Connect with us

Chamarajanagar

75 ನೇ ಗಣರಾಜ್ಯೋತ್ಸವಕ್ಕೆ ಆದ್ಯತೆ ನೀಡದೆ ಅಯೋಧ್ಯೆ ಬಗ್ಗೆ ಆದ್ಯತೆ ನೀಡಿದ ಕೇಂದ್ರಸರಕಾರ- ಶಾಸಕ ಎ ಆರ್ ಕೆ

Published

on

ಯಳಂದೂರು: ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 75 ನೇ ಗಣರಾಜ್ಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಬೆಳಿಗ್ಗೆ 8.30 ರಂದು ತಹಸೀಲ್ದಾರ್ ಜಯಪ್ರಕಾಶ್ ರವರು ಧ್ವಜಾರೋಹಣ ನೆರವೇರಿಸಿದರು.
ಶಾಸಕ ಎ ಆರ್ ಕೃಷ್ಣಮೂರ್ತಿ ರವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಸ್ತ ಜನತೆ ಶುಭಾಶಯ ಕೋರಿದರು.
ನಂತರ ಮಾತನಾಡಿ .ಭಾರತ ವಿಶ್ವದಲ್ಲಿಯೇ ಮಾದರಿ ರಾಷ್ಟ್ರವಾಗಿದೆ. ಅನೇಕ ಸಂಸ್ಕೃತಿ, ಧರ್ಮ, ಭಾಷೆಗಳನ್ನು ಹಾಗೂ ವೈವಿಧ್ಯತೆಯಲ್ಲಿಯೂ ಏಕತೆಯನ್ನು ಹೊಂದಿರುವಂತಹ ರಾಷ್ಟ್ರವಾಗಿದೆ. ಈ ಏಕತೆ ಕಾಣಲು ನಮ್ಮ ಸಂವಿಧಾನ ಕಾರಣ. ಸಂವಿಧಾನವೆಂದರೆ ನೀತಿ ನಿಯಮಗಳ ಸಂಗ್ರಹವೆಂದು ಕರೆಯಲಾಗುತ್ತದೆ. ಭಾರತದ ಅಖಂಡತೆಯನ್ನು ಸಂವಿಧಾನ ಚೌಕಟ್ಟಿನಲ್ಲಿ ಒಂದೂಗೂಡಿಸಿದ್ದು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರು. ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಈ ಬಹುಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರಕ್ಕೆ ಹೊಂದುವಂತಹ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಸಂವಿಧಾನದಡಿಯಲ್ಲಿ ಸರ್ವರು ಸಮಾನರು, ಪ್ರಜೆಗಳು ಸ್ವಾವಲಂಬಿಯಾಗಿ, ಸ್ವಾಭಿಮಾನದಿಂದ ಬದುಕು ಸಾಗಿಸಿ ಅಂತ ತಿಳಿಸಿದ್ದಾರೆ. ಮೂಲ ಸಂವಿಧಾನದಲ್ಲಿ 395 ವಿಧಿಗಳು, 8 ಅನುಸೂಚಿ, 22 ಭಾಗಗಳನ್ನು ಒಳಗೊಂಡಿದೆ.ಈ ವಿಶ್ವದಲ್ಲಿಯೇ ನಮ್ಮ ಸಂವಿಧಾನ ಬೃಹತ್ ಸಂವಿಧಾನವಾಗಿದೆ ಹಾಗೂ ಮಾದರಿಯಾಗಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಂತೆ ಜೀವನ ನಡೆಸಬೇಕಾಗಿದೆ. ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಬಗ್ಗೆ ತಿಳಿದು ಕೊಳ್ಳಬೇಕು. ಈ ದೇಶದ ಮೂಲಭೂತ ಕಾನೂನಾಗಿದೆ ಪ್ರತಿಯೊಬ್ಬರೂ ಪಾಲಿಸಬೇಕು. ಈ ದೇಶದ ಮಹಿಳೆಯರು ಅಂಬೇಡ್ಕರ್ ರವರನ್ನು ಪೂಜಿಸಬೇಕು ಏಕೆಂದರೆ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದ ಮಹಿಳೆಯರನ್ನು ಸಂವಿಧಾನದಡಿಯಲ್ಲಿ ಮುಕ್ತಿಯನ್ನು ತೋರಿಸಿಕೊಟ್ಟರು. ಹೆಣ್ಣು ಸ್ವಾವಲಂಬಿಯಾಗಿ ಬದುಕಬೇಕು ಎಂದು ತೋರಿಸಿಕೊಟ್ಟರು. ಜನವರಿ 26 – 1950 ರಂದು ನಮ್ಮ ಸಂವಿಧಾನ ಅಧಿಕೃತವಾಗಿ ಜಾರಿಯಾಯಿತು. ಈ ಹಬ್ಬವನ್ನು ಪ್ರತಿ ಮನೆಯಲ್ಲಿಯೂ ಆಚರಿಸಬೇಕು ಎಂದು ತಿಳಿಸಿದರು.


