Connect with us

Chamarajanagar

ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ

Published

on

ಯಳಂದೂರು : ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಯಳಂದೂರು ವನ್ಯಜೀವಿ ವಲಯದ ಅರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ.
ಹುಲಿ ರಕ್ಷಿತಾ ಅರಣ್ಯದಲ್ಲಿ ಪ್ರವೇಶಿಸಿ ವನ್ಯಜೀವಿಗಳನ್ನು ಬೇಟೆಯಾಡಲು ಸಂಚುರೂಪಿಸಿದ ಆರೋಪದ ಮೇಲೆ ತಾಲೂಕಿನ ಕೃಷ್ಣಪುರ ಗ್ರಾಮದ ರಾಜೇಂದ್ರ ಅಲಿಯಾಸ್ ಗೂಳಿ, ಕುಮಾರ (ದುಂಬಿ), ಮಹೇಶ ( ಮುದ್ದ), ಶ್ರೀನಿವಾಸ್ ಅವರನ್ನು ಬಂಧಿಸಲಾಗಿದ್ದು, ಇಬ್ಬರು ತಪ್ಪಿಸಿಕೊಂಡಿದ್ದಾರೆ. ಬಂದಿತರಿಂದ ಎರಡು ನಾಡ ಬಂದೂಕು, ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ ಕಂಟ್ರಾಕ್ಟರ್ ಮಾರ್ಗದರ್ಶನದಲ್ಲಿ ಎಸಿಎಫ್ ಸುರೇಶ್, ಆರ್ ಎಫ್ ಒ ನಾಗೇಂದ್ರ ನಾಯಕ, ಸಿಬ್ಬಂದಿ ಎಂ ಪುನೀತ್ ಕುಮಾರ್, ವರುಣ್ ಕುಮಾರ್ ದಾಳಿ ನಡೆಸಿದ್ದರು

Continue Reading
Click to comment

Leave a Reply

Your email address will not be published. Required fields are marked *

Chamarajanagar

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ

Published

on

ಯಳಂದೂರು ಮೇ 24

ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಭರ್ಜರಿ ಮಳೆಗೆ ಭೂಮಿ ತಂಪಾಗಿದೆ. ರಾತ್ರಿ ಬಿದ್ದ ಭಾರಿ ಮಳಿಗೆ ಭೂಮಿ ಸಂಪೂರ್ಣವಾಗಿ ನೀರು ಕುಡಿದು ಜಮೀನುಗಳು ಕೆರೆ,ಕಟ್ಟೆ ಹಾಗೂ ಶಾಲೆ ಕಾಲೇಜು ಮೈದಾನದಲ್ಲಿ ನೀರು ತುಂಬಿಕೆರೆಯಂತಾಗಿ ಅವಾಂತರ ಸೃಷ್ಟಿಯಾಗಿದೆ.

ಕೆಲವು ಜಮೀನುಗಳಲ್ಲಿ ಹಾಗೂ ರಸ್ತೆಗಳಲ್ಲಿ ಮರಗಳ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರ ರಸ್ತೆಗಳು ಡಾಂಬರ್ ಕಿತ್ತು ದೊಡ್ಡ ದೊಡ್ಡ ಹೊಂಡ ಬಿದ್ದು, ವಾಹನ ಸವರರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು ಕುರಿಗಾಹಿಗಳು ತಮ್ಮ ಕುರಿಗಳ ಜೊತೆಗೆ ಜಮೀನುಗಳಲ್ಲಿ ತುಂಬಿರುವ ನೀರಿನಲ್ಲಿ ರಾತ್ರಿ ಇಡೀ ಕಾಲ ಕಳೆಯುವಂತೆ ಆಯಿತು. ಪಟ್ಟಣದಿಂದ
ಬಿಳಗಿರಿರಂಗನ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಹಳ್ಳ ಬಿದ್ದು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 209 ರಿಂದ ಕೆಸ್ತೂರಿನಿಂದ ಕುಂತೂರ ಗ್ರಾಮದವರೆಗೆ, ಇನ್ನೂ ಹಲವು ಗ್ರಾಮಗಳ ಪ್ರಮುಖ ರಸ್ತೆಗಳ ಡಾಂಬರ್ ಕಿತ್ತು ದೊಡ್ಡ ದೊಡ್ಡ ಹಳ್ಳಗಳಾಗಿ ಮಳೆ ನೀರು ತುಂಬಿ ಕೆರೆಯಂತೆ ಆಗಿ ಸವಾರರು ಆ ಹಳ್ಳದಲ್ಲೇ ಬಿದ್ದು ತಮ್ಮ ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ನಡೆದಿದೆ. ಸಂಬಂಧಪಟ್ಟ ಇಲಾಖೆ ಇದನ್ನು ಗಮನ ಹರಿಸಿ ಶಾಲಾ ಕಾಲೇಜು ಮೈದಾನ ಹಾಗೂ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಗಳಾಗದೆ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ನಾಗರಿಕರು ಹಾಗೂ ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.

Continue Reading

Chamarajanagar

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಸದ ರಾಶಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ

Published

on

ಬಸ್ ನಿಲ್ದಾಣದಲ್ಲಿ ಒಂದು ದಿನ ಕಳೆದರೂ ಪಟ್ಟಣ ಪಂಚಾಯತಿಯಿಂದ ತೆಗೆಯದ ಕಸ ಸಾರ್ವಜನಿಕರಿಂದ ಇಡೀ ಶಾಪ

ಯಳಂದೂರು ನಲ್ಲಿ ಸತತ ವಾಗಿ ಎರಡು ದಿನದಿಂದ ಸುರಿಯುತ್ತಿರುವ ಮಳೆ ಇಂದ ಬಸ್ ನಿಲ್ದಾಣದಲ್ಲಿರುವ ಡ್ರೈ ಮ್ಯಾಜಿನ ನೀರನ್ನು ತೆಗೆಯಲು ಕಸದ ರಾಶಿ ಒಂದು ದಿನದಿಂದಲೂ ಅಲ್ಲೇ ಇರುವ ಕಸದ ರಾಶಿ ಜನರಿಗೆ ಸಾಂಕ್ರಾಮಿಕ ರೋಗದ ಭಯದ ಭೀತಿ

Continue Reading

Chamarajanagar

ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Published

on

ಯಳಂದೂರು ಪಟ್ಟಣದ ಮಲ್ಲಿಕಾರ್ಜುನಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ವಿಜಯ ರವರು ತಿಳಿಸಿದರು

2024-25 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಶಿಕ್ಷಣ ನೀತಿಗೆ ಎಸ್ ಇ ಪಿ ಅನುಗುಣವಾಗಿ ಮೂರು ವರ್ಷಗಳ ಬಿ.ಎ ಬಿ.ಕಾಂ. ಹಾಗೂ ಬಿ.ಬಿ.ಎ. ಪದವಿ ಕೋರ್ಸುಗಳು ಹೆಚ್ ಇ ಕೆ , ಹೆಚ್ ಪಿ ಕೆ, ಪಿ ಇ ಎಸ್, ಹೆಚ್ ಎಸ್ ಕೆ, ಈ ಕೋರ್ಸುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದು

Continue Reading

Trending

error: Content is protected !!