Connect with us

Cultural

ಯುವ ಸಂಭ್ರಮಕ್ಕೆ ಶುಕ್ರವಾರ ಸಂಭ್ರಮ ಸಡಗರದ ಚಾಲನೆ

Published

on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ಮುನ್ನುಡಿ ಬರೆಯುವ, ಯುವ ಮನಸ್ಸುಗಳ ನೆಚ್ಚಿನ ಕಾರ್ಯಕ್ರಮ ಯುವ ಸಂಭ್ರಮಕ್ಕೆ ಶುಕ್ರವಾರ ಸಂಭ್ರಮ ಸಡಗರದ ಚಾಲನೆ ದೊರೆಯಿತು.

ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಝಗಮಗಿಸುವ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ಕಿವಿಗಡಚಿಕ್ಕುವ ಯುವ ಮನಸ್ಸುಗಳ ಘೋಷಣೆಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದೀಪಬೆಳಗಿಸಿ, ಡೊಳ್ಳು ಬಾರಿಸಿ ಯುವ ಸಂಭ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಕಿವಿಗಡಚಿಕ್ಕುವ ಹಾಡುಗಳಿಗೆ ಯುವಕ ಯುವತಿಯರು ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಮುಂಭಾಗ ಸೇರಿದ್ದ ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮದ ಅಲೆಯಲ್ಲಿ ತೇಲಿದರು. ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಯುವ ಸಂಭ್ರಮಕ್ಕೆ ತಾರಾ ಮೆರುಗು ನೀಡಿದರು.

ಯುವ ಸಮುದಾಯವೇ ತುಂಬಿದ್ದ ಅಂಗಳಕ್ಕೆ ತಾರಾ ದಂಪತಿಗಳು ಪ್ರವೇಶಿಸುತ್ತಿದ್ದಂತೆ ಮಿಂಚಿನ ಸಂಚಾರವಾಯಿತು. ಯುವಸ್ತೋಮದತ್ತ ಕೈ ಬೀಸಿದಾಗ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವು ಎಂಟು ದಿನಗಳ ಕಾಲ ವಿವಿಧ ಜಿಲ್ಲೆಗಳ 400 ಕಾಲೇಜಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ನಡೆಯಲಿದೆ. ಅನೇಕ ಉತ್ತಮವಾದ ವಸ್ತುವಿಷಯ ಕುರಿತು ನೃತ್ಯ ರೂಪಕಗಳು ಪ್ರದರ್ಶನಗೊಳ್ಳುವ ಮೂಲಕ ದೇಶಕ್ಕೆ ಉತ್ತಮವಾದ ಸಂದೇಶ ನೀಡಲಿದೆ ಎಂದು ತಿಳಿಸಿದರು. ದೇಶದ ಜನಸಂಖ್ಯೆಯಲ್ಲಿ ಯುವ ಸಮೂಹ ಶೇ.42 ರಷ್ಟಿದೆ. ದೇಶದ ಭವಿಷ್ಯ ನಿಂತಿರುವುದು ಯುವಕರ ಬದುಕಿನ ಮೇಲೆ. ಅವರ ಬದುಕಿಗೆ ಭದ್ರ ಬುನಾದಿಯನ್ನು ಉತ್ತಮ ಸಿದ್ಧಾಂತದ ಮೇಲೆ ನಿರ್ಮಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾರಾದಂಪತಿ ವಸಿಷ್ಠಸಿಂಹ‌ ಮತ್ತು ಹರಿಪ್ರಿಯಾ ಆಗಮಿಸಿ ಮಾತನಾಡಿದರು. ಶಾಸಕರಾದ ಕೆ.ಹರೀಶ್‌ಗೌಡ, ರವಿಶಂಕರ್, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕಾರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ವಿ.ಆರ್.ಶೈಲಜಾ, ಯವ ಸಂಭ್ರಮ ಉಪಸಮಿತಿ ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ನಿಂಗರಾಜು, ಡಿಸಿಪಿ ಮುತ್ತುರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Cultural

