಾಕಂದರೆ ನಾವು ನಮ್ಮ ಮಾತಿಗೆ ಬದ್ಧ ಎಂದಿದ್ದು, ಫ್ಯಾನ್ಸ್ ಫೈಟ್‌ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಎಂದು ಚರ್ಚೆ ಆರಂಭವಾಗಿದೆ.

ಸುದೀಪ್ ಏಟು..  ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್‌ ತಿರುಗೇಟು

ಸುದೀಪ್ ಹೇಳಿಕೆ ಪೈರಸಿ ಮಾಡೋರಿಗೆ ಖಡಕ್ ವಾರ್ನಿಂಗ್ ನೀಡಿದಂತಿದ್ದರೂ  ಅದು ದರ್ಶನ್ ಫ್ಯಾನ್ಸನ್ನೇ ಉದ್ದೇಶಿಸಿ ಹೇಳಿದ್ದರಾ ಎಂಬ ವಾದ ಶುರುವಾಗಿದೆ. ಕಿಚ್ಚನ ಯುದ್ಧದ ಮಾತಿಗೆ ನಾನಾ ಆಯಾಮ ಪಡೆದುಕೊಂಡಿದೆ. ಇದಕ್ಕೆ ಭಾನುವಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಸುದೀಪ್ ಮಾತಿಗೆ ಕೌಂಟರ್‌ ನೀಡಿದ್ದು ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಹುಟ್ಟುಹಾಕಿವೆ.

ಕಿಚ್ಚ ಸುದೀಪ ಯುದ್ಧ ಮಾತಿಗೆ ದರ್ಶನ್ ಪತ್ನಿ ಟಾಂಗ್ ನೀಡಿದರೆ, ದರ್ಶನ್ ಆಪ್ತ, ನಟ ಧನ್ವೀರ್ ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಫ್ಯಾನ್ಸ್ ವಾರ್ ಇನ್ನಷ್ಟು ಹೆಚ್ಚಿಸಿದೆ. ಮೊದಲಿನಿಂದಲೂ ದರ್ಶನ್ ಪರ ನಿಂತಿರುವ ಧನ್ವೀರ್, ದರ್ಶನ್ ಜೊತೆಗಿರುವ ಮತ್ತೊಂದು ಫೋಟೊ ಹಾಕಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತದೆ. ಆದರೆ ಸಿಂಹನೇ ರಾಜ ಎಂದು ತಮಿಳು ಸಿನಿಮಾ ಡೈಲಾಗ್ ಅನ್ನು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಇನ್ನೊಂದು ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಬೆಂಕಿ ಮಾತಿಗೆ ಶಹಬ್ಬಾಶ್ ಎಂದು ಬರೆದುಕೊಂಡಿದ್ದಾರೆ. ಇದು ದರ್ಶನ್- ಸುದೀಪ್ ಫ್ಯಾನ್ಸ್ ವಾರ್‌ಗೆ ಮತ್ತಷ್ಟು ತುಪ್ಪ ಸುರಿದಂತೆ ಕಾಣುತ್ತಿದೆ.

ಫ್ಯಾನ್ಸ್ ಫೈಟ್ ನಡುವೆ ಪೈರಸಿ ವಾರ್

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಕಿಚ್ಚಿಗೆ  ಮತ್ತೆ ಫ್ಯಾನ್ಸ್ ವಾರ್ ಜೋರಾಗಿದೆ. ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ವಾಕ್ಸಮರ ತಾರಕಕ್ಕೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನು ಒಬ್ಬರು ಕೆಣಕಿ ಪೋಸ್ಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ವಾರ್ ಮಧ್ಯೆ  ಇದೀಗ ಪೈರಸಿ ವಾರ್ ಶುರುವಾಗಿದೆ. ಸ್ಯಾಂಡಲ್‌ವುಡ್ ಸಿನಿಮಾಗಳಿಗೆ ಪೈರಸಿ ಪಿಡುಗು ತಗುಲಿದೆ. ಕನ್ನಡ ಸಿನಿಮಾಗಳಿಗೆ ಪೈರಸಿ ಮಾರಕವಾಗುತ್ತಿದೆ. ಪೈರಸಿ ಪಿಶಾಚಿ ವಿರುದ್ಧ ಡೆವಿಲ್ ಚಿತ್ರತಂಡ ಗರಂ ಆಗಿದೆ. ಡೆವಿಲ್‌ಗೂ ಪೈರಸಿ ಕಾಟ ತಾಗಿದ್ದು, ಈವರೆಗೂ 10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದ್ಯಂತೆ. ಪ್ಲೀಸ್ ಪೈರಸಿ ಬೇಡ ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿ ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್ ಮಾಡಿದೆ.

ಫ್ಯಾನ್ಸ್ ವಾರ್ ನಡುವೆ ಸುದೀಪ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಆಲ್ ಸೆಟ್…? ಎಂದು ಟ್ವೀಟ್ ಮಾಡಿದ್ದಾರೆ. ಯುದ್ಧಕ್ಕೆ ಸಜ್ಜು ಎಂಬ ಸುಳಿವು ಕೊಟ್ಟಂತೆ ಪೋಸ್ಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ನಾನಾ ಅರ್ಥ ನೀಡುತ್ತಿದೆ. ಏಟಿಗೆ ಎದಿರೇಟು ಕೊಡಲು ಕಿಚ್ಚ ಸಿದ್ಧವಾದ್ದರಾ? ಎಂಬ ಚರ್ಚೆ ಹುಟ್ಟು ಹಾಕಿದೆ.

