Mysore
ಯೋಗಾಭ್ಯಾಸ ಸ್ವಂತ ಶ್ರಮದ ಆರೋಗ್ಯ ವಿಮೆ : ಜಿಲ್ಲಾಧಿಕಾರಿ ಡಾ.ಕುಮಾರ
ಮಂಡ್ಯ: ರೋಗವನ್ನು ದೂರವಿಟ್ಟು ಆರೋಗ್ಯವನ್ನು ವೃದ್ಧಿಸುವ ಶಕ್ತಿ ಯೋಗಾಭ್ಯಾಸಕ್ಕೆ ಇದೆ. ಯೋಗ ಎಂಬುದು ದಿನನಿತ್ಯ ರೂಡಿಸಿಕೊಂದರೆ, ಅದು ಹಣ ಕಟ್ಟದೆ ಸ್ವಂತ ಶ್ರಮದಿಂದ ಪಡೆಯುವ ಆರೋಗ್ಯ ವಿಮೆ ಇದ್ದಂತೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಪಿಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದು, ಯೋಗವನ್ನು ಸಂಜೀವಿನಿ ಎಂದು ಕರೆಯಬಹುದು. ಪ್ರತಿಯೊಬ್ಬರೂ ದಿನದ 24 ಗಂಟೆಯಲ್ಲಿ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಡಿ ಎಂದರು.
ಯೋಗ ಬಲ್ಲವನಿಗೆ ರೋಗದ ಭಯವಿಲ್ಲ, ರೋಗ ಇರುವವನಿಗೆ ಯೋಗದ ಅರಿವಿಲ್ಲ. ರೋಗ ಬರುವ ಮುಂಚೆ ಯ ಯೋಗಾಭ್ಯಾಸ ಮಾಡುವ ಯೋಗ ನಮ್ಮದಾಗಲಿ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದ ನಾಥ ಸ್ವಾಮೀಜಿ ಅವರು ಮಾತನಾಡಿ, ದೇಹ ದಂಡನೆ ಮಾಡಲು ಹೋಗಿ ಎಷ್ಟೋ ಜನರು ಪ್ರಾಣ ಕುತ್ತು ತಂದು ಕೊಂಡಿರುವವರು ಕೂಡ ಇದ್ದಾರೆ. ಆದರೆ ಯೋಗ ಮಾಡುವುದರಿಂದ ಯಾವುದೇ ತರಹ ಪ್ರಾಣ ಹಾನಿ ಇಲ್ಲ, ಹಣ ಖರ್ಚು ಮಾಡುವ ಆಗಿಲ್ಲ. ಹೆಚ್ಚು ಶ್ರಮ ಕೂಡ ಹಾಕುವ ಆಗಿಲ್ಲ ಆದ್ದರಿಂದ ಪ್ರತಿಯೊಬ್ಬರು ಕೂಡ ಯೋಗವನ್ನು ಮಾಡಿ ಮನಸ್ಸಿನ ನೆಮ್ಮದಿಯನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಯೋಗಾಭ್ಯಾಸವನ್ನು ಕೇವಲ ಒಂದು ದಿನ ಮಾಡಿದರೆ ಸಾಲದು ಅದರ ಪ್ರಯೋಜನ ಕಂಡುಕೊಳ್ಳಬೇಕು ಎಂದರೆ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡಬೇಕು ಎಂದು ತಿಳಿಸಿದರು.
ಶ್ರೀರಂಗಪಟ್ಟಣ ಬೇಬಿ ಮಠ ಮತ್ತು ಚಂದ್ರವನಾಶ್ರಮ ಪೀಠಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಮಾತಾನಾಡಿ, ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ಹೆಮ್ಮೆ ಭಾರತ ದೇಶಕ್ಕಿದೆ.
ಇಂದು ಎಲ್ಲಾ ರಾಷ್ಟ್ರಗಳ ಜೊತೆಗೆ ಏಕಕಾಲಿಕವಾಗಿ ಯೋಗದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ದೇಹವನ್ನು ದಂಡಿಸದೆ ದೇಹಕ್ಕೆ ಹಾಗೂ ಮನಸ್ಸಿಗೆ ಉಲ್ಲಾಸ ಕೊಡುವ ಜೊತೆಗೆ ಸದೃಢ ಆರೋಗ್ಯವನ್ನು ಹೊಂದಲು ಯೋಗ ಬಹಳ ಉಪಯುಕ್ತವಾಗಿದೆ.
