Hassan
ಯೋಧನೆಂದು ಕನಿಕರದಲ್ಲಾದರೂ ನನ್ನ ಪತಿಗೆ ನ್ಯಾಯ ಕೊಡಿಸಿ ಪತ್ನಿ ಸರಸುಮೇರಿ ಮನವಿ
ಹಾಸನ : ಕೆ.ಎಸ್.ಆರ್.ಟಿ.ಸಿ. ಸಾರಿಗೆ ಬಸ್ ಹಾಸನದಿಂದ ಶಾಂತಿಗ್ರಾಮಕ್ಕೆ ತೆರಳುವ ವೇಳೆ ಹಂಪ್ಸ್ ಇರುವ ಕಡೆ ಜೋರಾಗಿ ಕುಲುಕಿದ ಹಿನ್ನಲೆಯಲ್ಲಿ ನನ್ನ ಗಂಡನ ಬೆನ್ನು ಮುರಿದಿದ್ದು, ಈ ಬಗ್ಗೆ ಕ್ರಮ ಜರುಗಿಸಬೇಕೆಂದು ದೂರು ದಾಖಲು ಮಾಡಲು ಹೋದರೇ ಪೊಲೀಸರು ಪರಿಗಣಿಸುತ್ತಿಲ್ಲ ಎಂದು ತಾಲ್ಲೂಕಿನ ಗಾಡೇನಹಳ್ಳಿ ಗ್ರಾಮದ ಸರಸುಮೇರಿ ಅವರು ಮನವಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ೨೦೨೩ರ ಜುಲೈ ೭ ರಂದು ನನ್ನ ಪತಿ ಯೋಧರಾದ ಎ. ಚಿನ್ನಪ್ಪ ಅವರು ಹಾಸನದಿಂದ ಶಾಂತಿಗ್ರಾಮಕ್ಕೆ ಬಸ್ ಮೂಲಕ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬಸ್ ಚಾಲಕನ ನಿರ್ಲಕ್ಯದಲ್ಲಿ ನನ್ನ ಪತಿಯ ಬೆನ್ನು ಮೂಳೆ ಮುರಿದಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದರೂ ಕೂಡ ಅವರು ಎದ್ದು ಓಡಾಡುವಾಗಿಲ್ಲ. ಈಗ ಗಂಭೀರವಾಗಿವಾಗಿ ಅಸ್ವಸ್ಥರಾಗಿರುವುದರಿಂದ ನಮ್ಮ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಹೋದರೇ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಕಾರಣ ಕೇಳಿದರೇ ತಡವಾಗಿ ದೂರು ನೀಡಲು ಬಂದಿರುವದರಿಂದ ಕೇಸು ಹಾಕಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಹೆಣ್ಣು ಮಗಳಿದ್ದು, ಆಧಾರ ಸ್ಥಂಭವಾಗಿದ್ದ ನನ್ನ ಪತಿ ಈಗ ಓಡಾಡಲು ಆಗುವುದಿಲ್ಲ. ಆತನು ಯೋಧನೆಂದು ಪರಿಗಣಿಸಿಯಾದರೂ ಈ ಬಗೆ ಕೇಸು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು. ಇನ್ನು ನಮ್ಮ ಬಳಿ ಇದ್ದ ಒಂದು ಎಕರೆ ಜಮೀನನ್ನು ನೋಡಿಕೊಳ್ಳಲು ಸಂಬಂಧಿಕರಿಗೆ ನೀಡಿದ್ದು, ಆದರೇ ನನ್ನ ಪತಿಗೆ ಅಪಘಾತವಾಗಿ ಹಾಸಿಗೆ ಹಿಡಿದಾಗ ಈ ಸಮಯ ಉಪಯೋಗಿಸಿಕೊಂಡು ಅವರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಆದರೇ ಆ ಪತ್ರಕ್ಕೆ ನಮ್ಮ ಯಾರದು ಸಹಿ ಇರುವುದಿಲ್ಲ. ಈ ಜಮೀನನ್ನು ನಮಗೆ ಕೊಡಿಸಬೇಕು ಎಂದು ಕೋರಿದರು.
Hassan
ತಾಲೂಕು ವೀರಶೈವ ಲಿಂಗಾಯತ ಸಂಘ( ರಿ) ಇದರ ಕಾರ್ಯದರ್ಶಿ ಎಂ. ಬಿ ವಿಜಯಕಾಂತ್ ( 85 ವರ್ಷ) ಅವರು ನಿಧನ
ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ತಾಲೂಕು ವೀರಶೈವ ಲಿಂಗಾಯತ ಸಂಘ( ರಿ) ಇದರ ಕಾರ್ಯದರ್ಶಿ ಹಾಗೂ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ. ಬಿ ವಿಜಯಕಾಂತ್ ( 85 ವರ್ಷ) ಅವರು ಶನಿವಾರ ಬೆಳಗ್ಗೆ ನಿಧನ ಹೊಂದಿದರು
ಕಸಬಾ ಹೋಬಳಿ ಮರಸು ಗ್ರಾಮದವರಾಗಿದ್ದ ವಿಜಯಕಾಂತ್ ರವರು ಸಕಲೇಶಪುರ ತಾಲೂಕಿನ ಪ್ರೌಢಶಾಲೆಗಳಲ್ಲಿ ಹಲವು ವರ್ಷಗಳ ಕಾಲ ಶಿಕ್ಷಕರಾಗಿ ನಂತರ ಮುಖ್ಯ ಶಿಕ್ಷಕರಾಗಿ ಆನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯ ನಂತರ ಆಲೂರು ತಾಲೂಕಿನ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.