75 ನೇ ಗಣರಾಜೋತ್ಸವನ್ನು ಕೇಂದ್ರ ಸರಕಾರ ಅರ್ಥಪೂರ್ಣವಾಗಿ ಆಚರಿಸಿದೆ ಆಯೋಧ್ಯದಲ್ಲಿ ರಾಮನ ಮೂರ್ತಿ ಸ್ಥಾಪನೆಗೆ ಹೆಚ್ಚಿನ ಗಮನಹರಿಸಿದ್ದಾರೆ ಅದೇ ನಮ್ಮ ರಾಜ್ಯ ಸರಕಾರ 75 ನೇ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂವಿಧಾನ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರಾಗಿ ಉಪನ್ಯಾಸಕಿ ಶ್ವೇತಾ ಕೆ ರವರು ಗಣರಾಜ್ಯೋತ್ಸವದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಅಧಿಕಾರಿ ರಾಜೇಶ್, ಸಿಡಿಪಿಒ ಸಕಲೇಶ್, ದುಗ್ಗಹಟ್ಟ ವೀರಭದ್ರಪ್ಪ ಪಟ್ಟಣ ಪಂಚಾಯತಿ ಸದಸ್ಯರಾದ ಶಾಂತಮ್ಮ ಲಿಂಗರಾಜು, ಲಕ್ಷ್ಮೀ, ಮಹೇಶ್,ಮಹದೇವನಾಯಕ, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಮಾಜಿ ಜಿಪಂ ಉಪಾಧ್ಯಕ್ಷ ಜೆ ಯೋಗೇಶ್, ಹೊಂಗನೂರು ಚಂದ್ರು ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಇತರರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಡಿ. 9, 10 ರಂದು ನಗರದಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮ

Published

on

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಡಿ.9 ಮತ್ತು 10 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಸುನೀಲ್ ಬೋಸ್ ಘನ ಉಪಸ್ಥಿತಿ ವಹಿಸುವರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು. ಜಿ.ಮಾದೇಗೌಡ, ಕೆ. ವಿವೇಕಾನಂದ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ, ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Continue Reading

Chamarajanagar

ಮಹಾಪರಿನಿರ್ವಾಣ ದಿನ: ಮೊಂಬತ್ತಿ ಮೆರವಣಿಗೆ

Published

on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಮೊಂಬತ್ತಿ ಮೆರವಣಿಗೆ ನಡೆಯಿತು.

ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ರಾಜಗಿರಿ ಬುದ್ಧವಿಹಾರ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಸಹಯೋಗದಲ್ಲಿ ಹಾಗೂ ಗ್ರಾಮದ ಯಜಮಾನರುಗಳ ಮಾರ್ಗದರ್ಶನದಲ್ಲಿ ಇಂದು ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇಣದ ಬತ್ತಿ ಮೆರವಣಿಗೆ ನಡೆಸಲಾಯಿತು.

ಸಂವಿಧಾನ ಪೀಠಿಕೆಯನ್ನು ವಾಚನ ಮಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೊಂಬತ್ತಿ ಮೆರವಣಿಗೆ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಗ್ರಾಮ ಪಂಚಾಯಿತಿ ಸದಸ್ಯರು, ರಾಜಗಿರಿ ಬೌದ್ಧವಿಹಾರದ ಉಪಾಸಕರು, ಗ್ರಾಮದ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Continue Reading

Chamarajanagar

ಅಪರಿಚಿತ ಶವ : ವಾರಸುದಾರರ ಪತ್ತೆಗೆ ಸಹಕರಿಸಲು ಮನವಿ

Published

on

ಚಾಮರಾಜನಗರ: ಬೇಡರಪುರ ಗ್ರಾಮದ ಬಳಿಯಿರುವ ಪ್ರೇಸ್ಟೀಜ್ ಫ್ಯಾಕ್ಟರಿಯ ಬಳಿ ಅಪರಿಚಿತ ಶವ ಪತ್ತೆಯಾಗಿದ್ದು, ವಾರಸುದಾರರ ಸುಳಿವಿಗೆ ಸಹಕರಿಸಲು ಕೋರಲಾಗಿದೆ.

ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, 158 ಸೆಂ.ಮೀ ಎತ್ತರ, ಕೋಲು ಮುಖ, ತೆಳ್ಳನೆ ಶರೀರ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಕುರುಚಲು ಗಡ್ಡ, ಕಪ್ಪು ಮೀಸೆ ಹಾಗೂ ಕಪ್ಪು, ಬಿಳಿ ಮಿಶ್ರಿತ ತಲೆ ಕೂದಲು ಇರುತ್ತದೆ. ಕಪ್ಪು, ಹಸಿರು ಮತ್ತು ಬಿಳಿ ಮಿಶ್ರಿತ ಗೆರೆಗಳುಳ್ಳ ತುಂಬು ತೋಳಿನ ಶರ್ಟ್ ಧರಿಸಿದ್ದು, ಎದೆಯ ಭಾಗದಲ್ಲಿ ಎಸು ಎಂಬ ಹಚ್ಚೆ ಇರುತ್ತದೆ.

ಇವರ ವಾರಸದಾರರು ಇದ್ದಲ್ಲಿ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Continue Reading

Trending

error: Content is protected !!