ಶಾಲಾ ಪಠ್ಯ ಪುಸ್ತಕದಲ್ಲಿ ಎಲ್ಲಾ ವಿಷಯದ ಬಗ್ಗೆ ಪಾಠಗಳನ್ನು ಅಳವಡಿಸಿದ್ದಾರೆ. ಅದೇ ರೀತಿ ಪಠ್ಯ ಪುಸ್ತಕ ದಲ್ಲಿ ಯೋಗ ಶಾಸ್ತ್ರವನ್ನು ಅಳವಡಿಸಿದರೆ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗುತ್ತದೆ ಎಂದು ಹೇಳಿದರು.
ಯೋಗಾಭ್ಯಾಸದಿಂದ ಅಂಗಾಂಗಗಳು ಬಲವಾಗುತ್ತವೆ. ಕಣ್ಣುಗಳ ದೃಷ್ಟಿ ಚೆನ್ನಾಗಿರುತ್ತದೆ, ಯಾವುದೇ ಅನಾರೋಗ್ಯವು ಸಹ ನಮ್ಮ ಬಳಿ ಸುಳಿಯುವುದಿಲ್ಲ. ಆದ್ದರಿಂದ ದಿನ ನಿತ್ಯ ಯೋಗಾಭ್ಯಾಸ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಓಂ ಪ್ರಕಾಶ್, ನೆಹರು ಯುವ ಕೇಂದ್ರದ ಅಧಿಕಾರಿ ರಾಜೇಶ್ ಕಾರಂತ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಶಂಕರನಾರಾಯಣ ಶಾಸ್ತ್ರಿ, ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷರಾದ ಮೀರಾಶಿವಲಿಂಗಯ್ಯ, , ಭಾರತ ಸ್ಕೌಟ್ಸ್ ಅಂಡ್ ಗೈಡ್ ನ ಭಕ್ತವತ್ಸಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
Mysore
ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು
ಮೈಸೂರು: ಶ್ರೀ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 27ರಂದು 155 ಜೋಡಿಗಳು ಸತಿ-ಪತಿಗಳಾಗಲಿದ್ದಾರೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಉಡಿಗಾಲ ಆರ್.ಕುಮಾರಸ್ವಾಮಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ಪ್ರಸಕ್ತ ವರ್ಷದ ಸಾಮೂಹಿಕ ವಿವಾಹದಲ್ಲಿ 155 ಜೋಡಿಗಳು ಸತಿ-ಪತಿಗಳಾಗಲಿದ್ದು, ಇದರಲ್ಲಿ ಮೈಸೂರು ಜಿಲ್ಲೆಯ 29 ಜೋಡಿಗಳು ಹಾಗೂ ಚಾಮರಾಜನಗರ ಜಿಲ್ಲೆಯ 43 ಜೋಡಿಗಳು ಸೇರಿವೆ. ಸುತ್ತೂರು ಶ್ರೀ ಮಠ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ಸ್‌ನ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ, ಗದಗ ಜಿಲ್ಲೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಶ್ರೀ ಕಲ್ಲಯ್ಯಜ್ಜ ಅವರು ಉಪಸ್ಥಿತರಿದ್ದು ನವ ವಧು-ವರರನ್ನು ಆಶಿರ್ವದಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಾಹವಾಗಲಿರುವ ವಧು-ವರರ ವಿವರ:ವೀರಶೈವ ಲಿಂಗಾಯತ ಸಮುದಾಯ-3 ಜೋಡಿ. ಪರಿಶಿಷ್ಠ ಜಾತಿ-84 ಜೋಡಿ. ಪರಿಶಿಷ್ಟ ಪಂಗಡ-22 ಜೋಡಿ. ಹಿಂದುಳಿದ ವರ್ಗ-22 ಜೋಡಿ. ಅಂತರ್ಜಾತಿ-23 ಜೋಡಿ. ಅಂತರಧರ್ಮ -1 ಜೋಡಿ. ವಿಶೇಷ ಜೋಡಿಗಳ ವಿವರ: ತಮಿಳುನಾಡು-17ಜೋಡಿ.ವಿಶೇಷ ಚೇತನರು-3 ಜೋಡಿ.ಮರು ವಿವಾಹ 1 ಜೋಡಿ ಎಂದು ಅವರು ಹೇಳಿದರು