ಮೃತರು ಇಬ್ಬರು ಗಂಡು ಒಂದು ಹೆಣ್ಣು ಮಗಳು ಹಾಗೂ ಅಳಿಯ ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು, ಮತ್ತು ಶಿಷ್ಯವರ್ಗ ಹಾಗೂ ಶಿಕ್ಷಕ ವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಸ್ವಗ್ರಾಮ ಮರಸು ಗ್ರಾಮದ ಅವರ ಜಮೀನಿನಲ್ಲಿ ನಡೆಯಲಿದೆ.
ಇವರ ನಿಧನಕ್ಕೆ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್. ಕೆ ಕುಮಾರಸ್ವಾಮಿ, ವೀರಶೈವ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜ್, ಪ್ರಧಾನ ಕಾರ್ಯದರ್ಶಿ ಎಸ್ ಎಸ್ ಶಿವಮೂರ್ತಿ, ಸಹಕಾರ್ಯದರ್ಶಿ ಡಾ. ಜಯರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಅಖಿಲ ಭಾರತ ವೀರಶೈವ
ಮಹಾಸಭಾ ಅಧ್ಯಕ್ಷ ಅಜಿತ್, ಹೆಚ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಜೆಡಿಎಸ್ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಾಂತಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಗುಲಾಮ್ ಸತ್ತರ್, ಮುಂತಾದವರು ಸಂತಾಪ ಸೂಚಿಸಿದ್ದಾರೆ.
Hassan
ಹಾಸನದಲ್ಲಿ ಮಳೆಗೆ ತಾತ್ಕಲಿಕ ಬ್ರೇಕ್, ಎಲ್ಲೆಲ್ಲೊ ಬಿಸಿಲು
ಹಾಸನ: ಕಳೆದ ಒಂದುವರೆ ತಿಂಗಳಿನಿಂದಲೂ ಸತತವಾಗಿ ಬಾರಿ ಮಳೆ ಬಂದು ತತ್ತರಿಸಿ ಹೋಗಿದ್ದ ಜನತೆಗೆ ಶನಿವಾರ ಸೂರ್ಯನ ಆಗಮನದಿಂದ ಸಲ್ಪ ನಿಟ್ಟೂಸಿರು ಬಿಟ್ಟಿದ್ದು, ಎಂದಿನಂತೆ ಜನತೆ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು.
ಜೂನ್ ತಿಂಗಳಿನಿಂದ ಜುಲೈ ತಿಂಗಳ ಕೊನೆ ವಾರದವರೆಗೂ ಹೆಚ್ಚಿನ ಮಳೆ ಹಗಲು ರಾತ್ರಿ ಸುರಿದಿದ್ದರಿಂದ ಬಹುತೇಕ ಕೆರೆಕಟ್ಟೆಗಳು ತುಂಬಿ ಹೋಗಿ ಒಂದು ಕಡೆ ಸಂತೋಷವಾದರೇ ಇನ್ನೊಂದು ಕಡೆ ಶಾಲಾ-ಕಾಲೇಜು ಮಕ್ಕಳಿಗೆ, ಸಣ್ಣ ಸಣ್ಣ ವ್ಯಾಪಾರಸ್ತರಿಗೆ ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಮಸ್ಯೆಆಗಿತ್ತು. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಿಗೆ ೮ ರಿಂದ ೧೦
ದಿನಗಳ ಕಾಲ ರಜೆ ಕೊಟ್ಟಿರುವುದು ಒಂದು ಇತಿಹಾಸವೇ ಆಗಿದೆ. ಶನಿವಾರ ಮತ್ತೆ ಶಾಲೆ ಆರಂಭವಾಗಿರುವುದಕ್ಕೆ ಪೋಷಕರ ಮೊಗದಲ್ಲಿ ಮೊಂದಹಾಸ ಬೀರಿತ್ತು. ರಜೆಯ ಗುಂಗಿನಲ್ಲೆ ಇದ್ದ ಇನ್ನು ಕೆಲ ಮಕ್ಕಳು ಬೇಸರದಲ್ಲಿ ಶಾಲೆಗೆ ಹೋದ ಪ್ರಸಂಗ ನಡೆಯಿತು. ಮಳೆಯ ಕಾರಣ ಅನೇಕರು ತಮ್ಮ ವ್ಯಾಪಾರವನ್ನೆ ಬಂದ್ ಮಾಡಿದ್ದರು. ಈಗ ಮಳೆ ಸಲ್ಪ ವಿರಾಮ ಕೊಟ್ಟಿದ್ದರಿಂದ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ತರು ಎಂದಿನಂತೆ ಸಂತೋಷದಿಂದ ವ್ಯಾಪಾರದಲ್ಲಿ ತೊಡಗಿದ್ದರು.