ಶ್ರೀರಾಮನ ಚರಿತ್ರೆ ವಿಶ್ವಕ್ಕೆ ಸಾರಿದ ಶ್ರೀಮಹರ್ಷಿ ವಾಲ್ಮೀಕಿ — ಶಾಸಕ ದರ್ಶನ್ ಧ್ರುವನಾರಾಯಣ್

Published

on

ನಂಜನಗೂಡು ನ.15

ಶ್ರೀ ರಾಮನ ಚರಿತ್ರೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ನಾಯಕ ಶ್ರೀ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಗುಣಗಳು ಪ್ರಜಾಪ್ರಭುತ್ವಕ್ಕೆ ಬಹು ಮುಖ್ಯವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಪಡೆದುಕೊಳ್ಳುವ ಮೂಲಕ ಆರ್ಥಿಕ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತೆನೆ ಎಂದರು.
ಸರ್ಕಾರಿ ಸೌಲಭ್ಯ ಪಡೆಯಲು ಯಾವುದೇ ಜಾತಿಭೇದ ಮಾಡಬೇಡಿ ಸಮಾಜಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ವಾಲ್ಮೀಕಿ ಸಮುದಾಯ ಸಾರಬೇಕು.ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಗ್ರಾಮದ ಎಲ್ಲ ನಾಯಕ ಸಮಾಜದವರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ಇರಬೇಕು.ಶ್ರೀ ಮಹರ್ಷಿ ವಾಲ್ಮೀಕಿ ಅವರ ರಾಮಾಯಣದಲ್ಲಿ ಹೆಚ್ಚು ರೂಪಕ ಅಲಂಕಾರ ಬಳಕೆಯಾಗಿರುವುದ್ದರಿಂದ ಕಾಳಿದಾಸ ಕವಿ ಮಹರ್ಷಿ ವಾಲ್ಮೀಕಿ ಅವರನ್ನು ಕವಿಕುಲ ಚಕ್ರವರ್ತಿ ಎಂಬುದಾಗಿಯೋ ವರ್ಣಿಸಿದ್ದಾರೆ ಅಲ್ಲದೇ ಜಗತ್ತಿನ ಶ್ರೇಷ್ಠ ವಿಮಾರ್ಶಕ ಥಾಮಸ್ ಪ್ರಕಾರ ವಾಲ್ಮೀಕಿ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯ ಸಂಪತ್ತು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುಂಬ್ರಳ್ಳಿ ಸುಬ್ಬಣ್ಣ, ಶ್ರೀ ಕಂಠನಾಯಕ,ತಾ ಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್,ನಾಯಕ ಸಂಘದ ತಾಲ್ಲೂಕು ಅದ್ಯಕ್ಷ ಬಂಗಾರನಾಯಕ, ಕಾಂಗ್ರೆಸ್ ಯುವ ಘಟಕದ ಅದ್ಯಕ್ಷ ದೇಬೂರು ಆಶೋಕ್,ಗ್ರಾ ಪಂ ಅದ್ಯಕ್ಷೆ ತಾಯಮ್ಮ,
ದೊರೆಸ್ವಾಮಿನಾಯಕ,ಅಭಿನಂದನ್ ಪಾಟೀಲ್,ಗ್ರಾ ಪಂ ಸದಸ್ಯದೇವನಾಯಕ,ನಾಗನಾಯ್ಕ,ಶ್ರೀಕಂಠಸ್ವಾಮಿ,ಶಿವರಾಜು,ಪ್ರಕಾಶ್,ನಂಜುಂಡಸ್ವಾಮಿ, ಸಿದ್ದು,ಮಹೇಶ್, ಮಹೇಂದ್ರ, ಹಾಗೂ ಕಿಚ್ಚಿನ ಅಭಿಮಾನಿ ಬಳಗದವರು ಹಾಜರಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading

Cultural

ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ

Published

on

ಆಲೂರು : ನೂರಾರು ವರ್ಷಗಳ ಪುರಾತನ ಕಾಲದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.ತಾಲ್ಲೂಕಿನ ಕಸಬಾ ಹೋಬಳಿ ಸೊಂಪುರ ಗ್ರಾಮದ ಸಮೀಪದಲ್ಲಿರುವ ನಂಜದೇವರ ಕಾವಲಿನಲ್ಲಿ ಸುಕ್ಷೇತ್ರ ನಂಜುಂಡೇಶ್ವರ ದೇವಾಲಯದಲ್ಲಿ 52ನೇ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಬೆಳಗಿನ ಜಾವದಿಂದಲೇ ದೇವಾಲಯ ಶುಚಿಗೊಳಿಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿ ವಿವಿಧ ಅಭಿಷೇಕ ಸೇರಿದಂತೆ ಅಲಂಕಾರ ಮಹಾ ಮಂಗಳಾರತಿ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು.