Mysore
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್‌ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
ಮೈಸೂರು: ಲೋಕಾಯುಕ್ತರಿಗೆ ಪೋಸ್ಟಿಂಗ್ ಕೊಡೋದು ಸರ್ಕಾರ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಸಿಎಂ ಆಗಿರುವಾಗ, ಇಲ್ಲೇ ಹಗರಣವಾಗಿದೆ. ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದೆ ಎಂದು ಎಂಎಲ್‌ಸಿ ಡಾ. ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ನೀಡಲಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಸಿಎಂ ಪ್ರೆಸ್ ಮೀಟ್ ಮಾಡುವಾಗ ಹಿಂದೆಯಿಂದ ಸಚಿವ ಭೈರತಿ ಸುರೇಶ್ 62 ಕೋಟಿ ಸರ್ ಎಂದು ಹೇಳುತ್ತಾರೆ. ಇದನ್ನೇಕೆ ಲೋಕಾಯುಕ್ತ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ.? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಯಾವುದೋ ಶಾಸಕರ ಅಧಿಕಾರಿಗಳಾಗಬಾರದು ಎಂದು ಎಚ್.ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಅರಮನೆ ಆಸ್ತಿ ವಿಚಾರವಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಸಂಬಂಧ ಮಾತನಾಡಿ, ಸಿದ್ದರಾಮಯ್ಯ ಸಿಎಂ ಅದಾಗಲೆಲ್ಲಾ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ. ಸುಗ್ರೀವಾಜ್ಞೆ ಹೊರಡಿಸುವ ಬದಲು ಮಹಾರಾಣಿ ಅವರೊಂದಿಗೆ ಕುಳಿತು ಮಾತನಾಡಿ ಸೆಟಲ್ಮೆಂಟ್ ಮಾಡಬಹುದಿತ್ತು. ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.
ಸಿಎಂ ಅದಾಗಲೆಲ್ಲಾ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ಕೊಡ್ತಿದ್ದಾರೆ. ರಸ್ತೆ ಹೆಸರಲ್ಲಿ ರಾಜರ ಹೆಸರು ತೆಗೆಯುವುದು. ಅಂತಹ ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಸರಿಯಲ್ಲ. ನಾನು ಡೆಮೋಕ್ರ್ಯಾಟಿಕ್ ಎಂದು ತೋರಿಸಿಕೊಳ್ಳಲು ಇದೆನ್ನೆಲ್ಲ ಮಾಡುತ್ತಿದ್ದಾರೆ. ಸಿಎಂ ಈ ರೀತಿ ನಡೆದುಕೊಳ್ಳಬಾರದು ಎಂದು ಹೇಳಿದರು.
ಜನಾರ್ಧನರೆಡ್ಡಿ ಗೆದ್ದಿದ್ದೇ ಶ್ರೀರಾಮುಲುವಿನಿಂದ. ದುಡ್ಡೇನು ಅವರಪ್ಪನ ಮನೆಯಿಂದ ತಂದಿದ್ದಾ? ಗಣಿ ದುಡ್ಡಲ್ಲಿ ರೆಡ್ಡಿ ಗೆದ್ದಿದ್ದಾನೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದ ಒಬ್ಬ ನಾಯಕ. ಆತನ ಬಗ್ಗೆ ರೆಡ್ಡಿ ಹೀಗೆಲ್ಲಾ ಮಾತನಾಡಬಾರದು.
