Connect with us

Mysore

ಕರ್ನಾಟಕಕ್ಕೆ ಯೋಗ ಗುರು ಮೈಸೂರು : ಶಾಸಕ ಟಿ.ಎಸ್.ಶ್ರೀವತ್ಸ

Published

on

ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಅಭಿಮತ
ಮೈಸೂರು: ವಿಶ್ವಕ್ಕೆ ಯೋಗದ ಗುರುವಾಗಿ ಭಾರತವಿದ್ದರೆ ಅದೇ ರೀತಿ ಕರ್ನಾಟಕಕ್ಕೆ ಯೋಗ ಗುರುವಾಗಿ ್ಮ ಮೈಸೂರು ಇದೆ. ಯೋಗ ಆರೋಗ್ಯ ಹಾಗೂ ಮನಃ ಶಾಂತಿ ಯನ್ನು ಹೆಚ್ಚಿಸುತ್ತದೆ. ದಸರಾದಲ್ಲಿ ಯೋಗದ ಕುರಿತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ನಗರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ನಡೆದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರವು ಬಹಳ ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದು, ದಸರಾ ಎಂದರೆ ಕಲೆ ಸಂಸ್ಕೃತಿ ಬಿಂಬಿಸುವುದರ ಜೊತೆಗೆ ಆರೋಗ್ಯದ ನಿಟ್ಟಿನಲ್ಲಿ ಯೋಗಕ್ಕೆ ಮೈಸೂರು ದಸರಾದಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿ ಯೋಗ ಪ್ರದರ್ಶಿಸುತ್ತಿರುವ ಎಲ್ಲ ಯೋಗಪಟುಗಳಿಗೆ ಶುಭ ಹಾರಸುತ್ತೇನೆ. ಯೋಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಕಳೆದ ಬಾರಿ ಪ್ರಧಾನ ಮಂತ್ರಿಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮೈಸೂರಿನಲ್ಲಿ ಆಚರಿಸಿದರು. ಮುಂದೆ ಚೀನಾದಲ್ಲಿ ನಡೆಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ಯೋಗವನ್ನು ಕೂಡ ಸೇರಿಸಲಾಗಿದ್ದು ಅದರಲ್ಲಿ ಹೆಚ್ಚಿನ ಪದಕಗಳನ್ನು ಭಾರತವೇ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು
ಮಹಾಪೌರ ಶಿವ ಕುಮಾರ್ ಮಾತನಾಡಿ, ಮೈಸೂರು ಸಾಂಸ್ಕೃತಿಕ, ಪಾರಂಪರಿಕ ನಗರಿಯಂತೆ ಯೋಗ ನಗರವು ಕೂಡ ಆಗಿದೆ. ದೇಶದ ಪ್ರಧಾನಿಯು ಯೋಗಕ್ಕೆ ಅತಿ ಹೆಚ್ಚು ಓತ್ತನ್ನು ನೀಡಿ ಇದರ ಕುರಿತಂತೆ ಸಂಶೋಧನೆಗೆ ಹಣಕಾಸನ್ನು ಬಿಡುಗಡೆ ಮಾಡಿ ಉತ್ತೇಜನ ನೀಡುತ್ತಿದ್ದಾರೆ. ದಸರಾದಲ್ಲಿ ಯೋಗದ ಕುರಿತಂತೆ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆ. ಯೋಗವನ್ನು ಪ್ರತಿಯೊಬ್ಬರು ಮಾಡಬೇಕು ಆಗ ಮಾತ್ರ ಯೋಗದ ಪ್ರಾಮುಖ್ಯತೆ ತಿಳಿಯುತ್ತದೆ. ಭಾಗವಹಿಸಿರುವ ಎಲ್ಲಾ ಯೋಗಪಟುಗಳಿಗೂ ಶುಭಾಶಯಗಳು ತಿಳಿಸಿದರು.
ಈ ಸ್ಪರ್ಧೆಯು ೮ ವರ್ಷದ ಬಾಲಕರಿಂದ ೬೫ ವರ್ಷದ ಪುರುಷ ಮಹಿಳೆಯರು ಭಾಗವಹಿಸುತ್ತಿದ್ದು, ಸ್ಪರ್ಧಿಗಳು ನೋಂದಣಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿವರೆಗೆ ೧೪೨೫ ಸ್ಪರ್ಧಿಗಳು ಈಗಾಗಲೇ ನೊಂದಣಿಯಾಗಿದ್ದಾರೆ. ಸ್ಥಳದಲ್ಲೂ ಕೂಡ ನೊಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟಾರೆ ೧೬೦೦ ಕೂ ಹೆಚ್ಚು ಸ್ಪರ್ಧಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಲಿದ್ದಾರೆ.
ವಯೋಮಾನದ ಅನುಗುಣವಾಗಿ ವಿವಿಧ ಯೋಗ ಆಸನಗಳನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ೧೪ ವಿವಿಧ ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದು ಪ್ರತಿ ವೇದಿಕೆಗೆ ನಾಲ್ಕು ತೀರ್ಪುಗಾರರನ್ನು ಆಯೋಜಿಸಲಾಗಿದ್ದು. ಪ್ರತಿ ಸ್ಪರ್ಧಿಗೆ ತೀರ್ಪುಗಾರರು ನಿಗದಿಪಡಿಸಿರುವ ಐದು ಯೋಗಾಸನಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಅದರಲ್ಲಿ ಯಾರಿಗೆ ಅತಿ ಹೆಚ್ಚು ಅಂಕಗಳಿಸುತ್ತಾರೆ ಅವರನ್ನು ವಿಜೇತರು ಎಂದು ಘೋಷಿಸಲಾಗುತ್ತದೆ. ಮೊದಲು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನ ನೀಡುತ್ತಿದ್ದು ಭಾಗವಹಿಸಿದ ಸ್ಪರ್ಧಿಗಳೆಲ್ಲರಿಗೂ ಪ್ರಾತಿನಿಧ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಡಾ.ಗಣೇಶ್ ಕುಮಾರ್ ಮಾಹಿತಿ ನೀಡಿದರು.