ಆಲೂರು ತಾಲೂಕು ಸೇರಿದಂತೆ ಹಲವೆಡೆಗಳಿಂದ ನೂರಾರು ಭಕ್ತರ ದಂಡು ಅಗಮಿಸಿ ಪೂಜಾ ಕಾರ‍್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ವಿಶೇಷ ಎಂದರೆ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಕೋರಿಕೆಗಾಗಿ ಹರಕೆ ಹೊರುತ್ತಿದ್ದು. ಕೋರಿಕೆಗಳು ಈಡೇರಿದ ನಂತರ ಭಕ್ತರು ಪ್ರತಿ ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಂದು ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಭಕ್ತಾಧಿಗಳೇ ಸ್ವಯಂ ಪ್ರೇರಿತರಾಗಿ ಹಮ್ಮಿಕೊಳ್ಳುತ್ತ ಬಂದಿದ್ದಾರೆ ಎಂದು ದೇಗುಲ ಟ್ರಸ್ಟ್ ಅಧ್ಯಕ್ಷ ಈರಣ್ಣಯ್ಯ ತಿಳಿಸಿದ್ದಾರೆ.

Continue Reading

Cultural

ಬ್ರಹ್ಮ ಕುಮಾರೀಸ್ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಪತ್ರಕರ್ತರ ಸಂಘದಲ್ಲಿ ರಕ್ಷಾಬಂಧನ

Published

on

ಮಂಡ್ಯ: ನಗರದ ಬನ್ನೂರು ರಸ್ತೆಯಲ್ಲಿರುವ ಬ್ರಹ್ಮ ಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಪತ್ರಕರ್ತರ ಸಂಘದಲ್ಲಿ ಸೋಮವಾರ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು .ಪತ್ರಕರ್ತರಿಗೆ ರಾಕಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಬಿ.ಕೆ.ಶ್ವೇತ ಚಾಲನೆ ನೀಡಿದರು.ನಂತರ ಬಿ.ಕೆ.ಶಾರದಾ ಅವರು ಮಾತನಾಡಿ, ನನ್ನ ಕರ್ಮ ನನ್ನನ್ನು ರಕ್ಷಣೆ ಮಾಡುತ್ತದೆ. ಪರಮಾತ್ಮನು ರಕ್ಷಿಸುತ್ತಾನೆ ಎಂದರು.ಸಮಾಜದಲ್ಲಿ ಕಾಮ, ಕ್ರೋಧ, ಮದ, ಮತ್ಸರಗಳು ಅತಿಯಾಗಿದೆ. ಹಾಗಾಗಿ ಪಂಚಕರ್ಮಗಳಿಂದ ನಮಗೆ ರಕ್ಷಣೆ ಬೇಕಿದೆ ಎಂದು ತಿಳಿಸಿದರು.

ಎಲ್ಲಾ ಆತ್ಮಗಳು ಒಳ್ಳೆಯ ಆತ್ಮಗಳಾಗಿದೆ. ಆದರೆ ಆತ್ಮದಲ್ಲಿನ ನಕರಾತ್ಮಕ ಭಾವನೆ ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದರು. ವಿದ್ಯಾದೇವತೆ ಸರಸ್ವತಿಗೆ ಪರಮಾತ್ಮನ ಜ್ಞಾನವಿದೆ. ಹಾಗಾಗಿ ಆಕೆಯನ್ನು ವಿದ್ಯಾದೇವಿ ಎಂದು ಪೂಜಿಸುತ್ತೇವೆ ಎಂದು ತಿಳಿಸಿದ ಅವರು, ಆಧ್ಯಾತ್ಮಿಕ ಜ್ಞಾನವಿಲ್ಲದೆ ನಾವು ಏನನ್ನು ಸಾಧಿಸಲು ಆಗುವುದಿಲ್ಲ. ಈ ಜ್ಞಾನವಿದ್ದಲ್ಲಿ ವಿಕಾರಗಳಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿಕೆ ಗೀತಾಂಜಲಿ, ಬಿಕೆ ಯಶೋಧ, ಬಿ.ಕೆ.ಪ್ರಶಾಂತ್ ಉಪಸ್ಥಿತರಿದ್ದರು.

Continue Reading

Trending

error: Content is protected !!