ಯುದ್ಧಕ್ಕೆ ಸಿದ್ಧ, ಹೇಳಿಕೆ ಸುದೀಪ ಆಪ್ತರ ಕ್ಲಾರಿಟಿ

ಸುದೀಪ ಕಿಚ್ಚು ಒಂದ್ಕಡೆಯಾದರೆ, ಮತ್ತೊಂದೆಡೆ  ಅವರ ಆಪ್ತ ಚಂದ್ರಚೂಡ್ ಫೇಸ್‌ಬುಕ್‌ನಲ್ಲಿ ಸುದೀಪ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳನ್ನ ಹಾಳು ಮಾಡುವ ಒಂದು ಪಡೆ ಇದೆ. ಪೈರಸಿ ಮಾಡುವವರ ವಿರುದ್ಧ ನಮ್ಮ ಹೋರಾಟ. ಮ್ಯಾಕ್ಸ್ ರಿಲೀಸ್ ಆಗಿದ್ದಾಗ 11 ಸಾವಿರ ಲಿಂಕ್ಸ್‌ಗಳನ್ನು ನಾವು ಡಿಲೀಟ್ ಮಾಡಿದ್ದೇವೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ? ಎಂದು ದರ್ಶನ್ ಫ್ಯಾನ್ಸ್‌ಗೆ ಕೌಂಟರ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ ಆಪ್ತ, ಮಾಜಿ ಸಚಿವ ರಾಜೂ ಗೌಡ ಅವರು ಸಹ ಮಾತನಾಡಿದ್ದು, ಸುದೀಪ ಫ್ಯಾನ್ಸ್ ಕಾಂಜಿ ಪೀಂಜಿ ಅಲ್ಲ. ಕ್ಲಾಸ್ ಫ್ಯಾನ್ಸ್ ಎಂದು ಹೇಳಿದ್ದರು. ಈ ಮಾತು ಸಹ ಪರೋಕ್ಷವಾಗಿ ದರ್ಶನ್ ಫ್ಯಾನ್ಸ್ ಗುರಿಯಾಗಿಸಿ ಹೇಳುವಂತಿತ್ತು.
ಈ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು,   ಸುದೀಪ ಯುದ್ಧಕ್ಕೆ ಸಿದ್ಧ ಎಂದಿದ್ದು  ಪೈರಸಿ ವಿರುದ್ಧ ಮಾತ್ರ. ಇನ್ನೊಬ್ಬರನ್ನು ದೃಷ್ಟಿಯಲ್ಲಿ ಇಟ್ಕೊಂಡು ಹೇಳಿಲ್ಲವೆಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗೂ ಸ್ಪಷ್ಟನೆ ನೀಡಿದ್ದಾರೆ.
Continue Reading

Chamarajanagar

ಗಂಗವಾಡಿ ಗ್ರಾಮದಲ್ಲಿ ಚಿರತೆ ದಾಳಿ: ಹಸು ಕರು ಬಲಿ

Published

on

ಚಾಮರಾಜನಗರ: ತಾಲ್ಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ನಾಲ್ಕು ಹಸು, ಕರು ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.

ಗಂಗವಾಡಿ ಗ್ರಾಮದ ನಿವಾಸಿ ರಾಮಯ್ಯ ಎಂಬುವರು ಹಸುವನ್ನು ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದಾಗ ದಾಳಿ ನಡೆಸಿರುವ ಚಿರತೆ ಹಸು ಹಾಗೂ ಕರುಗಳನ್ನು ಕೊಂದುಹಾಕಿದೆ.

ಚಿರತೆಯು ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರ ಎಳೆದು ತಂದು ಹಸುವಿನ ಅರ್ಧ ಭಾಗವನ್ನು ತಿಂದು ಹಾಕಿದೆ. ಉಳಿದಂತೆ ಹಸು ಮತ್ತು ಕರುವಿನ ಕುತ್ತಿಗೆಗೆ ಗಾಯಗಳಾಗಿ ಸಾವನ್ನಪಿವೆ.

ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಇಲಾಖೆಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಚಿರತೆ ಸೆರೆಗೆ ಬೋನ್ ಇರಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿರತೆ ಸೆರೆಗೆ ಒತ್ತಾಯ:
ಗಂಗವಾಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಾಯರವಾಗಿ ಚಿರತೆ ದಾಳಿ ನಡೆಯುತ್ತಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆಯೂ ಹಲವು ಹಸುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಹಾಗಾಗಿ ಚಿರತೆ ಸೆರೆಗೆ ಬೋನ್ ಇರಿಸಬೇಕು. ಪದೇ ಪದೇ ಚಿರತೆ ಹಸುವಿನ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆಯನ್ನು ಶೀಘ್ರದಲ್ಲಿಯೇ ಸೆರೆಹಿಡಿಯಬೇಕು. ಹಸುವಿನ ಮಾಲೀಕ ರಾಮಯ್ಯ ಅವರಿಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!