ಉಪ ಮಹಾಪೌರರಾದ ಡಾ. ಜಿ ರೂಪ, ಯೋಗ ದಸರಾ ಉಪಸಮಿತಿಯ ಡಿ.ಎಂ ರಾಣಿ , ಯೋಗ ದಸರಾ ಉಪಸಮಿತಿಯ ವಿಶೇಷ ಅಧಿಕಾರಿಯಾದ ಕೆ.ರಮ್ಯಾ, ಯೋಗ ದಸರಾ ಉಪಸಮಿತಿಯ ಕಾರ್ಯದರ್ಶಿ ಡಾ.ಪುಷ್ಪ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಜೂಜಾಡುತ್ತಿದ್ದ ನಾಲ್ವರ ಬಂಧನ

Published

on

ಮೈಸೂರು: ಕಾನೂನು ಬಾಹಿರವಾಗಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ ಒಟ್ಟು 12.5 ಸಾವಿರ ರೂ ನಗದು ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರ 2ನೇ ಹಂತದ ಜೆ.ಬಿ. ಪ್ಯಾರಡೈಸ್ನ ಕೊಠಡಿಯೊಂದರಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದರು.

ಇದರ ಬಗ್ಗೆ ಜನವರಿ 14 ರಂದು ನಗರದ ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿ.ಸಿ ಬಿ.ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ವಿ ಜಯನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

Continue Reading

Mysore

ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.

Published

on

ಮೈಸೂರು: ವಿವಿಧ ಕಂಪನಿಗೆ ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡಿಕೊಂಡು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ. ಒಟ್ಟು 127 ಸಿಲಿಂಡರ್ ಗಳು 79 ರಾಡುಗಳು, 2 ಡಿಜಿಟಲ್ ಯಂತ್ರಗಳು ಹಾಗೂ 1 ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.


ನಗರದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಶೆಡ್ ನಲ್ಲಿ ಅಕ್ರಮವಾಗಿ ವಿವಿಧ ಕಂಪನಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿಕೊಂಡು ಯಾವುದೇ ಅಧಿಕೃತ ರಹದಾರಿ ಮತ್ತು ಖರೀದಿ ಮಾಡಿರುವ ಬಿಲ್ ಇಲ್ಲದೆ.

ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂದು ಜನವರಿ 11 ರಂದು ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ. ಸಿ.ಸಿ.ಬಿ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Continue Reading

Mysore

ಮಾದಕವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತದ್ದ ಪೆಡ್ಲರ್ ಬಂಧನ

Published

on

ಮೈಸೂರು ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಪೆಡ್ಲರ್ ನನ್ನು ಸಿ.ಸಿ.ಬಿ ಘಟಕದ ಪೊಲೀಸರು ಬಂಧಿಸಿ ಒಟ್ಟು 20. ಸಾವಿರ ರೂ ಮೌಲ್ಯದ 6 ಗ್ರಾಂ 600 ಮಿಲಿ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.


ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಿಗಿರಿ ಹಳೇ ಆರ್.ಟಿ.ಒ. ಅಫೀಸ್ ಹತ್ತಿರ ಇರುವ ತ್ರಿವೇಣೆ ಪಾರ್ಕ್ ಬಳಿ. ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಒಬ್ಬ ಪೆಡ್ಲರ್ ನಿಂತಿದ್ದಾನೆಂದು ಜನವರಿ 7 ರಂದು ನಗರದ ಸಿ.ಸಿ.ಬಿ. ಘಟಕದ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ.

ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

Continue Reading

Trending

error: Content is protected !!