ವಾಲ್ಮೀಕಿ, ದಲಿತ, ಹಿಂದುಳಿದ ವರ್ಗಗಳಿಂದ ರೆಡ್ಡಿ ಗೆದ್ದಿರೋದು. ರಾಮುಲು ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಜನಾರ್ಧನರೆಡ್ಡಿ-ಶ್ರೀರಾಮುಲು ನಡುವೆ ವೈಮನಸ್ಸು ವಿಚಾರವಾಗಿ ಶ್ರೀರಾಮುಲು ಪರ MLC ಎಚ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ವರಿಷ್ಠರು ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಇರೋರು ಡಮ್ಮಿ ವರಿಷ್ಠರು. ಯಾರೋ ಹೇಳಿದ್ದನ್ನು ಬಂದು ಹೇಳುವ ವರಿಷ್ಠರು ಇದ್ದಾರೆ. ಎಲ್ಲಾ ಪಾರ್ಟಿಯಲ್ಲೂ ಇದೇ ತರಹದ ವರಿಷ್ಠರು ಇದ್ದಾರೆ. ವಿಜಯೇಂದ್ರ ಯಾರು? ಯಡಿಯೂರಪ್ಪ ಯಾರು? ಎಂದು ಎಲ್ಲರಿಗೂ ಗೊತ್ತು. ವಿಜಯೇಂದ್ರಗೆ ಅಧಿಕಾರ ಮಾಡಲು ಯತ್ನಾಳ್ ಗುಂಪು ಬಿಡುತ್ತಿಲ್ಲ. ನನ್ನ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ನನ್ನನ್ನು ಬಿಜೆಪಿ ಸಭೆಗೆ ಕರೆಯೋದಿಲ್ಲ. ಸಭೆಯಲ್ಲಿ ಎಲ್ಲಿ ನಾನು ಕೆಲವು ವಿಷಯ ಬಾಯಿ ಬಿಡುತ್ತೇನೋ ಎಂದು ಕರೆಯೋದಿಲ್ಲ. ಮೈಸೂರಿನ ಬಿಜೆಪಿಯವರು ಕರೆಯೋದಿಲ್ಲ. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಸಭೆಗೂ ಕರೆದಿಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
Mysore
ನಂಜನಗೂಡು: ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮ
ನಂಜನಗೂಡು ಜ.25 ಮಹದೇವಸ್ವಾಮಿ ಪಟೇಲ್.
ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಇಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕರುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಗಿಡಕ್ಕೆ ನೀರಾಕುವ ಮೂಲಕ ಉದ್ಘಾಟಿಸಿದರು.
ಬಳಿಕ ಶಾಸಕರು ಮಾತನಾಡಿ ಪಶುವೈದ್ಯ ಆಸ್ಪತ್ರೆ ಆಗಬೇಕೆಂದು ಸಾಕಷ್ಟು ಬಳಿ ಗ್ರಾಮಸ್ಥರು ಹೇಳಿದ್ದೀರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೆ, ಇವಾಗ ನಿಮ್ಮ ಊರಿಗೆ ಪ್ರತ್ಯೇಕವಾಗಿ ಪಶು ವೈದ್ಯಕೀಯ ಆಸ್ಪತ್ರೆ ಮಂಜೂರು ಮಾಡಲಾಗಿದೆ ಮುಖ್ಯಮಂತ್ರಿ ಅವರು ಮಾಡಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಪಶು ವೈದ್ಯಕೀಯ ಸಚಿವರಾದ ವೆಂಕಟೇಶ್ ಅವರನ್ನು ಕರೆತಂದು ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಕರುಗಳಿಗೆ ಜಂತು ನಾಶ, ಮತ್ತು ಕಂದೂರೋಗ, ಬರಬಾರದು ಎಂದು ಪಶುವೈದ್ಯಕೀಯ ಮಲ್ಲಿಕಾರ್ಜುನ ರವರು ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ಉಚಿತವಾಗಿ ಎಲ್ಲಾ ಕರುಗಳಿಗೆ ತೊಂದರೆ ಆಗಬಾರದುವೆಂದು ನಿಯಂತ್ರಣ ಮೂಲಕ ಲಸಿಕೆ ನೀಡಿದ್ದಾರೆ ಈ ಅವಕಾಶವನ್ನು ರೈತ ಬಾಂಧವರು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪಶುವೈದ್ಯ ಇಲಾಖೆಯ ಸಹಕಾರ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡಿ
ಕರುಗಳನ್ನು ಉತ್ತಮ ರೀತಿಯಲ್ಲಿ ಪಾಲನೆ ಪೋಷಣೆ ಮಾಡಿದರೆ 500 ಉದ್ಯಮಿ ಲಾಭಾಂಶ ಮಾಡುವುದಕ್ಕೆ ಮುಖ್ಯ ಅಂಶವಾಗಿರುತ್ತದೆ. ಕಾಲಕಾಲಕ್ಕೆ ಕರುಗಳಿಗೆ ಜಂತು ನಾಶ ಉತ್ಸವ ನೀಡಿದರೆ. ಒಳವರಿ ಜೀವಿ ಮತ್ತು ಹೂರ ಒಳ ಜೀವಿಗಳಿಗೆ ಜಂತುಹುಳಗಳು ಮುಕ್ತ ಮಾಡಿದರೆ ಉತ್ತಮ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ಸರಿಯಾಗಿ ಕಾಲಕಾಲಕ್ಕೆ ಮುಖ್ಯವಾಗಿ ಲಸಿಕೆ ಹಾಕಿಸಿದರೆ ಹಸುಗೆ ಯಾವುದೇ ಕಾರಣಕ್ಕೂ ಮುಂದಿನ ಗಳಲ್ಲಿ ಅಬೋಶನ್ ಹಾಗುವುದಿಲ್ಲ, ಮತ್ತು ಹಸು ಗರ್ಭ ಕಟ್ಟುತ್ತದೆ, ಅಥವಾ ಕಂದು ಹಾಕುವುದಿಲ್ಲ ಆದ್ದರಿಂದ ರೈತರು ಲಸಿಕೆ ಹಾಕಿಸಿ ಇಂತಹ ತಡೆಗಟ್ಟಬಹುದು ಎಂದು ತಿಳಿಸಿದರು.
ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನ, ಆಯೋಜಿಸಲಾಗಿತ್ತು.
ಎಚ್.ಎಫ್.ತಳಿ, ಜೆರ್ಸಿ ತಳಿ , ನಾಟ ತಳಿ, ವಿಜೇತರಾಗಿದ್ದ ರೈತರಿಗೆ ಬಹುಮಾನವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಗ್ರಾ. ಪಂ ಅಧ್ಯಕ್ಷರಾದ ವನಕರ ನಾಯಕ, ಉಪಾಧ್ಯಕ್ಷರಾದ ಲತಾ ಬಸಪ್ಪ , ಶಾಂತ ಮಲ್ಲು, ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ಸಿದ್ದರಾಜು, ಮಣಿಕಂಠ , ನಾಗಮ್ಮ , ಶಾರದಮ್ಮ, ಗುರುಸಿದ್ದಪ್ಪ , ಪುಟ್ಟಸ್ವಾಮಿ, ನಂಜನಗೂಡು ಪಶುವೈದ್ಯಾಧಿಕಾರಿ, ಪಶುವೈದ್ಯ ಸಿಬ್ಬಂದಿಗಳು, ಸೇರಿದಂತೆ ಮುಖಂಡರು, ಯಜಮಾನರು ಮತ್ತು ಗ್ರಾಮಸ್ಥರು ಗಳ ಇದ್ದರು.
-
Mysore18 hours ago
ಹೃದಯಾಘಾತದಿಂದ ಯುವರಾಜ ಕಾಲೇಜಿನ ಪ್ರಾಂಶುಪಾಲ ನಿಧನ
-
Mysore15 hours ago
ಲೋಕಾಯುಕ್ತ ಸರ್ಕಾರದ ಕೈಗೊಂಬೆ: ಸಿಎಂ ಕ್ಲೀನ್ ಚೀಟ್‌ಗೆ ಹಳ್ಳಿಹಕ್ಕಿ ಪ್ರತಿಕ್ರಿಯೆ
-
Kodagu19 hours ago
ಎ.ಸಿ.ಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ
-
Kodagu16 hours ago
ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್ಡಿಂಗ್ ಪ್ರಕ್ರಿಯೆ
-
Kodagu19 hours ago
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ದಕ್ಕಬೇಕು
-
Kodagu15 hours ago
ಬೆಂಗಳೂರು ಒಕ್ಕಲಿಗ ಸಂಘದ ಸಹಯೋಗದೊಂದಿಗೆ ಪ್ರತಿಭಟನೆ ಸಿದ್ದತೆ
-
Hassan13 hours ago
ಈ ಸಲದ ಗಣರಾಜ್ಯೋತ್ಸವ ಸನ್ಮಾನಕ್ಕೆ ಅಪರೂಪದ ವೈದ್ಯ ಡಾ.ನಿತಿನ್ ಆಯ್ಕೆ
-
Mysore14 hours ago
ಸುತ್ತೂರು ಜಾತ್ರಾ ಮಹೋತ್ಸದಂದು ಹಸೆಮಣೆ ಏರಲಿದ್ದಾರೆ 155 ಜೋಡಿಗಳು