Hassan
ದೇಶ ಕಾಯುವ ಸೈನಿಕರಾದ್ರೆ ಕಾರ್ಯಕ್ರಮ ಸಾರ್ಥಕ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯ
ಹಾಸನ: ನನ್ನ ಮಗನನ್ನು ಇಂಜಿನಿಯರ್, ದೊಡ್ಡ ಆಡಿಟರ್ ಸೇರಿದಂತೆ ವಿವಿಧ ಅಸೆಗಳಿದ್ದರೂ ಇವುಗಳ ಮಧ್ಯೆ ಒಬ್ಬ ಯೋಧನಾಗಿ ನೋಡಬೇಕು ಎನ್ನುವ ಕನಸ್ಸುಗಳಿದೆ. ಇಷ್ಟೊಂದು ಜನ ವಿದ್ಯಾರ್ಥಿಗಳಲ್ಲಿ ಕನಿಷ್ಠ ೧೦ ಜನರು ನಮ್ಮ ದೇಶ ಕಾಯುವ ಸೈನಿಕನಾದರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಆಗುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯಪಟ್ಟರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ರೋಟರಿ ಸುವರ್ಣ ಭವನದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಮಗ ಇಂಜಿನಿಯರ್, ದೊಡ್ಡ ಆಡಿಟರ್ ಆಗಬೇಕೆಂದು ನಮಗೂ ಆಸೆಗಳಿದ್ದು, ಆದರೇ ಅದರ ಮಧ್ಯದಲ್ಲಿ ಒಬ್ಬ ಯೋಧನಾಗಿ ನಾನು ನೋಡಬೇಕು ಎನ್ನುವ ಬಹಳ ಕನಸ್ಸನ್ನು ಇಟ್ಟುಕೊಂಡಿದ್ದೇನೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸೇನೆಗೆ ಸೇರಿಸುತ್ತೇನೆ ಅದಕ್ಕೂ ಮೊದಲು ನನ್ನ ಮಗನಿಗೆ ಇಷ್ಟವಿದ್ದರೇ ಮಾತ್ರ ಅದಕ್ಕೆ ಪ್ರೋತ್ಸಹ ಕೊಡಲಾಗುವುದು ಎಂದರು. ಇಷ್ಟೊಂದು ಜನ ಕಾಲೇಜು ಮಕ್ಕಳು ಈ ಕಾರ್ಯಕ್ರಮದಲ್ಲಿ ಇದ್ದು, ಇವರಲ್ಲಿ ಐದರಿಂದ ಹತ್ತು ಜನರು ನಮ್ಮ
ದೇಶ ಕಾಯುವ ಸೈನಿಕನಾಗಿ ನಿಂತರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಪೋಷಕರಿಗೆ ಒಳ್ಳೆ ಮಕ್ಕಳಾಗಿ ದೇಶಕ್ಕೆ ಉತ್ತಮ ಪ್ರಜೆ ಆಗಬೇಕು. ಎಲ್ಲಾ ಅಪ್ಪ ಅಮ್ಮಂದಿರಿಗೆ ಒಂದು ಕನಸ್ಸು ಇರುವಂತೆ ಮಕ್ಕಳು ನೆರವೇರಿಸುತ್ತೀರಿ ಎಂದು ವಿಶ್ವಾಸವ್ಯಕ್ತಪಡಿಸಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು. ಭಾಗವಹಿಸಿದ್ದ ಸ್ಟೂಡೆಂಟ್ ಕಾಮರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯೋಧರ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಮಿ ಪುಸ್ತಕವನ್ನು ನೀಡಿದಲ್ಲದೇ ಅವರಿಂದ ಅನಿಸಿಕೆ ಮಾತುಗಳನ್ನು ತಿಳಿಸಲಾಯಿತು. ಇನ್ನು ಗಡಿಯಲ್ಲಿ ಯುದ್ಧ ಮಾಡಿ ಸೈನಿಕರು ಶ್ರಮಿಸುತ್ತಿರುವ ಬಗ್ಗೆ ಒಂದು ನಾಟಕ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಇದೆ ವೇಳೆ ಮಾಜಿ ಸೈನಿಕ ಕ್ಯಾಪ್ಟನ್ ಜಯರಾಂ, ಸ್ಟೂಡೆಂಟ್ ಕಾಮರ್ಸ್ ಕಾಲೇಜಿನ ಹೆಚ್.ಒ.ಡಿ. ಗಿರೀಶ್, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಕಾರ್ಯದರ್ಶಿ ವನಿತ, ಚಾರಿಟರ್ ಪ್ರೆಸಿಡೆಂಟ್ ರತೀ, ಪೂಜಾ ರಘು ನಂದನ್, ಯಶೋಧ, ಅರ್ಚನಾ, ವಾಣಿನಾಗೇಂದ್ರ, ದೀಪು, ನಮ್ಯ, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.